Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ಕೋವಿಡ್-19ನಿಂದ ಗುಣಮುಖರಾದವರ ಜೊತೆ ಬೆರೆಯುವುದು ಯಾವಾಗ ಸುರಕ್ಷಿತ?
ಭಾರತದಲ್ಲಿ ಕೊರೊನಾವೈರಸ್ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲವಾದರೂ, ಈ ರೋಗದಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿರುವುದು ಸಮಧಾನಕರ ಸಂಗತಿಯಾಗಿದೆ.
ಕೋವಿಡ್ 19 ಪಾಸಿಟಿವ್ ಬಂದಾಗ ಅವರನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಬೇಕಾಗುತ್ತದೆ, ಕೋವಿಡ್ 19ನಿಂದ ಚೇತರಿಸಿಕೊಂಡ ವ್ಯಕ್ತಿಯ ಜೊತೆ ಬರಬೇಕಾದರೆ ಎಷ್ಟು ದಿನಗಳಾಗಬೇಕು? ಕೋವಿಡ್ 19 ನೆಗೆಟಿವ್ ಬಂದ ಬಳಿಕವೂ ಎಷ್ಟು ದಿನದವರೆಗೆ ಔಷಧ ತೆಗೆದುಕೊಳ್ಳಬೇಕು ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ.

ಕೋವಿಡ್- 19 ಚೇತರಿಕೆ ಸಮಯ
ಕೋವಿಡ್ 19 ಬಾಧಿಸಿದರೆ ಚೇತರಿಸಿಕೊಳ್ಳಲು ತೆಗೆದುಕೊಳ್ಳಲು ಸಮಯ ವ್ಯಕ್ತಿಯಿಂದ-ವ್ಯಕ್ತಿಗೆ ವ್ಯತ್ಯಾಸವಿರುತ್ತದೆ. ಯಾವುದೇ ಇತರ ಕಾಯಿಲೆಗಳಿಲ್ಲದವರು ಬೇಗನೆ ಚೇತರಿಸಿಕೊಂಡರೆ, ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ಸಮಸ್ಯೆ ಇರುವವರು ಚೇತರಿಸಿಕೊಳ್ಳಲು ಅಧಿಕ ಸಮಯ ತೆಗೆದುಕೊಳ್ಳುತ್ತಾರೆ.
ಸಿಡಿಸಿ ಗೈಡ್‌ಲೈನ್ ಪ್ರಕಾರ ಕೋವಿಡ್ 19 ಪಾಸಿಟಿವ್ ಬಂದ ವ್ಯಕ್ತಿ ಚೇತರಿಸಿಕೊಳ್ಳಲು ಸಾಮಾನ್ಯವಾಗಿ 10 ದಿನಗಳನ್ನು ತೆಗೆದುಕೊಳ್ಳುತ್ತಾರೆ. ಈ ಸಮಯದಲ್ಲಿ ವ್ಯಕ್ತಿಗೆ ಯಾವುದೇ ಜ್ವರ ಅಥವಾ ಇತರ ಲಕ್ಷಣಗಳು ಕಾಣಿಸದೇ ಇದ್ದಲ್ಲಿ, 24 ಗಂಟೆಯಿಂದ ಯಾವುದೇ ಜ್ವರ ಮಾತ್ರೆ ತೆಗೆದುಕೊಳ್ಳದೆಯೂ ಆರೋಗ್ಯ ಸ್ಥಿತಿ ಉತ್ತಮವಾಗಿದ್ದರೆ ಕೋವಿಡ್ 19ನಿಂದ ಚೇತರಿಸಿಕೊಂಡಿದ್ದಾರೆ ಎಂದು ಹೇಳಬಹುದು. ಆದರೆ ಯಾವುದೇ ಲಕ್ಷಣಗಳು ಕಂಡು ಬರದಿದ್ದರೂ ಒಂದೆರಡು ದಿನ ಯಾವುದೇ ರೋಗ ಲಕ್ಷಣಗಳು ಕಾಣಿಸುತ್ತದೆಯೋ ಎಂದು ಕಾದು ನೋಡಬೇಕು.

ಯಾವಾಗ ಇತರರೊಂದಿಗೆ ಬೆರೆಯಬಹುದು?
ಕೋವಿಡ್ 19 ಪರೀಕ್ಷೆ ಮಾಡಿಸಿದಾಗ ಸತತವಾಗಿ ಎರಡು ಬಾರಿ ನೆಗೆಟಿವ್ ಬಂದರೆ ಆ ವ್ಯಕ್ತಿ ಇತರರೊಂದಿಗೆ ಬೆರೆಯಬಹುದಾಗಿದೆ. ಆದರೆ ಇದಕ್ಕೂ ಮೊದಲು ವೈದ್ಯರ ಬಳಿ ಸಲಹೆ ಪಡೆಯುವುದು ಒಳ್ಳೆಯದು. ವೈದ್ಯರು ಸ್ವಲ್ಪ ದಿನ ಪ್ರತ್ಯೇಕವಾಗಿರಲು ಸಲಹೆ ನೀಡಿದರೆ ಅದನ್ನು ಪಾಲಿಸುವುದು ಒಳ್ಳೆಯದು.

ಇತರ ಔಷಧಗಳು ತೆಗೆದುಕೊಳ್ಳುತ್ತಿದ್ದರೆ ಮುಂದುವರೆಸಿ
ಕೋವಿಡ್ 19ನಿಂದ ಚೇತರಿಸಿಕೊಂಡ ಬಳಿಕ ಇತರ ಔಷಧಗಳನ್ನು ಈ ಮೊದಲು ತೆಗೆದುಕೊಳ್ಳುತ್ತಿದ್ದರೆ ವೈದ್ಯರಲ್ಲಿ ಎಷ್ಟು ಪ್ರಮಾಣದ ಡೋಸೇಜ್ ತೆಗೆದುಕೊಳ್ಳಬೇಕೆಂದು ಕೇಳಿ ಔಷಧಿಯನ್ನು ತೆಗೆದುಕೊಳ್ಳಬೇಕು. ವಿಟಮಿನ್ ಸಿ ಅಧಿಕವಿರುವ ಆಹಾರಗಳನ್ನು ತೆಗೆದುಕೊಳ್ಳಬೇಕು.

ಹೊರಗಡೆ ಹೋಗುವಾಗ ಮುನ್ನೆಚ್ಚರಿಕೆ ತೆಗದುಕೊಳ್ಳಿ
ಕೋವಿಡ್ 19ನಿಂದ ಚೇತರಿಸಿಕೊಂಡ ಬಳಿಕ ದೇಹದಲ್ಲಿ ಆ ವೈರಸ್ ವಿರುದ್ಧ ಹೋರಾಡುವ ಸಾಮಾರ್ಥ್ಯ ಕೆಲ ತಿಂಗಳು ಇರುತ್ತದೆ. ಆದರೆ ಹೊರಗಡೆ ಹೋಗುವ ಮುನ್ನ ಮಾಸ್ಕ್ ಧರಿಸದೆ ಹೊರಗೆ ಹೋಗುವುದು ಸುರಕ್ಷಿತವಲ್ಲ. ಏಕೆಂದರೆ ಎರಡನೇ ಬಾರಿ ಕೋವಿಡ್ 19 ಬಾಧಿಸಿರುವ ಎಷ್ಟೋ ಪ್ರಕರಣಗಳಿವೆ. ಆದ್ದರಿಂದ ಇತರ ವ್ಯಕ್ತಿಗಳ ಜೊತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಹೀಗೆ ಎಲ್ಲವನ್ನು ಮಾಡಬೇಕು.

ಆ್ಯಂಟಿಬಯೋಟಿಕ್ ಎಷ್ಟು ಪರಿಣಾಮಕಾರಿ?
ಕೊರೊನಾವೈರಸ್‌ಗೆ ತೆಗೆದುಕೊಳ್ಳುವ ಆ್ಯಂಟಿಬಯೋಟಿಕ್ ಕೊರೊನಾವೈರಸ್‌ನಿಂದ ಸಂಪೂರ್ಣ ಸುರಕ್ಷತೆ ನೀಡುವುದಿಲ್ಲ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇದುವರೆಗೆ ನಡೆಸಿದ ಅಧ್ಯಯನದಲ್ಲಿ ಕೋವಿಡ್ 19ನಿಂದ ಚೇತರಿಸಿಕೊಂಡವರ ಶರೀರದಲ್ಲಿ ಆ ವೈರಸ್‌ನ ಎದುರಿಸುವ ಶಕ್ತಿ ಮೂರು ತಿಂಗಳ ಕಾಲ ಮಾತ್ರ ಇರುವುದಾಗಿ ತಿಳಿದು ಬಂದಿದೆ. ಇನ್ನು ಕೆಲವರಲ್ಲಿ ಒಂದು ತಿಂಗಳು ಕಳೆಯುವಷ್ಟರಲ್ಲಿ ಆ್ಯಂಟಿಬಯೋಟಿಕ್ ಸಾಮಾರ್ಥ್ಯ ಕಡಿಮೆಯಾಗಿರುವ ಪ್ರಕರಣಗಳು ದಾಖಲಾಗಿವೆ.

ಕೋವಿಡ್ 19 ಚೇತರಿಕೆಯ ಬಳಿಕ
ಕೋವಿಡ್ 19ನಿಂದ ಚೇತರಿಸಿದ ಬಳಿಕ ಕೂಡಲೇ ಕೆಲಸ ಕಾರ್ಯಗಳಿಗೆ ಮರಳಬೇಡಿ, ಸ್ವಲ್ಪ ದಿನ ಮನೆಯಲ್ಲಿಯೇ ಇದ್ದು ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು. ಇನ್ನು ವಿಟಮಿನ್ಸ್ ಅಧಿಕವಿರುವ ಆಹಾರ ತೆಗೆದುಕೊಳ್ಳಬೇಕು, ನಿದ್ದೆ ಚೆನ್ನಾಗಿ ಮಾಡಬೇಕು, ಇವೆಲ್ಲಾ ದೇಹ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.



Click it and Unblock the Notifications