ಯೀಸ್ಟ್ ಸೋಂಕಿನ ಬಗ್ಗೆ ಪ್ರತಿ ಮಹಿಳೆಯೂ ತಿಳಿಯಲೇಬೇಕಾದ ಅಂಶಗಳಿವು

ಕೆಲವೊಂದು ಕಾಯಿಲೆಗಳ ಬಗ್ಗೆ ಮಹಿಳೆಯರು ಮುಕ್ತವಾಗಿ ಮಾತನಾಡಲು ಹಿಂಜರಿಯುವರು. ಇದಕ್ಕೆ ಹಲವಾರು ಕಾರಣಗಳು ಇದೆಯಾದರೂ ಸರಿಯಾದ ಚಿಕಿತ್ಸೆ ನೀಡದೆ ಇದ್ದಲ್ಲಿ ಖಂಡಿತವಾಗಿಯೂ ಇದು ದೊಡ್ಡ ಮಟ್ಟದ ಸಮಸ್ಯೆಗೆ ಕಾರಣವಾಗಬಹುದು. ಅದರಲ್ಲೂ ಯೀಸ್ಟ್ ಸೋಂಕು ಎನ್ನುವುದು ಮಹಿಳೆಯರ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಉಂಟು ಮಾಡುವುದು. ಆದರೆ ಇದರ ಬಗ್ಗೆ ಹೆಚ್ಚಿನವರು ಮಾತನಾಡಲ್ಲ. ಈ ಲೇಖನದಲ್ಲಿ ಯೀಸ್ಟ್ ಸೋಂಕಿನ ಬಗ್ಗೆ ತಿಳಿಸಿಕೊಡಲಿದ್ದೇವೆ.

yeast infection

ಯೀಸ್ಟ್ ಸೋಂಕು ಎಂದರೇನು?

ಯೀಸ್ಟ್ ಸೋಂಕು ಎಂದರೇನು?

ಇದು ಮಹಿಳೆಯರ ಆರೋಗ್ಯದಲ್ಲಿ ಕಾಣಿಸಿಕೊಳ್ಳುವ ದೊಡ್ಡ ಸಮಸ್ಯೆ. ಯೋನಿಯ ಯೀಸ್ಟ್ ಸೋಂಕು ಎನ್ನುವುದು ತುಂಬಾ ಸಾಮಾನ್ಯ ಮತ್ತು ಇದಕ್ಕೆ ಸುಲಭವಾಗಿ ಚಿಕಿತ್ಸೆ ಕೂಡ ನೀಡಬಹುದು. ಜೀವಮಾನದಲ್ಲಿ ಶೇ.75ರಷ್ಟು ಮಹಿಳೆಯರು ಯೀಸ್ಟ್ ಸೋಂಕಿಗೆ ಒಳಗಾಗುವರು ಎಂದು ಅಮೆರಿಕನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಹೇಳಿದೆ. ಈ ಸೋಂಕುಗಳು ಹಾನಿಕಾರಕವಲ್ಲ, ಆದರೆ ಅಹಿತಕರ ಅಥವಾ ನೋವುಂಟು ಮಾಡಬಹುದು. ಸರಿಯಾಗಿ ಚಿಕಿತ್ಸೆ ನೀಡದೆ ಇದ್ದ ಸಂದರ್ಭದಲ್ಲಿ ಇದು ಮತ್ತೆ ಕಾಣಿಸಿಕೊಳ್ಳಬಹುದು. ದೀರ್ಘಕಾಲ ತನಕ ಇದಕ್ಕೆ ಯಾವುದೇ ರೀತಿಯ ಚಿಕಿತ್ಸೆ ನೀಡಿದೆ ಇದ್ದರೆ ಆಗ ಇದರ ಲಕ್ಷಣಗಳು ತುಂಬಾ ಕೆಟ್ಟದಾಗಬಹುದು. ಯೀಸ್ಟ್ ಸೋಂಕಿನ ಯಾವುದೇ ರೀತಿಯ ಲಕ್ಷಣಗಳು ಕಾಣಿಸಿಕೊಂಡರೆ ಆಗ ನೀವು ತಕ್ಷಣವೇ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಿ.

ಯೀಸ್ಟ್ ಸೋಂಕಿನ ಕೆಲವು ಲಕ್ಷಣಗಳು

ಯೀಸ್ಟ್ ಸೋಂಕಿನ ಕೆಲವು ಲಕ್ಷಣಗಳು

ಇದರ ಪ್ರಮುಖ ಲಕ್ಷಣಗಳೆಂದರೆ ತುರಿಕೆ, ಉರಿಯ ಅನುಭವ ಮತ್ತು ಯೋನಿಯ ಡಿಸ್ಚಾರ್ಚ್. ಈ ಡಿಸ್ಚಾರ್ಚ್ ಸಾಮಾನ್ಯಕ್ಕಿಂತಲೂ ದಪ್ಪಗೆ ಇರುವುದು. ಕೆಲವೊಂದು ಸಲ ಊತ ಅಥವಾ ಊತವಿಲ್ಲದೆ ದದ್ದು, ಕೆಂಪಾಗುವುದು ಅಥವಾ ಕಿರಿಕಿರಿ ಅನುಭವಿಸಬಹುದು. ಮೂತ್ರ ವಿಸರ್ಜನೆ ವೇಳೆ ಅಹಿತಕರ ಅಥವಾ ನೋವು ಕಾಣಿಸಿಕೊಳ್ಳಬಹುದು. ಲೈಂಗಿಕ ಕ್ರಿಯೆಯು ತುಂಬಾ ಅಹಿತರ ಎನಿಸಬಹುದು. ಋತುಚಕ್ರಕ್ಕೆ ಮೊದಲು ಅಥವಾ ಬಳಿಕ ದೇಹದಲ್ಲಿ ಹಾರ್ಮೋನ್ ಗಳ ಅಸಮತೋಲನ ಹೆಚ್ಚಾಗಿರುವ ಕಾರಣದಿಂದಾಗಿ ಈ ಲಕ್ಷಣಗಳು ಕಂಡುಬರಬಹುದು.

ಯೀಸ್ಟ್ ಸೋಂಕು ಹೀಗೂ ಆಗಿರಬಹುದು

ಯೀಸ್ಟ್ ಸೋಂಕು ಹೀಗೂ ಆಗಿರಬಹುದು

ಯೋನಿ ಭಾಗದಲ್ಲಿನ ತುರಿಕೆಯು ಹಲವಾರು ಕಾರಣಗಳಿಂದಲೂ ಬರಬಹುದು. ಯೀಸ್ಟ್ ಸೋಂಕು ಇಲ್ಲದೆ ಇದ್ದರೂ ಕೆಲವೊಂದು ಸಲ ಈ ಭಾಗದಲ್ಲಿ ತುರಿಕೆ ಕಾಣಿಸಬಹುದು. ಇದರಿಂದ ಸೋಂಕಿಗೆ ಚಿಕಿತ್ಸೆ ಮಾಡಿಸಿಕೊಳ್ಳುವ ಮೊದಲು ಈ ಯಾವುದಾದರೂ ಅಭ್ಯಾಸಗಳಿಂದಾಗಿ ತುರಿಕೆ ಬರುತ್ತಿದೆಯಾ ಎಂದು ತಿಳಿಯಿರಿ.

ಕೆಳಭಾಗದಲ್ಲಿ ಹಳೆಯ ರೇಜರ್ ಬಳಸುವ ಕಾರಣದಿಂದಾಗಿ ತುರಿಕೆ ಬರಬಹುದು. ತುಂಬಾ ಸ್ವಚ್ಛ, ತೀಕ್ಷ್ಣ ರೇಜರ್ ಬಳಸಿ ಮತ್ತು ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಗಾಯಗೊಂಡ ಚರ್ಮವು ನೋವುಂಟು ಮಾಡುವುದು ಮಾತ್ರವಲ್ಲದೆ, ಸೊಂಕಿಗೂ ಕಾರಣವಾಗಬಹುದು.

ಡರ್ಮಟೈಟಿಸ್ ಎನ್ನುವುದು ಒಂದು ರೀತಿಯ ಚರ್ಮದ ಉರಿಯೂತವಾಗಿದ್ದು, ಯೋನಿ ಭಾಗದಲ್ಲಿನ ಅತಿಯಾದ ತುರಿಕೆಯಿಂದಾಗಿ ಹೀಗೆ ಆಗುವುದು. ಯೋನಿ ಒಳಭಾಗದಲ್ಲಿ ತುರಿಕೆ ಕಂಡುಬರದೆ ಇದ್ದರೆ ಆಗ ಇದನ್ನು ಚರ್ಮದ ಹೊರಗಿನ ಉರಿಯೂತ ಎಂದು ಹೇಳಬಹುದು.

ಬಿಗಿಯಾದ ಬಟ್ಟೆಗಳನ್ನು ಧರಿಸುತ್ತಿದ್ದರೆ ಅಥವಾ ಬೆವರು ಸುರಿದ ಬಳಿಕ ತುಂಬಾ ದೀರ್ಘ ಸಮಯ ಅದೇ ಬಟ್ಟೆ ಧರಿಸುತ್ತಿದ್ದರೆ, ತೇವಾಂಶದಿಂದಾಗಿ ತುರಿಕೆ ಕಾಣಿಸಿಕೊಳ್ಳಬಹುದು.

ಲೈಂಗಿಕ ಕ್ರಿಯೆ ವೇಳೆ ಸರಿಯಾದ ಪ್ರಮಾಣದಲ್ಲಿ ಲ್ಯುಬ್ರಿಕೆಂಟ್ ಬಳಸದೆ ಇರುವುದು ಕೂಡ ತುರಿಕೆಗೆ ಕಾರಣವಾಗಬಹುದು.

ಆಲ್ಕೋಹಾಲ್ ಮತ್ತು ಸುಗಂಧ ಹೊಂದಿರುವ ಲ್ಯುಬ್ರಿಕೆಂಟ್ ಬಳಕೆ ಮಾಡಿದರೂ ತುರಿಕೆ ಕಾಣಿಸಬಹುದು. ನೀವು ಇತ್ತೀಚೆಗೆ ಲ್ಯುಬ್ರಿಕೆಂಟ್ ಬದಲಾಯಿಸಿದ್ದರೆ ಇದು ಅದಕ್ಕೆ ಕಾರಣವಾಗಬಹುದು.

ಸೋಪ್ ಅಥವಾ ಡಿಟರ್ಜೆಂಟ್ ಅನ್ನು ಇತ್ತೀಚೆಗೆ ಬದಲಾಯಿಸಿಕೊಂಡಿದ್ದರೆ ಆಗ ಅದರ ಸುಗಂಧದಿಂದಾಗಿ ಕಿರಿಕಿರಿ ಕಾಣಿಸಬಹುದು.

ಋತುಬಂಧಕ್ಕೆ ಒಳಗಾಗುತ್ತಲಿದ್ದರೆ ಆಗ ಈಸ್ಟ್ರೋಜನ್ ಅಸಮತೋಲನದಿಂದಾಗಿ ಯೋನಿ ಭಾಗದಲ್ಲಿನ ಪಿಎಚ್ ಮಟ್ಟದಲ್ಲಿ ಬದಲಾವಣೆ ಆಗಬಹುದು ಮತ್ತು ತುರಿಕೆ ಕಾಣಿಸಬಹುದು.

ಸುಗಂಧಿತ ಲ್ಯುಬ್ರಿಕೆಂಟ್ ಅಥವಾ ಕಾಂಡೋಮ್ ಬಳಕೆ ಮಾಡುವುದರಿಂದಲೂ ಸೂಕ್ಷ್ಮವಾಗಿರುವ ಯೋನಿ ಗೋಡೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಯಾವುದೇ ರೀತಿಯ ಸುಗಂಧ ದ್ರವ್ಯವು ಯೋನಿ ಭಾಗಕ್ಕೆ ಸಂಪರ್ಕಿಸದಂತೆ ನೋಡಿಕೊಳ್ಳಿ.

ಲೈಂಗಿಕವಾಗಿ ಹರಡಿರುವಂತಹ ರೋಗಗಳ ಮೂಲ ಲಕ್ಷಣವೇ ಯೋನಿ ತುರಿಕೆ. ಇದರಿಂಧ ನೀವು ಯಾವುದೇ ರೀತಿಯ ಲೈಂಗಿಕ ರೋಗದ ಸಂಪರ್ಕಕ್ಕೆ ಒಳಗಾಗಿದ್ದರೆ, ಆಗ ನೀವು ಆದಷ್ಟು ಬೇಗನೆ ಚಿಕಿತ್ಸೆ ಪಡೆದುಕೊಳ್ಳೂವುದು ಸೂಕ್ತ.

ನೀವು ಚಿಂತೆ ಮಾಡಬಾರದು ಯಾಕೆ?

ನೀವು ಚಿಂತೆ ಮಾಡಬಾರದು ಯಾಕೆ?

ಯೀಸ್ಟ್ ಸೋಂಕಿನ ಬಗ್ಗೆ ನೀವು ಅತಿಯಾಗಿ ಚಿಂತೆ ಮಾಡಲು ಹೋಗಬೇಡಿ. ಯಾಕೆಂದರೆ ಇದು ಎಲ್ಲಾ ವಯಸ್ಸಿನ ಮಹಿಳೆಯರಲ್ಲಿ ಕಾಣಿಸಿಕೊಳ್ಳುವಂತಹ ಸಾಮಾನ್ಯ ಸಮಸ್ಯೆಯಾಗಿದೆ. ಇದು ಬರದಂತೆ ತಡೆಯಲು ಹಲವಾರು ರೀತಿಯ ಕ್ರಮ ತೆಗೆದುಕೊಳ್ಳಬಹುದು ಮತ್ತು ಇದರ ಬೆಳವಣಿಗೆ ತಡೆಯಬಹುದು. ಯಾವುದೇ ಲೈಂಗಿಕ ಕ್ರಿಯೆ ಅಥವಾ ಯೋನಿ ಸ್ವಚ್ಛತೆಗೂ ಇದು ಸಂಬಂಧ ಹೊಂದಿಲ್ಲ. ಇದರಿಂದ ನೀವು ಏನಾದರೂ ತಪ್ಪು ಮಾಡಿಕೊಂಡಿದ್ದೀರಿ ಎಂದು ಭಾವಿಸಬೇಡಿ. ಲೈಂಗಿಕವಾಗಿ ಇದು ಹರಡದೆ ಇರುವ ಕಾರಣದಿಂದಾಗಿ ಇದನ್ನು ಲೈಂಗಿಕ ರೋಗವೆಂದು ಹೇಳಲಾಗದು ಮತ್ತು ಲೈಂಗಿಕ ಚಟುವಟಿಕೆ ಇಲ್ಲದೆಯೂ ಇದು ಬರಬಹುದು.

ಯೀಸ್ಟ್ ಸೋಂಕಿಗೆ ಕಾರಣವೇನು?

ಯೀಸ್ಟ್ ಸೋಂಕಿಗೆ ಕಾರಣವೇನು?

ಆರೋಗ್ಯಕಾರಿ ಯೋನಿಯು ಒಂದು ಸಣ್ಣ ಪ್ರಮಾಣದ ಯೀಸ್ಟ್ವನ್ನು ಹೊಂದಿರುವುದು. ಕ್ಯಾಂಡಿಡಾ ಅಲ್ಬಿಕಾನ್ಸ್ ಎಂದು ಕರೆಯಲಾಗುತ್ತದೆ. ದೇಹದಲ್ಲಿ ಇರುವಂತಹ ಲ್ಯಾಕ್ಟೋಬಾಸಿಲಸ್ ಆಸಿಡೋಫಿಲಸ್ ಎನ್ನುವ ಬ್ಯಾಕ್ಟೀರಿಯಾವು ಈ ಯೀಸ್ಟ್ ಬೆಳವಣಿಗೆಯನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದರ ಸಮತೋಲನ ತಪ್ಪಿದ ವೇಳೆ ಯೀಸ್ಟ ಹೆಚ್ಚಾಗಿ ಬೆಳವಣಿಗೆ ಆಗಿ ಸೋಂಕು ಕಾಣಿಸಬಹುದು.

ಸೋಂಕಿಗೆ ಸ್ಪಷ್ಟ ಕಾರಣವು ವ್ಯಕ್ತಿಗಿಂತ ವ್ಯಕ್ತಿಗೆ ಭಿನ್ನವಾಗಿ ಇರುವುದು ಮತ್ತು ಕೆಲವೊಂದು ವಿದ್ಯಮಾನಗಳು ಇದಕ್ಕೆ ಕಾರಣವಾಗಿರುವುದು. ಆಂಟಿಬಯೋಟಿಕ್ ಇದಕ್ಕೆ ದೊಡ್ಡ ಮಟ್ಟದ ಶತ್ರು ಎಂದು ಹೇಳಬಹುದು. ಆಂಟಿಬಯೋಟಿಕ್ ಜ್ವರವನ್ನು ದೂರ ಮಾಡಬಹುದು. ಇದಕ್ಕಾಗಿ ಅದು ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಾಶ ಮಾಡುವುದು. ಆದರೆ ಇದೇ ವೇಳೆ ಒಳ್ಳೆಯ ಬ್ಯಾಕ್ಟೀರಿಯಾಗೂ ಹಾನಿ ಉಂಟು ಮಾಡುವುದು. ಇದರಿಂದಾಗಿ ಯೀಸ್ಟ್ ಅತಿಯಾಗಿ ಬೆಳವಣಿಗೆ ಆಗಬಹುದು.

ಋತುಚಕ್ರದ ಮೊದಲು ಅಥವಾ ಬಳಿಕ ದೇಹದಲ್ಲಿ ಆಗುವಂತಹ ಹಾರ್ಮೋನ್ ಬದಲಾವಣೆಯಿಂದಾ ಈಸ್ಟ್ರೋಜನ್ ಮಟ್ಟವು ಹೆಚ್ಚಾಗುವ ಕಾರಣದಿಂದಾಗಿ ಹೀಗೆ ಆಗಬಹುದು. ಆಹಾರ ಕ್ರಮದಲ್ಲಿ ಅತಿಯಾದ ಸಕ್ಕರೆ, ನಿದ್ರಾಹೀನತೆ ಮತ್ತು ಒತ್ತಡದ ಜೀವನ ಸಾಗಿಸುವ ಕಾರಣದಿಂದಾಗಿ ಹೀಗೆ ಸಮಸ್ಯೆ ಬರಬಹುದು.

ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು

ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು

ಗರ್ಭಧಾರಣೆ ಅಥವಾ ಹಾರ್ಮೋನ್ ಚಿಕಿತ್ಸೆಯಿಂದಾಗಿ ಅಧಿಕ ಈಸ್ಟ್ರೋಜನ್ ಮಟ್ಟವು ದೇಹದಲ್ಲಿ ಇದ್ದರೆ ಆಗ ನೀವು ಮಹಿಳಾ ತಜ್ಞರನ್ನು ಭೇಟಿ ಮಾಡಿ ಅವರಿಂದ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು. ಮಧುಮೇಹ ಅಥವಾ ಎಚ್ ಐವಿಯಿಂದ ಬಳಲುತ್ತಿದ್ದರೆ ಆಗ ನೀವು ಸೋಂಕು ನಿವಾರಣೆ ಮಾಡಲು ವೈದ್ಯರನ್ನು ಭೇಟಿ ಮಾಡಿಕೊಂಡು ಚಿಕಿತ್ಸೆ ಪಡೆಯಿರಿ.

ಆರಂಭಿಕ ಚಿಕಿತ್ಸೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಇರುವಂತಹ ಸೋಂಕಿಗೆ ವೈದ್ಯಕೀಯ ಚಿಕಿತ್ಸೆ ಬೇಕಾಗಬಹುದು ಅಥವಾ ಅತಿಯಾಗಿ ದದ್ದು, ಬೊಕ್ಕೆ ಕಾಣಿಸಿಕೊಂಡರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ. ಪದೇ ಪದೇ ನಿಮಗೆ ಸೋಂಕು ಕಾಡುತ್ತಲಿದ್ದರೆ ಆಗ ಇದಕ್ಕೆ ಗರ್ಭ ನಿರೋಧಕ ಮಾತ್ರೆಗಳು ಹಾರ್ಮೋನ್ ವೈಪರಿತ್ಯ ಉಂಟು ಮಾಡುವ ಕಾರಣದಿಂದಾಗಿ ಹೀಗೆ ಆಗಬಹುದು. ನೀವು ಯಾವುದೇ ರೀತಿಯ ಔಷಧಿ ತೆಗೆದುಕೊಳ್ಳುವ ಮೊದಲು ವೈದ್ಯರಿಗೆ ಅದರ ಬಗ್ಗೆ ತಿಳಿಸಿರಿ.

English summary

What Is Yeast Infection Causes Symptoms and Treatment

Yeast infections are the elephant in the women’s health room that nobody likes to talk about. However, vaginal yeast infections are extremely common and often easily treatable.
X
Desktop Bottom Promotion