Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸಕತ್ ಟ್ರೆಂಡ್ ಆಗುತ್ತಿದೆ ಬ್ಲ್ಯಾಕ್ ವಾಟರ್? ಏನಿದರ ಪ್ರಯೋಜನ?
ನೀರಿನ ಬಾಟಲಿಯಲ್ಲಿ ದೊರೆಯುವ ನೀರು ಲೀಟರ್‌ಗೆ 20 ರುಪಾಯಿಯಿಂದ ಹಿಡಿದು ಸಾವಿರ ರುಪಾಯಿ ಬೆಲೆ ಬಾಳುವ ನೀರು ಕೂಡ ಮಾರ್ಕೆಟ್ಟಿನಲ್ಲಿದೆ. ದುಡ್ಡಿರುವವರು, ಸೆಲೆಬ್ರಿಟಿಗಳು ಒಂದು ಲೀಟರ್ ನೀರಿಗೆ ಸಾವಿರಾರು ರುಪಾಯಿ ಕೊಟ್ಟು ಕುಡಿಯುತ್ತಾರೆ. ಈ ನೀರಿನಲ್ಲಿ ಖನಿಜಾಂಶಗಳಿರುತ್ತದೆ, ಅಲ್ಲದೆ ಅತಿ ಶುದ್ಧವಾಗಿರುತ್ತದೆ, ಶುದ್ಧವಾದ ನೀರಿನ ಬಣ್ಣ ಯಾವು ಎಂದು ಕೇಳಿದರೆ ಹೇಳಲು ಕಷ್ಟವಾಗುವುದು? ಏಕೆಂದರೆ ನೀರಿಗೆ ಬಣ್ಣವಿರಲ್ಲ. ಶುದ್ಧವಾದ ನೀರು ನೋಡಿದಾಗ ಗೊತ್ತಾಗುತ್ತೆ, ರುಚಿಯಲ್ಲಿ ಗೊತ್ತಾಗುತ್ತೆ.
ಇತ್ತೀಚಿನ ದಿನಗಳಲ್ಲಿ ಹೊಸ ಬಗೆಯ ನೀರೊಂದು ಸಕತ್ ಟ್ರೆಂಡ್ ಆಗಿದೆ. ಸೆಲೆಬ್ರಿಟಿಗಳು ಎಲ್ಲೇ ಹೋಗುವುದಾದರೂ ಈ ನೀರಿನ ಬಾಟಲಿ ಅವರ ಕೈಯಲ್ಲಿರುತ್ತೆ, ಯಾವುದು ಆ ನೀರು ಎಂದು ನೋಡುವುದಾದರೆ ಅದುವೇ ಕಪ್ಪು ನೀರು, ಅದನ್ನು ಬ್ಲ್ಯಾಕ್ ಅಕ್ಲೈನ್ ವಾಟರ್ ಎಮದು ಕರೆಯುತ್ತಾರೆ, ಏನಿದು ಕಪ್ಪು ನೀರು, ಇದರ ವಿಶೇಷತೆಗಳೇನು ಎಂದು ನೋಡೋಣ ಬನ್ನಿ:

ಏನಿದು ಕಪ್ಪು ನೀರು?
ಇದು ಅಕ್ಲೈನ್ ನೀರಾಗಿದ್ದು ಇದರಲ್ಲಿರುವ ಫುಲ್ವಿಕ್ ಆಮ್ಲದಿಂದಾಗಿ ಕಪ್ಪು ಬಣ್ಣದಲ್ಲಿರುತ್ತದೆ. ಇದರ pH ಪ್ರಮಾಣದಿಂದಾಗಿ ಇದನ್ನು ಕುಡಿಯಲು ಯೋಗ್ಯವಾಗಿದೆ ಎಂದು ಪರಿಗಣಿಸಲಾಗಿದೆ. pH ಪ್ರಮಾಣದ ಆಧಾರದ ಮೇಲೆ ಇದರಲ್ಲಿರುವ ಆಮ್ಲದ ಅಂಶವನ್ನು ಅಳಿಯಲಾಗುವುದು. pHಯನ್ನು 0-14ರವರೆಗೆ ಅಳತೆ ಮಾಡಲಾಗುವುದು. 1 pH ಹೊಂದಿರುವ ನೀರು ಕುಡಿಯಲು ಅಷ್ಟೊಂದು ಗುಣಮಟ್ಟವಾದ ಖನಿಜಾಂಶ, ಅದೇ pH 13 ಹೊಂದಿರುವ ನೀರಿನಲ್ಲಿ ಆಮ್ಲ ಕಡಿಮೆ ಇರುವುದರಿಂದ ಅಕ್ಲೈನ್ ನೀರು ಅಂದರೆ ಖನಿಜಾಂಶಗಳನ್ನು ಹೊಂದಿರುವ ನೀರೆಂದು ಪರಿಗಣಿಸಲಾಗಿದೆ.

ಕಪ್ಪು ನೀರು ಟ್ರೆಂಡ್ ಆಗಿರುವುದು ಏಕೆ?
ಸೆಲೆಬ್ರಿಟಿಗಳಾದ ಮಲೈಕಾ ಅರೋರಾ, ವಿರಾಟ್ ಕೊಹ್ಲಿ ಹೀಗೆ ಅನೇಕರು ಈ ಕಪ್ಪು ನೀರಿನ ಬಾಟಲಿ ಹಿಡಿದಿರುವ ಫೋಟೋಗಳನ್ನು ನೋಡಬಹುದು. ಕಪ್ಪು ನೀರಿನಲ್ಲಿ pH ಪ್ರಮಾಣ ಅಧಿಕವಿರುವುದರಿಂದ ಇದು ಕ್ಯಾನ್ಸರ್‌ನಂಥ ಮಾರಕ ರೋಗಗಳನ್ನು ತಡೆಗಟ್ಟುವುದು ಎಂಬ ನಂಬಿಕೆ ಇದೆ. ಆದರೆ ಇದರ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

ಕಪ್ಪು ನೀರಿನಿಂದ ಅಡ್ಡಪರಿಣಾಮಗಳಿವೆಯೇ?
ಇದು ಕುಡಿಯಲು ಯೋಗ್ಯವಾದ ನೀರೇ ಆದರೂ ಇದು ಕೆಲವೊಂದು ಅಡ್ಡಪರಿಣಾಮಗಳನ್ನು ಬೀರಬಹುದು, ಇದು ಹೊಟ್ಟೆಯಲ್ಲಿ ನೈಸರ್ಗಿಕವಾಗಿರುವ ಅಸಿಡಿಕ್ ಪ್ರಮಾಣವನ್ನು ಕಡಿಮೆ ಮಾಡಬಹುದು. ಇದನ್ನು ಹೆಚ್ಚು ಕುಡಿದರೆ ಗ್ಯಾಸ್ಟ್ರಿಕ್, ತ್ವಚೆ ಸಮಸ್ಯೆ, ವಾಂತಿ, ಬೇಂಧಿ, ಮಸಲ್ ಕ್ಯಾಚ್ ಮುಂತಾದ ಸಮಸ್ಯೆಗಳು ಕಂಡು ಬರಬಹುದು ಎಂದು ನ್ಯೂಟ್ರಿಷಿಯನಿಸ್ಟ್ ಹಾಗೂ ಸರ್ಟಿಫೈಡ್ ಡಯಾಬಿಟಿಸ್ ಎಜುಕೇಟರ್ ಆಗಿರುವ ಪಾರೂಲ್ ಮಲ್ಹೋತ್ರ ಬಲ್ಹ್.

ಕಪ್ಪು ನೀರಿನ ಬಗ್ಗೆ ತಜ್ಞರ ಸಲಹೆಯೇನು?
ಸಹಜ ನೀರಿನ ಬಲಿಗೆ ಇದನ್ನೇ ಕುಡಿಯುವುದು ಒಳ್ಳೆಯ ಆಯ್ಕೆ ಅಲ್ಲ, ನೀವು ಅಕ್ಲೈನ್ ನೀರು ಕುಡಿಯಬೇಕೆಂದು ಬಯಸುವುದಾದರೆ ಅದು ನೈಸರ್ಗಿಕವಾಗಿ ಕಲ್ಲುಗಳ ಮೂಲಕ ಹರಿದು ಬಂಧಂಥ ನೀರು ಆಗಿರಬೇಕು, ಹೀಗೆ ಹರಿದು ಬರುವಾಗ ಅದು ಖನಿಜಾಂಶಗಳನ್ನು ಹೊತ್ತು ಬರುವುದು. ಕಪ್ಪು ನೀರಿನಲ್ಲಿ ಕೃತಕವಾಗಿ ಖನಿಜಾಂಶಗಳನ್ನು ಸೇರಿಸಲಾಗಿದೆ. ಆದ್ದರಿಂದ ಇದು ಕೃತಕವಾದ ನೀರಾಗಿದೆ.
ಆದ್ದರಿಂದ ಈ ನೀರಿನ ಬದಲಿಗೆ ನೀವು ನೈಸರ್ಗಿಕವಾಗಿ ಸಿಗುವ ಶುದ್ಧ ನೀರನ್ನೇ ಬಳಸಿ.



Click it and Unblock the Notifications
