H3N2 ಮತ್ತು H1N1 ಹಂದಿ ಜ್ವರದ ನಡುವಿನ ವ್ಯತ್ಯಾಸವೇನು?

ಭಾರತದಲ್ಲಿ ಇದೀಗ H3N2 ವೈರಸ್ ಆತಂಕ ಶುರುವಾಗಿದೆ. ಈಗಾಗಲೇ ಈ ವೈರಸ್‌ಗೆ ಎರಡು ಬಲಿಯಾಗಿದ್ದು , ಅವರಲ್ಲೊಬ್ಬರು ಕರ್ನಾಟಕದ ಹಾಸನದವರು. ಅದರ ಜೊತೆಗೆ ದೇಶದಲ್ಲಿ H1N1 ಪ್ರಕರಣಗಳು ದಾಖಲಾಗಿವೆ.

 H3N2 And H1N1

H3N2 ಮತ್ತು H1N1 ನಡುವಿನ ವ್ಯತ್ಯಾಸವೇನು ಎಂದು ನೋಡೋಣ ಬನ್ನಿ:
H1N1 ಎಂಬುವುದು ಇನ್‌ಫ್ಲುಯೆಂಜಾ ಎ ವೈರಸ್‌ನ ರೂಪಾಂತರವಾಗಿದ್ದು ಇದರಲ್ಲಿ H1 (hemagglutinin1) ಮತ್ತು N1 (neuraminidase1) ಪ್ರೊಟೀನ್‌ಗಳಿವೆ. H3N2 ಇನ್‌ಫ್ಲುಯೆಂಜಾ ಎ ವೈರಸ್‌ನ ರೂಪಾಂತರವಾಗಿದ್ದು ಇದರಲ್ಲಿ H3 (hemagglutinin3) and N2 (neuraminidase2) ಎಂಬ ಪ್ರೊಟೀನ್‌ಗಳಿವೆ.

ಇನ್‌ಫ್ಲುಯೆಂಜಾ ಪಕ್ಷಿಗಳು, ಸಸ್ತನಿಗಳು, ಮನುಷ್ಯರಲ್ಲಿ ಕಂಡು ಬರುತ್ತದೆ.

H1N1 ಎಂದರೇನು?
H1N1 ಎಂಬುವುದು ಇನ್‌ಫ್ಲುಯೆಂಜಾ ಎ ವೈರಸ್‌ನ ರೂಪಾಂತರವಾಗಿದ್ದು ಇದರಲ್ಲಿ H1 (hemagglutinin1) ಮತ್ತು N1 (neuraminidase1) ಪ್ರೊಟೀನ್‌ಗಳಿವೆ.
ಈ ವೈರಸ್‌ 2009ರಲ್ಲು ಹಂದಿ ಜ್ವರ ಎಂಬ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಿತ್ತು. ಅಲ್ಲದೆ ಇದರ ರೂಪಾಂತರ 1019ರಲ್ಲಿ ಸ್ಪಾನಿಷ್‌ ಫ್ಲೂಗೆ ಕಾರಣವಾಗಿತ್ತು, ಈ ಕಾಯಿಲೆಯಿಂದ ಒಂದು ವರ್ಷದಲ್ಲಿ 100 ಮಿಲಿಯನ್‌ ಜನರು ಸಾವನ್ನಪ್ಪಿದ್ದರು. 1977ರಲ್ಲಿ ಉಂಟಾದ ರಷ್ಯಾನ್ ಫ್ಲೂಗೆ ಕೂಡ H1N1 ರೂಪಾಂತರ ಕಾರಣವಾಗಿತ್ತು.

H3N2 ಎಂದರೇನು?
ಈ ವೈರಸ್‌ ಇನ್‌ಫ್ಲುಯೆಂಜಾ ಎ ವೈರಸ್‌ನ ರೂಪಾಂತರವಾಗಿದ್ದು ಇದರಲ್ಲಿ H3 (hemagglutinin3) and N2 (neuraminidase2) ಎಂಬ ಪ್ರೊಟೀನ್‌ಗಳಿವೆ. ಈ ವೈರಸ್‌ ಹಂದಿ ಹಾಗೂ ಮನುಷ್ಯರಲ್ಲಿ ಎಂಡೆಮಿಕ್‌ ಹಂತದಲ್ಲಿದೆ. 1968-1969ರವರೆಗೆ ಈ ವೈರಸ್‌ ಹಾಂಗ್‌ಕಾಂಗ್‌ನಲ್ಲಿ ಸಾಂಕ್ರಾಮಿಕವಾಗಿ ಹರಡಿ 7, 50,000 ಜನರ ಸಾವಿಗೆ ಕಾರಣವಾಗಿತ್ತು. ಈ ವೈರಸ್‌ 2003ರಲ್ಲಿ ಯುನೈಟೆಡ್ ಸ್ಟೇಟ್‌ನಲ್ಲಿ ಮಕ್ಕಳಲ್ಲಿ ಗಂಭೀರ ಪರಿಣಾಮ ಬೀರಿತ್ತು, ಹೆಚ್ಚಿನ ಮಕ್ಕಳಿಗೆ ಈ ವೈರಸ್‌ ಹರಡಿತ್ತು.

H3N2 ಹರಡುವುದು ತಡೆಗಟ್ಟಬಹುದೇ?

H3N2 ಮತ್ತು H1N1 ಎರಡನ್ನೂ ಲಸಿಕೆ ಹಾಗೂ ಆ್ಯಂಟಿವೈರಲ್‌ ಲಸಿಕೆ ನೀಡುವ ಮೂಲಕ ತಡೆಗಟ್ಟಬಹುದು.

ಈ ಮುನ್ನೆಚ್ಚರಿಕೆವಹಿಸಿ
* ಮಾಸ್ಕ್ ಧರಿಸಿ
* ಕೈಗಳನ್ನು ಆಗಾಗ ತೊಳೆಯಿರಿ
* ಜನರ ಗುಂಪು ಇರುವ ಕಡೆ ಹೋಗಬೇಡಿ, ಸಾಮಾಜಿಕ ಅಂತರ ಕಾಪಾಡಿ
* ಜ್ವರ ಬಂದರೆ ಸ್ವ ಚಿಕಿತ್ಸೆ ನೀಡದೆ ವೈದ್ಯರಿಗೆ ತೋರಿಸಿ. ವೈದ್ಯರು ಕೂಡ ಆ್ಯಂಟಿ ಬಯೋಟಿಕ್ಸ್ ಪ್ರಾರಂಭದಲ್ಲಿಯೇ ನೀಡುವಂತಿಲ್ಲ, ಈ ಅರಿವು ನಿಮಗೂ ಇರಲಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

What Are The Difference Between H3N2 And H1N1

Do You what are the Difference Between H3N2 And H1N1, here are information have a look,
Story first published: Friday, March 10, 2023, 22:31 [IST]
X
Desktop Bottom Promotion