Latest Updates
-
ತಮಿಳುನಾಡು ಮಳೆ: ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷಗಳ ಸುಲಭ ವರ್ಕೌಟ್ ರೂಟೀನ್! -
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ!
ಮೂತ್ರದ ಸೋಂಕು: ಕಾರಣ, ಲಕ್ಷಣಗಳು ಹಾಗೂ ಮನೆಮದ್ದುಗಳು ಇಲ್ಲಿವೆ..
ಸಾಮಾನ್ಯವಾಗಿ ಮಕ್ಕಳು ಮತ್ತು ಹಿರಿಯರು ಮೂತ್ರದ ಸೋಂಕಿನ ಬಗ್ಗೆ ಇತ್ತೀಚಿನ ದಿನಗಳಲ್ಲಿ ದೂರು ನೀಡುತ್ತಾರೆ. ಆದರೆ ಮಹಿಳೆಯರಲ್ಲಿ ಮೂತ್ರದ ಸೋಂಕು ಹೆಚ್ಚಾಗಿ ಕಂಡುಬರುತ್ತದೆ. ಹದಿಹರೆಯದ ವಯಸ್ಸಿನಿಂದಲೂ ಹುಡುಗಿಯರಲ್ಲಿ ಮೂತ್ರದ ಸೋಂಕಿನ ಅಪಾಯ ಹೆಚ್ಚಾಗಿ ಕಂಡುಬರುತ್ತದೆ. ಸಂಶೋಧನೆಯ ಪ್ರಕಾರ, ಸುಮಾರು 50 ಪ್ರತಿಶತದಷ್ಟು ಮಹಿಳೆಯರು ತಮ್ಮ ಜೀವನದ ಕೆಲವು ಸಮಯದಲ್ಲಿ ಮೂತ್ರದ ಸೋಂಕನ್ನು ಹೊಂದಿರುತ್ತಾರೆ. ಮಹಿಳೆಯರಿಗೆ ಮೂತ್ರದ ಸೋಂಕು ಏಕೆ ಇದೆ, ಅದಕ್ಕೆ ಕಾರಣವೇನು, ತಡೆಗಟ್ಟುವಿಕೆ ಮತ್ತು ಮನೆಮದ್ದುಗಳನ್ನು ಇಲ್ಲಿ ತಿಳಿಸಲಾಗಿದೆ.
ಮೂತ್ರದ ಸೋಂಕಿಗೆ ಕಾರಣಗಳು ಮತ್ತು ಮನೆಮದ್ದುಗಳನ್ನು ಇಲ್ಲಿ ನೀಡಲಾಗಿದೆ:

ಮೂತ್ರದ ಸೋಂಕು:
ಮೂತ್ರ ನಾಳದಲ್ಲಿನ ಸೋಂಕಿನಿಂದಾಗಿ ಮೂತ್ರದ ಸೋಂಕು ಉಂಟಾಗುತ್ತದೆ. ಇದನ್ನು ಯೂರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್ (ಯುಟಿಐ) ಎಂದೂ ಕರೆಯುತ್ತಾರೆ. ಮೂತ್ರಕೋಶ ಮತ್ತು ಅದರ ಟ್ಯೂಬ್ ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾದಾಗ ಯುಟಿಐ ಸಂಭವಿಸುತ್ತದೆ. ಈ ಬ್ಯಾಕ್ಟೀರಿಯಾಗಳು ಮೂತ್ರನಾಳದ ಮೂಲಕ ದೇಹವನ್ನು ಪ್ರವೇಶಿಸಿ ಮೂತ್ರಕೋಶ ಮತ್ತು ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತವೆ. ಇದರ ಸೋಂಕಿಗೆ ಮುಖ್ಯ ಕಾರಣ ಇ.ಕೋಲಿ ಬ್ಯಾಕ್ಟೀರಿಯಾ.

ಮೂತ್ರದ ಸೋಂಕಿಗೆ ಕಾರಣಗಳು:
- ಬ್ಯಾಕ್ಟೀರಿಯಾಗಳು ನಿಮ್ಮ ಮೂತ್ರನಾಳವನ್ನು ತಲುಪಿದಾಗ.
- ಲೈಂಗಿಕ ಸಮಯದಲ್ಲಿ ರೋಗಾಣುಗಳು ಮೂತ್ರನಾಳ ಸೇರಿದಾಗ.
- ಸಾರ್ವಜನಿಕ ಅಥವಾ ಕೊಳಕು ಶೌಚಾಲಯವನ್ನು ಬಳಸುವಾಗ ಸೋಂಕುಗಳು ಸಂಭವಿಸಬಹುದು.
- ಕೊಳಕು ಕೈಗಳಿಂದ ಜನನಾಂಗಗಳನ್ನು ಸ್ಪರ್ಶಿಸುವುದು.
- ತುಂಬಾ ಹಳದಿ ಬಣ್ಣದ ಮೂತ್ರ.
- ಪದೇ ಪದೇ ಸಣ್ಣ ಪ್ರಮಾಣದ ಮೂತ್ರ ವಿಸರ್ಜನೆ.
- ಮೂತ್ರದ ಸೋಂಕಿನ ಸಮಯದಲ್ಲಿ ರೋಗಿಯು ಹೆಚ್ಚು ದಣಿದಿರುತ್ತಾನೆ. ಯಾವುದೇ ಕಠಿಣ ಪರಿಶ್ರಮ ಮಾಡದೆ ಮಹಿಳೆಯರು ಎಲ್ಲಾ ಸಮಯದಲ್ಲೂ ದಣಿದಿರುತ್ತಾರೆ.
- ಮೂತ್ರವನ್ನು ನಿಲ್ಲಿಸಲು ಪ್ರಯತ್ನಿಸಬೇಡಿ.
- ಮೂತ್ರದ ಉರಿ ಪರಿಣಾಮವನ್ನು ತಪ್ಪಿಸಲು ಸಾಕಷ್ಟು ನೀರು ಕುಡಿಯಿರಿ.
- ಲೈಂಗಿಕತೆಯ ನಂತರ ನಿಮ್ಮ ಖಾಸಗಿ ಭಾಗಗಳನ್ನು ಸ್ವಚ್ಛಗೊಳಿಸಿ.
- ಯಾವಾಗಲೂ ಸ್ವಚ್ಛವಾದ ಒಳ ಉಡುಪುಗಳನ್ನು ಧರಿಸಿ.

ಮೂತ್ರದ ಸೋಂಕಿನ ಲಕ್ಷಣಗಳು:
ಮೂತ್ರ ವಿಸರ್ಜಿಸುವಾಗ ತೀವ್ರವಾದ ಸುಡುವ ಸಂವೇದನೆಯನ್ನು ಉಂಟುಮಾಡುತ್ತದೆ ಅಥವಾ ಉರಿಮೂತ್ರ.
ಮೂತ್ರ ಮಾಡುವಾಗ ಹೊಟ್ಟೆ ಮತ್ತು ಸೊಂಟದಲ್ಲಿ ಅಸಹನೀಯ ನೋವು.

ಯುಟಿಐ ತಡೆಗಟ್ಟುವಿಕೆ:
ಈ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ , ನೀವು ಅದನ್ನು ಮೂತ್ರದ ಸೋಂಕಿನ್ನು ದೂರ ಮಾಡಬಹುದು.

ಮೂತ್ರದ ಸೋಂಕಿಗೆ ಮನೆಮದ್ದುಗಳು:
ಆಪಲ್ ಸೈಡರ್ ವಿನೆಗರ್:
ಇದು ಮೂತ್ರದ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ. ಆಪಲ್ ಸೈಡರ್ ವಿನೆಗರ್ ಬೆರೆಸಿದ ನಿಂಬೆ ರಸ ಮತ್ತು ಜೇನುತುಪ್ಪವನ್ನು ಬಳಸಿ.

ನೆಲ್ಲಿಕಾಯಿ:
ವಿಟಮಿನ್-ಸಿ ಸಮೃದ್ಧವಾಗಿರುವ ನೆಲ್ಲಿಕಾಯಿ ಮೂತ್ರದ ಸೋಕಿನ ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆಯುತ್ತದೆ. ನೆಲ್ಲಿಕಾಯಿ ರಸವನ್ನು ದಿನಕ್ಕೆ 4-5 ಬಾರಿ ಕುಡಿಯಿರಿ.

ದಾಳಿಂಬೆ ಜ್ಯೂಸ್:
ಪ್ರತಿದಿನ ಅರ್ಧ ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಮೂತ್ರದ ಸೋಂಕನ್ನು ನಿವಾರಿಸಲು ಮತ್ತು ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆಯಲು ಸಹಾಯ ಮಾಡುತ್ತದೆ.

ಬಿಸಿನೀರಿನ ಸೇವನೆ:
ದೈನಂದಿನ ಬಿಸಿನೀರಿನ ಸೇವನೆಯು ಮೂತ್ರನಾಳದ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಸೋಂಕಿನಿಂದ ಉಂಟಾಗುವ ನೋವಿನಿಂದ ಪರಿಹಾರವನ್ನು ನೀಡುತ್ತದೆ.

ನೀರು ಕುಡಿಯಿರಿ:
ಮೂತ್ರದ ಸೋಂಕಿನಿಂದ ಬಳಲುತ್ತಿದ್ದರೆ, ನಂತರ ಪ್ರತಿದಿನ ಹೆಚ್ಚು ಹೆಚ್ಚು ನೀರು ಕುಡಿಯಿರಿ. ಇದರಿಂದ ಪರಿಹಾರ ಸಿಗುತ್ತದೆ.



Click it and Unblock the Notifications
