Latest Updates
-
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್
ಒಳಾಂಗಣದಲ್ಲಿರುವಾಗ ನಿಮ್ಮ ಹೆಜ್ಜೆಯನ್ನು ಹೆಚ್ಚಿಸಲು ಇಲ್ಲಿವೆ ಸಲಹೆಗಳು
ಕೊರೋನಾ ಸಂಕಷ್ಟ ತುಸು ಕಡಿಮೆಯಾಗಿದ್ದರೂ ಸಹ, ಮನೆ ಹೊರಗೆ ಕಾಲಿಡುವ ಸಮಯದಲ್ಲಿ ಅದರ ಭಯ್ ಇದ್ದೇ ಇದೆ. ಭಯಾನಕ ಸನ್ನಿವೇಶವು ಬದಲಾಗುತ್ತಿರುವಂತೆ ತೋರುತ್ತದೆಯಾದರೂ, ಕೊರೊನಾ ಭೂತವನ್ನು ಹೊಡೆದೋಡಿಸಲು ಮನೆಯೊಳಗೆ ಉಳಿಯುವುದು ನಾವೆಲ್ಲರೂ ಕಂಡುಕೊಂಡ ದಾರಿಯಾಗಿದೆ. ಇದು ಒಳ್ಳೆಯದಾದರೂ, ಇದರಿಂದ ಸ್ಥೂಲಕಾಯದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಸಕ್ರಿಯ ಮತ್ತು ಸದೃಢವಾಗಿರಲು ವಯಸ್ಕರು ಸರಾಸರಿ ದಿನಕ್ಕೆ ಕನಿಷ್ಠ 10,000 ಹೆಜ್ಜೆಗಳನ್ನು ನಡೆಯಬೇಕು. ಹೆಚ್ಚಿನ ಸಮಯಗಳ ಕಾಲ ಕುಳಿತುಕೊಳ್ಳುವುದು ನಿಮ್ಮ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಮನೆಯೊಳಗೆ ಇರುವಾಗ ಚಲನೆಯಲ್ಲಿ ತೊಡಗಿಕೊಳ್ಳುವುದು ಮುಖ್ಯವಾಗಿರುತ್ತದೆ. ಅದಕ್ಕಾಗಿ ಇಲ್ಲಿನಾವು ಮನೆಯೊಳಗೆ ಇರುವಾಗ ಹೆಜ್ಜೆಯನ್ನು ಹೆಚ್ಚಿಸಲು ಸಲಹೆಗಳನ್ನು ನೀಡಲಾಗಿದೆ.

ನೀವು ಒಳಾಂಗಣದಲ್ಲಿರುವಾಗ ಚಲನೆಯನ್ನು ಹೆಚ್ಚಿಸಲು ಸಲಹೆಗಳು ಇಲ್ಲಿವೆ:
ಪ್ರತಿದಿನ ವ್ಯಾಯಾಮ ಮಾಡುವ ಜನರಿಗೆ ದೀರ್ಘಕಾಲದವರೆಗೆ ಕುಳಿತುಕೊಳ್ಳುವುದು ಒಳ್ಳೆಯದಲ್ಲ ಎಂದು ಅಧ್ಯಯನಗಳು ಸೂಚಿಸುತ್ತವೆ. ಇದು ನಿಮ್ಮ ವ್ಯಾಯಾಮದ ಸಕಾರಾತ್ಮಕ ಪರಿಣಾಮಗಳನ್ನು ಮೊಂಡಾಗಿಸಬಹುದು. ನಿಷ್ಕ್ರಿಯತೆಯ ದೀರ್ಘಾವಧಿಯು ರಕ್ತದ ಹರಿವನ್ನು ನಿರ್ಬಂಧಿಸುತ್ತದೆ ಮತ್ತು ಅಗತ್ಯ ಪೋಷಕಾಂಶಗಳನ್ನು ಕಸಿದುಕೊಳ್ಳುತ್ತದೆ.

ಮೆಟ್ಟಿಲುಗಳನ್ನು ಹತ್ತಿ:
ಸಾಧ್ಯವಾದಾಗಲೆಲ್ಲಾ ಮೆಟ್ಟಿಲುಗಳ ಮೇಲೆ ಮತ್ತು ಕೆಳಗೆ ನಡೆಯಲು ಪ್ರಯತ್ನಿಸಿ. ಇದು ನಿಮ್ಮ ತೂಕವನ್ನು ನಿಯಂತ್ರಿಸುವುದಲ್ಲದೆ, ಒಟ್ಟಾರೆ ಆರೋಗ್ಯವನ್ನೂ ಸುಧಾರಿಸುತ್ತದೆ. ಇದು ಸುಲಭವಾಗಿ ಲಭ್ಯವಿರುವ ದೈಹಿಕ ಚಟುವಟಿಕೆಯಾಗಿದ್ದು, ಇದಕ್ಕೆ ವಿಶೇಷ ತರಬೇತಿ ಅಗತ್ಯವಿಲ್ಲ. ಮೆಟ್ಟಿಲುಗಳನ್ನು ಹತ್ತುವುದರಿಂದ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟವನ್ನು ಸುಧಾರಿಸಬಹುದು ಎಂದು ಅಧ್ಯಯನಗಳು ತೋರಿಸಿವೆ. ಇದರಿಂದಾಗಿ ಹೃದಯ ಕಾಯಿಲೆಗಳು ದೂರವಾಗುತ್ತವೆ. ಇದು ಸ್ನಾಯುವಿನ ಶಕ್ತಿಯನ್ನು ಹೆಚ್ಚಿಸಲು ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಫೋನ್ ನಲ್ಲಿರುವಾಗ ಓಡಾಡುತ್ತಿರಿ:
ನೀವು ಹೆಜ್ಜೆಯ ಸಂಖ್ಯೆಯನ್ನು ಹೆಚ್ಚಿಸಲು ಸುಲಭವಾದ ಮಾರ್ಗವೆಂದರೆ ಫೋನ್ ಕರೆ ಬಂದಾಗಲೆಲ್ಲಾ ತಿರುಗಾಡುವುದು. ಇದು ಮಾನಸಿಕ ಮತ್ತು ದೈಹಿಕ ಕಾರಣಗಳಿಗಾಗಿ ವ್ಯಕ್ತಿಯನ್ನು ಹೆಚ್ಚು ದೈಹಿಕವಾಗಿ ಸಕ್ರಿಯವಾಗಿರಲು ಪ್ರೋತ್ಸಾಹಿಸುತ್ತದೆ. ಇದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುವ ಮೂಲಕ ಸೃಜನಶೀಲ ಚಿಂತನೆಯನ್ನು ಉತ್ತೇಜಿಸುತ್ತದೆ.

ಕೆಲಸದ ಮಧ್ಯೆ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ:
ಹೌದು, ನೀವು ಸದಾಕಾಲ ಕೆಲಸದಲ್ಲಿ ಬ್ಯುಸಿಯಾಗಿದ್ದಾಗ, ನಿಮ್ಮ ಸ್ಥಳದಿಂದ ಎದ್ದು ನಿಲ್ಲಲು ನಿಮಗೆ ಅಷ್ಟೇನೂ ಸಮಯ ಸಿಗದು, ಆದರೆ ನೀವು ಚಲಿಸದೆ ಅನಾರೋಗ್ಯಕ್ಕೆ ಒಳಗಾಗಿದ್ದರೆ ನೀವು ಏನು ಮಾಡುತ್ತೀರಿ. ಪ್ರತಿ 1 ಗಂಟೆಗೆ ನಿಮ್ಮ ಕೆಲಸದಿಂದ ವಿರಾಮ ತೆಗೆದುಕೊಳ್ಳಲು ಮರೆಯದಿರಿ. ಒಂದು ಗಂಟೆಗೊಮ್ಮೆ ಎದ್ದು ಮನೆ ಸುತ್ತಲೂ ಓಡಾಡುವ ಅಭ್ಯಾಸ ಮಾಡಿಕೊಳ್ಳಿ.

ಮಾರ್ಚ್ ಇನ್ ಪ್ಲೇಸ್:
ನಿಮ್ಮ ಮನೆಯೊಳಗೆ ಸಿಲುಕಿಕೊಂಡಾಗ ನಿಮ್ಮ ಹೆಜ್ಜೆಯ ಸಂಖ್ಯೆಯನ್ನು ಹೆಚ್ಚಿಸಲು ಇದು ಪರಿಣಾಮಕಾರಿ ಮಾರ್ಗವಾಗಿದೆ. ಆನ್-ದಿ-ಸ್ಪಾಟ್ ನಡೆಯುವುದು ರಕ್ತ ಪರಿಚಲನೆ ಸುಧಾರಿಸಲು, ಕೀಲುಗಳಲ್ಲಿನ ನೋವನ್ನು ಕಡಿಮೆ ಮಾಡಲು, ಸಮತೋಲನವನ್ನು ಬೆಳೆಸಲು ಮತ್ತು ಹೃದಯ ಬಡಿತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ . ಜೊತೆಗೆ, ದಿನವಿಡೀ ನಿಮ್ಮನ್ನು ಸಕ್ರಿಯವಾಗಿಡಲು ಇದು ಒಂದು ಮೋಜಿನ ಮಾರ್ಗವಾಗಿದೆ.

ಪ್ರತಿ ಊಟದ ನಂತರ ನಡೆಯಿರಿ:
ಬೆಳಗಿನ ಉಪಾಹಾರ, ಊಟ ಮತ್ತು ಭೋಜನದ ನಂತರ ಸ್ವಲ್ಪ ದೂರ ನಡೆಯುವುದು ನಿಮ್ಮ ಆಹಾರವನ್ನು ಜೀರ್ಣಿಸಿಕೊಳ್ಳಲು ಮತ್ತು ನಿಮ್ಮಹೆಜ್ಜೆಯ ಸಂಖ್ಯೆಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ. ಊಟದ ನಂತರ ನಡೆಯುವುದು ಜೀರ್ಣಕ್ರಿಯೆ, ಹೃದಯದ ಆರೋಗ್ಯವನ್ನು ಸುಧಾರಿಸಲು, ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸಲು , ರಕ್ತದೊತ್ತಡ ಮತ್ತು ತೂಕ ನಷ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಡ್ಯಾನ್ಸ್ ಇನ್ ಔಟ್:
ಇದು ನಿಮ್ಮ ದೈನಂದಿನ ಚಟುವಟಿಕೆಗೆ ಉತ್ತಮವಾಗಿದೆ. ಮಾತ್ರವಲ್ಲ, ನಿಮಗೊಂದು ಮೋಜನ್ನು ನೀಡುತ್ತದೆ. ಇದು ನಿಮ್ಮ ಹೆಜ್ಜೆಯ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲದೆ ಇದು ನಿಮಗೆ ಸೂಕ್ತವಾದ ಒತ್ತಡದ ಬಸ್ಟರ್ ಆಗಿದೆ.



Click it and Unblock the Notifications









