Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ಹಾಲು ಇಷ್ಟವಿಲ್ಲವಿದವರು ಕ್ಯಾಲ್ಸಿಯಂಗಾಗಿ ಈ ಆಹಾರಗಳನ್ನು ಸೇವಿಸಬಹುದು
ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಅತ್ಯಗತ್ಯ. ಈ ಕ್ಯಾಲ್ಸಿಯಂ ಹಾಲಿನಲ್ಲಿ ಸಮೃದ್ಧವಾಗಿದೆ. ಆದರೆ ಅನೇಕ ಜನರಿಗೆ ಈ ಹಾಲೆಂದರೆ ಆಗುವುದಿಲ್ಲ. ಹಾಲಿನಿಂದ ದೂರ ಇರುತ್ತಾರೆ. ಆದರೆ ವಯಸ್ಸಿಗೆ ತಕ್ಕಂತೆ ಹಾಲು ಕುಡಿಯದೇ ಇರುವ ಪರಿಣಾಮವನ್ನು ಮುಂದೆ ಎದುರಿಸಬೇಕಾಗುತ್ತದೆ.
ನಿಮಗೆ ಹಾಲು ಇಷ್ಟವಿಲ್ಲದಿದ್ದರೆ ಕ್ಯಾಲ್ಸಿಯಂ ದೇಹಕ್ಕೆ ಸಿಗುವಂತೆ ಮಾಡಲು ಸೇವಿಸಬಹುದಾದ ಕೆಲವೊದು ಪರ್ಯಾಯ ಆಹಾರಗಳಿವೆ. ಅವುಗಳಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.
ಕ್ಯಾಲ್ಸಿಯಂ ಪಡೆಯಲು ಹಾಲಿನ ಬದಲಾಗಿ ಸೇವಿಸಬಹುದಾದ ಇತರ ಆಹಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಬಾಳೆಹಣ್ಣು:
ನಿಮಗೆ ಹಾಲು ಕುಡಿಯುವುದು ಇಷ್ಟಿವಿಲ್ಲ ಎಂದರೆ, ಅದರ ಬದಲಿಗೆ ಬಾಳೆ ತಿನ್ನಬಹುದು. ಈ ಮೂಲಕ ದೇಹವು ಅಗತ್ಯವಾದ ಕ್ಯಾಲ್ಸಿಯಂನ್ನು ಪಡೆಯುತ್ತದೆ. 1 ಬಾಳೆಹಣ್ಣಿನಲ್ಲಿ ಸುಮಾರು 6 ಮಿಗ್ರಾಂ ಕ್ಯಾಲ್ಸಿಯಂ ಕಂಡುಬರುತ್ತದೆ. ಆದ್ದರಿಂದ ಇದು ಹಾಲಿಗೆ ಸಮನಾಗಿರುತ್ತದೆ.

ಓಟ್ಮೀಲ್:
ಓಟ್ಮೀಲ್ನಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಅಂಶವಿಲ್ಲ, ಆದರೆ ಇತರ ವಸ್ತುಗಳನ್ನು ಅದರೊಂದಿಗೆ ಬೆರೆಸುವ ಮೂಲಕ ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚಿಸಬಹುದು. ಈ ಮೂಲಕ ಕ್ಯಾಲ್ಸಿಯಂ ನ್ನು ನಿಮ್ ದೇಹಕ್ಕೆ ಸೇರಿಸಬಹುದು.

ಬಾದಾಮಿ ಹಾಲು:
ನಿಮಗೆ ಹಸುವಿನ ಹಾಲಿನ ರುಚಿ ಇಷ್ಟವಾಗದಿದ್ದರೆ ಅಥವಾ ಅದರ ವಾಸನೆ ಇಷ್ಟವಾಗದಿದ್ದರೆ, ಬಾದಾಮಿ ಹಾಲನ್ನು ಸಹ ಕುಡಿಯಬಹುದು. ಕ್ಯಾಲ್ಸಿಯಂ ಜೊತೆಗೆ, ವಿಟಮಿನ್-ಇ, ಪ್ರೋಟೀನ್ ಮತ್ತು ಫೈಬರ್ ಇದರಲ್ಲಿ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ನೀಡುವುದು.

ಬೀನ್ಸ್:
ಈ ತರಕಾರಿಯಲ್ಲಿ ಸಾಕಷ್ಟು ಕ್ಯಾಲ್ಸಿಯಂ ಮಾತ್ರವಲ್ಲದೆ ಪ್ರೋಟೀನ್‌ನ ಪ್ರಮಾಣವೂ ಇದೆ. ಇದು ನಿಮ್ಮ ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿದೆ. ಬೀನ್ಸ್ ತಿನ್ನಲು ಉತ್ತಮ ಆಯ್ಕೆಯೆಂದರೆ ನೀವು ಅದನ್ನು ಪಲ್ಯ ಮತ್ತು ಸಲಾಡ್ ಆಗಿ ಸೇವಿಸಬಹುದು.

ಕಿತ್ತಳೆ:
ಎಲ್ಲರಿಗೂ ಗೊತ್ತಿರುವ ಹಾಗೇ ಕಿತ್ತಳೆಯಲ್ಲಿ ವಿಟಮಿನ್-ಸಿ ಸಮೃದ್ಧವಾಗಿದೆ. ಇತರ ಹಣ್ಣುಗಳಿಗೆ ಹೋಲಿಸಿದರೆ ವಿಟಮಿನ್ ಸಿ ಮಾತ್ರವಲ್ಲದೆ ಕಿತ್ತಳೆಯಲ್ಲಿರುವ ಕ್ಯಾಲ್ಸಿಯಂ ಪ್ರಮಾಣವೂ ತುಂಬಾ ಹೆಚ್ಚಾಗಿದೆ. ಆದ್ದರಿಂದ ಹಾಲಿನ ಬದಲಿಗೆ ನೀವು ಕಿತ್ತಳೆಯನ್ನೂ ಸೇವಿಸಬಹುದು.

ಬಿಳಿ ಎಳ್ಳು:
ಬಿಳಿ ಎಳ್ಳು ರುಚಿಯಲ್ಲಿ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಎಳ್ಳಿನ ಲಡ್ಡುಗಳನ್ನು ಆಗಾಗ ತಿನ್ನುತ್ತಿದ್ದರೆ, ನಿಮ್ಮ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಲಭಿಸುತ್ತದೆ ಎಂಬುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಇದರ ಜೊತೆಗೆ ಎಳ್ಳಿನ ಜ್ಯೂಸ್ ಸಹ ಸೇವಿಸಬಹುದು.

ಸೋಯಾ ಹಾಲು:
ಸೋಯಾ ಹಾಲಿನಲ್ಲಿ ಹಸು ಅಥವಾ ಎಮ್ಮೆ ಹಾಲಿಗಿಂತ ಹೆಚ್ಚಿನ ಕ್ಯಾಲ್ಸಿಯಂ ಇರುತ್ತದೆ. ಒಂದುವೇಳೆ ಎಮ್ಮೆ ಅಥವಾ ಹಸುವಿನ ಹಾಲಿಗೆ ಅಲರ್ಜಿಯನ್ನು ಹೊಂದಿದ್ದರೆ, ನೀವು ಸೋಯಾ ಹಾಲನ್ನು ಕುಡಿಯಬಹುದು. ಇದರ ಮೊಸರು, ಲಸ್ಸಿ ತಯಾರಿಸುವ ಮೂಲಕ ಬಳಸಬಹುದು.

ಸೊಪ್ಪು ತರಕಾರಿಗಳು:
ಹಸಿರು ಸೊಪ್ಪು ತರಕಾರಿಗಳನ್ನು ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ನೀವು ಹಸಿರು ಎಲೆಗಳ ತರಕಾರಿಗಳನ್ನು ಇಷ್ಟಪಡದಿದ್ದರೂ ಸಹ, ಮಸಾಲೆ ಅಥವಾ ಚೀಸ್ ಬಳಸಿ ಹೆಚ್ಚಿನ ಪ್ರಮಾಣದಲ್ಲಿ ಅವುಗಳನ್ನು ತಿನ್ನಲು ಪ್ರಯತ್ನಿಸಿ.

ಪನ್ನೀರ್:
ಪನ್ನೀರ್ ತಿನ್ನುವುದರಿಂದ ಕ್ಯಾಲ್ಸಿಯಂ ಕೊರತೆಯನ್ನು ನಿವಾರಿಸಬಹುದು. 1 ಕಪ್ ಪನ್ನೀರ್ ನಲ್ಲಿ ಸುಮಾರು 130 ಮಿಗ್ರಾಂ ಕ್ಯಾಲ್ಸಿಯಂ ಕಂಡುಬರುತ್ತದೆ. ಇದನ್ನು ಇಷ್ಟಪಡದೇ ಇರುವವರು ಸಿಗುವುದು ತೀರಾ ಕಡಿಮೆ. ಆದ್ದರಿಂದ ಆರಾಮವಾಗಿ ಇದನ್ನು ತಿನ್ನಬಹುದು.

ಸಾಸಿವೆ ಸೊಪ್ಪು:
ಸಾಸಿವೆ ಸೊಪ್ಪು ಸಾಕಷ್ಟು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಒಂದು ಕಪ್ ಸಾಸಿವೆ ಸೊಪ್ಪಿನಲ್ಲಿ 40 ಮಿಗ್ರಾಂ ಕ್ಯಾಲ್ಸಿಯಂ ಕಂಡುಬರುತ್ತದೆ. ಹಾಲಿನ ಬದಲಾಗಿ ಈ ಸೊಪ್ಪಿನ ಗೊಜ್ಜು ಅಥವಾ ಚಟ್ನಿ ಮಾಡಿ ಸೇವಿಸಬಹುದು.



Click it and Unblock the Notifications
