Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಜೀರ್ಣಕ್ರಿಯೆ, ಅಸಿಡಿಟಿ, ತೂಕ ಇಳಿಕೆಗೆ ಸಹಕಾರಿ ಈ ಸೊಲ್ಕಾಢಿ ಪಾನೀಯ
ನೀವು ಪುರ್ನಪುಳಿ ಪಾನೀಯ ರುಚಿ ನೋಡಿರುತ್ತೀರಿ. ದಕ್ಷಿಣ ಕನ್ನಡ ಕಡೆ ಈ ಪಾನೀಯ ಹೆಚ್ಚಾಗಿ ಬಳಸುತ್ತಾರೆ. ಆದರೆ ಇಲ್ಲಿ ನೀಡಿರುವುದು ಪುರ್ನಪುಳಿ ಬಳಸಿ ಮಾಡುವ ಪಾನೀಯವಾಗಿದ್ದರೂ, ತೆಂಗಿನಕಾಯಿ ಹಾಲು ಹಾಗೂ ಮೆಣಸು, ಜೀರಿಗೆ, ಬೆಳ್ಳುಳ್ಳು ಬಳಸಿ ಮಾಡುವ ಪಾನೀಯ ಆಗಿದೆ.
ಇದೊಂದು ಕೊಂಕಣಿ ಶೈಲಿಯ ಪಾನೀಯವಾಗಿದ್ದು ಗೋವಾ ಕಡೆ ಹೆಚ್ಚಾಗಿ ಮಾಡುತ್ತಾರೆ. ಈ ಪಾನೀಯ ಅಲ್ಲಿ ಸೊಲ್ಕಾಢಿ ಎಂದೇ ಪ್ರಸಿದ್ಧ. ಇದನ್ನು ಪುರ್ನಪುಳಿ ಹಾಗೂ ತೆಂಗಿನಕಾಯಿ ಹಾಲು ಬಳಸಿ ಮಾಡಲಾಗುವುದು. ಅನ್ನದ ಜತೆ ಮಜ್ಜಿಗೆ ಸವಿಯುವ ರೀತಿಯಲ್ಲಿ ಈ ಪಾನೀಯವನ್ನು ಸವಿಯಬಹುದು.
ಊಟದ ನಂತರ ಈ ಪಾನೀಯ ಕುಡಿದರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇನ್ನು ಅಸಿಡಿಟಿ ಸಮಸ್ಯೆ ಇರುವವರು ಈ ಪಾನೀಯ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆ ಕಡಿಮೆಯಾಗುವುದು. ದೇಹದಲ್ಲಿ ಉಷ್ಣಾಂಶವನ್ನು ನಿಯಂತ್ರಿಸುವ ಈ ಆರೋಗ್ಯಕರ ಪಾನೀಯದ ರೆಸಿಪಿ ನೋಡಿ ಇಲ್ಲಿದೆ.
ಬೇಕಾಗುವ ಸಾಮಗ್ರಿ
- 12 ಪುನರ್ಪುಳಿ
- 1 ಕಪ್ ತೆಂಗಿನತುರಿ
- 1 ಹಸಿ ಮೆಣಸಿನಕಾಯಿ
- 2 ಬೆಳ್ಳುಳ್ಳಿ ಎಸಳು
- 2 ಚಮಚ ಕೊತ್ತಂಬರಿ ಬೀಜ
- ಸ್ವಲ್ಪ ಕೊತ್ತಂಬರಿ ಸೊಪ್ಪು
- ಅರ್ಧ ಚಮಚ ಜೀರಿಗೆ ಪುಡಿ
- ರುಚಿಗೆ ತಕ್ಕ ಉಪ್ಪು
- ಸ್ವಲ್ಪ ಪುದೀನಾ ಸೊಪ್ಪು (ಅಲಂಕಾರಕ್ಕೆ)
ಮಾಡುವುದು ಹೇಗೆ?
* ಈ ರೆಸಿಪಿ ಮಾಡಲು ಅರ್ಧ ಗಂಟೆ ಮೊದಲು ಅರ್ಧ ಕಪ್ ಬಿಸಿ ನೀರಿಗೆ ಪುರ್ನಪುಳಿ ಹಾಕಿಡಿ.
* ಈಗ ಆ ನೀರನ್ನು ಸೋಸಿ ಒಂದು ಪಾತ್ರೆಯಲ್ಲಿ ಹಾಕಿಡಿ.
* ಈಗ ಹಸಿ ಮೆಣಸಿನಕಾಯಿ, ಜೀರಿಗೆ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಉಪ್ಪು ಹಾಕಿ ತರಿತರಿಯಾಗಿ ರುಬ್ಬಿ.
* ಈಗ ತೆಂಗಿನಕಾಯಿಯನ್ನು ಸ್ವಲ್ಪ ನೀರು ಹಾಕಿ ಒಂದು ಎರಡು ರೌಂಡ್ ತಿರುಗಿಸಿ, ಶುದ್ಧ ಬಟ್ಟೆಯಲ್ಲಿ ತೆಂಗಿನಕಾಯಿ ಹಾಲನ್ನು ಹಿಂಡಿ ತೆಗೆಯಿರಿ.
* ಈಗ ಸ್ವಲ್ಪ ದೊಡ್ಡ ಬೌಲ್‌ಗೆ ತೆಂಗಿನಕಾಯಿ ಹಾಲು, ತರಿತರಿಯಾಗಿ ರುಬ್ಬಿದ ಮಸಾಲೆ, ಹಾಗು ಪುರ್ನಪುಳಿ ನೀರು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಈಗ ರೆಡಿಯಾದ ಪುರ್ನಪುಳಿ ಪಾನೀಯವನ್ನು ಪುದೀನಾ ಹಾಗೂ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಊಟದ ಜತೆ ಸರ್ವ್ ಮಾಡಿ.
View this post on InstagramWhat am I having ? And what is it good for ? 🙂#themagicweightlosspill #thenewreligionlifestyle
A post shared by Luke Coutinho (@luke_coutinho) on
ಪ್ರಯೋಜನಗಳು:
ಜೀರ್ಣಕ್ರಿಯೆಗೆ ಒಳ್ಳೆಯದು: ಈ ಪಾನೀಯವನ್ನು ಊಟದ ಬಳಿಕ ಸೇವಿಸಿದರೆ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಅಜೀರ್ಣ ಸಮಸ್ಯೆ ಇರುವವರು ಈ ಪಾನೀಯ ಕುಡಿಯುವುದರಿಂದ ತಮ್ಮ ಸಮಸ್ಯೆಯನ್ನು ಇಲ್ಲವಾಗಿಸಬಹುದು.
ಅಸಿಡಿಟಿ ತಡೆಗಟ್ಟುತ್ತದೆ: ಅಸಿಡಿಟಿ ಬಂದಾಗ ಹೊಟ್ಟೆ ಉರಿ, ಉಸಿರಾಟಕ್ಕೆ ತೊಂದರೆ ಮುಂತಾದ ಸಮಸ್ಯೆ ಕಂಡು ಬರುವುದು. ಅಸಿಡಿಟಿ ಸಮಸ್ಯೆ ತಡೆಗಟ್ಟುವಲ್ಲಿ ಈ ಪಾನೀಯ ತುಂಬಾ ಸಹಕಾರಿ. ಊಟವಾದ ಬಳಿಕ ಈ ಪಾನೀಯ ಕುಡಿಯಿರಿ, ಅಸಿಡಿಟಿ ಸಮಸ್ಯೆ ತಡೆಗಟ್ಟಿ.
ಬೇಸಿಗೆಯಲ್ಲಿ ದೇಹವನ್ನು ತಂಪಾಗಿ ಇಡುತ್ತದೆ: ದೇಹದ ಉಷ್ಣತೆ ಕಡಿಮೆ ಮಾಡಿ, ದೇಹವನ್ನು ತಂಪಾಗಿ ಇಡುವಲ್ಲಿ ತುಂಬಾ ಸಹಕಾರಿ. ಆದ್ದರಿಂದ ಬೇಸಿಗೆಗೆ ಸೂಕ್ತವಾದ ಪಾನೀಯ ಇದಾಗಿದೆ.
ತ್ವಚೆ ಆರೋಗ್ಯಕ್ಕೆ ಒಳ್ಳೆಯದು: ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶ ಹೆಚ್ಚಿರುವುದರಿಂದ ತ್ವಚೆ ಆರೋಗ್ಯಕ್ಕೆ ಕೂಡ ಒಳ್ಳೆಯದು.
ತಲೆಸುತ್ತು, ವಾಂತಿ ತಡೆಗಟ್ಟಲು ಸಹಕಾರಿ: ವಾಂತಿ, ತಲೆಸುತ್ತು ಬಂದಾಗ ಈ ಪಾನೀಯ ಮಾಡಿದರೆ ಸುಸ್ತು ಬೇಗನೆ ನಿವಾರಣೆಯಾಗುವುದು.
ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ: ಈ ಪಾನೀಯ ಮಲಬ್ಧತೆ ತಡೆಗಟ್ಟುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ಕಾಡುವುದಿಲ್ಲ.
ತಲೆನೋವಿಗೆ ಮನೆಮದ್ದು: ಮೈಗ್ರೇನ್ ಸಮಸ್ಯೆ ಬಂದಾಗ ಬೇಗನೆ ಹೋಗುವುದಿಲ್ಲ. ತಲೆನೋವಿನಿಂದಾಗಿ ಯಾವ ಕೆಲಸದ ಕಡೆ ಗಮನ ಹರಿಸಲು ಕೂಡ ಸಾಧ್ಯವಾಗುವುದಿಲ್ಲ. ಮೈಗ್ರೇನ್ ಬಂದಾಗ ಸೊಲ್ಕಾಢಿ ಮಾಡಿ ಕುಡಿದರೆ ತಲೆನೋವು ಕಡಿಮೆಯಾಗುವುದು.
ತೂಕ ಇಳಿಕೆಯಲ್ಲಿ ಸಹಕಾರಿ: ಸೊಲ್ಕಾಢಿ ಚಯಪಚಯ ಕ್ರಿಯೆಗೆ ಸಹಕಾರಿ. ಆದ್ದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆದು ತೂಕ ಇಳಿಸುವಲ್ಲಿಯೂ ಸಹಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

