ರಾತ್ರಿ ಮಲಗುವಾಗ ಸಾಕ್ಸ್‌ ಧರಿಸುವ ಅಭ್ಯಾಸ ನಿಮಗಿದ್ದರೆ ಇಂದೇ ನಿಲ್ಲಿಸಿ! ಕಾರಣಗಳು ಇಲ್ಲಿವೆ

ಜನರು ಚಳಿಗಾಲದಲ್ಲಿ ಬೆಚ್ಚಗಾಗಿರಲು ಎಲ್ಲವನ್ನೂ ಪ್ರಯತ್ನಿಸುತ್ತಾರೆ. ಅದು ತಿನ್ನುವ ಆಹಾರದ ಮೂಲಕವಾಗಿರಲಿ ಅಥವಾ ಧರಿಸುವುದರ ಮೂಲಕವಾಗಿರಲಿ, ಒಟ್ಟಿನಲ್ಲಿ ತಂಪಗಿನ ವಾತಾವರಣದಿಂದ, ಪಾರಾಗಬೇಕೆಂಬುದು ಇದರ ಉದ್ದೇಶ.

ಆದರೆ, ಬಟ್ಟೆಯ ವಿಷಯಕ್ಕೆ ಬಂದಾಗ, ಸ್ವೆಟರ್‌ಗಳು ಅಥವಾ ಜಾಕೆಟ್‌ಗಳನ್ನು ಹೊರತುಪಡಿಸಿ, ಅನೇಕರು ಮಲಗುವ ವೇಳೆ ಚಳಿಗಾಲದಲ್ಲಿ ಸಾಕ್ಸ್‌ಗಳನ್ನು ಧರಿಸಿಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಶೀತವು ಅವರ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದರೆ ಅವರು ಮಲಗುವಾಗಲೂ ಸಾಕ್ಸ್ ಧರಿಸಿಕೊಂಡೇ ಇರುತ್ತಾರೆ. ಇದು ಹಗಲು ಅಥವಾ ರಾತ್ರಿ ಮಲಗುವಾಗ ನಿಮ್ಮನ್ನು ಬಿಸಿಯಾಗಿಡಬಹುದು, ಆದರೆ ಇದರಿಂದ ಹಲವಾರು ಅನಾನುಕೂಲಗಳು ಎದುರಾಗುತ್ತವೆ.

ವರದಿಗಳ ಪ್ರಕಾರ, ಇದು ರಕ್ತ ಪರಿಚಲನೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ತಜ್ಞರ ಪ್ರಕಾರ, ಸಾಕ್ಸ್ ಅನ್ನು ದೀರ್ಘಕಾಲದವರೆಗೆ ಧರಿಸುವುದರಿಂದ ನರಗಳ ಮೇಲೆ ಒತ್ತಡ ಉಂಟಾಗುತ್ತದೆ, ಇದರಿಂದ ಆರೋಗ್ಯ ಸಮಸ್ಯೆಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ. ಆದ್ದರಿಂದ ಇಂದು ರಾತ್ರಿ ಸಾಕ್ಸ್ ಧರಿಸಿ ಮಲಗುವುದರಿಂದ ಆಗುವ ಅನಾನುಕೂಲಗಳೇನು ಎಂಬುದನ್ನು ಹೇಳಲಿದ್ದೇವೆ.

ಮಲಗುವಾಗ ಸಾಕ್ಸ್‌ ಧರಿಸುವುದರಿಂದ ಆಗುವ ಸಮಸ್ಯೆಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ರಕ್ತ ಪರಿಚಲನೆಗೆ ಅಡ್ಡಿ:

ರಕ್ತ ಪರಿಚಲನೆಗೆ ಅಡ್ಡಿ:

ರಾತ್ರಿ ಮಲಗುವಾಗ ಬಿಗಿಯಾದ ಸಾಕ್ಸ್ ಧರಿಸಿದರೆ ಕಾಲಿನ ಅಡಿಭಾಗ ಮತ್ತು ಪಾದಗಳ ನಡುವಿನ ರಕ್ತ ಸಂಚಾರದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ನೀವು ಜುಮ್ಮೆನಿಸುವಿಕೆ ಅಥವಾ ಒತ್ತಡವನ್ನು ಅನುಭವಿಸಬಹುದು. ವರದಿಗಳ ಪ್ರಕಾರ, ಇದು ಪಾದಗಳಲ್ಲಿ ಬಿಗಿತವನ್ನು ಉಂಟುಮಾಡಬಹುದು. ಆದ್ದರಿಂದ ರಾತ್ರಿ ಮಲಗುವಾಗ ಸಾಕ್ಸ್ ಧರಿಸಬೇಡಿ, ಬದಲಾಗಿ, ಸ್ವಲ್ಪ ಎಣ್ಣೆಯನ್ನು ಕಾಲಿನಡಿ ಹಚ್ಚಿಕೊಂಡು ಮಲಗಬಹುದು.

ದೇಹತೆ ಉಷ್ಣತೆ ಹೆಚ್ಚಳ:

ದೇಹತೆ ಉಷ್ಣತೆ ಹೆಚ್ಚಳ:

ನಿದ್ದೆ ಮಾಡುವಾಗ ಸಾಕ್ಸ್ ಧರಿಸುವುದರಿಂದ ಅವರಿಗೆ ಉಷ್ಣತೆ ಸಿಗುವುದು ಎಂದು ಜನರು ಭಾವಿಸುತ್ತಾರೆ, ಆದರೆ ಕೆಲವೊಮ್ಮೆ ಈ ಶಾಖವು ಹಾನಿಕಾರಕವೆಂದು ಸಾಬೀತಾಗಿದೆ. ಇದು ದೇಹದ ಉಷ್ಣತೆಯನ್ನು ತುಂಬಾ ಹೆಚ್ಚಿಸಬಹುದು. ಅಗತ್ಯಕ್ಕಿಂತ ದೇಹದ ತಾಪ ಹೆಚ್ಚಾಗುವುದು ಚಂಚಲತೆ ಸೇರಿದಂತೆ ನಾನಾ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ರಾತ್ರಿ ಮಲಗುವಾಗ ಸಾಕ್ಸ್ ಧರಿಸುವ ತಪ್ಪನ್ನು ಮಾಡಬೇಡಿ. ಒಂದು ವೇಳೆ ಧರಿಸಿದ್ದರೂ, ಉಷ್ಣತೆ ಹೆಚ್ಚಾಗುತ್ತಿರುವ ಅನುಭವ ನಿಮಗಾದ ತಕ್ಷಣ ಸಾಕ್ಸ್ ತೆಗೆಯಿರಿ.

ಚರ್ಮ ಸಮಸ್ಯೆಗಳು:

ಚರ್ಮ ಸಮಸ್ಯೆಗಳು:

ಅನೇಕ ಬಾರಿ ಜನರು ನಿಯಮಿತವಾಗಿ ಬಳಸುವ ಸಾಕ್ಸ್‌ಗಳನ್ನು ಸ್ವಚ್ಛಗೊಳಿಸುವುದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಕಾರಣ, ರಾತ್ರಿ ಅಷ್ಟೇ ಬಳಕೆ ಮಾಡುವುದು, ಮನೆ ಹೊರಗೆ ಸಹ ಹೋಗದೇ ಇರುವುದರಿಂದ, ನೈರ್ಮಲ್ಯದ ಅಗತ್ಯ ಬರುವುದಿಲ್ಲ ಎಂಬ ತಪ್ಪು ಕಲ್ಪನೆಯಲ್ಲಿ ಇರುತ್ತಾರೆ. ಇದರಿಂದ, ಅದೇ ಸಾಕ್ಸ್‌ನ್ನು ಹೆಚ್ಚು ಬಾರಿ, ಸ್ವಚ್ಛಗೊಳಿಸದೇ ಬಳಸುತ್ತಿರುತ್ತಾರೆ. ಆದರೆ, ಸಾಕ್ಸ್‌ನಲ್ಲಿ ಸಂಗ್ರಹವಾಗಿರುವ ಧೂಳು ಮತ್ತು ಮಣ್ಣು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಇದರಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಉಂಟಾಗಬಹುದು.

ಹೃದಯ ಸಂಬಂಧಿ ಸಮಸ್ಯೆ:

ಹೃದಯ ಸಂಬಂಧಿ ಸಮಸ್ಯೆ:

ಬಿಗಿಯಾದ ಸಾಕ್ಸ್ ಧರಿಸಿ ಮಲಗಿದರೆ ಪಾದಗಳಲ್ಲಿನ ಶಾಖ ಹಾಗೆಯೇ ಉಳಿಯುತ್ತದೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ತಜ್ಞರ ಪ್ರಕಾರ, ಹೀಗೆ ಮಾಡುವುದರಿಂದ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು. ಬಿಗಿಯಾದ ಸಾಕ್ಸ್ ಧರಿಸುವುದರಿಂದ ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ ಮತ್ತು ಇದರಿಂದಾಗಿ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹೃದಯವು ಪಂಪ್ ಮಾಡಲು ಇನ್ನೂ ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಹೃದ್ರೋಗಗಳು ನಿಮ್ಮಿಂದ ದೂರವಿರಲು ಸಡಿಲವಾದ ಅಥವಾ ಹಗುರವಾದ ಸಾಕ್ಸ್‌ಗಳನ್ನು ಧರಿಸಿ.

English summary

Side Effects of Sleeping With Socks on in Kannada

Here we talking about Side effects of sleeping with socks on in kannada, read on
Story first published: Tuesday, February 15, 2022, 16:30 [IST]
X
Desktop Bottom Promotion