Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ನಿಮಗೆ ಅಕ್ಕಿ ತಿನ್ನುವ ಅಭ್ಯಾಸವಿದೆಯೇ, ಎಚ್ಚರ ದೇಹದ ಆರೋಗ್ಯ ವ್ಯವಸ್ಥೆಯನ್ನೇ ಮಾಡುತ್ತೆ ಈ ದುರಭ್ಯಾಸ!
ಅನ್ನ ಮಾಡುವಾಗ ಹಾಗೆ ಸುಮ್ಮನೆ ಬಾಯಿಗೆ ಸ್ವಲ್ಪ ಅಕ್ಕಿ ಹಾಕಿಕೊಳ್ಳುವ ಅಭ್ಯಾಸ ಹಲವರಿಗಿದೆ, ಇನ್ನು ಕೆಲವರಿಗೆ ಎಲ್ಲರ ಕಣ್ತಪ್ಪಿಸಿ ಆದರೂ ಆದರೂ ಸರಿ ಅಕ್ಕಿ ತಿನ್ನುವುದೇ ಗೀಳಾಗಿರುತ್ತದೆ. ಇದು ತತ್ ಕ್ಷಣಕ್ಕೆ ಆರೋಗ್ಯಕ್ಕೆ ಅಷ್ಟೇನೂ ಪರಿಣಾಮ ಬೀರದೆ ಇದ್ದರೂ ಈ ಹಸಿ ಅಕ್ಕಿಯನ್ನು ನಿತ್ಯ ಸೇವಿಸಿದರೆ ಖಂಡಿತ ಅನಾರೋಗ್ಯ ಬಾಧಿಸದೇ ಇರದು.
ಅಕ್ಕಿ ವಿವಿಧ ಜೀವಸತ್ವಗಳು ಮತ್ತು ಖನಿಜಗಳ ನಿಧಿಯಾಗಿದೆ. ಇದರಲ್ಲಿ ನಿಯಾಸಿನ್, ವಿಟಮಿನ್ ಡಿ, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ಥಯಾಮಿನ್ ಮತ್ತು ರೈಬೋಫ್ಲಾವಿನ್ ಸಮೃದ್ಧವಾಗಿದೆ. ಮತ್ತೊಂದೆಡೆ, ಬ್ರೌನ್ ರೈಸ್‌ನಲ್ಲಿ ಸಾಕಷ್ಟು ಪ್ರೋಟೀನ್, ಫೈಬರ್ ಮತ್ತು ವಿಟಮಿನ್‌ಗಳು ಕಂಡುಬರುತ್ತವೆ, ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಆದರೆ ನೆನಪಿರಲಿ ಇನ್ನು ಸರಿಯಾದ ಕ್ರಮದಲ್ಲಿ ಬೇಯಿಸಿ ತಿಂದ ರೆ ಮಾತ್ರ ಈ ಜೀವಸತ್ವಗಳು ನಮ್ಮ ದೇಹ ಸೇರುತ್ತದೆ. ಬದಲಾಗಿ ಹಸಿ ಅಕ್ಕಿಯನ್ನು ಸೇವಿಸುವುದು ದೇಹಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ. ಹಸಿ ಅಕ್ಕಿಯನ್ನು ತಿನ್ನುವುದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ:
ಹಸಿ ಅಕ್ಕಿ ತಿನ್ನುವುದರಿಂದ ಆಗುವ ಅನಾನುಕೂಲಗಳು

ಜೀರ್ಣಾಂಗವ್ಯೂಹ ಮತ್ತು ಜೀರ್ಣಕಾರಿ ಸಮಸ್ಯೆಗಳು
ಹಸಿ ಅಕ್ಕಿಯು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಲೆಕ್ಟಿನ್ ಎಂಬ ಪ್ರೊಟೀನ್ ಅಕ್ಕಿಯಲ್ಲಿ ಕಂಡುಬರುತ್ತದೆ. ಇದು ನೈಸರ್ಗಿಕ ಕೀಟನಾಶಕ ಮತ್ತು ಆಂಟಿನ್ಯೂಟ್ರಿಯೆಂಟ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಹಸಿ ಅಕ್ಕಿಯನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.

ಕಲ್ಲಿನ ಸಮಸ್ಯೆ
ಅಕ್ಕಿ ತಿನ್ನುವುದು ಮೂತ್ರಜನಕಾಂಗದಲ್ಲಿ ಕಲ್ಲಿನ ರಚನೆಯ ಸಮಸ್ಯೆಯನ್ನು ಎಉರಿಸುತ್ತಾರೆ. ಇದು ಹಾನಿಕಾರಕ ಸಮಸ್ಯೆಯಾಗಿದೆ. ವಾಸ್ತವವಾಗಿ, ಅಕ್ಕಿ ಸೇವನೆಯು ಇಲ್ಲೆ ಇರುವವರಿಗೆ ಕಿಡ್ನಿ ಸಮಸ್ಯೆ ಉಂಟು ಮಾಡಿದರೆ, ಈಗಾಗಲೇ ಕಿಡ್ನಿ ಸಮಸ್ಯೆ ಇರುವವರಿಗೆ ಮಾರಣಾಂತಿಕ ಅಪಾಯವನ್ನು ಹೆಚ್ಚಿಸಬಹುದು.

ಆಹಾರ ವಿಷದ ಸಮಸ್ಯೆ
ಹಸಿ ಅಕ್ಕಿ ತಿನ್ನುವುದರಿಂದ ಆಹಾರ ವಿಷವಾಗುತ್ತದೆ. ಅಕ್ಕಿಯಲ್ಲಿ ಬ್ಯಾಸಿಲಸ್ ಸಿರಸ್ ಎಂಬ ಬ್ಯಾಕ್ಟೀರಿಯಾವಿದ್ದು ಇದು ದೇಹದಲ್ಲಿ ಆಹಾರ ವಿಷದ ಸಮಸ್ಯೆಯನ್ನು ಉಂಟುಮಾಡುತ್ತದೆ. ಆದ್ದರಿಂದ, ಹಸಿ ಅಕ್ಕಿ ಸೇವನೆಯನ್ನು ತಪ್ಪಿಸಿ.

ನಿಶ್ಯಕ್ತಿ
ಹಸಿ ಅಕ್ಕಿಯನ್ನು ಸೇವಿಸುವುದರಿಂದ, ವ್ಯಕ್ತಿಯು ಆಲಸ್ಯವನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಹಸಿ ಅಕ್ಕಿಯನ್ನು ಸೇವಿಸುವುದರಿಂದ ದೈಹಿಕ ಆಯಾಸ ಉಂಟಾಗಿ ದೇಹದ ಶಕ್ತಿ ಕುಂಠಿತವಾಗುತ್ತದೆ. ನಿಶ್ಯಕ್ತಿಯಿಂದಾಗಿ ಅನೇಕ ರೀತಿಯ ಕಾಯಿಲೆಗಳು ಸಹ ಸಂಭವಿಸಬಹುದು



Click it and Unblock the Notifications