Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ದಾಹ ತೀರಿಸಿಕೊಳ್ಳಲು ಅತಿಯಾಗಿ ತಣ್ಣೀರು ಕುಡಿಯುವವರೇ ಇತ್ತ ಗಮನಿಸಿ
ಬೇಸಿಗೆ ಕಾಲದಲ್ಲಿ ಸಾಮಾನ್ಯ ನೀರಿಗಿಂತ, ತಣ್ಣೀರು ಅಥವಾ ಫ್ರಿಜ್‌ನಲ್ಲಿಟ್ಟ ನೀರನ್ನೇ ಹೆಚ್ಚು ಬಯಸೋದು. ಸುಡುವ ಬಿಸಿಲಿನಿಂದ ಮನೆಗೆ ಬಂದ ಕೂಡಲೇ ಫ್ರಿಡ್ಜ್‌ನಲ್ಲಿಟ್ಟ ತಣ್ಣೀರು ಕುಡಿಯುವುದರಿಂದ ತಂಪು ಮತ್ತು ತೃಪ್ತತೆಯ ಅನುಭವವಾಗುತ್ತದೆ, ಆದರೆ ಇದು ನಿಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕಾರಿ ಗೊತ್ತಾ?. ಹೌದು, ನಿರ್ಜಲೀಕರಣವನ್ನು ತಪ್ಪಿಸಲು ಬೇಸಿಗೆಯಲ್ಲಿ ನೀರು ಕುಡಿಯುವುದು ಅವಶ್ಯಕ, ಆದರೆ ಹೆಚ್ಚು ತಣ್ಣೀರು ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಅದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಹೆಚ್ಚು ತಣ್ಣೀರು ಕುಡಿಯುವುದರಿಂದ ಆಗುವ ಅನಾನುಕೂಲಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಹೃದಯ ಬಡಿತ ಕಡಿಮೆಯಾಗುವುದು:
ಒಂದು ವರದಿಯ ಪ್ರಕಾರ, ತಣ್ಣೀರು ಕುಡಿಯುವುದರಿಂದ ಹೃದಯ ಬಡಿತ ಕಡಿಮೆಯಾಗುತ್ತದೆ. ಇದು ದೇಹದ ಅನೈಚ್ಛಿಕ ಕಾರ್ಯಗಳನ್ನು ನಿಯಂತ್ರಿಸುವ ನರವನ್ನು ಉತ್ತೇಜಿಸುತ್ತದೆ. ಇದು ನರಮಂಡಲದ ಪ್ರಮುಖ ಭಾಗವಾಗಿದ್ದು, ನೀರಿನ ಕಡಿಮೆ ತಾಪಮಾನದಿಂದ ನೇರವಾಗಿ ಪರಿಣಾಮ ಬೀರುತ್ತದೆ, ಇದು ಅಂತಿಮವಾಗಿ ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ. ಇದು ಹೃದಯಕ್ಕೆ ಒಳ್ಳೆಯದಲ್ಲ, ಏಕೆಂದರೆ ಇದು ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.

ಮಲಬದ್ಧತೆ ಸಮಸ್ಯೆ:
ನೀವು ನಿರಂತರವಾಗಿ ತಣ್ಣೀರು ಕುಡಿಯುತ್ತಿದ್ದರೆ, ಮಲಬದ್ಧತೆಯ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ತಣ್ಣೀರು ಕುಡಿದಾಗ, ಆಹಾರವು ದೇಹದ ಮೂಲಕ ಹಾದುಹೋಗುವಾಗ ಗಟ್ಟಿಯಾಗುತ್ತದೆ. ಕರುಳುಗಳು ಸಹ ಕುಗ್ಗುತ್ತವೆ, ಇದು ಮಲಬದ್ಧತೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಕೋಣೆಯ ಉಷ್ಣಾಂಶವಿರುವ ನೀರು ಕುಡಿಯುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.

ತಲೆನೋವು ಸಂಭವಿಸಬಹುದು:
ಹೆಚ್ಚು ತಣ್ಣೀರು ಅಥವಾ ಐಸ್ ನೀರನ್ನು ಕುಡಿಯುವುದರಿಂದ ಮೆದುಳಿನಲ್ಲಿ ಫ್ರೀಜ್ ಉಂಟಾಗುತ್ತದೆ. ಇದು ಬೆನ್ನುಮೂಳೆಯಲ್ಲಿನ ಅನೇಕ ಸೂಕ್ಷ್ಮ ನರಗಳನ್ನು ತಂಪಾಗಿಸಿ, ತಕ್ಷಣವೇ ನಿಮ್ಮ ಮೆದುಳಿಗೆ ಸಂದೇಶಗಳನ್ನು ಕಳುಹಿಸುತ್ತವೆ, ಇದು ತಲೆನೋವಿಗೆ ಕಾರಣವಾಗುತ್ತದೆ. ಅಲ್ಲದೆ ಸೈನಸ್ ಸಮಸ್ಯೆ ಇರುವವರಿಗೆ ಸಮಸ್ಯೆಯೂ ಹೆಚ್ಚಾಗಬಹುದು.

ಜೀರ್ಣಕ್ರಿಯೆಯಲ್ಲಿ ತೊಂದರೆ:
ಹೆಚ್ಚು ತಣ್ಣೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗಬಹುದು. ಇದರಿಂದ ಮಲಬದ್ಧತೆ, ಹೊಟ್ಟೆ ನೋವು, ವಾಕರಿಕೆ, ವಾಯು ಮುಂತಾದ ಸಮಸ್ಯೆಗಳೂ ಬರಬಹುದು. ತಣ್ಣೀರು ದೇಹವನ್ನು ಪ್ರವೇಶಿಸಿದಾಗ, ಅದು ದೇಹದ ಉಷ್ಣತೆಗೆ ಹೊಂದಿಕೆಯಾಗುವುದಿಲ್ಲ. ಇದರಿಂದ ಹೊಟ್ಟೆಯಲ್ಲಿರುವ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.

ಬೊಜ್ಜಿನ ಸಮಸ್ಯೆ
ನೀವು ಅತಿಯಾಗಿ ತಣ್ಣೀರು ಕುಡಿದರೆ, ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಕಷ್ಟವಾಗುತ್ತದೆ. ತಣ್ಣೀರು ದೇಹದ ಕೊಬ್ಬನ್ನು ಗಟ್ಟಿಯಾಗಿಸುತ್ತದೆ, ಇದರಿಂದಾಗಿ ಕೊಬ್ಬನ್ನು ಸುಡುವಲ್ಲಿ ಸಮಸ್ಯೆ ಉಂಟಾಗುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಕಡಿಮೆ ಪ್ರಮಾಣದಲ್ಲಿ ತಣ್ಣೀರು ಕುಡಿಯಬಾರದು.



Click it and Unblock the Notifications
