Latest Updates
-
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು?
18-45 ವರ್ಷದವರಿಗೆ ಕೋವಿಡ್ ಲಸಿಕೆ: ಲಸಿಕೆ ಪಡೆಯುವ ಮುನ್ನವೇ ರಕ್ತದಾನ ಮಾಡಿ
ಭಾರತದಲ್ಲಿ ಕೊರೊನಾ ಲಸಿಕೆ 18 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಸಿಗುವಂತಾಗಿದೆ. ಏಪ್ರಿಲ್ 28ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಗೆ ನೋಂದಣಿ ಪ್ರಾರಂಭವಾಗಲಿದ್ದು ಮೇ1ರಿಂದ ಲಸಿಕೆ ನೀಡಲಾಗುವುದು.
18-45 ವರ್ಷದವರೆಂದರೆ ದೇಶದ ಯುವ ಜನಾಂಗ ಹಾಗೂ ಮಧ್ಯವಯಸ್ಕರು. ಈ ಪ್ರಾಯದವರಿಗೆ ಲಸಿಕೆ ಲಭ್ಯವಾಗುತ್ತಿರುವುದರಿಂದ ಕೊರೊನಾ ಅಟ್ಟಹಾಸಕ್ಕೆ ಕಡಿವಾಣ ಹಾಕಬಹುದು ಎಂಬ ನಿರೀಕ್ಷೆ ಮೂಡಿದೆ. ಆದರೆ ಇದರ ಜೊತೆಗೆ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತದ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ತಜ್ಞರು ಸಲಹೆ ನೀಡುತ್ತಿದ್ದಾರೆ.
ನೀವು ರಕ್ತದಾನ ಮಾಡುವವರಾಗಿದ್ದು, ಲಸಿಕೆ ಪಡೆಯಲು ಮುಂದಾದರೆ ಈ ವಿಷಯ ತಿಳಿದಿರಲಿ:

ಲಸಿಕೆ ಪಡೆಯುವ ಮುನ್ನವೇ ರಕ್ತದಾನ ಮಾಡಿ
ರಕ್ತದಾನ ಎಷ್ಟೊ ವ್ಯಕ್ತಿಗೆ ಜೀವದಾನ ಮಾಡುತ್ತದೆ. ಆದ್ದರಿಂದ ರಕ್ತದಾನ ಮಾಡುವವರು ರಕ್ತ ಅವಶ್ಯಕತೆ ಇರುವವರಿಗೆ ದೇವರ ಸಮಾನ. ಈ ರಕ್ತದಾನ ಮಾಡುವವರಲ್ಲಿ ಯುವ ಜನಾಂಗದವರ ಪಾಲು ತುಂಬಾನೇ ಇರುತ್ತದೆ. ಆದರೆ ಲಸಿಕೆ ಪಡೆದ ಮೇಲೆ ಕೆಲವು ದಿನಗಳವರೆಗೆ ರಕ್ತದಾನ ಮಾಡಲಾಗುವುದಿಲ್ಲ, ಆಗ ಅವಶ್ಯಕ ಇರುವ ವ್ಯಕ್ತಿಗಳಿಗೆ ರಕ್ತಕ್ಕೆ ಕೊರತೆ ಉಂಟಾಗದಿರಲು ಲಸಿಕೆ ಪಡೆದುಕೊಳ್ಳುವ ಮುನ್ನ ರಕ್ತದಾನ ಪಡೆಯುವಂತೆ ತಜ್ಞರು ಸೂಚಿಸಿದ್ದಾರೆ.
ಡಾ. ಸುಮನ್ ಹೆಗಡೆ, ಪ್ಯಾತೋಲಾಜಿಸ್ಟ್ ಹಾಗೂ ಬ್ಲಡ್ ಬ್ಯಾಂಕ್ ಆಫೀಸರ್, ಪಿಜಿ ಹಾಸ್ಪಿಟಲ್, ಐಎಂಎ ಲೈಫ್ ಲೈನ್ ಬ್ಲಡ್ ಬ್ಯಾಂಕ್ , ಶಿರಸಿ, ಉತ್ತರ ಕನ್ನಡ ಇವರು ವೀಡಿಯೋ ಮಾಡಿ ರಕ್ತದಾನ ಮಾಡುವವರಿಗೆ ಈ ಕುರಿತು ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಕೋವಿಡ್ 19 ಲಸಿಕೆ ಎರಡನೇ ಡೋಸ್ ಪಡೆದ ಬಳಿಕ ಆ ವ್ಯಕ್ತಿ 4 ವಾರ ರಕ್ತದಾನ ಮಾಡಬಾರದು
ಅಂದರೆ ಕೊರೊನಾ ಲಸಿಕೆಯ ಮೊದಲನೇ ಡೋಸ್ ಪಡೆದು 4 ವಾರಗಳು ಬಳಿಕ ಎರಡನೇ ಡೋಸ್ ಪಡೆಯಬೇಕೆಂಬುವುದು ಎಲ್ಲರಿಗೆ ತಿಳಿದಿರುವ ವಿಷಯ. ಎರಡನೇ ಡೋಸ್ ಪಡೆದ ಬಳಿಕ 4 ವಾರ ರಕ್ತದಾನ ನೀಡುವಂತಿಲ್ಲ ಅಂದರೆ ಎರಡರಿಂದ ಎರಡೂವರೆ ತಿಂಗಳು ವ್ಯಕ್ತಿಯೂ ರಕ್ತದಾನ ಮಾಡುವಂತಿಲ್ಲ.

ರಕ್ತ ದಾನಿಗಳಲ್ಲಿ18-45 ವರ್ಷ ಪ್ರಾಯದವರ ಕೊಡುಗೆಯೇ ಮಹತ್ವದ್ದು
ಸಾಮಾನ್ಯವಾಗಿ ರಕ್ತದಾನಿಗಳನ್ನು ನೋಡಿದರೆ ಅವರೆಲ್ಲಾ ಬಹುತೇಕ ಈ ಪ್ರಾಯದವರಾಗಿರುತ್ತಾರೆ. ಇವರೆಲ್ಲಾ ಮೊದಲನೇ ಲಸಿಕೆ ಪಡೆದ ಬಳಿಕ ಎರಡೂವರೆ ತಿಂಗಳಿನವರೆಗೆ ರಕ್ತದಾನ ಮಾಡುವಂತಿಲ್ಲ, ಈ ಸಮಯದಲ್ಲಿ ರಕ್ತದ ಅವಶ್ಯಕತೆ ಇರುವವರಿಗೆ ರಕ್ತ ದೊರೆಯದೇ ಹೋಗಬಹುದು.

ರಕ್ತದ ಕೊರತೆ ಉಂಟಾಗದಿರಲು ಏನು ಮಾಡಬೇಕು?
ಕೊರೊನಾ ತುಂಬಾ ವೇಗವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಎಲ್ಲರೂ ಆದಷ್ಟು ಬೇಗ ಲಸಿಕೆಯನ್ನು ಪಡೆದುಕೊಳ್ಳಬೇಕು, ಅದಕ್ಕಿಂತ ಮೊದಲು ರಕ್ತದಾನ ಮಾಡಿದರೆ ಆ ರಕ್ತ ಬ್ಲಡ್‌ಬ್ಯಾಂಕ್‌ನಲ್ಲಿರುತ್ತದೆ, ಅವಶ್ಯಕವಿರುವವರಿಗೂ ರಕ್ತವೂ ಸಿಗುವಂತಾಗುವುದು.

ರಕ್ತವೂ ಯಾರಿಗೆಲ್ಲಾ ಅವಶ್ಯಕವಾಗಿ ಬೇಕಾಗಿರುತ್ತದೆ?
ಕೆಲ ಗರ್ಭಿಣಿಯರಿಗೆ, ರಕ್ತ ಹೀನತೆ ಸಮಸ್ಯೆ ಇರುವವರಿಗೆ , ಕ್ಯಾನ್ಸರ್ ರೋಗಿಗಳಿಗೆ, ಅಪಘಾತದಲ್ಲಿ ಗಂಭೀರ ಗಾಯವಾದವರಿಗೆ ಇಂಥವರಿಗೆಲ್ಲಾ ರಕ್ತ ಅವಶ್ಯಕವಾಗಿರುತ್ತದೆ. ನೀವು ಕೊರೊನಾ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿದರೆ ಇಂಥ ಜೀವಗಳ ರಕ್ಷಣೆ ಮಾಡುವುದರ ಜೊತೆಗೆ ಕೊರೊನಾ ಲಸಿಕೆ ಪಡೆದು ನಿಮ್ಮ ಜೀವವನ್ನು ರಕ್ಷನಣೆ ಮಾಡಬಹುದು.
ಎಲ್ಲಾ ರಕ್ತದಾನಿಗಳಿಗೆ ನಮ್ಮದೊಂದು ಸಲಾಂ.



Click it and Unblock the Notifications
