Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಎದೆ ಮಧ್ಯ ಐಸ್‌ಪ್ಯಾಕ್ ಇಟ್ಟರೆ ಮಲಗಿದ ತಕ್ಷಣ ಕಣ್ಣಿಗೆ ನಿದ್ದೆ ಹತ್ತುತ್ತೆ
ಕೆಲವರಿಗೆ ಮಲಗಿದ ತಕ್ಷಣ ನಿದದೆ ಬರುವುದಿಲ್ಲ... ಗಂಟೆ ಗಟ್ಟಲೆ ನಿದ್ದೆ ಬರದೆ ಒದ್ದಾಡುವುದು ಇದೆಯಲ್ಲಾ ಅದು ತುಂಬಾ ಹಿಂಸೆ, ಸರಿಯಾಗಿ ನಿದ್ದೆ ಬರದಿದ್ದರೆ ಅದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ ಇನ್ನೂ ಅನೇಕ ಕಾರಣಗಳಿಂದಾಗಿ ರಾತ್ರಿ ಮಲಗಿದ ತಕ್ಷಣ ನಿದ್ದೆ ಬರುವುದಿಲ್ಲ.
ನಿಮಗೂ ಅಂಥದ್ದೇ ಸಮಸ್ಯೆ ಇದೆಯೇ? ಮಲಗಿದ ತಕ್ಷಣ ನಿದ್ದೆ ಬರುತ್ತಿಲ್ಲವೇ ಹಾಗಾದರೆ ಡಾ. ಮಂಡೆಲ್ ನಿಮಗೆ ಅತ್ಯುತ್ತಮವಾದ ಸಲಹೆ ನೀಡಿದ್ದಾರೆ. ಇವರು ಮೋಟಿವೇಷನಲ್‌ಡಾಕ್ ಎಂಬ ಯೂಟ್ಯೂಬ್ ಚಾನೆಲ್ ಮಾಡಿ ಅದರಲ್ಲಿ ಆರೊಗ್ಯ ಸಲಹೆಗಳನ್ನು ನೀಡುತ್ತಿರುತ್ತಾರೆ.

ರಾತ್ರಿ ನಿದ್ದೆಗೆ ಐಸ್‌ಪ್ಯಾಕ್ ಸಲಹೆ
ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲ ಎಂಬ ಸಮಸ್ಯೆಗೆ ಡಾಕ್ಟರ್ ಒಂದು ಸಲಹೆ ನೀಡಿದ್ದಾರೆ ಅದುವೇ ಐಸ್‌ಪ್ಯಾಕ್ ಇಡುವ ಸಲಹೆ.
ಐಸ್‌ಪ್ಯಾಕ್ ಅನ್ನು ಮಲಗುವ ಮುನ್ನ ಎದೆಯ ಮಧ್ಯ ಭಾಗದಲ್ಲಿ 15 ನಿಮಿಷ ಇಟ್ಟು ನಂತರ ಮಲಗಿದರೆ ಕ್ಷಣಾರ್ಧದಲ್ಲಿ ನಿದ್ದೆ ಕಣ್ಣಿಗೆ ಹತ್ತುವುದು.

ಐಸ್‌ಪ್ಯಾಕ್ ಹೇಗೆ ಪರಿಣಾಮಕಾರಿ?
ಡಾ. ಅಲನ್ ಮಂಡೆಲ್ ಐಸ್‌ಪ್ಯಾಕ್ ಹೇಗೆ ಪರಿಣಾಮಕಾರಿ ಎಂಬುವುದನ್ನು ವಿವರಿಸಿದ್ದಾರೆ, ಎದೆ ಮೇಲೆ ಐಸ್‌ಪ್ಯಾಕ್ ಇಟ್ಟಾಗ ವಾಗಸ್ ನರವನ್ನು ಆ್ಯಕ್ಟಿವೇಟ್ ಮಾಡುತ್ತೆ, ಆದ್ದರಿಂದ ಸ್ವಲ್ಪ ಐಸ್‌ಪ್ಯಾಕ್ ತೆಗೆದು ಎದೆ ಮೇಲೆ ಇಟ್ಟರೆ ನಿಮ್ಮನ್ನು ಕಾಮ್ ಮಾಡುತ್ತೆ, ಇದರಿಂದ ಕಣ್ಣಿಗೆ ಸರಿಯಾಗಿ ನಿದ್ದೆ ಹತ್ತುವುದು.

ಹಾಟ್ ಫ್ಲ್ಯಾಷ್‌ಗೂ ಸಹಾಯ ಮಾಡುತ್ತೆ
ಮೆನೋಪಾಸ್ ಸಮಯದಲ್ಲಿ ಹಾಟ್‌ಫ್ಲ್ಯಾಷ್ ಆಗುತ್ತೆ. ತುಂಬಾ ಸೆಕೆ-ಸೆಕೆ ಅನಿಸುವುದು, ರಾತ್ರಿ ಮಲಗಿದಾಗ ಸರಿಯಾಗಿ ನಿದ್ದೆ ಬರುವುದಿಲ್ಲ. ಮೆನೋಪಾಸ್ ಸಮಯದಲ್ಲಿ ಈ ಐಸ್‌ಪ್ಯಾಕ್ ವಿದಾನ ಬಳಸಿದರೆ ಸುಖ ನಿದ್ದೆ ಮಾಡಬಹುದು.

ಸುಖ ನಿದ್ದೆಗೂ ಹಾಗೂ ವಾಗಸ್ ನರಕ್ಕೂ ಇರುವ ಸಂಬಂಧ
ಹೆಲ್ತ್‌ಲೈನ್ ವೆಬ್‌ಸೈಟ್ ಪ್ರಕಾರ ವಾಗಸ್ ನರ ಹಾಗೂ ಒಳ್ಲೆಯ ನಿದ್ದೆಗೂ ಸಂಬಂಧವಿದೆ. ಈ ನರ ಒತ್ತಡವನ್ನು ಕಡಿಮೆ ಮಾಡಿ, ವಿಶ್ರಾಂತಿಯ ಅನುಭವ ನೀಡುವುದು, ಇದರಿಂದ ಬೇಗನೆ ನಿದ್ದೆ ಬರುವುದು.
ನಿಮಗೆ ನಿದ್ದೆ ಬರುತ್ತಿಲ್ಲವೆಂದಾದರೆ ಈ ವಿಧಾನ ಟ್ರೈ ಮಾಡಿ ಹೆಲ್ಪ್ ಆಗುವುದು.



Click it and Unblock the Notifications
