Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪಾರಿವಾಳದಿಂದ ಅಸ್ತಮಾ ರೋಗಿಗಳಿಗೆ ಅಪಾಯ ಹೆಚ್ಚು, ನಿರ್ಲಕ್ಷ್ಯ ಮಾಡಿದರೆ ಸಾವು ಕೂಡ ಸಂಭವಿಸುವುದು!
ನೀವು ಬೆಂಗಳೂರು ನಿವಾಸಿಯಾಗಿದ್ದರೆ ನೀವು ಪಾರಿವಾಳವನ್ನು ಸಾಕ ಬೇಕಾಗಿಲ್ಲ, ಸಾಕಷ್ಟು ಪಾರಿವಾಳಗಳು ನಿಮ್ಮ ಮನೆಯ ಟೆರೇಸ್ ಹಾಗೂ ಕಿಟಕಿ ಬಳಿ ಬಂದು ಕುಳಿತಿರುತ್ತವೆ. ಆ ಪಾರಿವಾಳಗಳನ್ನು ನೋಡುವಾಗ ತುಂಬಾನೇ ಮುದ್ದು ಮುದ್ದಾಗಿ ಇರುವುದರಿಂದ ಅವುಗಳನ್ನು ನೋಡಿ ಖುಷಿ ಪಡುತ್ತೇವೆ ಅಲ್ವಾ? ಆದರೆ ನಿಮಗೆ ಗೊತ್ತಿಲ್ಲದ ಒಂದು ಸಂಗತಿ ಗೊತ್ತಾ? ಈ ಮುದ್ದು ಮುದ್ದಾಗಿ ಕಾಣುವ ಪಾರಿವಾಳಗಳಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆಯಂತೆ, ಹೇಗೆ ಎಂದು ನೋಡೋಣ ಬನ್ನಿ:

ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಪಾರಿವಾಳ ಸಂಖ್ಯೆ
ಬೆಂಗಳೂರಿನಲ್ಲಿ ಪಾರಿವಾಳ ಹೆಚ್ಚಾದರೆ ಏನು ತೊಂದರೆ ಅಂತ ಕೇಳುತ್ತಿದ್ದೀರಾ? ಬೆಂಗಳೂರು ಅಸ್ತಮಾ ನಗರವಾಗಿ ಗುರುತಿಸಿಕೊಂಡಿದೆ. ಹಿಂದೆ ಇದ್ದಂಥ ಪ್ರಕೃತಿ ಸೌಂದರ್ಯ ಈಗ ಇಲ್ಲ, ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಈ ಕಾರಣಗಳಿಂದ ಅಸ್ತಮಾ ಕಾಯಿಲೆ ಹೆಚ್ಚಾಗುತ್ತಿದೆ. ಅದರ ಜೊತೆಗೆ ಪಾರಿವಾಳ ಸಂಖ್ಯೆ ಹೆಚ್ಚಾದರೆ ಅಸ್ತಮಾ ಕಾಯಿಲೆ, ನ್ಯೂಮೋನಿಯಾ ಈ ಬಗೆಯ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ.

ಪಾರಿವಾಳದ ಹಿಕ್ಕೆಯಿಂದ ಅಸ್ತಮಾ ಸಮಸ್ಯೆ ಹೆಚ್ಚಾಗುವುದು
ಪಾರಿವಾಳ ಅಲ್ಲಲ್ಲಿ ಹಿಕ್ಕೆ (ಮಲ ವಿಸರ್ಜನೆ)ಯಿಂದ ಅಸ್ತಮಾ ರೋಗಿಗಳ ಸಮಸ್ಯೆ ಮತ್ತಷ್ಟು ಅಧಿಕವಾಗುವುದು. ಕೆಲವರಲ್ಲಿ Hypersensitive Pneumonitis (HP) ಕೂಡ ಉಂಟಾಗುವುದು. ಆದ್ದರಿಂದ ಪಾರಿವಾಳ ಅಸ್ತಮಾ ರೋಗಿಗಳಿಗೆ ಅಪಾಯಕಾರಿಯಾಗಿದೆ.
ಅಸ್ತಮಾ ರೋಗಿಗಳು ಪಾರಿವಾಳದ ಬಗ್ಗೆ ಎಚ್ಚರವಹಿಸಬೇಕಾಗಿದೆ
ಮನೆಯಲ್ಲಿ ಯಾರಿಗಾದರೂ ಅಸ್ತಮಾ ಸಮಸ್ಯೆಯಿದ್ದರೆ ಅವರಿಗೆ ಅಸ್ತಮಾ ಸಮಸ್ಯೆ ಅಧಿಕವಾಗುವುದು pulmonologist(ಶ್ವಾಸಕೋಶ ತಜ್ಞರು) ಹೇಳುತ್ತಾರೆ.
ಕಳೆದ ವರ್ಷ ಖ್ಯಾತ ಬಹುಭಾಷೆ ನಟಿ ಅವರ ಪತಿ ಹೈಪರ್‌ಸೆನ್ಸಿಟಿವ್ ನ್ಯೂಮೋನಿಯಾದಿಂದಾಗಿ ಸಾವನ್ನಪ್ಪಿದರು, ಅವರ ಸಾವಿಗೆ ಕಾರಣ ಪಾರಿವಾಳ ಹಿಕ್ಕೆ ಎಂದು ಹೇಳಲಾಗಿತ್ತು.
ಪಾರಿವಾಳ ಹಿಕ್ಕೆಯಲ್ಲಿರುವ ಬ್ಯಾಕ್ಟಿರಿಯಾದಿಂದ ಶ್ವಾಸಕೋಶದ ಉರಿಯೂತ ಉಂಟಾಗುವುದು. ಇದಕ್ಕೆ ಚಿಕಿತ್ಸೆ ಸಿಗದಿದ್ದರೆ ವ್ಯಕ್ತಿ ಸಾವನ್ನಪ್ಪುವುದು.

ಪಾರಿವಾಳ ಸಾಕುತ್ತಿದ್ದರೆ ಅಥವಾ ಮನೆಗೆ ಬರುತ್ತಿದ್ದರೆ ಶುಚಿತ್ವದ ಕಡೆಗೆ ಗಮನ ಹರಿಸಿ
ನೀವು ಪಾರಿವಾಳವನ್ನು ಸಾಕುತ್ತಿದ್ದರೆ ಅದು ವಾಸಿಸುತ್ತಿರುವ ಸ್ಥಳವನ್ನು ತುಂಬಾ ಸ್ವಚ್ಛವಾಗಿಡಬೇಕು, ಇನ್ನು ಪಾರಿವಾಳ ಮನೆಯ ಕಿಟಿಕಿ ಬಳಿ ಅಥವಾ ಅವು ಕೂರಲು ಸ್ಥಳವಿರುವ ಕಡೆ ಗಲೀಜು ಮಾಡುತ್ತಿದ್ದರೆ ಅವುಗಳನ್ನು ತೆಗೆದು ಸ್ವಚ್ಛವಾಗಿಡಿ. ಅಸ್ತಮಾ ರೋಗಿಗಳು ಈ ಕೆಲಸ ಮಾಡಬಾರದು, ಮನೆಯಲ್ಲಿ ಇರುವ ಬೇರೆ ಸದಸ್ಯರು ಮನೆಯನ್ನು ಸ್ವಚ್ಛ ಮಾಡಬೇಕು.

ನಗರ ಬದುಕಿನ ಪ್ರಮುಖ ಅಂಗವಾಗಿದೆ ಪಾರಿವಾಳ
ಪರಿವಾಳದಿಂದ ಉಸಿರಾಟದ ಸಮಸ್ಯೆ ಹೆಚ್ಚಾಗುತ್ತದೆ ಎಂದು ಹೇಳಿದರೆ ಬಹುತೇಕರು ನಂಬಲು ಸಾಧ್ಯವಿಲ್ಲ. ಏಕೆಂದರೆ ಆ ಪಕ್ಷಿಗಳು ಅವರ ಬದುಕಿನ ಅಂಗವಾಗಿರುತ್ತದೆ. ಕೆಲವರು ಮನೆಯಲ್ಲಿ ಪಾರಿವಾಳವನ್ನು ಸಾಕುತ್ತಾರೆ, ಇನ್ನು ಕೆಲವರು ನೀರು, ಅಕ್ಕಿ, ಧಾನ್ಯಗಳನ್ನು ನೀಡುತ್ತಾರೆ.
ನಿಮಗೆ ಅಸ್ತಮಾವಿದ್ದರೆ ಜಾಗ್ರತೆ: ಪಾರಿವಾಳ ನೀವು ಸಾಕುವುದಾದರೆ ಅಸ್ತಮಾ ಇರುವವರು ಅದರ ಬಳಿ ಹೋದರೆ ಸಮಸ್ಯೆ ಹೆಚ್ಚಾಗಬಹುದು ಜಾಗ್ರತೆ. ಆದ್ದರಿಂದ ಅವುಗಳಿರುವ ಕಡೆ ಶುಚಿತ್ವದ ಕಡೆ ತುಂಬಾನೇ ಗಮನ ನೀಡಬೇಕು.



Click it and Unblock the Notifications
