Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇಹದ ಕೆಟ್ಟ ಕೊಬ್ಬು ಕರಗಬೇಕೆ ನಿತ್ಯ ಬೆಣ್ಣೆಹಣ್ಣು ತಪ್ಪದೇ ತಿನ್ನಿ!
ಹಣ್ಣುಗಳು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಎನ್ನುವುದು ಎಲ್ಲರಿಗೂ ತಿಳಿದಿರುವಂತಹ ವಿಚಾರ. ಒಂದೊಂದು ಹಣ್ಣಿನಲ್ಲಿ ಒಂದೊಂದು ಬಗೆಯ ಪೋಷಕಾಂಶಗಳು ಹಾಗೂ ವಿಟಮಿನ್ ಗಳು ಲಭ್ಯವಿದೆ. ಹೀಗಾಗಿ ಎಲ್ಲಾ ರೀತಿಯ ಹಣ್ಣುಗಳನ್ನು ತಿಂದರೆ ಅದರ ಲಾಭಗಳು ನಮಗೆ ಲಭ್ಯವಾಗುವುದು. ಕೆಲವು ಹಣ್ಣುಗಳು ರುಚಿಯಲ್ಲಿ ತುಂಬಾ ಸಿಹಿಯಲ್ಲದೆ ಇದ್ದರೂ ಅದರಲ್ಲಿ ದೇಹಕ್ಕೆ ಬೇಕಾಗುವಂತಹ ಪ್ರಮುಖ ಪೋಷಕಾಂಶಗಳು ಇರುವುದು. ಇದರಲ್ಲಿ ಅವಕಾಡೊ(ಬೆಣ್ಣೆ ಹಣ್ಣು) ಹಣ್ಣು ಕೂಡ ಒಂದಾಗಿದೆ. ಅವಕಾಡೊ ಹಣ್ಣು ಬಾಯಿಗೆ ರುಚಿಸದೆ ಇದ್ದರೂ ಇದರಲ್ಲಿ ಇರುವಂತಹ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅವಕಾಡೊ ಹಣ್ಣನ್ನು ಹೆಚ್ಚಿನವರು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಲು ಹಿಂಜರಿಯುವರು. ಬೆಳಗ್ಗೆ ಉಪಾಹಾರಕ್ಕೆ ಅಥವಾ ರಾತ್ರಿ ಊಟದ ವೇಳೆ ಅವಕಾಡೊ ಸೇವನೆ ಮಾಡುವಂತಹ ಜನರ ಸಂಖ್ಯೆಯು ಕಡಿಮೆ ಇರುವುದು. ಇದರ ರುಚಿಯ ಹೊರತಾಗಿಯೂ ಇದರಲ್ಲಿ ಯಾವ ಲಾಭಗಳು ಇವೆ ಎಂದು ನಾವು ಈ ಲೇಖನದ ಮೂಲಕ ತಿಳಿಯುವ.

ಇತ್ತೀಚೆಗೆ ಪೆನ್ನ್ ಸ್ಟೇಟ್ ನಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ ಅವಕಾಡೊ ಹಣ್ಣು ಆರೋಗ್ಯ ಲಾಭಗಳಿಂದ ತುಂಬಿದೆ. ಆದರೆ ಇದನ್ನು ಸಾಬೀತು ಮಾಡಲು ಹೆಚ್ಚಿನ ಸಂಶೋಧನೆಗಳು ಸರಿಯಾದ ಮಟ್ಟದಲ್ಲಿ ಆಗಿಲ್ಲ. ಅಧ್ಯಯನಗಳ ಪ್ರಕಾರ, ಅವಕಾಡೊದಲ್ಲಿ ಅಧಿಕ ಮಟ್ಟದ ಎಂಯುಎಫ್ ಎ(ಏಕ ಪರ್ಯಾಪ್ತ ಕೊಬ್ಬಿನಾಮ್ಲ) ಇದೆ ಮತ್ತು ಆಂಟಿಆಕ್ಸಿಡೆಂಟ್ ಮತ್ತು ಪಾಲಿಫೆನಾಲ್ಗಳು ಇದರಲ್ಲಿ ಸಮೃದ್ಧವಾಗಿದೆ. ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್ಗಳ ಬಗ್ಗೆ ತರಕಾರಿಗಳು, ಬೀಜಗಳು, ಹಣ್ಣುಗಳ ಬಗ್ಗೆ ನಡೆದಷ್ಟು ಸಂಶೋಧನೆಗಳು ನಡೆದಿಲ್ಲ.

ಅವಕಾಡೊದ ಆಂಟಿಆಕ್ಸಿಡೆಂಟ್ ಯಾವುದಕ್ಕೆ ನೆರವಾಗುವುದು?
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದ್ದರೆ ಆಗ ಹೃದಯ ಸಂಬಂಧಿ ಕಾಯಿಲೆಗಳು ಬರುವುದು. ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆ ಮಾಡಲು ಅವಕಾಡೊದಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ತುಂಬಾ ಪರಿಣಾಮಕಾರಿ ಎಂದು ಸಂಶೋಧನೆಗಳು ಹೇಳಿವೆ. ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಬಗ್ಗೆ ಜನರಿಗೆ ಹೆಚ್ಚಾಗಿ ತಿಳಿದಿಲ್ಲ. ಕೆಟ್ಟ ಕೊಲೆಸ್ಟ್ರಾಲ್ ಎಂದರೆ ಆಕ್ಸಿಡೀಕೃತ ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್(ಎಲ್ ಡಿಎಲ್) ಮತ್ತು ಸಣ್ಣ ಸಾಂದ್ರತೆಯ ಎಲ್ ಡಿಎಲ್ ಕಣಗಳು. ಅದೇ ಒಳ್ಳೆಯ ಕೊಲೆಸ್ಟ್ರಾಲ್ ಎಂದರೆ ಅಧಿಕ ಸಾಂದ್ರತೆಯ ಲಿಪೊಪ್ರೋಟೀನ್(ಎಚ್ ಡಿಎಲ್).

ಸಂಶೋಧನೆ
ಸುಮಾರು 21ರ ಹರೆಯದಿಂದ 70ರ ಹರೆಯದ 45 ಪುರುಷರು ಹಾಗೂ ಮಹಿಳೆಯರನ್ನು ಐದು ವಾರಗಳ ಕಾಲ ಅವಕಾಡೊ ನೀಡಿ ಪರೀಕ್ಷೆ ಮಾಡಲಾಯಿತು. ಈ ಪರೀಕ್ಷೆಗೆ ಒಳಪಟ್ಟವರು ಎಲ್ಲವರು ಅಧಿಕ ತೂಕ ಅಥವಾ ಬೊಜ್ಜು ಮತ್ತು ಎಲ್ ಡಿಎಲ್ ಮಟ್ಟವನ್ನು ಹೆಚ್ಚು ಹೊಂದಿದ್ದರು. ಇವರೆಲ್ಲರಿಗೂ ಕೊಲೆಸ್ಟ್ರಾಲ್ ಕಡಿಮೆ ಮಾಡುವಂತಹ ಎರಡು ಬಗೆಯ ಆಹಾರ ನೀಡಲಾಯಿತು. ಇದರಲ್ಲಿ ಒಂದು ಶೇ.24ರಷ್ಟು ಕೊಬ್ಬಿನಿಂದ ಪಡೆದ ಕ್ಯಾಲರಿಯ ಹೊಂದಿರುವ ಕಡಿಮೆ ಕೊಬ್ಬಿನ ಆಹಾರ ಮತ್ತು ಎರಡನೇಯದು ಮಧ್ಯಮ ಕೊಬ್ಬು ಹೊಂದಿರುವ ಕೊಬ್ಬಿನಿಂದ ಶೇ.36ರಷ್ಟು ಕ್ಯಾಲರಿ ಪಡೆಯುವ ಆಹಾರ ನೀಡಲಾಯಿತು. ಮಧ್ಯಮ ಕೊಬ್ಬು ಹೊಂದಿರುವ ಆಹಾರ ಕ್ರಮದಲ್ಲಿ ಒಂದು ಮಧ್ಯಮ ಗಾತ್ರದ ಅವಕಾಡೊ(136 ಗ್ರಾಂ) ನೀಡಲಾಯಿತು.
ಇದರಿಂದ ಅಧ್ಯಯನಗಳು ಕಂಡುಕೊಂಡಿರುವಂತಹ ವಿಚಾರವೆಂದರೆ ದಿನಕ್ಕೊಂದು ಅವಕಾಡೊ ಸೇವಿಸಿದರೆ ಆಗ ಅದು ದೇಹದಲ್ಲಿರುವ ಎಲ್ ಡಿಎಲ್ ಮಟ್ಟವನ್ನು ಕಡಿಮೆ ಮಾಡುವುದು. ಎಲ್ ಡಿಎಲ್ ಕಣಗಳು ಆಕ್ಸಿಡೀಕರಣಕ್ಕೆ ಕಾರಣವಾಗಿ, ರಕ್ತನಾಳಗಳಲ್ಲಿ ಪದರಗಳು ನಿರ್ಮಾಣವಾಗಲು ಕಾರಣವಾಗುವುದು. ಎಲ್ ಡಿಎಲ್ ಆಕ್ಸಿಡೀಕರಣವು ಸಣ್ಣ ಸಾಂದ್ರತೆ ಹೊಂದಿರುವಂತಹ ಎಲ್ ಡಿಎಲ್ ಕಣಗಳಿಗೆ ಸಂಬಂಧಿಸಿದ್ದಾಗಿದ್ದು, ಇವುಗಳು ಬೇಗನೆ ರಕ್ತನಾಳದೊಳಗೆ ಪ್ರವೇಶ ಮಾಡಿ ಪದರ ನಿರ್ಮಾಣ ಮಾಡುವುದು. ಇದರಿಂದ ದಿನಕ್ಕೊಂದು ಅವಕಾಡೊ ಸೇವಿಸಿದರೆ ಅದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಆಗುವುದು.

ದಿನಕ್ಕೊಂದು ಬೆಣ್ಣೆಹಣ್ಣು
ರಕ್ತನಾಳಗಳಲ್ಲಿ ಶೇಖರಣೆ ಆಗಿರುವ ಕೊಬ್ಬಿನ ಪದರಗಳಿಂದಾಗಿ ಅಧಿಕ ಸಂಖ್ಯೆಯ ಜನರು ಹೃದಯದ ಕಾಯಿಲೆಗಳಿಂದಾಗಿ ಸಾವನ್ನಪ್ಪುವರು. ಈ ಪದರ ನಿರ್ಮಾಣವನ್ನು ಕಡಿಮೆ ಮಾಡಿದರೆ ಆಗ ಹೃದಯದ ಕಾಯಿಲೆಗಳನ್ನು ಅರ್ಧದಷ್ಟು ತಡೆಗಟ್ಟಿದಂತೆ. ದಿನಕ್ಕೆ ಒಂದು ಅವಕಾಡೊ ತಿಂದರೆ ಅದರ ಲಾಭಗಳು ಸಿಗುವುದು. ಆದರೆ ಬೇಗ ಇದರ ಲಾಭ ಪಡೆಯಲು ಹೆಚ್ಚಿನ ಮಟ್ಟದಲ್ಲಿ ಸೇವನೆ ಮಾಡಿದರೆ ಅವಕಾಡೊದಲ್ಲಿ ಇರುವಂತಹ 230 ಕ್ಯಾಲರಿಯು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ಅದರಿಂದ ಸಿಗುವ ಲಾಭಗಳು ಸಿಗದೆ ಇರಬಹುದು. ಆದ್ದರಿಂದ ನಿಮ್ಮ ಆಹಾರ ಕ್ರಮದಲ್ಲಿ ಅವಕಾಡೊವನ್ನು ಸೇರಿಸಿಕೊಳ್ಳಿ ಮತ್ತು ಇದನ್ನು ಮುಂದುವರಿಸಿಕೊಂಡು ಹೋಗಿ. ಇದು ಆರೋಗ್ಯಕಾರಿ ಕೊಬ್ಬನ್ನು ನೀಡುವುದು ಮಾತ್ರವಲ್ಲದೆ, ಹೃದಯದ ಕಾಯಿಲೆ ಸಮಸ್ಯೆ ನಿವಾರಣೆ ಮಾಡುವುದು. ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ನೀವು ಇದನ್ನು ತುಂಬಾ ಮಿತ ಪ್ರಮಾಣದಲ್ಲಿ ಸೇವನೆ ಮಾಡಿ.

ಅವಕಾಡೊ ಆಹಾರ ಕ್ರಮದಲ್ಲಿ ಹೇಗೆ ಸೇರಿಸಿಕೊಳ್ಳುವುದು?
136 ಗ್ರಾಂ ಅವಕಾಡೊ ಎಂದರೆ ಅದು ಮೂರನೇ ಎರಡು ಕಪ್ ನಷ್ಟು ಗ್ವಾಕಮೋಲ್ ಗೆ ಸಮಾನವಾಗಿದೆ. ಎರಡು ತುಂಡು ಅವಕಾಡೊ ಟೋಸ್ಟ್ ಅಥವಾ ಅವಕಾಡೊ ಚಾಕಲೇಟ್ ಟ್ರಫ್ಫೆಲ್ ಗೆ ಸಮಾನ. ನೀವು ಒಂದೇ ಸಲ ಇದನ್ನು ಸೇವನೆ ಮಾಡಬಹುದು. ಬೆಳಗ್ಗೆ ಕೆಲವು ತುಂಡು ಅವಕಾಡೊ ಜತೆಗೆ ಮೊಟ್ಟೆ, ಗ್ವಾಕಮೋಲ್ ಅನ್ನು ಮಧ್ಯಾಹ್ನದ ಊಟಕ್ಕೆ ಮತ್ತು ರಾತ್ರಿಗೆ ಅವಕಾಡೊ ಚಾಕಲೇಟ್ ಬಳಸಿಕೊಳ್ಳಬಹುದು. ನೀವು ಇದನ್ನು ಪಾಲಿಸಿದರೆ ನಿಮ್ಮ ಹೃದಯದ ಆರೋಗ್ಯವು ಚೆನ್ನಾಗಿರುವುದು.



Click it and Unblock the Notifications