ಶ್ವಾಸಕೋಶದ ಕ್ಯಾನ್ಸರ್ ಕ್ರಮೇಣ ಪರಿಹಾರ ನೀಡುತ್ತೆ ಮಾರ್ಷ್ಮೆಲ್ಲೋ ಗಿಡಮೂಲಿಕೆ

'ಮೂಗಿದ್ದ ಮೇಲೆ ನೆಗಡಿ ತಪ್ಪಿದ್ದಲ್ಲ' ಎನ್ನುವ ಹಾಗೆ ವಯಸ್ಸಾಗುತ್ತಿದ್ದಂತೆ ಮನುಷ್ಯನಿಗೆ ಕಾಯಿಲೆಗಳ ಜೊತೆ ನಂಟು ಬೆಳೆಯುತ್ತಾ ಹೋಗುತ್ತದೆ. ತಾತ್ಕಾಲಿಕವಾಗಿ ಪ್ರಾರಂಭವಾಗುವ ಕಾಯಿಲೆಗಳು ಕೊನೆಗೆ ದೀರ್ಘಕಾಲದ ಶತ್ರುಗಳಾಗಿ ಬಾಧೆ ಕೊಟ್ಟು ಆಸ್ಪತ್ರೆಗೆ ಮತ್ತು ಮೆಡಿಕಲ್ ಶಾಪ್ ಗಾಗಿ ಜೇಬು ಖಾಲಿ ಮಾಡುವಂತೆ ಮಾಡುತ್ತವೆ. ಗ್ಯಾಸ್ಟ್ರಿಕ್, ಚರ್ಮದ ಸಮಸ್ಯೆ, ಹೃದಯದ ತೊಂದರೆ, ಸಕ್ಕರೆ ಕಾಯಿಲೆ, ತಲೆಕೂದಲು ಉದುರುವಿಕೆ, ಉಸಿರಾಡಲು ಕಷ್ಟವಾಗುವುದು ಹೀಗೆ ಹೇಳುತ್ತಾ ಹೋದರೆ ಅದಕ್ಕೆ ಮಿತಿಯೇ ಇಲ್ಲ. ಒಬ್ಬೊಬ್ಬರಿಗೆ ಒಂದೊಂದು ಬಗೆಯ ಆರೋಗ್ಯ ಸಮಸ್ಯೆಗಳು ಇರುತ್ತವೆ. ಆದರೆ ಎಲ್ಲಾ ಸಮಸ್ಯೆಗಳಿಗೂ ನಾವು ಆಸ್ಪತ್ರೆಗಳ ಔಷಧಿಗಳ ಮೇಲೆ ಅವಲಂಬನೆ ಮಾಡಿಕೊಳ್ಳಬಾರದು. ಸಾಧ್ಯವಾದಷ್ಟು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಆಯುರ್ವೇದ ಗಿಡಮೂಲಿಕೆಗಳ ಪ್ರಭಾವಗಳನ್ನು ಅರಿತುಕೊಳ್ಳಬೇಕು.

Marshmallow

ಈ ಲೇಖನದಲ್ಲಿ ಮಾರ್ಷ್ಮೆಲ್ಲೋ ಎಂಬ ಗಿಡಮೂಲಿಕೆ ಬಗ್ಗೆ ತಿಳಿಸಿಕೊಡಲು ಹೊರಟಿದ್ದೇವೆ.
ಮಾರ್ಷ್ಮೆಲ್ಲೋ ಬೇರಿನ ಬಗ್ಗೆ ಒಂದಿಷ್ಟು.....

ಮಾರ್ಷ್ಮೆಲ್ಲೋ ಗಿಡ ಸಾಮಾನ್ಯವಾಗಿ ಆಫ್ರಿಕಾ ಮತ್ತು ಯುರೋಪ್ ದೇಶಗಳ ಕೆಲವು ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಿಂದಿನ ಕಾಲದವರು ಶತಮಾನಗಳಿಂದ ಈ ಗಿಡದ ಬೇರನ್ನು ಗಿಡಮೂಲಿಕೆಗಳನ್ನು ತಯಾರುಮಾಡಲು ಬಳಸುತ್ತಿದ್ದರು ಎಂದು ಹೇಳಲಾಗಿದೆ. ಪುರಾತನ ಈಜಿಪ್ಟ್ ಮತ್ತು ಗ್ರೀಸ್ ಕಾಲದಿಂದಲೂ ಅಂದರೆ ಸುಮಾರು 3000 ವರ್ಷಗಳ ಹಿಂದಿನಿಂದಲೂ ಜನರಿಗೆ ಇದೊಂದು ಸಾಂಪ್ರದಾಯಿಕ ಚಿಕಿತ್ಸೆಯನ್ನು ತಯಾರು ಮಾಡಲು ನೆರವಾಗಿದೆ. ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು, ಬ್ಯಾಕ್ಟೀರಿಯ ಸೋಂಕುಗಳು, ಜೀರ್ಣಾಂಗ ವ್ಯವಸ್ಥೆಯ ತೊಂದರೆಗಳು ಜೊತೆಗೆ ಚರ್ಮದ ಅನೇಕ ಕಾಯಿಲೆಗಳಿಗೆ ಮಾರ್ಷ್ಮೆಲ್ಲೋ ಬೇರು ಆಯುರ್ವೇದ ಔಷಧಿಯ ರೂಪದಲ್ಲಿ ಪರಿಹಾರವಾಗಿ ಬಳಕೆಯಾಗುತ್ತಿತ್ತು ಎಂಬ ಮಾಹಿತಿ ಇದೆ. ಕೇಳಲು ಆಶ್ಚರ್ಯವಾದರೂ ಇದು ನಿಜ. ಮಾರ್ಷ್ಮೆಲ್ಲೋ ಬೇರಿನ ಕಾರ್ಯವೈಖರಿ ಬಗ್ಗೆ ಮತ್ತಷ್ಟು ತಿಳಿದುಕೊಳ್ಳೋಣ ಬನ್ನಿ.

ಜನರಿಗೆ ಮಾರ್ಷ್ಮೆಲ್ಲೋ ಬೇರಿನಿಂದ ಊಹೆಗೂ ಮೀರಿದ ಉಪಯೋಗ!
ಹಿಂದಿನ ಕಾಲದಲ್ಲಿ ಸಾಕಷ್ಟುಕಾಯಿಲೆಗಳಿಗೆ ಮಾರ್ಷ್ಮೆಲ್ಲೋ ಪರಿಹಾರವಾಗಿ ಕೆಲಸ ಮಾಡುತ್ತದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಇದರ ಬೇರಿನ ಸ್ವರೂಪ. ಹಲವಾರು ಮೆದು ನಾರಿನ ಪದರಗಳನ್ನು ಇದು ಹೊಂದಿದ್ದು, ನೀರಿನ ಜೊತೆ ಸಂಪರ್ಕಕ್ಕೆ ಬಂದ ತಕ್ಷಣ ದಪ್ಪ ಆಗುತ್ತದೆ. ಜೊತೆಗೆ ಈ ಬೇರಿನಲ್ಲಿ ಪೆಕ್ಟಿನ್ ಎಂಬ ನಾರಿನ ಅಂಶ, ಟ್ಯಾನಿನ್, ಕ್ವೆರ್ಸೆಟಿನ್, ಕೌಮಾರಿನ್, ಅಸ್ಪರಾಜೈನ್ ಎಂಬ ಅಮೈನೋ ಆಮ್ಲಗಳು, ಫ್ಲೇವನಾಯ್ಡ್ ಆಂಟಿಆಕ್ಸಿಡೆಂಟ್ ಅಂಶಗಳು, ಫಿನೊಲಿಕ್ ಆಮ್ಲಗಳು ಸಾಕಷ್ಟು ಕಂಡುಬರುತ್ತವೆ. ಅಧ್ಯಯನಗಳು ಹೇಳುವಂತೆ ಈ ಎಲ್ಲಾ ಸಂಯುಕ್ತಗಳು, ನಮ್ಮ ಉಸಿರಾಟ ನಾಳದಲ್ಲಿ ಕಂಡುಬರುವ ಸಿಂಬಳದ ಪದರಗಳ ಕಾರ್ಯ ನಿರ್ವಹಣೆಯನ್ನು ಉತ್ತಮ ಪಡಿಸುತ್ತವೆ. ಮಾರ್ಷ್ಮೆಲ್ಲೋ ಬೇರಿನಲ್ಲಿ ಕಂಡು ಬರುವ ಆಂಟಿ - ಆಕ್ಸಿಡೆಂಟ್ ಅಂಶಗಳು ದೇಹದಲ್ಲಿ ಉಂಟಾಗುವ ಆಕ್ಸಿಡೇಟಿವ್ ಹಾನಿಯನ್ನು ತಪ್ಪಿಸಿ ಸಾಕಷ್ಟು ಅನುಕೂಲಕರವಾಗಿ ಪ್ರಯೋಜನ ಒದಗಿಸುತ್ತವೆ.

ಹಾಗಾದರೆ ಮಾರ್ಷ್ಮೆಲ್ಲೋ ಬೇರಿನಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ?

ಶೀತ, ಕೆಮ್ಮಿಗೆ ರಾಮಬಾಣ

ಶೀತ, ಕೆಮ್ಮಿಗೆ ರಾಮಬಾಣ

ಮೊದಲೇ ಹೇಳಿದಂತೆ ಮಾರ್ಷ್ಮೆಲ್ಲೋ ಬೇರು ತನ್ನ ಅನೇಕ ಔಷಧೀಯ ಗುಣ - ಲಕ್ಷಣಗಳಿಂದ ಉಸಿರಾಟ ನಾಳದ ವ್ಯವಸ್ಥೆಯನ್ನು ಸರಿ ಪಡಿಸುವ ಸಾಧ್ಯತೆ ಇರುವುದರಿಂದ ದುಗ್ಧರಸ ಗ್ರಂಥಿಗಳನ್ನು ಇದು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬಲ್ಲದು. ಇದರಿಂದ ಗಂಟಲು ನೋವು, ಶೀತ, ಕೆಮ್ಮು, ನೆಗಡಿ ಮತ್ತು ಉಸಿರಾಟ ವ್ಯವಸ್ಥೆಗೆ ಸಂಬಂಧ ಪಟ್ಟಂತೆ ಇರುವ ಹಲವಾರು ಸಮಸ್ಯೆಗಳು ದೂರವಾಗುತ್ತವೆ. ಒಂದು ಅಧ್ಯಯನ ಸ್ಪಷ್ಟ ಪಡಿಸಿದ ಹಾಗೆ ಮಾರ್ಷ್ಮೆಲ್ಲೋ ಬೇರಿನ ಗಿಡಮೂಲಿಕೆ ಸಿರಪ್, ಎದೆಯ ಭಾಗದಲ್ಲಿ ಹಾಗೂ ಗಂಟಲಿನ ಭಾಗದಲ್ಲಿ ಸಿಂಬಳ ಗಟ್ಟಿ ಆಗುವ ಸಾಧ್ಯತೆಯನ್ನು ತಪ್ಪಿಸುತ್ತದೆ ಮತ್ತು ಈ ಮೂಲಕ ಉಸಿರಾಟ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಾಪಾಡುತ್ತದೆ. ಇನ್ನು ಮಾರ್ಷ್ಮೆಲ್ಲೋ ಬೇರಿನ ಚಹಾ ಕುಡಿಯುವ ಅಭ್ಯಾಸ ಇದ್ದವರಿಗೆ ಇಡೀ ದೇಹ ಆರೋಗ್ಯದಿಂದ ಕೂಡಿರುತ್ತದೆ ಎಂದು ಹೇಳಲಾಗುತ್ತದೆ.

ಶ್ವಾಸಕೋಶದ ಕ್ಯಾನ್ಸರ್ ಕ್ರಮೇಣ ಪರಿಹಾರ

ಶ್ವಾಸಕೋಶದ ಕ್ಯಾನ್ಸರ್ ಕ್ರಮೇಣ ಪರಿಹಾರ

ಇದಕ್ಕೆ ಕಾರಣ ಮಾರ್ಷ್ಮೆಲ್ಲೋ ಬೇರಿನಲ್ಲಿ ಕಂಡು ಬರುವ ಆಂಟಿ - ಆಕ್ಸಿಡೆಂಟ್ ಅಂಶಗಳು ಮತ್ತು ಕ್ಯಾನ್ಸರ್ ವಿರೋಧಿ ಗುಣ - ಲಕ್ಷಣಗಳು. ಶ್ವಾಸಕೋಶದ ಭಾಗದಲ್ಲಿ ಕ್ಯಾನ್ಸರ್ ಜೀವಕೋಶಗಳು ಅಭಿವೃದ್ಧಿ ಆಗದಂತೆ ತಡೆಯುವ ಸಾಮರ್ಥ್ಯ ಮಾರ್ಷ್ಮೆಲ್ಲೋ ಬೇರಿನಲ್ಲಿ ಕಂಡು ಬರುವ ಅಂಶಗಳಿಗೆ ಇದೆ. ಮಾರ್ಷ್ಮೆಲ್ಲೋ ಬೇರಿನಲ್ಲಿ ಅಪಾರ ಪ್ರಮಾಣದ ವಿಟಮಿನ್ - ' ಸಿ ' ಅಂಶ ಇರುವುದು ಕೂಡ ಒಂದು ರೀತಿ ಪ್ರಯೋಜನಕಾರಿ ಆಗಿದೆ. ಇದು ಸಹ ಶ್ವಾಸಕೋಶದ ಭಾಗದಲ್ಲಿ ಹೆಚ್ಚು ಸಿಂಬಳ ಶೇಖರಣೆ ಆಗುವುದನ್ನು ತಪ್ಪಿಸುತ್ತದೆ ಮತ್ತು ಸರಾಗವಾಗಿ ಉಸಿರಾಡಲು ಸಹಾಯ ಮಾಡುತ್ತದೆ. ಇದರ ಬೇರಿನಲ್ಲಿ ಮನುಷ್ಯನ ದೇಹದ ರೋಗ - ನಿರೋಧಕ ಶಕ್ತಿಯನ್ನು ವೃದ್ಧಿಸುವ ಗುಣ - ಲಕ್ಷಣ ಇರುವುದರಿಂದ ಸ್ವಯಂಚಾಲಿತವಾಗಿ ಕ್ಯಾನ್ಸರ್ ಸಮಸ್ಯೆಗೆ ಪರಿಹಾರ ಸಿಗಲಿದೆ.

ಹೀಗಾಗಿ ಶ್ವಾಸಕೋಶಕ್ಕೆ ಸಂಬಂಧ ಪಟ್ಟಂತೆ ಸಮಸ್ಯೆಗಳನ್ನು ಹೊಂದಿದವರಿಗೆ ಮಾರ್ಷ್ಮೆಲ್ಲೋ ಬೇರು ಒಂದು ವರದಾನವೇ ಸರಿ. ಕ್ಯಾನ್ಸರ್ ಸಮಸ್ಯೆಗೆ ಪೂರಕವಾಗಿ ಕೆಲಸ ಮಾಡುವ ಇದನ್ನು ನೀವು ತೆಗೆದುಕೊಳ್ಳುತ್ತಿರುವ ಔಷಧಿಗಳ ಜೊತೆ ಸೇವಿಸಬಹುದೇ ಎಂಬ ಬಗ್ಗೆ ಒಮ್ಮೆ ವೈದ್ಯರಲ್ಲಿ ಕೇಳಿ ಸಲಹೆ ಪಡೆದು ಆನಂತರ ಮುಂದುವರೆಯಿರಿ.

ಕರುಳು ಸೋರಿಕೆಯನ್ನು ತಡೆಯಬಲ್ಲದು

ಕರುಳು ಸೋರಿಕೆಯನ್ನು ತಡೆಯಬಲ್ಲದು

ಹೊಟ್ಟೆಯ ಒಳಭಾಗದಲ್ಲಿ ಕೆಲವೊಮ್ಮೆ ಯತೇಚ್ಛವಾಗಿ ಉತ್ಪತ್ತಿ ಆಗುವ ಆಮ್ಲದ ಕಾರಣದಿಂದ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆ ಕೇವಲ ಹೊಟ್ಟೆಗೆ ಮಾತ್ರ ಸೀಮಿತವಾಗಿರದೆ ಕರುಳಿನ ಭಾಗಕ್ಕೂ ಹರಡುವ ಸಾಧ್ಯತೆ ಇರುತ್ತದೆ. ಇದರಿಂದ ಮನುಷ್ಯನಿಗೆ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಾಕಷ್ಟು ಏರುಪೇರು ಉಂಟಾಗುತ್ತದೆ. ಆದರೆ ಮಾರ್ಷ್ಮೆಲ್ಲೋ ಬೇರು ಇದಕ್ಕೆಲ್ಲ ಕಡಿವಾಣ ಹಾಕುತ್ತದೆ ಎಂದು ಹೇಳಬಹುದು. ಮುಖ್ಯವಾಗಿ ಹುಣ್ಣುಗಳನ್ನು ವಾಸಿ ಮಾಡುವ ಜೊತೆಗೆ ಕರುಳಿನ ಭಾಗದಲ್ಲಿ ಉಂಟಾಗುವ ಸೋರಿಕೆಯನ್ನು ಇದು ತಡೆಯುತ್ತದೆ. ಏಕೆಂದರೆ ಸಂಪೂರ್ಣ ಜೀರ್ಣಾಂಗ ವ್ಯವಸ್ಥೆಯಲ್ಲಿ ಇದೊಂದು ರಕ್ಷಣಾತ್ಮಕ ಪದರವನ್ನು ಉಂಟು ಮಾಡಲಿದೆ. ಇಷ್ಟೇ ಅಲ್ಲದೆ ಕರುಳಿಗೆ ಸಂಬಂಧ ಪಟ್ಟಂತೆ ಜನರು ಅನುಭವಿಸುವ ಯಾವುದೇ ಸಮಸ್ಯೆಗಳಿಗೆ ಇದು ಪರಿಹಾರ ಒದಗಿಸಬಲ್ಲದು ಎಂದು ಹೇಳಬಹುದು.

ಬ್ಯಾಕ್ಟೀರಿಯಾ ಸೋಂಕಿಗೆ ಇದೊಂದು ಚಿಕಿತ್ಸೆ!

ಬ್ಯಾಕ್ಟೀರಿಯಾ ಸೋಂಕಿಗೆ ಇದೊಂದು ಚಿಕಿತ್ಸೆ!

ದೇಹದ ಯಾವುದೇ ಭಾಗದಲ್ಲಿ ಕಂಡು ಬರುವ ಉರಿ, ನೋವು, ಸೋಂಕು ಇತ್ಯಾದಿಗಳ ಸಮಸ್ಯೆಯನ್ನು ಮಾರ್ಷ್ಮೆಲ್ಲೋ ಬೇರಿನಿಂದ ಸುಲಭವಾಗಿ ಪರಿಹಾರ ಮಾಡಬಲ್ಲದು. ಏಕೆಂದರೆ ಇದರಲ್ಲಿ ಆಂಟಿ - ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು ಸಾಕಷ್ಟು ಹೇರಳವಾಗಿ ಕಂಡು ಬರಲಿವೆ. ಬ್ಯಾಕ್ಟೀರಿಯಗಳ ಸೋಂಕಿನಿಂದ ಪಾರು ಮಾಡುವುದು ಮಾತ್ರವಲ್ಲದೆ, ಗಾಯವನ್ನು ಬಹಳ ಬೇಗನೆ ವಾಸಿ ಮಾಡುವುದು ಇದರ ಪ್ರಮುಖ ವೈಶಿಷ್ಟ್ಯ. ಮಾರ್ಷ್ಮೆಲ್ಲೋ ಬೇರನ್ನು ಯಾವುದಾದರೂ ಒಂದು ರೂಪದಲ್ಲಿ ಸೇವನೆ ಮಾಡುವುದರಿಂದ ಅದು ದೇಹದಲ್ಲಿ ಮೂತ್ರ ವರ್ಧಕವಾಗಿ ಕೆಲಸ ಮಾಡಿ, ಮೂತ್ರ ವಿಸರ್ಜನೆ ಹೆಚ್ಚಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ಮೂತ್ರ ನಾಳದಲ್ಲಿ ಕಂಡು ಬರುವ ಸೋಂಕುಕಾರಕ ಬ್ಯಾಕ್ಟೀರಿಯಾಗಳನ್ನು ಜೊತೆಗೆ ಮೂತ್ರ ಪಿಂಡಗಳಲ್ಲಿ ಕಂಡು ಬರುವ ಕಲ್ಲುಗಳನ್ನು ಹೊರಹಾಕಲು ನೆರವಾಗುತ್ತದೆ. ಕೆಲವು ಮೂಲಗಳ ಮಾಹಿತಿಯ ಪ್ರಕಾರ, ಮೂತ್ರ ಚೀಲದ ಕಾಯಿಲೆ ಎಂದು ಗುರುತಿಸಿಕೊಂಡ interstitial cystitis ಅನ್ನು ಮಾರ್ಷ್ಮೆಲ್ಲೋ ಬೇರು ಪರಿಹರಿಸುತ್ತದೆ. ಇದು ಬ್ಯಾಕ್ಟೀರಿಯಗಳ ಸೋಂಕಿನಿಂದ ಉಂಟಾಗದೆ ಇದ್ದರೂ ಕೂಡ ಈ ಗಿಡಮೂಲಿಕೆಯ ವಾಸಿ ಮಾಡುವ ಗುಣ ಲಕ್ಷಣಗಳು ಮೂತ್ರ ಚೀಲದ ಉರಿಯೂತವನ್ನು ನಿವಾರಣೆ ಮಾಡುವ ಮೂಲಕ ಸುಲಭವಾಗಿ ಪರಿಹಾರವನ್ನು ಒದಗಿಸುತ್ತದೆ.

ಹೃದಯದ ಆರೋಗ್ಯಕ್ಕೆ ಸಹಕಾರಿ

ಹೃದಯದ ಆರೋಗ್ಯಕ್ಕೆ ಸಹಕಾರಿ

ಹೃದಯದ ಕಾಯಿಲೆಗಳು ಉಂಟಾಗಲು ಹಲವಾರು ಕಾರಣಗಳಿರುತ್ತವೆ. ಅದರಲ್ಲಿ ಪ್ರಮುಖವಾಗಿ ಉರಿಯೂತ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ಇಂತಹ ಒಂದು ಉರಿಯೂತದಿಂದ ಉಂಟಾಗುವ ಹೃದಯದ ಸಮಸ್ಯೆಯನ್ನು ಮಾರ್ಷ್ಮೆಲ್ಲೋ ಬೇರು ಪರಿಹಾರ ಮಾಡಬಲ್ಲದು. ಹೃದಯದ ಆರೋಗ್ಯವನ್ನು ಉತ್ತಮ ಪಡಿಸುವುದರ ಜೊತೆಗೆ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಂಶಗಳ ಪ್ರಮಾಣವನ್ನು ವೃದ್ಧಿಸಿ ಹೃದಯದ ಕಾರ್ಯ ಚಟುವಟಿಕೆ ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.

ಜೀರ್ಣಾಂಗ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಸಹಕಾರಿ

ಜೀರ್ಣಾಂಗ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಸಹಕಾರಿ

ಮನುಷ್ಯನಿಗೆ ಒಮ್ಮೆ ಜೀರ್ಣಾಂಗ ವ್ಯವಸ್ಥೆ ಹದಗೆಟ್ಟರೆ, ಅದರಿಂದ ನಾನಾ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಉದಾಹರಣೆಗೆ ಗ್ಯಾಸ್ಟ್ರಿಕ್, ಎದೆಯುರಿ, ಅಜೀರ್ಣತೆ, ಮಲಬದ್ಧತೆ, ಹುಳಿತೇಗು, ಹೊಟ್ಟೆ ನೋವು, ಬೇಧಿ ಇತ್ಯಾದಿ. ಆದರೆ ಈ ಸಮಸ್ಯೆಗಳಿಗೆಲ್ಲಾ ಆಂಗ್ಲ ಔಷಧಿಗಳನ್ನು ಪರಿಹಾರ ಎಂದು ನೋಡುವ ಬದಲು ಮಾರ್ಷ್ಮೆಲ್ಲೋ ಬೇರಿನ ಗಿಡಮೂಲಿಕೆ ಸಿರಪ್ ಸೇವನೆ ಮಾಡುವುದರಿಂದ ಹೊಟ್ಟೆಯ ಒಳಪದರ ಆಮ್ಲದ ಉಪಟಳದಿಂದ ರಕ್ಷಣೆ ಆಗುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧ ಪಟ್ಟಂತೆ ಇರುವಂತಹ ಸಾಕಷ್ಟು ಸಮಸ್ಯೆಗಳು ಪರಿಹಾರವಾಗುತ್ತವೆ. ಸಂಶೋಧನೆಗಳು ಹೇಳುವಂತೆ ಮಾರ್ಷ್ಮೆಲ್ಲೋ ಗಿಡಮೂಲಿಕೆ ಕರುಳಿನ ಭಾಗದ ತೊಂದರೆಗಳನ್ನು ಸರಿ ಪಡಿಸುವ ಜೊತೆಗೆ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಉತ್ತಮ ಪಡಿಸುತ್ತದೆ.

ಚರ್ಮದ ಸಮಸ್ಯೆಗಳಿಗೆ ಉತ್ತಮ ಪರಿಹಾರ

ಚರ್ಮದ ಸಮಸ್ಯೆಗಳಿಗೆ ಉತ್ತಮ ಪರಿಹಾರ

ಮೊದಲೇ ಹೇಳಿದಂತೆ ಮಾರ್ಷ್ಮೆಲ್ಲೋ ಬೇರು ಶತಮಾನಗಳಿಂದ ಚರ್ಮದ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತಿದೆ. ಚರ್ಮದ ಮೇಲೆ ಕಂಡು ಬರುವ ಉರಿಯೂತದಿಂದ ಹಿಡಿದು ಚರ್ಮದ ಕಿರಿಕಿರಿಯನ್ನು ಇದು ತಪ್ಪಿಸುತ್ತದೆ. ಚರ್ಮದ ಸಿಪ್ಪೆ ಸುಲಿಯುವುದು, ಚರ್ಮದ ಮೇಲಿನ ಕಚ್ಚಿದ ಗಾಯ, ಒಣ ಚರ್ಮ, ಬಿರುಕು ಬಿಟ್ಟ ಚರ್ಮ ಇತ್ಯಾದಿ ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಇದು ಕೆಲಸ ಮಾಡಬಲ್ಲದು.

ಈಗಲೂ ಸಹ ಇದೇ ಕಾರಣಕ್ಕೆ ಸಾಕಷ್ಟು ಚರ್ಮದ ಆರೈಕೆ ಉತ್ಪನ್ನಗಳಲ್ಲಿ ಮಾರ್ಷ್ಮೆಲ್ಲೋ ಬೇರನ್ನು ಬಳಕೆ ಮಾಡುತ್ತಾರೆ. ಚರ್ಮದ ಮೇಲೆ ಕಂಡು ಬರುವ ಇಸುಬು, ಕಜ್ಜಿ, ತುರಿಕೆ ಇತ್ಯಾದಿಗಳಿಗೆ ತನ್ನ ಆಂಟಿ ಇನ್ಫಾಮೇಟರಿ ಗುಣ - ಲಕ್ಷಣಗಳಿಂದ ಇದು ಪರಿಹಾರ ಒದಗಿಸುತ್ತದೆ. ಚರ್ಮದ ತೇವಾಂಶವನ್ನು ರಕ್ಷಣೆ ಮಾಡುವುದರ ಜೊತೆಗೆ ಒಣ ಚರ್ಮದ ಸಮಸ್ಯೆಯನ್ನು ನಿವಾರಣೆ ಮಾಡಿ ಅತಿ ಸೂಕ್ಷ್ಮ ಪ್ರಕಾರದ ಚರ್ಮ ಹೊಂದಿದವರಿಗೆ ರಕ್ಷಣಾತ್ಮಕ ಪದರವಾಗಿ ಇದು ಕೆಲಸ ಮಾಡಬಲ್ಲದು.

ತಲೆ ಕೂದಲಿನ ಬೆಳವಣಿಗೆಯಲ್ಲಿ ಹೆಚ್ಚು ಸಹಕಾರಿ

ತಲೆ ಕೂದಲಿನ ಬೆಳವಣಿಗೆಯಲ್ಲಿ ಹೆಚ್ಚು ಸಹಕಾರಿ

ನಮ್ಮಲ್ಲಿ ಹಲವರಿಗೆ ಚಿಕ್ಕ ವಯಸ್ಸಿನಲ್ಲಿ ತಲೆ ಕೂದಲು ಉದುರುವುದು, ತಲೆ ಕೂದಲು ಬೆಳ್ಳಗಾಗುವುದು, ಸೀಳು ಕೂದಲು, ಕೂದಲು ಅರ್ಧಕ್ಕೆ ಮುರಿದುಕೊಳ್ಳುವುದು ಇತ್ಯಾದಿ ಸಮಸ್ಯೆಗಳು ಸಾಕಷ್ಟು ಕಂಡು ಬರುತ್ತವೆ. ಇದಕ್ಕೆಲ್ಲಾ ಮಾರ್ಷ್ಮೆಲ್ಲೋ ಬೇರು ಪರಿಹಾರವನ್ನು ಒದಗಿಸುತ್ತದೆ. ಕೂದಲಿನ ಪ್ರೋಟೀನ್ ಅಂಶಗಳ ಜೊತೆ ಇದರಲ್ಲಿರುವ ಸಂಯುಕ್ತಗಳು ಬೆರೆತು ತಲೆ ಕೂದಲು ದಪ್ಪವಾಗಿ ಕಾಣುವಂತೆ ಮಾಡುತ್ತದೆ. ಕೂದಲಿನ ಬೆಳವಣಿಗೆಯನ್ನು ನಿರಂತರವಾಗಿ ಉತ್ತೇಜಿಸುತ್ತದೆ. ತಲೆ ಕೂದಲಿಗೆ ಸಂಬಂಧ ಪಟ್ಟಂತೆ ಇರುವಂತಹ ಸಾಕಷ್ಟು ಸಮಸ್ಯೆಗಳನ್ನು ಇದು ಪರಿಹಾರ ಮಾಡಬಲ್ಲದು. ಒಟ್ಟಾರೆಯಾಗಿ ಒಂದು ರೀತಿಯ ಹೇರ್ ಕಂಡೀಶನರ್ ಆಗಿ ಇದು ಕೆಲಸ ಮಾಡುತ್ತದೆ ಎಂದು ಹೇಳುತ್ತಾರೆ.

ಯಾವುದೇ ಸಂದರ್ಭದಲ್ಲಿ ನೀವು ಮಾರ್ಷ್ಮೆಲ್ಲೋ ಗಿಡಮೂಲಿಕೆಯಿಂದ ಈ ಮೇಲಿನ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದರೆ ಅದರ ಚಹಾ ತಯಾರು ಮಾಡಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಚಹಾ ತಯಾರು ಮಾಡುವುದು ಬಹಳ ಸುಲಭವಾದ ಪ್ರಕ್ರಿಯೆ. ಹೇಗೆಂದು ತಿಳಿಯೋಣ ಬನ್ನಿ.

ಮಾರ್ಷ್ಮೆಲ್ಲೋ ಟೀ ಮಾಡುವ ವಿಧಾನ

ಮಾರ್ಷ್ಮೆಲ್ಲೋ ಟೀ ಮಾಡುವ ವಿಧಾನ

ಮೊದಲಿಗೆ ಒಂದು ಪಾತ್ರೆಯಲ್ಲಿ ಕಾಲು ಭಾಗದಷ್ಟು ಮಾರ್ಷ್ಮೆಲ್ಲೋ ಬೇರು ತೆಗೆದುಕೊಳ್ಳಿ.

ಇದಕ್ಕೆ ಉಗುರು ಬೆಚ್ಚಗಿನ ನೀರನ್ನು ಹಾಕಿ ಮುಚ್ಚಳ ಮುಚ್ಚಿ, ಆರು ಗಂಟೆಗಳ ಕಾಲ ಅಥವಾ ಇಡೀ ರಾತ್ರಿ ಹಾಗೆ ಬಿಡಿ.

ಕ್ರಮೇಣವಾಗಿ ನೀರು ಹಳದಿ ಬಣ್ಣಕ್ಕೆ ಬದಲಾಗಲು ಪ್ರಾರಂಭವಾಗುತ್ತದೆ.

ಇದನ್ನು ಸೋಸಿದರೆ ನಿಮಗೆ ಗಟ್ಟಿಯಾದ ದ್ರವ ಸಿಗುತ್ತದೆ. ಇದನ್ನು ನೀವು ಮಾರ್ಷ್ಮೆಲ್ಲೋ ಚಹಾ ಎಂದು ಕರೆಯಬಹುದು. ಎಷ್ಟು ಸುಲಭ ಅಲ್ಲವೇ?

ಮಾರ್ಷ್ಮೆಲ್ಲೋ ಗಿಡಮೂಲಿಕೆಯ ಕೆಲವು ಅಡ್ಡಪರಿಣಾಮಗಳನ್ನು ನೋಡುವುದಾದರೆ.......

ಮೇಲಿನ ರೀತಿ ಇನ್ನೂ ಹಲವು ಪ್ರಕಾರಗಳಲ್ಲಿ ಉಪಯೋಗಕ್ಕೆ ಬರುವ ಮಾರ್ಷ್ಮೆಲ್ಲೋ ಗಿಡಮೂಲಿಕೆ ತುಂಬಾ ಕಡಿಮೆ ಅಡ್ಡ - ಪರಿಣಾಮಗಳನ್ನು ಹೊಂದಿದೆ ಎಂದು ತಿಳಿದು ಬಂದಿದೆ. FDA ಸಂಸ್ಥೆ ಕೂಡ ಇದನ್ನು ಸುರಕ್ಷಿತ ಎಂದು ಪರಿಗಣಿಸಿದೆ. ಆದರೂ ಸಹ ಕೆಲವೊಂದು ಉಂಟಾಗಬಹುದಾದ ಆಟ ಪರಿಣಾಮಗಳನ್ನು ಗಮನಿಸಿ ನೋಡುವುದಾದರೆ.......

ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ತೊಂದರೆ

ಇದರ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲ. ಗರ್ಭಿಣಿಯರು ಮತ್ತು ಬಾಣಂತಿಯರು ಮಾರ್ಷ್ಮೆಲ್ಲೋ ಗಿಡಮೂಲಿಕೆ ಚಹಾವನ್ನು ಸೇವನೆ ಮಾಡಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಗಳು ಸಹ ಇಲ್ಲ. ಆದರೂ ಕೂಡ ಈ ಸಂದರ್ಭಗಳಲ್ಲಿ ಇದನ್ನು ಸೇವನೆ ಮಾಡದೆ ಇರುವುದು ಒಳ್ಳೆಯದು.

ಮಧುಮೇಹ ಸಮಸ್ಯೆ ಇರುವವರಿಗೆ........?

ಪ್ರಪಂಚದಲ್ಲಿ ನಾವೆಲ್ಲ ಗಮನಿಸಿರುವ ಹಾಗೆ ಐದು ಜನರಲ್ಲಿ ಇಬ್ಬರಿಗೆ ಈ ಕಾಲದಲ್ಲಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಇದ್ದೇ ಇರುತ್ತದೆ. ಕೆಲವರಿಗಂತೂ ನಿಯಂತ್ರಣ ತಪ್ಪಿದ ಮಧುಮೇಹ ಇದ್ದು, ಆರೋಗ್ಯಕ್ಕೆ ಸಾಕಷ್ಟು ತೊಂದರೆ ಉಂಟು ಮಾಡುತ್ತಿರುತ್ತದೆ. ಹೀಗಾಗಿ ಕಡ್ಡಾಯವಾಗಿ ಮಧುಮೇಹ ಔಷಧಿಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಔಷಧಿಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಮಾರ್ಷ್ಮೆಲ್ಲೋ ಬೇರಿನ ಅಥವಾ ಚಹಾದ ಸೇವನೆ ರಕ್ತದಲ್ಲಿನ ಸಕ್ಕರೆ ಅಂಶಗಳ ಪ್ರಮಾಣವನ್ನು ಮತ್ತಷ್ಟು ತಗ್ಗಿಸುವ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿ ಈ ಬಗ್ಗೆ ಸಕ್ಕರೆ ಕಾಯಿಲೆ ಇರುವವರು ಎಚ್ಚರ ವಹಿಸಬೇಕು.

ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವವರು ಮತ್ತು ಮಾಡಿಸಿಕೊಂಡವರು

ಮೇಲೆ ಹೇಳಿದಂತೆ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಮೇಲೆ ಮಾರ್ಷ್ಮೆಲ್ಲೋ ಗಿಡಮೂಲಿಕೆಯ ಪ್ರಭಾವವಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರದಲ್ಲಿ ಅಥವಾ ಮಾಡಿಸಿಕೊಳ್ಳುವ ಎರಡು ವಾರಗಳ ಮುಂಚೆ ಇದರ ಸೇವನೆಯನ್ನು ಬಿಡುವುದು ಒಳ್ಳೆಯದು.

ಕೊನೆ ಮಾತು

ಮಾರ್ಷ್ಮೆಲ್ಲೋ ಗಿಡಮೂಲಿಕೆ ಬೇರು ಅಥವಾ ಚಹಾ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು. ಏಕೆಂದರೆ ಮೇಲೆ ಗಮನಿಸಿದ ಹಾಗೆ ಮತ್ತು ಇನ್ನು ಹಲವು ರೀತಿಗಳಲ್ಲಿ ಇದು ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತದೆ. ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ಇದನ್ನು ಸೇರಿಸಿಕೊಳ್ಳಬಹುದು. ಆದರೆ ಯಾವ ಪ್ರಮಾಣದಲ್ಲಿ ಸೇವನೆ ಮಾಡಬೇಕು ಮತ್ತು ದಿನದಲ್ಲಿ ಎಷ್ಟು ಬಾರಿ ಸೇವನೆ ಮಾಡಬಹುದು ಎಂಬ ಬಗ್ಗೆ ವೈದ್ಯರಲ್ಲಿ ಮಾಹಿತಿ ಕಲೆ ಹಾಕಿ.

English summary

Marshmallow Root Health Benefits, Dosage, Side Effects and Marshmallow Tea Recipe in Kannada

Here we are discussing about Marshmallow Root Health Benefits, Dosage, Side Effects and Marshmallow Tea Recipe in Kannada. read more.
X
Desktop Bottom Promotion