Latest Updates
-
ಡೇಟಿಂಗ್ ಆಪ್ ಬಳಸುವಾಗ ಎಚ್ಚರ: ಸೈಬರ್ ವಂಚನೆ ಮತ್ತು ಸೆಕ್ಸ್ಟಾರ್ಷನ್ನಿಂದ ಪಾರಾಗುವುದು ಹೇಗೆ? -
ಈರುಳ್ಳಿ ಬೆಲೆ ಇಳಿಕೆ: ಗೃಹಿಣಿಯರಿಗೆ ನಿರಾಳ, ಬಜೆಟ್ ಸ್ನೇಹಿ ಅಡುಗೆಗೆ ಈಗ ಸುಲಭ! -
ಕಿಚ್ಚ ಸುದೀಪ್-ಪ್ರೇಮ್ ಟೀಸರ್ ರಿಲೀಸ್: ಸಂಭ್ರಮಿಸಲು ಸಿದ್ಧರಾಗಿ, ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ ವಿಷಕಾರಿ ಗಾಳಿ: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 15 ನಿಮಿಷದ ವರ್ಕೌಟ್ -
ಮದುವೆ ಭರವಸೆ ವಂಚನೆ: ಹಣ ಕೊಟ್ಟು ರಾಜಿ ಮಾಡಿಕೊಳ್ಳುವವರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ -
ಚಳಿಗಾಲದ ಸ್ಪೆಷಲ್: 30 ನಿಮಿಷದಲ್ಲಿ ತಯಾರಾಗುವ 5 ಹೈ-ಪ್ರೋಟೀನ್, ಡಯಾಬಿಟಿಸ್-ಸ್ಮಾರ್ಟ್ ಸೂಪ್ಗಳು! -
ಸಂವಿಧಾನ ದಿನ: ಬೆಳಿಗ್ಗೆ 11 ಗಂಟೆಗೆ ಪ್ರಸ್ತಾವನೆ ಓದಿ, ನಿಮ್ಮ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ? -
ಮಳೆಗಾಲದ ಬೆಳಿಗ್ಗೆ ಆಲಸ್ಯವೇ? ಬೆಂಗಳೂರಿನಲ್ಲಿ ಫಿಟ್ ಆಗಿರಲು 20 ನಿಮಿಷಗಳ ಸರಳ ವರ್ಕೌಟ್ ಇಲ್ಲಿದೆ! -
16 ದಿನಗಳ ಸುರಕ್ಷತಾ ಅಭಿಯಾನ: ನಿಮ್ಮ ರಕ್ಷಣೆಗಾಗಿ ಈ ತುರ್ತು ಸಂಖ್ಯೆಗಳು ಮತ್ತು ಸಲಹೆಗಳು ಇಂದೇ ತಿಳಿಯಿರಿ -
ಸಪ್ಲಿಮೆಂಟ್ ಖರೀದಿಸುವ ಮುನ್ನ ಎಚ್ಚರ! ಮಹಾರಾಷ್ಟ್ರ FDA ಕಠಿಣ ನಿಯಮ: ಸುಳ್ಳು ಜಾಹೀರಾತುಗಳಿಗೆ ಬ್ರೇಕ್
ಈ ಕೆಟ್ಟ ಅಭ್ಯಾಸದಿಂದಲೇ ಪಾರ್ಶ್ವವಾಯು ಸಂಭವಿಸುವುದು
ಇತ್ತೀಚೆಗೆ ಪಾರ್ಶ್ವವಾಯು ಸಮಸ್ಯೆಗಳು ಹೆಚ್ಚುತ್ತಿರುವ ಬಗ್ಗೆ ಹೆಚ್ಚು ವರದಿಯಾಗುತ್ತಿದೆ. ಅದುವೇ ಬಹಳ ಚಿಕ್ಕ ವಯಸ್ಸಿಗೇ ಪಾರ್ಶ್ವವಾಯುವಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ನಮ್ಮ ಜೀವನಶೈಲಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ.
ನಾವು ಇತ್ತೀಚೆಗೆ ಬೆಳೆಸಿಕೊಂಡಿರುವ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ಅತೀ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಲ್ಲಿ ಈ ಪಾರ್ಶ್ವವಾಯು ಸಹ ಒಂದಾಗಿದೆ. ಮೆದುಳಿನ ವಿವಿಧ ಭಾಗಗಳಿಗೆ ರಕ್ತ ಪೂರೈಕೆಯು ತೊಂದರೆಗೊಳಗಾದಾಗ ಮೆದುಳಿನ ಅಂಗಾಂಶವನ್ನು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪಡೆಯುವುದನ್ನು ತಡೆಯುತ್ತದೆ, ಇದು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.
ನಮ್ಮ ಜೀವನಶೈಲಿಯ ಯಾವೆಲ್ಲಾ ದುರಭ್ಯಾಸಗಳು ನಮ್ಮ ಜೀವಕ್ಕೆ ಕುತ್ತಾಗಲಿದೆ ಮುಂದೆ ಹೇಳುತ್ತೇವೆ ನೋಡಿ:

ದೈಹಿಕ ಚಟುವಟಿಕೆಯ ಕೊರತೆ
ನಿಷ್ಕ್ರಿಯವಾಗಿರುವುದು, ನಿಯಮಿತವಾಗಿ ವ್ಯಾಯಾಮ ಮಾಡದಿರುವುದು, ನಿಮ್ಮನ್ನು ಅಧಿಕ ತೂಕ ಮತ್ತು ಬೊಜ್ಜು ಮಾಡುವುದಲ್ಲದೆ, ಇದು ದೊಡ್ಡ ಕಾಯಿಲೆಗಳಿಗೆ ಕಾರಣವಾಗಬಹುದು. ಇದು ನಿಮ್ಮ ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಇತರ ಹಲವು ದೀರ್ಘಕಾಲದ ಅನಾರೋಗ್ಯಕ್ಕೂ ನಿಮ್ಮನ್ನು ತಳ್ಳುತ್ತದೆ.
ನಿಯಮಿತ ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆ ಮತ್ತು ಆರೋಗ್ಯಕರ ಜೀವನಶೈಲಿ ಪದ್ಧತಿಗಳು ಜೀವ-ಅಪಾಯದ ಪರಿಸ್ಥಿತಿಗಳು ಮತ್ತು ತೊಡಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಧೂಮಪಾನ
ಧೂಮಪಾನವು ಅತ್ಯಂತ ಹಾನಿಕಾರಕ ಅಭ್ಯಾಸವಾಗಿದ್ದು ಅದು ನಿಮ್ಮನ್ನು ಪಾರ್ಶ್ವವಾಯುವಿಗೆ ತುತ್ತಾಗುವಂತೆ ಮಾಡುವುದಲ್ಲದೆ, ನಿಮ್ಮ ಹೃದಯದ ಆರೋಗ್ಯ ಮತ್ತು ಉಸಿರಾಟದ ಕಾರ್ಯಗಳ ಮೇಲೂ ಪರಿಣಾಮ ಬೀರುತ್ತದೆ. ಧೂಮಪಾನದಿಂದ ಇಸ್ಕೆಮಿಕ್ ಸ್ಟ್ರೋಕ್ ಎಂಬ ಅಪಾಯವನ್ನು ದ್ವಿಗುಣಗೊಳಿಸುತ್ತದೆ ಎಂದು ತಜ್ಷರು ಹೇಳುತ್ತಾರೆ.

ಅತಿಯಾದ ಮದ್ಯಪಾನ ಸೇವನೆ
ಅತಿಯಾಗಿ ಕುಡಿಯುವುದು ಸಹ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಮದ್ಯಪಾನ ಸೇವಿಸುವ ಅಭ್ಯಾಸ ಇರುವವರು ತಜ್ಞರ ಸಲಹೆ ಪಡೆದು ಅವರ ದೇಹ ಸಹಿಸಿಕೊಳ್ಳಬಹುದಾದಷ್ಟು ಮಾತ್ರ ಸೇವಿಸಬಹುದು, ಇದು ಅತಿಯಾದರೆ ಅಪಯಾ ಸಾಧ್ಯತೆಯೇ ಹೆಚ್ಚು ಎಂದು ತಜ್ಞರು ಹೇಳುತ್ತಾರೆ.

ಪಾರ್ಶ್ವವಾಯುವಿಗೆ ಇತರ ಕಾರಣಗಳು
ಪಾರ್ಶ್ವವಾಯುವಿಗೆ ಇತರ ಅಪಾಯಕಾರಿ ಕಾರಣಗಳೂ ಇದೆ. ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ಅನಿಯಮಿತ ಹೃದಯ ಬಡಿತಗಳಂತಹ ವೈದ್ಯಕೀಯ ಪರಿಸ್ಥಿತಿಗಳು ಸಹ ಸ್ಟ್ರೋಕ್ಗೆ ಕಾರಣಗಳಾಗಿದೆ. ಕುಟುಂಬದ ಇತಿಹಾಸ, ವಯಸ್ಸು, ಲಿಂಗಗಳು ಸಹ ಇರಬಹುದು.

ಚಿಕಿತ್ಸೆ
ಯಾರಾದರೂ ಪಾರ್ಶ್ವವಾಯುವಿಗೆ ತುತ್ತಾದರೆ ಅ ಕೆಲವು ನಿಮಿಷಗಳು ಬಹಳ ಮುಖ್ಯವಾಗಿರುತ್ತದೆ. ಯಾರಾದರೂ ಪಾರ್ಶ್ವವಾಯುವಿನಿಂದ ಬಳಲುತ್ತಿರುವುದನ್ನು ಕಂಡರೆ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿದರೆ ಉತ್ತಮ. ರಕ್ತಕೊರತೆಯ ಹೊಡೆತಕ್ಕೆ ಚಿಕಿತ್ಸೆ ನೀಡಲು, ವೈದ್ಯರು ಮೆದುಳಿಗೆ ರಕ್ತದ ಹರಿವನ್ನು ತ್ವರಿತವಾಗಿ ಪುನಃಸ್ಥಾಪಿಸಬೇಕು.



Click it and Unblock the Notifications
