Latest Updates
-
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ
ಮುಟ್ಟಿನ ಸಮಯದಲ್ಲಿ ಕೊರೊನಾ ಲಸಿಕೆ ಪಡೆಯಬಹುದೇ? ತಜ್ಞರ ಅಭಿಪ್ರಾಯವೇನು?
ಕೊರೊನಾ ಲಸಿಕೆ ಬಂದಾಗಿನಿಂದಲೇ ಜನರಿಗೆ ಆ ಲಸಿಕೆ ಬಗ್ಗೆ ನಾನಾ ಸಂಶಯ. ಮೊದಲಿಗೆ ಕೊರೊನಾ ವಾರಿಯರ್ಸ್‌ಗೆ ಲಸಿಕೆ ನೀಡಲಾಗಿತ್ತು, ಅದಾಗ ಬಳಿಕ 60 ವರ್ಷ ಮೇಲ್ಪಟ್ಟವರಿಗೆ ನಂತರ 3ನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ.

ಮೊದಲಿಗೆ ಈ ಲಸಿಕೆ ಪಡೆದರೆ ಎಲ್ಲಿ ಅಡ್ಡಪರಿಣಾಮ ಉಂಟಾಗುವುದೋ ಎಂಬ ಭಯ ಜನರಿಗಿತ್ತು. ಇದೀಗ ಆ ಭಯ ದೂರವಾಗಿದೆ. ಏಪ್ರಿಲ್ 23ಕ್ಕೆ 115, 461, 202 ಜನರು ಮೊದಲ ಡೋಸ್ ಪಡೆದುಕೊಂಡಿದ್ದರೆ 20, 197, 122 ಜನರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಈ ಸಂಖ್ಯೆಯೇ ಜನರಿಗೆ ಕೊರೊನಾ ಲಸಿಕೆ ಮೇಲೆ ನಂಬಿಕೆ ಮೂಡಿಸಿದೆ ಎಂದು ಹೇಳಬಹುದು.
ಇದೀಗ ಭಾರತದ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲು ಮುಂದಾಗಿದೆ. ಈ ಲಸಿಕೆ ಪಡೆಯಲು ಏಪ್ರಿಲ್ 28ರಿಂದ ನೋಂದಣಿ ಪ್ರಾರಂಭವಾಗಿದ್ದು, ಮೇ1ರಿಂದ ಲಸಿಕೆ ಪಡೆಯಬಹುದಾಗಿದೆ.
ಆದರೆ ಈ ಲಸಿಕೆ ಪಡೆಯುವುದರ ಬಗ್ಗೆ ಯುವ ಜನಾಂಗಕ್ಕೆ ಹಲವು ಸಂಶಯ ಮೂಡಿದೆ, ಅದರಲ್ಲೂ ಮಹಿಳೆಯರಿಗೆ ಸಂಶಯ ಮೂಡಲಾರಂಭಿಸುತ್ತದೆ. ಅದರಲ್ಲೂ ಮುಟ್ಟಿನ ಸಮಯದಲ್ಲಿ ಈ ಲಸಿಕೆ ಪಡೆಯಬಹುದೇ ಎಂದು ಕೇಳುತ್ತಿದ್ದಾರೆ, ಈ ಕುರಿತಂತೆ ಹಲವಾರು ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿವೆ. ಇದರ ಕುರಿತ ನಿಜಾಂಶವೇನು, ತಜ್ಞರು ಏನು ಹೇಳಿದ್ದಾರೆ ಎಂದು ಈ ಲೇಖನದಲ್ಲಿ ನೀಡಲಾಗಿದೆ ನೋಡಿ:

ಯುಎಸ್‌ನಲ್ಲಿ ಕೋವಿಡ್ ಲಸಿಕೆ ಪಡೆದ ಮಹಿಳೆಯರು ಏನು ಹೇಳುತ್ತಿದ್ದಾರೆ?
ಯುಎಸ್‌ನಲ್ಲಿ ಕೋವಿಡ್ ಲಸಿಕೆ ಪಡೆದ ಮಹಿಳೆಯರಲ್ಲಿ ಕೆಲವರು ತಮ್ಮ ಮುಟ್ಟಿನ ಚಕ್ರದಲ್ಲಿ ವ್ಯತ್ಯಾಸವಾಗಿದೆ ಎಂದಿದ್ದಾರೆ. ಕೆಲವರು ಮುಟ್ಟು ಆಗಲು ವಿಳಂಬವಾಯಿತು ಎಂದರೆ ಇನ್ನು ಕೆಲವರು ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವ ಕಂಡು ಬಂದಿರುವುದಾಗಿ ಎಂದಿದ್ದಾರೆ. ಸಂಶೋಧಕರ ಪ್ರಕಾರ ಮನುಷ್ಯರ ಹಾರ್ಮೋನ್‌ಗೂ, ರೋಗ ನಿರೋಧಕ ವ್ಯವಸ್ಥೆಗೂ ಸಂಬಂಧವಿರುತ್ತದೆ. ಅಲ್ಲದೆ ಮಹಿಳೆಯರ ಮುಟ್ಟಿನ ಚಕ್ರದ ಮೇಲೆ ಒತ್ತಡ, ಹಾರ್ಮೋನ್ ಇವೆಲ್ಲಾ ಪ್ರಭಾವ ಬೀರುತ್ತದೆ. ಕೊರೊನಾ ಲಸಿಕೆ ಕೊರೊನಾವೈರಸ್ ವಿರುದ್ಧ ಹೋರಾಡಲು ರೋಗ ನಿರೋಧಕ ವ್ಯವಸ್ಥೆಯನ್ನು ಸಮರ್ಥ ಮಾಡಿಸುವ ಲಸಿಕೆಯಾಗಿದ್ದು ಕೆಲವರಲ್ಲಿ ಲಸಿಕೆ ಪಡೆದ ಬಳಿಕ ಮುಟ್ಟಿನ ಚಕ್ರದಲ್ಲಿ ವ್ಯತ್ಯಾಸ ಕಂಡು ಬಂದರೂ ಒಂದೆರಡು ತಿಂಗಳಿನಲ್ಲಿ ಮೊದಲಿನಂತೆಯೇ ನಿಮ್ಮ ಮುಟ್ಟಿನ ಚಕ್ರ ಇರುತ್ತದೆ ಎಂದು ಹೇಳಿದ್ದಾರೆ.

ಭಾರತೀಯ ತಜ್ಞರು ಏನು ಹೇಳುತ್ತಿದ್ದಾರೆ?
ಕೊರೊನಾ ಲಸಿಕೆ ಪಡೆಯಲು ಹದಿ ವಯಸ್ಸಿನ ಹೆಣ್ಣು ಮಕ್ಕಳು ಯಾವುದೇ ಭಯಪಡುವ ಅಗ್ಯತವಿಲ್ಲ, ಏಕೆಂದರೆ ಈ ಲಸಿಕೆ ಮುಟ್ಟಿನ ಸಮಯದಲ್ಲೂ ತೆಗೆದುಕೊಳ್ಳಬಹುದು, ಮುಟ್ಟಾದಾಗ ತೆಗೆದುಕೊಂಡರೆ ಅದು ಲಸಿಕೆಯ ಸಾಮಾರ್ಥ್ಯವೇನು ಕುಗ್ಗಿಸುವುದಿಲ್ಲ ಎಂದು ಡಾ. ಮುಂಜಾಲ್ ವಿ, ಕಾಪಾಡಿಯಾ ಹೇಳಿದ್ದಾರೆ.

ಅಧ್ಯಯನ ವರದಿ
ಇದರ ಕುರಿತು ನಡೆಸಿದ ಕೆಲವೊಂದು ಅಧ್ಯಯನಗಳು ವರದಿ ವೈರಸ್ ದೇಹದಲ್ಲಿ ಒತ್ತಡ ಹೆಚ್ಚಿಸುವುದರಿಂದ ಅನಿಯಮಿತ ಮುಟ್ಟು ಉಂಟಾಗಬಹುದು. ಆದರೆ ಲಸಿಕೆಯಿಂದ ಮುಟ್ಟಿನ ಚಕ್ರದ ಮೇಲೆ ಹೀಗೆ ಆಗುತ್ತದೆ ಎಂದು ಹೇಳಲು ಯಾವುದೇ ನಿಖರ ಅಧ್ಯಯನ ವರದಿಗಳಿವೆ.
ಲಸಿಕೆ ತೆಗೆದುಕೊಂಡ ಬಳಿಕ ಒಂದು ವೇಳೆ ಮುಟ್ಟಿನ ಚಕ್ರದಲ್ಲಿ ವ್ಯತ್ಯಾಸ ಅಥವಾ ಸ್ವಲ್ಪ ಅಧಿಕ ರಕ್ತಸ್ರಾವ ಕಂಡು ಬಂದರ ಏನೂ ಭಯ ಪಡಬೇಕಾಗಿಲ್ಲ, ಒಂದೆರಡು ತಿಂಗಳಿಗೆ ಸರಿ ಹೋಗುವುದು.

ಲಸಿಕೆ ಪಡೆಯುವುದು ಕೊರೊನಾ ತಡೆಗಟ್ಟುವಲ್ಲಿ ಸಹಕಾರಿ
ಕೊರೊನಾ ಎರಡನೇ ಅಲೆಗೆ ಈಗಾಗಲೇ ತತ್ತರಿಸಿದ್ದೇವೆ. 18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ದೊರೆಯುವುದರಿಂದ ಇದನ್ನು ತಪ್ಪದೆ ಪಡೆಯಿರಿ, ಇವು ಕೊರೊನಾ ಪ್ರಮಾಣವನ್ನು ತಗ್ಗಿಸುವಲ್ಲಿ ಸಹಕಾರಿಯಾಗಿದೆ.
ಇನ್ನು ನಿಮಗೆ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ವೈದ್ಯರ ಸಲಹೆ ಪಡೆದು ನಂತರ ಲಸಿಕೆ ಪಡೆದುಕೊಳ್ಳಿ.



Click it and Unblock the Notifications











