Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೋವಿಡ್ 19: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಬಸೂರ ಚೂರ್ಣ, ಬಳಸುವುದು ಹೇಗೆ?
ರೋಗ ಬಂದು ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರುವುದನ್ನು ತಡೆಯುವುದು ಒಳ್ಳೆಯದು ಎಂದು ಜನರು ಕೋವಿಡ್ 19 ತಡೆಗಟ್ಟಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗಿಡಮೂಲಿಕೆ ಬಳಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.

ಪ್ರಧಾನಿಮಂತ್ರಿ ಕೂಡ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಸಲಹೆ ಪಾಲಿಸುವಂತೆ ಸೂಚಿಸಿದ್ದರು. ಇದೀಗ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆ ಬಾರದಂತೆ ತಡೆಯುವಲ್ಲಿ ಕಬಸೂರ ಕುದಿನೀರ್ ಪರಿಣಾಮಕಾರಿ ಎಂದು ಸಿದ್ಧ ತಜ್ಞರು ಸಲಹೆ ನೀಡಿದ್ದಾರೆ.
ಕಬಸೂರ ಕುದಿನೀರ್ ಅಥವಾ ಚೂರ್ಣ ರೋಗ ನಿರೋಧಕ ಶಕ್ತಿ ಹೊಂದಿದ್ದು ಒಣಕೆಮ್ಮು, ನೆಗಡಿ, ಜ್ವರ ಕಡಿಮೆ ಮಾಡುವುದು, ಆದ್ದರಿಂದ ಇದನ್ನು ಕೋವಿಡ್ 19 ಬಾರದಂತೆ ತಡೆಗಟ್ಟಲು ಬಳಸುವುದು ಒಳ್ಳೆಯದು ಎಂದು ಸಿದ್ಧ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕಬಸೂರ ಚೂರ್ಣಕ್ಕೆ ಬಳಸುವ ಗಿಡಮೂಲಿಕೆಗಳೇನು? ಇದರ ಪ್ರಯೋಜನಗಳು ಹಾಗೂ ಅಡ್ಡ ಪರಿಣಾಮಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ.

ಕುಬಸೂರ ಕುದಿನೀರ್ ಅಥವಾ ಚೂರ್ಣ ತಯಾರಿಸುವುದು ಹೇಗೆ?
- ಬೇಕಾಗುವ ಸಾಮಗ್ರಿ
- ಶುಂಠಿ (ಚುಕ್ಕು/ ಒಣಶುಂಠಿ)
- ಹಿಪ್ಪಲಿ ಅಥವಾ ಪಿಪ್ಪಲಿ
- ಲವಂಗ
- ದಸಪ್ರಾಶ ಬೇರು
- ಆಕಾರಾಕಾರಭ ಬೇರು
- ಕೋಕಿಲಾಕ್ಷಾ ಅಥವಾ ಮುಳ್‌ಬೇರು
- ಹರಿಟಾಕಿ
- ಮಲಬಾರ್ ನಟ್
- ಅಜ್ವೈನ್
- ಕೋಷ್ಟಂ
- ಅಮೃತಬಳ್ಳಿ
- ಭರಂಗಿ
- ಕಲಾಮೇಘಾ
- ರಾಜಪಾಟ
- ಮಸ್ತಾ
- ನೀರು
- ಈ ಗಿಡ ಮೂಲಿಕೆಗಳನ್ನು ಒಣಗಿಸಿ ತರಿತರಿಯಾಗಿ ಪುಡಿ ಮಾಡಬೇಕು.
- ಈ ಗಿಡಮೂಲಿಕೆಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು, ಯಾವುದೇ ತೇವಾಂಶ ಇರಬಾರದು.
- ನಂತರ ಒಣಗಿದ ಚೂರ್ಣಕ್ಕೆ ನೀರು ಹಾಕಿ ಒಲೆಯಲ್ಲಿ ಮಿಶ್ರಣದ ಅರ್ಧದಷ್ಟು ಆಗುವಷ್ಟು ತಿರುಗಿಸುತ್ತಾ ಬೇಯಿಸಬೇಕು.
- ನಂತರ ಆ ನೀರನ್ನು ಮಸ್ಲೀನ್ ಬಟ್ಟೆಯಲ್ಲಿ ಸೋಸಿ ಆ ನೀರನ್ನು ತಯಾರಿಸಿದ 3 ಗಂಟೆಯ ಒಳಗಾಗಿ ಕುಡಿಯಬೇಕು.

ಮಾಡುವುದು ಹೇಗೆ?

ಪ್ರಯೋಜನಗಳು
ಇದರಲ್ಲಿರುವ ಸಾಮಗ್ರಿಗಳ ಪ್ರಯೋಜನಗಳು
ಶುಂಠಿ: ಇದು ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ಅಸ್ತಮಾ ಮುಂತಾದ ಉಸಿರಾಟದ ತೊಂದರೆ ಹೋಗಲಾಡಿಸುತ್ತದೆ.
ಪಿಪ್ಪಲಿ: ಇದು ಕೂಡ ಅಜೀರ್ಣ, ಅಸ್ತಮಾ, ಕೆಮ್ಮು ನಿವಾರಣೆಗೆ ಸಹಕಾರಿ.
ಲವಂಗ: ಇದು ಬ್ಯಾಕ್ಟಿರಿಯಾಗಳನ್ನು ಹಾಳು ಮಾಡುತ್ತದೆ ಹಾಗೂ ಲಿವರ್ ಆರೋಗ್ಯವನ್ನು ವೃದ್ಧಿಸುತ್ತದೆ.
ದಸಪ್ರಾಶ: ಇದು ಹೆಮೋರಾಯ್ಡ್ ಸಮಸ್ಯೆ ಹೋಗಲಾಡಿಸುತ್ತದೆ.
ಆಕಾರಾಕಾರಭ ಬೇರು:ಇದು ಬಾಯಿ ಹುಣ್ಣು, ಗಂಟಲು ಕೆರೆತ, ಕೆಮ್ಮು, ವಾತ ದೋಷ ನಿವಾರಣೆ ಮಾಡುತ್ತದೆ.
ಕೋಕಿಲಾಕ್ಷಾ: ಇದನ್ನು ಕಾಮಲೆ, ಕಿಬ್ಬೊಟ್ಟೆ ನೋವು, ಮೂತ್ರ ಸೋಂಕು ಗುಣಪಡಿಸಲು ಆಯುರ್ವೇದದಲ್ಲಿ ಬಳಸಲಾಗುವುದು.
ಹರಿಟಾಕಿ: ಇದು ಉರಿಯೂತ, ಗಂಟಲು ಕೆರೆತ, ಅಲರ್ಜಿ ಸಮಸ್ಯೆ ಹೋಗಲಾಡಿಸಲು ಸಹಕಾರಿ.
ಮಲಬಾರ್ ನಟ್: ಇದನ್ನು ಅಸ್ತಮಾ ಹಾಗೂ ಉಸಿರಾಟದ ತೊಂದರೆ ಹೋಗಲಾಡಿಸಲು ಬಳಸುತ್ತಾರೆ.
ಅಜ್ವೈನ್: ಇದು ಸಾಮಾನ್ಯ ಶೀತ, ಕೆಮ್ಮು ಕಡಿಮೆ ಮಾಡುತ್ತದೆ.
ಕೋಷ್ಟಂ: ಈ ಗಿಡಮೂಲಿಕೆ ಉಸಿರಾಟದ ಸಮಸ್ಯೆ ನಿವಾರಣೆಗೆ ಸಹಕಾರಿ.
ಅಮೃತಬಳ್ಳಿ: ಇದು ಕೂಡ ಉಸಿರಾಟದ ಸಮಸ್ಯೆ ನಿವಾರಣೆಗೆ ಸಹಕಾರಿ.
ಭರಂಗಿ: ಅಲರ್ಜಿ, ಅಸ್ತಮಾ ಮುಂತಾದ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ.
ಕಾಲಾಮೇಘಾ: ಇದು ರಕ್ತವನ್ನು ಶುದ್ಧೀಕರಿಸುತ್ತದೆ
ರಾಜಪಾಟ: ಉರಿಯೂತ ಕಡಿಮೆ ಮಾಡುತ್ತದೆ.
ಮಸ್ತಾ: ಜ್ವರ ಹಾಗೂ ಉರಿಯೂತ ಕಡಿಮೆ ಮಾಡುವುದು.

ಬಳಸುವುದು ಹೇಗೆ?
ಇದನ್ನು ಸಿದ್ಧ ಔಷಧ ತಜ್ಞರ ಸಲಹೆ ಮೇರೆಗೆ ಬಳಸಬೇಕು. ಈ ಔಷಧವನ್ನು 6-12 ವಾರಗಳ ಕಾಲ ಬಳಸಬೇಕು.
ತೆಗೆದುಕೊಳ್ಳಬೇಕಾದ ಪ್ರಮಾಣ'25-50ml ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಬಹುದು.
5-10ಗ್ರಾಂ ಚೂರ್ಣವನ್ನು 200ml ನೀರಿಗೆ ಹಾಕಿ ಕುದಿಸಿ, ಆ ನೀರು 50mlಯಷ್ಟು ಹೊತ್ತು ಕುದಿಸಿ, ನಂತರ ಸೊಸಿ ಕುಡಿಯಿರಿ.

ಅಡ್ಡಪರಿಣಾಮಗಳಿವೆಯೇ?
ಈ ಚೂರ್ಣ ತೆಗೆದುಕೊಳ್ಳುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಆದರೂ ಇದನ್ನು ತೆಗೆದುಕೊಳ್ಳುವ ಮುನ್ನ ಸಿದ್ಧ ತಜ್ಞರ ಪ್ರಯೋಜನ ಪಡೆಯಿರಿ. ಇದನ್ನು ಹೋಮಿಯೋಪತಿ ಔಷಧ ಜೊತೆ ತೆಗೆದುಕೊಳ್ಳಬಹುದು. ಇದನ್ನು ಮಿಲ್ಟಿವಿಟಮಿನ್ ಹಾಗೂ ಖನಿಜಾಂಶಗಳ ಸಪ್ಲಿಮೆಂಟ್‌ಗಳ ಜೊತೆಯೂ ತೆಗೆದುಕೊಂಡರೂ ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ.



Click it and Unblock the Notifications