Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಳೆಗಾಲದಲ್ಲಿ ಪದೇಪದೇ ಬರುವ ಸೀನನ್ನು ಕಡಿಮೆಮಾಡಲು ಸಹಾಯ ಮಾಡುತ್ತವೆ ಈ ಮನೆಮದ್ದುಗಳು
ಸೀನುವಿಕೆ ಸಾಮಾನ್ಯವಾಗಿದ್ದರೂ, ಕೆಲವರಿಗೆ ಇದು ಅಲರ್ಜಿಯಿಂದ, ಹವಾಮಾನ ಬದಲಾವಣೆಯಿಂದ ಉಂಟಾಗುತ್ತದೆ. ಮಳೆಗಾಲದಲ್ಲಿ ವಾತಾವರಣ ತಂಪಾಗಿರುವುದರಿಂದ ಕೆಮ್ಮು ಮತ್ತು ಶೀತದ ಜೊತೆಗೆ ಸೀನುವಿಕೆಯು ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ.
ಮಳೆಗಾಲದಲ್ಲಿ ಯಾವುದೇ ನಿರ್ದಿಷ್ಟ ಕಾರಣವಿಲ್ಲದಿದ್ದರೂ, ಅನೇಕ ಜನರು ಪದೇ ಪದೇ ಸೀನುತ್ತಾರೆ. ಕೆಲವೊಮ್ಮೆ ಈ ಸೀನುವಿಕೆ ತುಂಬಾ ಹೆಚ್ಚಾಗಿ, ಶೀತಕ್ಕೆ ತಿರುಗುತ್ತದೆ. ನಿಮಗೂ ಅಥವಾ ನಿಮ್ಮ ಕುಟುಂಬದ ಯಾವುದೇ ಸದಸ್ಯರಿಗೂ ಹೀಗೆ ಆಗುತ್ತಿದ್ದರೆ, ಈ ಸೀನುವಿಕೆಯನ್ನು ಕಡಿಮೆ ಮಾಡಲು ನೀವು ಈ ಸಲಹೆಗಳನ್ನು ಅಳವಡಿಸಿಕೊಳ್ಳಬಹುದು.
ಸೀನುವಿಕೆಯನ್ನು ಕಡಿಮೆ ಮಾಡುವ ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:

ಹೆಚ್ಚು ವಿಟಮಿನ್ ಸಿ ಭರಿತ ಆಹಾರ ಸೇವಿಸಿ:
ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ, ನೀವು ಸೀನುವಿಕೆಯಿಂದ ಬಳಲುತ್ತಿದ್ದರೆ ಇದು ಉತ್ತಮವಾದ ಪರಿಹಾರವಾಗಿದೆ. ಇದು ಸಿಟ್ರಸ್ ಹಣ್ಣುಗಳು ಮತ್ತು ಕೆಲವು ತರಕಾರಿಗಳಲ್ಲಿ ಕಂಡುಬರುತ್ತದೆ. ಪೇರಳೆ, ಸಾಸಿವೆ ಸೊಪ್ಪು. ಪಾಲಕ್, ಕಿವಿ, ಕಿತ್ತಳೆ, ನಿಂಬೆಹಣ್ಣುಗಳಲ್ಲಿ ವಿಟಮಿನ್ ಸಿಯ ಹೆಚ್ಚಿನ ಅಂಶವಿದ್ದು, ಸೀನುವಿಕೆ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಜಿಂಕ್ ಅನ್ನು ಸೇವಿಸಿ:
ನಿಮಗೆ ಆದಷ್ಟು ಬೇಗ ಸೀನುವಿಕೆಯಿಂದ ಮುಕ್ತಿ ಪಡೆಯಬೇಕಾದರೆ, ಸತುವಿನ ಸೇವನೆಯನ್ನು ಹೆಚ್ಚಿಸಬೇಕು. ಸತುವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಏಜೆಂಟ್‌ಗಳಾಗಿವೆ. ಸುಲಭವಾಗಿ ಲಭ್ಯವಿರುವ ದ್ವಿದಳ ಧಾನ್ಯಗಳು, ಬೀಜಗಳು ಮತ್ತು ಧಾನ್ಯಗಳು, ಮಾಂಸಾಹಾರಗಳಲ್ಲಿ ಈ ಜಿಂಕ್ ಪ್ರಮಾಣ ಹೆಚ್ಚಾಗಿದ್ದು, ಅಗತ್ಯ ಪೋಷಕಾಂಶವನ್ನು ನೀಡುವುದು.

ಶುಂಠಿ ಮತ್ತು ತುಳಸಿ:
ಸೀನುವಿಕೆಯ ವಿರುದ್ಧ ಹೋರಾಡಲು, ಶುಂಠಿ ಮತ್ತು ತುಳಸಿ ನಿಮಗೆ ಹೆಚ್ಚಿನ ಸಹಾಯವನ್ನು ಮಾಡುತ್ತದೆ. ನಿಮ್ಮ ಟೀಯಲ್ಲಿ ಇವುಗಳನ್ನು ಸೇರಿಸುವುದು ಸೀನುವಿಕೆಯನ್ನು ಕಡಿಮೆ ಮಾಡಲು ಸುಲಭವಾದ ಮತ್ತು ವಿಶ್ವಾಸಾರ್ಹ ಮಾರ್ಗವಾಗಿದೆ. ಹೆಚ್ಚಿನ ಪ್ರಯೋಜನಗಳಿಗಾಗಿ 3-4 ತುಳಸಿ ಎಲೆಗಳನ್ನು ಸ್ವಲ್ಪ ಶುಂಠಿಯೊಂದಿಗೆ ಸೇರಿಸಿ, ಕುದಿಸಿ ಕುಡಿಯಬಹುದು.

ನೆಲ್ಲಿಕಾಯಿ ತಿನ್ನಿರಿ:
ನೆಲ್ಲಿಕಾಯಿಯು ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ಈ ಎಲ್ಲಾ ಅಂಶಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದಿನಕ್ಕೆ 3-4 ನೆಲ್ಲಿಕಾಯಿ ತಿನ್ನುವುದು ಅಥವಾ ದಿನಕ್ಕೆ 2-3 ಬಾರಿ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಕಿರಿಕಿರಿಯುಂಟುಮಾಡುವ ಸೀನು ನಿಲ್ಲುವುದು.

ಕಪ್ಪು ಏಲಕ್ಕಿಯನ್ನು ಅಗಿಯಿರಿ:
ಕಪ್ಪು ಏಲಕ್ಕಿಯು ಮತ್ತೊಂದು ಉತ್ತಮ ಘಟಕಾಂಶವಾಗಿದ್ದು ಅದು ನಿಮ್ಮ ಸೀನನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶೀತ ಅಥವಾ ಸೀನಿನಿಂದ ಬಳಲುತ್ತಿರುವಾಗ ಇದನ್ನು ದಿನಕ್ಕೆ 2-3 ಬಾರಿ ಅಗಿಯಬಹುದು. ಇದರ ಪರಿಮಳ ಮತ್ತು ಎಣ್ಣೆಯ ಅಂಶವು ಕಟ್ಟಿದ ಮೂಗನ್ನು ಸಡಿಲ ಮಾಡಲು ಸಹಾಯ ಮಾಡುತ್ತದೆ.

ಮೂಗಿನ ಸ್ಪ್ರೇ ಪ್ರಯತ್ನಿಸಿ:
ಕ್ಯಾಪ್ಸೈಸಿನ್ ನಾಸಲ್ ಸ್ಪ್ರೇ ಅನ್ನು ಸಹ ಬಳಸಬಹುದು ಏಕೆಂದರೆ ಇದು ಕಟ್ಟಿದ ಮೂಗನ್ನು ಸರಿಪಡಿಸುತ್ತದೆ. ಅಲರ್ಜಿಯಿಂದಲ್ಲದ ಸೀನನ್ನು ಕಡಿಮೆ ಮಾಡಲು ಮೂಗಿನ ಸ್ಪ್ರೇ ಬಳಸುವುದು ಉತ್ತಮ ಆಯ್ಕೆಯಾಗಿದೆ. ಆದಷ್ಟು ಬೇಗ ಇದರಿಂದ ನಿಮಗೆ ನಿರಾಳತೆ ದೊರೆಯುತ್ತದೆ.

ಸೋಂಪು ಬೀಜವನ್ನು ತಿನ್ನಬಹುದು:
ಜೀರ್ಣಕ್ರಿಯೆ ಉತ್ತಮಗೊಳಿಸುವ ಸೋಂಪು ಬೀಜಗಳಲ್ಲಿ ಸೀನುವಿಕೆಯನ್ನು ತಡೆಯುವ ಗುಣವಿದ್ದು, ಇವುಗಳನ್ನು ತಿನ್ನಬಹುದು. ಆದರೆ ಜಾಗರೂಕರಾಗಿರಿ, ಯಾವುದೂ ಅತಿಯಾಗಬಾರದು.

ಶುಂಠಿ ಮತ್ತು ಹುರಿದ ಮೆಂತ್ಯೆ:
ಇದೊಂದು ಉತ್ತಮ ಮನೆಮದ್ದಾಗಿದ್ದು, ನೀವೇನಾದರೂ ಪದೇ ಪದೇ ಸೀನುವಿಕೆಯನ್ನು ಅನುಭವಿಸುತ್ತಿದ್ದರೆ, ಶುಂಠಿಯೊಂದಿಗೆ ಹುರಿದ ಮೆಂತ್ಯೆಯನ್ನು ತಿನ್ನುವುದರಿಂದ ಸೀನುವಿಕೆ ಕಡಿಮೆಯಾಗುತ್ತದೆ. ಸ್ವಲ್ಲ ಶುಂಠಿಯ ಜೊತೆಗೆ, ಸಣ್ಣಗೆ ಹುರಿದ ಮೆಂತ್ಯೆ ತೆಗದು ಒಟ್ಟಿಗೆ ಸೇರಿಸಿ, ತಿನ್ನಿರಿ.

ಹಬೆ ತೆಗೆದುಕೊಳ್ಳುವುದು:
ಈ ವಿಧಾನ ಕೊರೊನಾ ಕಾರಣದಿಂದ ಬಹಳಷ್ಟು ಚಾಲ್ತಿಯಲ್ಲಿರುವುದಂತೂ ಸತ್ಯ. ಇದನ್ನು ನಿಮ್ಮ ಸೀನುವಿಕೆ ಕಡಿಮೆ ಮಾಡಲು ಸಹ ಬಳಸಬಹುದು. ಬಿಸಿ ನೀರಿಗೆ ಪುದೀನ ಎಣ್ಣೆಯನ್ನು ಹಾಕಿ, ಹಬೆ ತೆಗೆದುಕೊಳ್ಳುವುದರಿಂದ ಸೀನುವಿಕೆ ನಿಲ್ಲುತ್ತದೆ. ಇದಲ್ಲದೇ, ನೀರಿಗೆ ವಿಕ್ಸ್ ಸೇರಿಸಿ ಕೂಡ, ಹಬೆಯನ್ನು ತೆಗೆದುಕೊಳ್ಳುವುದರಿಂದ ಕಡಿಮೆಯಾಗುತ್ತದೆ.

ಪ್ರಚೋದಕಗಳನ್ನು ಅರ್ಥಮಾಡಿಕೊಳ್ಳಿ:
ನಿಮಗೆ ಅಲರ್ಜಿ ಉಂಟುಮಾಡುವ ಪ್ರಚೋದಕಗಳನ್ನು ಪತ್ತೆಹಚ್ಚುವುದರಿಂದ ಸೀನುವಿಕೆ ಸಮಸ್ಯೆಯನ್ನು ಬಹಳ ಸುಲಭವಾಗಿ ತಡೆಬಹುದು. ಹೇಗೆಂದರೆ ಅವರು ಅವುಗಳ ಬಳಕೆಯನ್ನು ತಪ್ಪಿಸಬೇಕು. ಮಸಾಲೆಯುಕ್ತ ಆಹಾರ, ಸುಗಂಧ ದ್ರವ್ಯಗಳು, ಧೂಳು, ಕೋಲ್ಡ್, ತಲೆಹೊಟ್ಟು, ಬೇಕಿಂಗ್ ಹಿಟ್ಟು ಇವುಗಳು ಸೀನುವಿಕೆಯನ್ನು ಉಂಟುಮಾಡುವ ಕೆಲವು ಸಾಮಾನ್ಯ ಅಂಶಗಳಾಗಿವೆ. ಆದ್ದರಿಂದ, ಇವುಗಳನ್ನು ತಪ್ಪಿಸಿ.



Click it and Unblock the Notifications