Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಧಾನ್ಯಗಳ ಆಯ್ಕೆ ಹೇಗಿರಬೇಕು?, ಎಂಥಾ ಬೇಳೆ ಆರೋಗ್ಯಕ್ಕೆ ಹಾನಿಕರ?
ಹಣ, ಆಸ್ತಿ, ಐಶ್ವರ್ಯಕ್ಕಿಂತ ಮನುಷ್ಯನಿಗೆ ಜೀವನದಲ್ಲಿ ಬಹಳ ಮುಖ್ಯವಾದುದು ಆರೋಗ್ಯ. ಅದರಲ್ಲೂ ಈ ಜಾಗತಿಕ ಸಾಂಕ್ರಮಿಕ ನಮಗೆ ಆರೋಗ್ಯದ ಬಗ್ಗೆ ಇನ್ನಷ್ಟು ಪಾಠವನ್ನು ಹೇಳಿಕೊಟ್ಟಿದೆ. ನಮ್ಮ ಆರೋಗ್ಯ ಉತ್ತಮವಾಗಿರಲು ನಮ್ಮ ಜೀವನಶೈಲಿಯಲ್ಲಿ ಸಾಕಷ್ಟು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕಿರುವುದು ಅನಿವಾರ್ಯವಾಗಿದೆ.
ಅಂತಹ ಸಣ್ಣ ಬದಲಾವಣೆಗಳಲ್ಲಿ ಧಾನ್ಯಗಳ ಆಯ್ಕೆ ಸಹ ಒಂದು. ಸಾಕಷ್ಟು ಪೌಷ್ಟಿಕಾಂಶ, ಕಾರ್ಬೋಹೈಡ್ರೇಟ್, ಜೀವಸತ್ವ, ಖನಿಜ ವಿಟಮಿನ್‌ಗಳನ್ನು ಹೊಂದಿರುವ ಧಾನ್ಯಗಳನ್ನು ನಾವು ನಿತ್ಯ ಒಂದಿಲ್ಲೊಂದು ವಿಭಿನ್ನ ಖಾದ್ಯಗಳಲ್ಲಿ ಸೇವಿಸುತ್ತಲೇ ಇರುತ್ತೇವೆ. ಆದರೆ ಈ ಧಾನ್ಯಗಳ ಗುಣಮಟ್ಟ ಹೇಗಿರುತ್ತದೆ ಎಂಬುದರ ಬಗ್ಗೆ ನಾವು ಅಷ್ಟೇನೂ ಯೋಚನೆ ಮಾಡುವುದೇ ಇಲ್ಲ. ಇಂದು ನಾವು ಧಾನ್ಯಗಳ ಆಯ್ಕೆಯನ್ನು ಹೇಗೆ ಮಾಡಬೇಕು, ಯಾವುದು ಉತ್ತಮ ಧಾನ್ಯ ಎಂದು ಪತ್ತೆ ಮಾಡುವುದು ಹೇಗೆ ತಿಳಿಸಿಕೊಡಲಿದ್ದೇವೆ.

ದ್ವಿದಳ ಧಾನ್ಯಗಳು ಆರೋಗ್ಯಕ್ಕೆ ಏಕೆ ಅವಶ್ಯಕ
ನಮ್ಮ ದೇಹಕ್ಕೆ ಅಗತ್ಯವಾದ ಪ್ರೋಟೀನ್, ಫೈಬರ್ ಮತ್ತು ಬಹು ಪೋಷಕಾಂಶಗಳ ಪ್ರಮುಖ ಮೂಲವೇ ಉತ್ತಮ ಗುಣಮಟ್ಟದ ಧಾನ್ಯಗಳು. ಸ್ವತಂತ್ರ ರಾಡಿಕಲ್‌ಗಳನ್ನು ನಾಶಮಾಡಲು ಸಹಾಯ ಮಾಡುವ, ಹೃದಯ ಸ್ನೇಹಿ ಧಾನ್ಯಗಳು ಅಧಿಕ-ನಾರಿನಂಶವನ್ನು ಹೊಂದಿದ್ದು, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ ಮತ್ತು ಮಧುಮೇಹಿಗಳಿಗೆ ಅತ್ಯುತ್ತಮ ಆಹಾರವಾಗಿದೆ.

ಧಾನ್ಯಗಳ ಆಯ್ಕೆ ಹೇಗೆ?
ಸಾಧ್ಯವಾದಷ್ಟು ವಿಶ್ವಾಸಾರ್ಹ ಬ್ರ್ಯಾಂಡ್‌ನಿಂದ ತಯಾರಾಗುವ ದ್ವಿದಳ ಧಾನ್ಯಗಳನ್ನು ಆಯ್ಕೆ ಮಾಡಿ. ಇದರಲ್ಲಿ ಮೋಸ ಆಗುವುದಿಲ್ಲ, ಟೆಂಪರ್ ಪ್ರೂಫ್ ಪ್ಯಾಕಿಂಗ್ ಹೆಚ್ಚು ಸುರಕ್ಷಿತ. ಇದರಿಂದ ನೀವು ಹೊರಗಿಡಲಾದ ಧಾನ್ಯಗಳಲ್ಲಿ ಆಗುವ ಧೂಳು, ಇತರರು ಪದೇ ಪದೇ ಕೈಯಾಡಿಸುವುದು ತಪ್ಪುತ್ತದೆ. ಸಾಕಷ್ಟು ಹಂತದಲ್ಲಿ ಪ್ಯಾಕೇಜ್ ಆಗಿರುವ ಧಾನ್ಯಗಳ ಆಯ್ಕೆ ಅತ್ಯುತ್ತಮ ನಿರ್ಧಾರ.

ಪಾಲಿಶ್ಡ್ ಬೇಳೆಗಳು ಬೇಡ
ನಯಗೊಳಿಸಿದ ಅಥವಾ ಪಾಲಿಶ್ಡ್ ಬೇಳೆಗಳ ಆಯ್ಕೆಯ ಬದಲು ಸಾಧ್ಯವಾದಷ್ಟು ಅನಪಾಲಿಶ್ಡ್ ಬೇಳೆಗಳನ್ನು ಖರೀದಿಸಿ. ಪಾಲಿಶ್ ಬೇಳೆಗಳು ನೋಡಲು ಆಕರ್ಷಕವಾಗಿ ಚೆನ್ನಾಗಿ ಕಾಣುತ್ತದೆ, ಆದರೆ ಇದರಲ್ಲಿ ಪಾಲಿಶ್ ಆಗದ ಧಾನ್ಯಗಳಗಿಂತ ಕಡಿಮೆ ಪ್‌ರೀಟಿನ್ ಇರುತ್ತದೆ, ಇದು ಆರೋಗ್ಯಕ್ಕೆ ಅಷ್ಟೇನೂ ಉತ್ತಮವಲ್ಲ. ಇದರ ಬದಲಾಗಿ ಪಾಲಿಶ್ ಮಾಡದ ಧಾನ್ಯಗಳು ಆಹಾರದಲ್ಲಿ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ.

ಪಾಲಿಶ್ ಬೇಳೆ ಏಕೆ ಬೇಡ?
ಬೇಳೆಗಳಿಗೆ ಹೊಳಪನ್ನು ನೀಡಲು ಅಥವಾ ಪಾಲಿಶ್ ಮಾಡಲು ನೀರು, ಎಣ್ಣೆ, ಸೋಪ್ ಸ್ಟೋನ್ ಪುಡಿ ಮತ್ತು ಚರ್ಮದ ಸಂಸ್ಕರಣೆಯನ್ನು ಒಳಗೊಂಡ ಬಹು-ಹಂತದ ಕಾರ್ಯವಿಧಾನವನ್ನು ಒಳಗೊಂಡಿದೆ. ಈ ಪ್ರಕ್ರಿಯೆ ವೇಳೆ ಬೇಳೆಗಳ ಹೊರಪದರದಲ್ಲಿ ಇರುವ ಫೈಬರ್ ಮತ್ತು ಪೋಷಕಾಂಶಗಳಿಂದ ಕೂಡಿದ ಅಂಶವನ್ನು ಕಳೆದುಕೊಳ್ಳುತ್ತವೆ. ಪೌಷ್ಠಿಕಾಂಶ ಮತ್ತು ರುಚಿಯಲ್ಲಿ ಪಾಲಿಶ್ ಮಾಡದ ಬೇಳೆಗಳಿಗಿಂತ ಕಡಿಮೆಯೇ ಇರುತ್ತದೆ. ಅಲ್ಲದೇ ಪಾಲಿಶ್ ಬೇಳೆಗಳು ಬೇಯಲು ಸಹ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ಪಾಲಿಶ್ ಮಾಡದವುಗಳು ನಿಮ್ಮ ಸಮಯವನ್ನು ಮತ್ತು ಇಂಧನವನ್ನು ಉಳಿಸಬಹುದು.

ಫೈಬರ್ ಅಂಶ ಇಲ್ಲದ ಬೇಳೆ
ಬೇಳೆಗಳಲ್ಲಿ ಫೈಬರ್ ಅಂಶವು ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ ಮತ್ತು ಪೌಷ್ಠಿಕಾಂಶಯುಕ್ತ ಸಮೃದ್ಧ ಆಹಾರವಾಗಿದೆ. ಅಲ್ಲದೇ ಪಾಲಿಶ್ ಮಾಡದ ಬೇಳೆಯಲ್ಲಿ ಕೆಲವು ಪ್ರಮುಖ ಖನಿಜಗಳು ಕಬ್ಬಿಣ, ಪೊಟ್ಯಾಶಿಯಮ್, ಮೆಗ್ನೀಶಿಯಮ್ ಮತ್ತು ಸತು, ಜೊತೆಗೆ ಬಿ ವಿಟಮಿನ್‌ಗಳಾದ ಫೋಲೇಟ್, ಥಯಾಮಿನ್ ಮತ್ತು ನಿಯಾಸಿನ್ ಗಳಲ್ಲಿ ಹೇರಳವಾಗಿದೆ. ಪಾಲಿಶ್ ಮಾಡಿದ ಬೇಳೆಗಳಲ್ಲಿ ಈ ಎಲ್ಲಾ ಅಂಶಗಳು ಇರುವುದಿಲ್ಲ.

ಆರೋಗ್ಯಕ್ಕೆ ಅಪಾಯಕಾರಿ
ಇಷ್ಟೇ ಅಲ್ಲ, ಪಾಲಿಶ್ ಮಾಡಿದ ಬೇಳೆಗಳು ನಮ್ಮ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ. ಸೋಪ್ ಸ್ಟೋನ್ ಪುಡಿಗಳು ಕರುಳಿಗೆ ಅತ್ಯಂತ ಹಾನಿಕಾರಕ. ಪಾಲಿಶ್ ಧಾನ್ಯಗಳಿಗೆ ಬಳಸುವ ಎಣ್ಣೆಗಳು ಅನಗತ್ಯ ಹೆಚ್ಚುವರಿ ಕೊಬ್ಬನ್ನು ಸೇರಿಸುತ್ತದೆ. ಹೊಳಪು ನೀಡುವ ಪ್ರಕ್ರಿಯೆಯಲ್ಲಿ ಬಳಸುವ ನೀರು ಅಸುರಕ್ಷಿತವಾಗಬಹುದು ಮತ್ತು ಯಾವುದೇ ರೀತಿಯ ಕಲ್ಮಶಗಳನ್ನು ಹೊಂದಿರುತ್ತದೆ.
ಪಾಲಿಶ್ ಮಾಡಿದ ಆಕರ್ಷಕವಾಗಿ ಕಾಣುವ ಬೇಳೆಗಳು ನಿಮ್ಮ ಆರೋಗ್ಯಕ್ಕೆ ಉತ್ತಮ ಆಯ್ಕೆಯಲ್ಲ. ಆದ್ದರಿಂದ ಆಯ್ಕೆ ಮಾಡುವಾಗ ಯಾವಾಗಲೂ ವಿವೇಕದಿಂದಿರಿ. ವಿಶ್ವಾಸಾರ್ಹ ಬ್ರ್ಯಾಂಡ್ನ ಪಾಲಿಶ್ ಮಾಡದ ಬೇಳೆಗಳನ್ನು ಆರಿಸಿಕೊಳ್ಳಿ.



Click it and Unblock the Notifications











