Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
World Sleep Day 2023 : ನಿದ್ದೆ ಕಡಿಮೆಯಾದರೆ ಈ ಸಮಸ್ಯೆ ಕಾಡುತ್ತೆ ಹುಷಾರ್!
ನೀವು ನಿದ್ದೆ ಕಡಿಮೆ ಮಾಡುತ್ತಿದ್ದೀರಾ? ಹಾಗಾದರೆ ಈಗಾಗಲೇ ಶರೀರಿದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಾಣಲಾರಭಿಸಿರುತ್ತದೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ನಿದ್ದೆ ಕಡಿಮೆಯಾಗಿರುವುದು ಪ್ರಮುಖ ಕಾರಣವಾಗಿದೆ.

ನಾವು ಆರೋಗ್ಯವಾಗಿರಬೇಕೆಂದರೆ 8 ಗಂಟೆ ನಿದ್ದೆ ಅತ್ಯಾವಶ್ಯಕ. ಮಕ್ಕಳು ಹಾಗೂ ಹದಿಹರೆಯದ ಮಕ್ಕಳಲ್ಲಿ ಅವರ ಬೆಳವಣಿಗೆಗೆ ಸರಿಯಾದ ಪ್ರಮಾಣದ ನಿದ್ದೆ ತುಂಬಾನೇ ಅವಶ್ಯಕವಾಗಿದೆ. ನಮ್ಮ ದೇಹ ಹಾಗೂ ಮೆದುಳಿನ ಆರೋಗ್ಯಕ್ಕೆ ನಿದ್ದೆ ತುಂಬಾನೇ ಅವಶ್ಯಕವಾಗಿದೆ.
ಮಕ್ಕಳ ಬೆಳವಣಿಗೆಗೆ ನಿದ್ದೆ ತುಂಬಾ ಅವಶ್ಯಕವಾಗಿದೆ. ನಿದ್ದೆ ಸರಿಯಾಗಿರದಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡುವುದು. ನಿದ್ದೆ ಕಡಿಮೆಯಾದರೆ ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗುವುದು, ಉಸಿರಾಟದ ತೊಂದರೆ ಉಂಟಾಗುವುದು, ರೋಗ ನಿರೋಧಕ ಶಕ್ತಿಯಲ್ಲಿ ವ್ಯತ್ಯಾಸ ಉಂಟಾಗುವುದು.
ನಿದ್ದೆ ಕಡಿಮೆಯಾದರೆ ಹೃದಯ ಸಂಬಂಧಿ ಉಂಟಾಗುವುದು
ರಕ್ತದೊತ್ತಡ ಹಾಗೂ ಹೃದಯ ಬಡಿತದಲ್ಲಿ ವ್ಯತ್ಯಾಸ ಉಂಟಾಗುವುದು. ಎಚ್ಚರವಾಗಿದ್ದರೆ ಹೃದಯ ಬಡಿತ, ರಕ್ತದೊತ್ತಡ ಅಧಿಕವಾಗುವುದು. ಇದರಿಂದ ಹೃದಯಾಘಾತದ ಅಪಾಯ ಉಂಟಾಗುವುದು.
ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುವುದು
ಸರಿಯಾಗಿ ನಿದ್ದೆ ಮಾಡದಿದ್ದರೆ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುವುದು. ಟೆಸ್ಟೋಸ್ಟಿರೋನೆ, ಈಸ್ಟ್ರೋಜನ್ ಮತ್ತು ಪ್ರೊಗೆಸ್ಟಿರೋನೆ ಇವುಗಳಲ್ಲಿ ವ್ಯತ್ಯಾಸ ಉಂಟಾಗುವುದು. ಇದರಿಂದ ಆರೋಗ್ಯಕ್ಕೆ ತೊಂದರೆ ಉಂಟಾಗುವುದು.
ನಿದ್ದೆ ಕಡಿಮೆಯಾದರೆ ಮೈ ತೂಕ ಹೆಚ್ಚಾಗುವುದು
ಯಾರು ನಿದ್ದೆ ಕಡಿಮೆ ಮಾಡುತ್ತಾರೋ ಅವರ ಮೈ ತೂಕ ಹೆಚ್ಚಾಗಲಿದೆ. ಏಕೆಂದರೆ
ಎಚ್ಚರವಾಗಿರುವುದರಿಂದ ಹಸಿವಾಗುವುದು, ಇದರಿಂದ ತಿನ್ನುವುದು ಹೆಚ್ಚಾಗುವುದು, ಹೀಗಾಗಿ ಮೈ ತೂಕ ಹೆಚ್ಚಾಗುವುದು.
* ದೇಹದಲ್ಲಿ ಹಸಿವನ್ನು ನಿಯಂತ್ರಿಸುವ ಲೆಪ್ಟಿನ್, ಗೆರ್ಲಿನ್ ಹಾರ್ಮೋನ್‌ಗಳು ಅಧಿಕವಾಗುವುದು
* ದೈಹಿಕ ಚಟುವಟಿಕೆ ಕಡಿಮೆಯಾಗುವುದು
* ಚಯಪಚಯ ಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಿ ಆರೋಗ್ಯದಲ್ಲಿ ತೊಂದರೆ ಉಂಟಾಗುವುದು.
ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು
ನಿದ್ದೆ ಸರಿಯಾಗಿ ಮಾಡದಿದ್ದರೆ ಸುಸ್ತು ಹೆಚ್ಚಾಗುವುದು, ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬೇಗನೆ ಕಾಯಿಲೆ ಬೀಳುವಿರಿ.
ಮರೆವು ಉಂಟಾಗುವುದು
ಯಾರಿಗೆ ನಿದ್ದೆ ಕಡಿಮೆಯಾಗುವುದೋ ಅವರಿಗೆ ಮರೆವಿನ ಸಮಸ್ಯೆ ಉಂಟಾಗುವುದು. ಆದ್ದರಿಂದ 8 ಗಂಟೆ ನಿದ್ದೆ ಅವಶ್ಯಕವಾಗಿದೆ.
ಯಾರಿಗೆ ಎಷ್ಟು ನಿದ್ದೆ ಅವಶ್ಯಕ?
* ಹದಿಹರೆಯದ ಮಕ್ಕಳಿಗೆ 8-10 ಗಂಟೆ ನಿದ್ದೆ ಅವಶ್ಯಕ
* ಶಾಲೆಗೆ ಹೋಗುವ ಮಕ್ಕಳಿಗೆ 9-12 ಗಂಟೆ ನಿದ್ದೆ ಅವಶ್ಯಕ.
* ಪ್ರೀಸ್ಕೂಲ್‌ಗೆ ಹೋಗುವ ಮಕ್ಕಳು 10-13 ಗಂಟೆ ನಿದ್ದೆ ಅವಶ್ಯಕ
* 6-12 ವರ್ಷದ ಮಕ್ಕಳಿಗೆ 11ರಿಂದ 14 ಗಂಟೆ ನಿದ್ದೆ ಅವಶ್ಯಕ
* ಚಿಕ್ಕ ಮಕ್ಕಳಿಗೆ 12-16 ಗಂಟೆ ನಿದ್ದೆ ಅವಶ್ಯಲ
* ನವಜಾತ ಶಿಶುಗಳಿಗೆ 14ರಿಂದ 17 ಗಂಟೆ ನಿದ್ದೆ ಅವಶ್ಯಕ.
ಸಾಕಷ್ಟು ನಿದ್ದೆ ಮಾಡುವುದು ಅವಶ್ಯಕ ಏಕೆ?
* ಆಗಾಗ ಕಾಯಿಲೆ ಬೀಳುವುದು ಕಡಿಮೆಯಾಗುವುದು
* ಆರೋಗ್ಯಕರ ಮೈ ತೂಕ ಹೊಂದಬಹುದು
* ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ ಕಡಿಮೆಯಾಗುವುದು
* ಮಾನಸಿಕ ಒತ್ತಡ ಕಡಿಮೆಯಾಗಿ ಮಾನಸಿಕ ಆರೋಗ್ಯ ಹೆಚ್ಚಾಗುವುದು
* ನೆನೆಪಿನ ಶಕ್ತಿ ಚೆನ್ನಾಗಿರಲಿದೆ.
* ನಿರ್ಧಾರಗಳನ್ನು ಗೊಂದಲವಿಲ್ಲದೆ ತೆಗೆದುಕೊಳ್ಳಲು ಸಹಾಯ ಮಾಡುವುದು.
ಯಾವಾಗ ನಿದ್ದೆ ಮಾಡುವುದು ಒಳ್ಳೆಯದು?
ಸರಿಯಾಗಿ ನಿದ್ದೆ ಬರಬೇಕೆಂದರೆ ರಾತ್ರಿ ಸಮಯದಲ್ಲಿ ಮಲಗಬೇಕು, ಕೆಲವರು ನೈಟ್ ಶಿಫ್ಟ್ ವರ್ಕ್ ಮಾಡುತ್ತಾರೆ ಅಂಥವರು ಬೆಳಗ್ಗೆ ಹೊತ್ತಿನಲ್ಲಿ ನಿದ್ದೆ ಮಾಡುತ್ತಾರೆ, ಆದರೆ ಹಗಲು 8-10 ಗಂಟೆ ನಿದ್ದೆ ಮಾಡಿದರೂ ಸುಖ ನಿದ್ದೆ ಅನಿಸಲ್ಲ, ಆಗಾಗ ಎಚ್ಚರಿಕೆಯಾಗುವುದು. ಆದ್ದರಿಂದ ನೈಟ್ ಶಿಫ್ಟ್ಸ್ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುವುದು.
ಯಾರಲ್ಲಿ ನಿದ್ದೆ ಕಡಿಮೆಯಾಗುವುದು?
* ಮಾನಸಿಕ ಒತ್ತಡ ಅಧಿಕವಿದ್ದಾಗ
* ನೋವು
* ಕೆಲವೊಂದು ಆರೋಗ್ಯ ಸಮಸ್ಯೆ
* ಕೆಫೇನ್ ಸೇವನೆ (2 ಲೋಟಕ್ಕಿಂತ ಅಧಿಕ ಕಾಫಿ ಕುಡಿಯುವ ಅಭ್ಯಾಸ)
* ನಿದ್ರಾಹೀನತೆ ಸಮಸ್ಯೆ
ನಿದ್ರಾಹೀನತೆ ತಡೆಗಟ್ಟುವುದು ಹೇಗೆ?
* ರಾತ್ರಿಯಲ್ಲಿ ನಿದ್ದೆ ಸರಿಯಾಗಿ ಬರುತ್ತಿಲ್ಲ ಎಂದಾದರೆ ವೈದ್ಯರ ಸಲಹೆ ಸೂಚನೆ ಪಡೆಯುವುದು ಒಳ್ಳೆಯದು.
* ಮಾನಸಿಕ ಒತ್ತಡ ಕಡಿಮೆಮಾಡಿಕೊಳ್ಳಿ
* ಧ್ಯಾನ, ಯೋಗ ನಿದ್ದೆಗೆ ಸಹಕಾರಿ
* ನಿದ್ದೆ ಮಾಡಲು ಮಾತ್ರೆ ಸೇವಿಸುವ ಬದಲಿಗೆ ನೀವು ಈ ಮೇಲಿನ ನೈಸರ್ಗಿಕ ವಿಧಾನಗಳನ್ನು ಅನುಸರಿಸಿದರೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

