Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ನೀವು ಸಕ್ಕರೆ ಪ್ರಿಯರೇ? ನಿಮ್ಮ ದೇಹದ ತೂಕ ಹೆಚ್ಚುತ್ತಿದೆಯೇ? ನಿರ್ಲಕ್ಷ್ಯ ಬೇಡ
ಸಕ್ಕರೆ ಎಂದರೆ ಎಲ್ಲರಿಗೂ ಬಹಳ ಅಕ್ಕರೆ!!!! ಸಕ್ಕರೆ ಬಳಸದ ಮನೆಯೇ ಇಲ್ಲ. ಟೀ, ಕಾಫಿ ಮತ್ತು ಸಿಹಿತಿನಿಸುಗಳಷ್ಟೇ ಅಲ್ಲದೆ ದಿನನಿತ್ಯದಲ್ಲಿ ಬಳಸುವ ಇನ್ನೂ ಅನೇಕ ತಿನಿಸುಗಳಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಿ, ದೇಹಕ್ಕೆ ಅನಾವಶ್ಯಕವಾಗಿ ಸೇರುತ್ತಿದೆ. ಹೀಗಿರುವಾಗ, ಸಕ್ಕರೆಯ ಸೇವನೆಯನ್ನು ಮಿತವಾಗಿ ಬಳಸುವುದೇ ಉತ್ತಮ. ಇಲ್ಲದಿದ್ದರೆ ಈ ಅಧಿಕ ಮಾತ್ರದ ಸಕ್ಕರೆ ನಿಮ್ಮ ತೂಕವನ್ನು ತೀವ್ರಗತಿಯಲ್ಲಿ ಮೇಲೇರಿಸಿ ಬಿಡುವುದು ಖಂಡಿತ. ಅದು ಹೇಗೆ? ಏನು? ಎಂದು ತಿಳಿದುಕೊಳ್ಳೋಣ.

ಇನ್ಸುಲಿನ್ ಮಟ್ಟವನ್ನು ಏರಿಸುತ್ತದೆ
ಫ್ರುಕ್ಟೋಸ್ (ಹಣ್ಣಿನಲ್ಲಿ ದೊರಕುವ ಸಕ್ಕರೆಯ ಅಂಶ) ಇನ್ಸುಲಿನ್ ಪ್ರತಿರೋಧವನ್ನು ಉಂಟುಮಾಡುತ್ತದೆ. ಅಧಿಕ ಪ್ರಮಾಣದ ಸಕ್ಕರೆ ಸೇವನೆ ನಿಮ್ಮ ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ಏರಿಸುತ್ತದೆ. ಇದು ನಿಮ್ಮ ಆಹಾರಗಳಿಂದ ಶಕ್ತಿಯನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ ಕೊಬ್ಬಿನ ಕೋಶಗಳನ್ನಾಗಿ ಮಾರ್ಪಡಿಸುತ್ತದೆ. ಇದರ ಪರಿಣಾಮವಾಗಿ ದೇಹದಲ್ಲಿನ ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತದೆ. ನಿಮ್ಮ ದೇಹವು ನಿಮ್ಮ ಮೆದುಳಿಗೆ ಹಸಿವಿನ ಸಂಕೇತವನ್ನು ಪದೇಪದೇ ಕಳುಹಿಸುತ್ತಿರುತ್ತದೆ.

ದೇಹದ ತೂಕ ಹೆಚ್ಚುತ್ತದೆ
ಫ್ರುಕ್ಟೋಸ್ ಲೆಪ್ಟಿನ್ ಎಂಬ ಪ್ರತಿರೋಧಕ ಹಾರ್ಮೋನುಗಳ ಪ್ರಭಾವದಿಂದ ನಮ್ಮ ದೇಹದ ತೂಕವೂ ಹೆಚ್ಚುತ್ತದೆ. ಕೊಬ್ಬಿನ ಕೋಶಗಳಿಂದ ಲೆಪ್ಟಿನ್ ಗಳು ಉತ್ಪತ್ತಿಯಾಗುತ್ತದೆ. ಕೊಬ್ಬಿನ ಕೋಶ ಹೆಚ್ಚಿದಂತೆ ಲೆಪ್ಟಿನ್ ಉತ್ಪತ್ತಿ ಕೂಡ ವೃದ್ಧಿಯಾಗುತ್ತದೆ. ಇದರಿಂದಾಗಿ ದೇಹದಲ್ಲಿ ಹೆಚ್ಚಿನ ಕೊಬ್ಬು ಸಂಗ್ರಹವಾಗುತ್ತಾ ಹೋಗುತ್ತದೆ. ಸಹಜವಾಗಿ ದೇಹದ ತೂಕವೂ ಹೆಚ್ಚುತ್ತಾ ಹೋಗುತ್ತದೆ.

ಗ್ಲುಕೋಸ್ ನಂತೆ ವರ್ತಿಸುವುದಿಲ್ಲ
ಫ್ರುಕ್ಟೋಸ್ ಗ್ಲುಕೋಸ್ ನಂತೆ ವರ್ತಿಸುವುದಿಲ್ಲ. ಗ್ಲುಕೋಸ್ ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ಆದರೆ ಫ್ರುಕ್ಟೋಸ್ ನ ಸೇವನೆಯಿಂದ ಹೀಗಾಗುವುದಿಲ್ಲ. ಫ್ರುಕ್ಟೋಸ್ ನಿಮಗೆ ಇನ್ನೂ ಹೆಚ್ಚಿನ ಹಸಿವನ್ನುಂಟು ಮಾಡುತ್ತದೆ. ಪದೇ ಪದೇ ತಿನ್ನುವಂತಾಗಿ, ನೀವು ಹೆಚ್ಚಿನ ಕ್ಯಾಲೋರಿ ಮತ್ತು ಕೊಬ್ಬನ್ನು ದೇಹಕ್ಕೆ ಸೇರಿಸಿಕೊಳ್ಳುವಂತಾಗುತ್ತದೆ.

ಹಸಿವನ್ನು ಹೆಚ್ಚಿಸುತ್ತದೆ
ಫ್ರುಕ್ಟೋಸ್ ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ. ನಿಮ್ಮ ಹಸಿವಿನ ಹಾರ್ಮೋನ್ ಗಳನ್ನು ನಿಯಂತ್ರಿಸಲು ಫ್ರುಕ್ಟೋಸ್ ಸಹಾಯ ಮಾಡುವುದಿರಲಿ, ನೀವು ಆಹಾರ ಸೇವಿಸಿದ ನಂತರವೂ ಇನ್ನೂ ಹೆಚ್ಚಿನ ಹಸಿವನ್ನು ಉಂಟು ಮಾಡುತ್ತಲೇ ಇರುತ್ತದೆ. ಹೀಗಾಗಿ ನೀವು ಇನ್ನೂ ಹೆಚ್ಚಿನ ಕ್ಯಾಲೋರಿಗಳನ್ನು ಸೇವಿಸುತ್ತಲೇ ಇರುತ್ತೀರಿ. ಇದರ ಪರಿಣಾಮವಾಗಿ ಹೆಚ್ಚಿನ ಕೊಬ್ಬು ನಿಮ್ಮ ದೇಹಕ್ಕೆ ಸೇರ್ಪಡೆಯಾಗುತ್ತದೆ. ಈ ಪ್ರಕ್ರಿಯೆಯ ಪರಿಣಾಮವಾಗಿ ನಿಮ್ಮ ದೇಹದ ತೂಕ ಕೂಡ ಹೆಚ್ಚಾಗುತ್ತಾ ಹೋಗುತ್ತದೆ.
ಆದುದರಿಂದ, ಸಕ್ಕರೆಯ ಅಕ್ಕರೆ ಬಿಟ್ಟು, ಹಿತ-ಮಿತ ಆಹಾರ ಹಾಗೂ ವ್ಯಾಯಾಮದಿಂದ "ಸೂಕ್ತವಾದ ದೇಹದ ತೂಕ ಪಡೆದುಕೊಳ್ಳಿ, ಆರೋಗ್ಯ ಭಾಗ್ಯ ನಿಮ್ಮದಾಗಿಸಿಕೊಳ್ಳಿ"



Click it and Unblock the Notifications
