Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
Health tips: ತಜ್ಞರ ಪ್ರಕಾರ ತಿಂದ ನಂತರ ಎಷ್ಟು ಹೊತ್ತು ವಾಕ್ ಮಾಡಬೇಕು?
ಊಟದ ನಂತರ ವಾಕ್ ಮಾಡುವ ಅಭ್ಯಾಸ ಹಲವರಲ್ಲಿದೆ ಹಾಗೆಯೇ ವಾಕ್ ಮಾಡದೆ ಊಟದ ನಂತರ ಮಲಗುವ ಅಭ್ಯಾಸ ಕೂಡ ಕೆಲವರಲ್ಲಿದೆ. ಆದರೆ ನಿಮಗೆ ಗೊತ್ತೆ ತಜ್ಞರ ಪ್ರಕಾರ ಊಟದ ನಂತರ ಅತಿಯಾಗಿ ಸಹ ವಾಕ್ ಮಾಡಬಾರದು ಅಲ್ಲದೆ, ವಾಕ್ ಮಾಡದೇ ಸೀದಾ ಮಲಗಲುಬಾರದು.

ಊಟ ಮಾಡಿದ ನಂತರ ಮಲಗುವ ಅಭ್ಯಾಸದಿಂದ ಕ್ರಮೇಣ ಅನಾರೋಗ್ಯಕ್ಕೆ ಒಳಗಾಗಬಹುದು, ಇದು ತೂಕ ಹೆಚ್ಚಾಗಲು ಕಾರಣವಾಗಬಹುದು ಮತ್ತು ನೀವು ಹೃದಯ ಕಾಯಿಲೆಗಳಿಂದ ಬಳಲುತ್ತಬಹುದು. ಆದ್ದರಿಂದ ದೇಹಕ್ಕೆ ಉತ್ತಮವಾದ ಆಹಾರವನ್ನು ಸೇವಿಸುವುದು ಎಷ್ಟು ಅವಶ್ಯಕವೋ, ಅದನ್ನು ಜೀರ್ಣಿಸಿಕೊಳ್ಳುವುದು ಅಷ್ಟೇ ಮುಖ್ಯ. ಇದರಿಂದ ಪೋಷಕಾಂಶಗಳು ಎಲ್ಲಾ ಅಂಗಗಳಿಗೆ ತಲುಪುತ್ತವೆ.
ತಜ್ಞರ ಪ್ರಕಾರ ನಿತ್ಯ ಎಷ್ಟು ವಾಕ್ ಮಾಡಬೇಕು, ವಾಕ್ ಮಾಡುವುದರ ಪ್ರಯೋಜನಗಳೇನು ಮುಂದೆ ನೋಡೋಣ:

ತಜ್ಞರ ಪ್ರಕಾರ ಎಷ್ಟು ನಡೆಯಬೇಕು?
ಊಟದ ನಂತರ ನಿತ್ಯ ವಾಕ್ ಮಾಡುವುದು ಕಡ್ಡಾಯ. ಇದರಿಂದ ಸಾಕಷ್ಟು ಆರೋಗ್ಯ ಪ್ರಯೋಜನ ಸಹ ಇದೆ. ತಜ್ಞರ ಪ್ರಕಾರ ಪ್ರತಿ ದಿನ ಊಟದ ನಂತರ ನೀವು 1500-2000 ಹೆಜ್ಜೆಗಳನ್ನು ಕಡ್ಡಾಯವಾಗಿ ನಡೆಯಬೇಕು. ಏಕೆಂದರೆ ಇದು ತೂಕವನ್ನೂ ನಿಯಂತ್ರಿಸುತ್ತದೆ.

ತಿಂದ ನಂತರ ವಾಕ್ ಮಾಡುವ ಪ್ರಯೋಜನಗಳು
ಚಯಾಪಚಯವನ್ನು ವೇಗಗೊಳಿಸುತ್ತದೆ
ತಿಂದ ನಂತರ ನಡೆಯುವುದರಿಂದ ಮಲಬದ್ಧತೆಗೆ ಕಾರಣವಾಗುವುದಿಲ್ಲ. ಜೀರ್ಣಕ್ರಿಯೆಯು ಚೆನ್ನಾಗಿ ನಡೆಯುತ್ತದೆ, ಪೋಷಕಾಂಶಗಳು ಮತ್ತು ಆಮ್ಲಜನಕವು ದೇಹದ ಎಲ್ಲಾ ಭಾಗಗಳನ್ನು ಚೆನ್ನಾಗಿ ತಲುಪುತ್ತದೆ.

ಉತ್ತಮ ನಿದ್ರೆಗೆ ಪ್ರಯೋಜನಕಾರಿ
ರಾತ್ರಿ ಊಟದ ನಂತರ ವಾಕ್ ಮಾಡುವುದು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ನೀವು ಒತ್ತಡವನ್ನು ಸಹ ಅನುಭವಿಸುವುದಿಲ್ಲ.

ತೂಕವನ್ನು ಕಡಿಮೆ ಮಾಡಲು ಪರಿಣಾಮಕಾರಿ
ನೀವು ತಿಂದ ನಂತರವೂ ವಾಕ್ ಮಾಡುವುದರಿಂದ ತೂಕವನ್ನು ಕಳೆದುಕೊಳ್ಳಲು ತುಂಬಾ ಸಹಾಯಕಾರಿ. ಏಕೆಂದರೆ ವಾಕ್ ಮಾಡುವುದು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ವಾಕಿಂಗ್ ನಿಮ್ಮ ದೇಹದಲ್ಲಿ ಇರುವ ಕ್ಯಾಲೊರಿಗಳನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ ಮತ್ತು ಚಯಾಪಚಯವನ್ನು ವೇಗಗೊಳಿಸುತ್ತದೆ.

ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ
ದೇಹದ ಭಾಗಗಳು ಮತ್ತು ಸ್ನಾಯುಗಳು ಸರಿಯಾಗಿ ಕಾರ್ಯನಿರ್ವಹಿಸಲು ವಾಕ್ ಮಾಡುವುದು ಅಗತ್ಯವಿದೆ. ವಾಸ್ತವವಾಗಿ, ತಿಂದ ನಂತರ 20 ನಿಮಿಷಗಳ ಕಾಲ ನಡೆಯುವುದರಿಂದ ದೇಹದಾದ್ಯಂತ ರಕ್ತ ಪರಿಚಲನೆ ಸುಧಾರಿಸುತ್ತದೆ.



Click it and Unblock the Notifications
