Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಏನಿದು ಕಪ್ಪು ಬೆಳ್ಳುಳ್ಳಿ, ಏನಿದರ ಪ್ರಯೋಜನ?
ಬಿಳಿ ಬೆಳ್ಳುಳ್ಳಿಯ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ, ನಾವು ಇದನ್ನು ಪ್ರತಿದಿನ ಅಡುಗೆಯಲ್ಲಿಯೂ ಬಳಸುತ್ತೇವೆ. ಆದರೆ ಹೆಚ್ಚಿನ ಜನರು ಕಪ್ಪು ಬೆಳ್ಳುಳ್ಳಿಯನ್ನು ಬಳಸುವುದಿಲ್ಲ ಅಥವಾ ಅದರ ಪ್ರಯೋಜನಗಳ ಬಗ್ಗೆ ಅವರಿಗೆ ಅರಿವೇ ಇಲ್ಲ.

ಕಪ್ಪು ಬೆಳ್ಳುಳ್ಳಿಯ ಬಗ್ಗೆ ಕೆಲವೇ ಜನರಿಗೆ ಗೊತ್ತು. ಇದು ಬಿಳಿ ಬೆಳ್ಳುಳ್ಳಿಯ ಒಂದು ರೂಪವಾಗಿದೆ. ಕಪ್ಪು ಬೆಳ್ಳುಳ್ಳಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾದ್ರೆ ಏನಿದು ಕಪ್ಪು ಬೆಳ್ಳುಳ್ಳಿ, ಏನಿದರ ಪ್ರಯೋಜನ ತಿಳಿಯೋಣ.
ಬಿಳಿ ಬೆಳ್ಳುಳ್ಳಿಯ ಒಂದು ರೂಪವೇ ಕಪ್ಪು ಬೆಳ್ಳುಳ್ಳಿ. ಇದನ್ನು ಹುದುಗುವಿಕೆಯಿಂದ ತಯಾರಿಸಲಾಗುತ್ತದೆ. ರುಚಿಯ ವಿಚಾರದಲ್ಲಿ ಕಪ್ಪು ಬೆಳ್ಳುಳ್ಳಿ ಕಡಿಮೆಯಾಗಿದ್ದರೂ ಕೂಡ ಹೆಚ್ಚು ಪೋಷಕಾಂಶವನ್ನು ಹೊಂದಿರುತ್ತದೆ. ಪೋಷಕಾಂಶದ ವಿಚಾರದಲ್ಲಿ ಕಪ್ಪು ಬೆಳ್ಳುಳ್ಳಿಯದ್ದು ಯಾವುದೇ ರಾಜಿ ಇಲ್ಲ.

ಆರೋಗ್ಯಕ್ಕೆ ಪ್ರಯೋಜನಕಾರಿ
ಬಿಳಿ ಬೆಳ್ಳುಳ್ಳಿಯಲ್ಲಿ ಕಂಡು ಬರುವ ಆಲಿಸಿನ್ ಎಂಬ ಪೋಷಕಾಂಶವು ಕಪ್ಪು ಬೆಳ್ಳುಳ್ಳಿಯಲ್ಲಿಯೂ ಕೂಡ ಇರುತ್ತದೆ.ಇದು ರಕ್ತ ಪರಿಚಲನೆಯನ್ನು ಹೆಚ್ಚುಸುತ್ತದೆ. ಕೊಲೆಸ್ಟ್ರಾಲ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ದೇಹದ ಜೀವಕೋಶಗಳನ್ನು ಸಮತೋಲನಗೊಳಿಸುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿ ವೈರಲ್ ಗುಣಗಳನ್ನು ಇದು ಹೊಂದಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿ ಇಡುವುದಕ್ಕೆ ಇದು ನೆರವು ನೀಡುತ್ತದೆ .

ಆಂಟಿ-ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದೆ
ಹುದುಕುವಿಕೆಗೆ ಈ ಕಪ್ಪು ಬೆಳ್ಳುಳ್ಳಿ ಒಳಗಾಗುವುದರಿಂದಾಗಿ ವಿಶಿಷ್ಟವಾದ ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುತ್ತದೆ. ಇದು ಉರಿಯೂತ ನಿವಾರಣೆಗೆ ಬಹಳ ಪ್ರಯೋಜನಕಾರಿಯಾಗಿದೆ.ಅಷ್ಟೇ ಅಲ್ಲ ಇದು ಪಾಲಿಫಿನಾಲ್ಗಳು, ಫ್ಲೆವನಾಯ್ಡ್ ಗಳು ಮತ್ತು ಆಲ್ಕಲಾಯ್ಡ್ ಗಳಿಂದ ಸಮೃದ್ಧವಾಗಿದೆ.

ಕ್ಯಾನ್ಸರ್ ತಡೆಗಟ್ಟುವುದಕ್ಕೆ ಸಹಕಾರಿ
ಕಪ್ಪು ಬೆಳ್ಳುಳ್ಳಿಯು ಕ್ಯಾನ್ಸರ್ ತಡೆಗಟ್ಟುವುದಕ್ಕೆ ಅದರಲ್ಲೂ ಮುಖ್ಯವಾಗಿ ರಕ್ತ ಕ್ಯಾನ್ಸರ್,ಹೊಟ್ಟೆಯ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಹಕಾರಿಯಾಗಿದೆ. ಇದು ಅಲರ್ಜಿಯನ್ನು ಕಡಿಮೆ ಮಾಡಲು, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು, ಯಕೃತ್ತನ್ನು ಯಾವುದೇ ರೀತಿಯ ಹಾನಿಯಿಂದ ರಕ್ಷಿಸಲು ಮತ್ತು ಮೆದುಳನ್ನು ಆರೋಗ್ಯವಾಗಿಸಲು ಕೆಲಸ ಮಾಡುತ್ತದೆ.



Click it and Unblock the Notifications
