ಮದ್ಯಪಾನ ಅತಿಯಾದರೆ ಮಾತ್ರವಲ್ಲ ನಿಯಮಿತವಾಗಿದ್ದರೂ ಯಕೃತ್ತಿನ ಸಮಸ್ಯೆ ಬರುತ್ತೆ

ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ, ಅತಿಯಾದ ಮದ್ಯಪಾನ ಕೆಲವೊಂದು ಸಮಸ್ಯೆಗಳಿಗೆ ಮೂಲ ಕಾರಣವೂ ಹೌದು. ಅತಿಯಾದ ಮದ್ಯಪಾನ ದೀರ್ಘಕಾಲದ ಸಮಸ್ಯೆಗಳಾದ ಕ್ಯಾನ್ಸರ್‌, ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ , ಪಾರ್ಶ್ವವಾಯು, ಜೀರ್ಣಾಂಗದ ಸಮಸ್ಯೆ, ಮಾತ್ರವಲ್ಲ ಯಕೃತ್ತಿನ ಸಮಸ್ಯೆಗೂ ಕಾರಣವಾಗುತ್ತದೆ. ಮದ್ಯಪಾನದಿಂದ ದೇಹದ ಪ್ರಮುಖ ಭಾಗಗಳು ಹಾನಿಯಾಗುತ್ತವೆ, ಇದರಲ್ಲಿ ಯಕೃತ್ತು ಕೂಡಾ ಸೇರಿದೆ.

234

ಮೊದಲನೆಯದಾಗಿ ಯಕೃತ್ತಿನ ಕಾರ್ಯದ ಬಗ್ಗೆ ತಿಳಿದುಕೊಳ್ಳುವುದಾದರೆ ಇದು ಚಯಾಪಚಯ ಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲ ಗ್ಲೈಕೋಜನ್‌ ಸಂಗ್ರಹಣೆ, ಕೆಂಪು ರಕ್ತಕಣಗಳ ವಿಭಜನೆ, ಪ್ಲಾಸ್ಮಾ ಪ್ರೋಟಿನ್‌ ಸಂಶ್ಲೇಷಣೆ, ಹಾರ್ಮೋನ್‌ ಉತ್ಪಾದನೆ ಮತ್ತು ವಿಷದ ಅಂಶವನ್ನು ತೆಗೆದುಹಾಕುವ ಕಾರ್ಯವನ್ನು ಯಕೃತ್ತು ಮಾಡುತ್ತದೆ.

ಅತಿಯಾದ ಮದ್ಯಪಾನ ಯಕೃತ್ತಿನ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರುವುದಲ್ಲದೇ, ಯಕೃತ್ತಿನ ಚಪಾಪಚಯ ಪ್ರಕ್ರಿಯೆಯನ್ನು ಬದಲಾಯಿಸುತ್ತದೆ.ಅಲ್ಲದೇ ಕೆಲವೊಂದು ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ಅದುವೇ ಯಕೃತ್ತಿನ ಸಿರೋಸಿಸ್‌ ಅಥವಾ ಫ್ಯಾಟಿ ಲಿವರ್‌. ಅಚ್ಚಕನ್ನಡದಲ್ಲಿ ಹೇಳುವುದಾದರೆ ಕೊಬ್ಬಿದ ಯಕೃತ್ತು. ಮದ್ಯಸೇವನೆ ಈ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ, ಇದಕ್ಕೆ ಚಿಕಿತ್ಸೆ ಇದೆಯೇ ಎನ್ನುವುದನ್ನು ತಿಳಿಯೋಣ.

ಯಕೃತ್ತಿನ ಹಾನಿಗೆ ಪ್ರಮುಖ ಕಾರಣ ಅತಿಯಾದ ಮದ್ಯಪಾನ

ಯಕೃತ್ತಿನ ಹಾನಿಗೆ ಪ್ರಮುಖ ಕಾರಣ ಅತಿಯಾದ ಮದ್ಯಪಾನ

ಆಲ್ಕೊಹಾಲ್ ಸೇವನೆಯು ಯಕೃತ್ತಿನ ಹಾನಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆಲ್ಕೋಹಾಲ್ ನಿಂದಾಗಿ ಯಕೃತ್ತಿನ ಹಾನಿ ಸಂಭವಿಸಿದಾಗ, ಅದನ್ನು ಆಲ್ಕೋಹಾಲ್-ಸಂಬಂಧಿತ ಯಕೃತ್ತಿನ ಕಾಯಿಲೆ (ARLD) ಎಂದು ಕರೆಯಲಾಗುತ್ತದೆ. ಇದನ್ನೇ ಫ್ಯಾಟಿ ಲಿವರ್‌ ಎಂತಲೂ ಕರೆಯುತ್ತಾರೆ. ಈ ಖಾಯಿಲೆಯು ಒಂದೇ ಬಾರಿಗೆ ಕಾಣಿಸಿಕೊಳ್ಳುವುದಿಲ್ಲ, ಬದಲಾಗಿ ರೋಗವು ಸಂಪೂರ್ಣವಾಗಿ ಯಕೃತ್ತನ್ನು ಆವರಿಸಲು ಸಮಯವನ್ನು ತೆಗೆದುಕೊಳ್ಳುತ್ತದೆ.

ಪಿತ್ತಜನಕಾಂಗದ ಕಾಯಿಲೆಯ ಅತ್ಯಂತ ಗಂಭೀರ ಹಂತವಾದ ಸಿರೋಸಿಸ್ ಸಾಮಾನ್ಯವಾಗಿ ಬೆಳವಣಿಗೆಯಾಗಲು ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಆರಂಭಿಕ ಹಂತದಲ್ಲೇ ಎಚ್ಚರಿಕೆಯನ್ನು ವಹಿಸುವ ಮೂಲಕ ನಿಮ್ಮ ಯಕೃತ್ತು ಚೇತರಿಸಿಕೊಳ್ಳಲು ಅನುವು ಮಾಡಿಕೊಡಬಹುದು.

ಈ ಸಮಸ್ಯೆ ಮದ್ಯವ್ಯಸನಿಗಳಿಗೆ ಮಾತ್ರವೇ ಉಂಟಾಗುತ್ತದೆ ಎಂದು ತಿಳಿಯಬೇಡಿ. ನಿಯಮಿತವಾಗಿ ಮದ್ಯಪಾನ ಮಾಡುವವರಲ್ಲಿಯೂ ಯಕೃತ್ತಿನ ಸಮಸ್ಯೆಯ ಅಪಾಯ ಹೆಚ್ಚಿದೆ. ಯಾಕೆಂದರೆ ಮದ್ಯಪಾನವು ನಿಧಾನವಾಗಿಯೇ ಯಕೃತ್ತಿನ ಸಮಸ್ಯೆಯನ್ನು ಹೆಚ್ಚಿಸುತ್ತದೆ. ನಿಯಮಿತವಾಗಿ ಕುಡಿದರೂ ಪಿತ್ತಜನಕಾಂಗದ ಖಾಯಿಲೆಯನ್ನು ಇನ್ನಷ್ಟು ಹದಗೆಡಿಸುತ್ತದೆ.

ಎಷ್ಟು ಪ್ರಮಾಣದ ಮದ್ಯಸೇವನೆ ಯಕೃತ್ತಿಗೆ ಹಾನಿಕರ..?

ಎಷ್ಟು ಪ್ರಮಾಣದ ಮದ್ಯಸೇವನೆ ಯಕೃತ್ತಿಗೆ ಹಾನಿಕರ..?

ಯಕೃತ್ತಿನ ಹಾನಿಯ ಬಗ್ಗೆ ತಿಳಿದುಕೊಳ್ಳಬೇಕಾದರೆ ನೀವು ಎಷ್ಟು ಪ್ರಮಾಣದಲ್ಲಿ ಮತ್ತು ಎಷ್ಟು ಬಾರಿ ಆಲ್ಕೋಹಾಲ್ ಸೇವಿಸುತ್ತೀರಿ ಎಂಬುದರ ಕುರಿತು ತಿಳಿದಿರುವುದು ಮತ್ತು ಪ್ರಾಮಾಣಿಕವಾಗಿರುವುದು ಮತ್ತು ನಿಮ್ಮ ಕುಡಿಯುವಿಕೆಯು ಯಾವುದೇ ಹಾನಿಯನ್ನುಂಟುಮಾಡಿದೆಯೇ ಮತ್ತು ಎಷ್ಟರ ಮಟ್ಟಿಗೆ ಎಂಬುದನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

ಡ್ರಿಂಕಾವೇರ್ ಪ್ರಕಾರ, ದಿನಕ್ಕೆ 40 ಗ್ರಾಂ ಗಿಂತ ಹೆಚ್ಚು ಆಲ್ಕೋಹಾಲ್ ಅಥವಾ ನಾಲ್ಕು ಯೂನಿಟ್ ಕುಡಿಯುವ 90 ಪ್ರತಿಶತದಷ್ಟು ಜನರಲ್ಲಿ ಆಲ್ಕೋಹಾಲ್-ಸಂಬಂಧಿತ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಬೆಳೆಯುತ್ತದೆ ಎನ್ನಲಾಗಿದೆ. ಸ್ಥೂಲವಾಗಿ 12 ಪ್ರತಿಶತ ABV (ಆಲ್ಕೋಹಾಲ್ ಬೈ ವಾಲ್ಯೂಮ್) ವೈನ್‌ನ ಎರಡು ಮಧ್ಯಮ (175ml) ಗ್ಲಾಸ್‌ಗಳಿಗೆ ಸಮನಾಗಿರುತ್ತದೆ ಅಥವಾ ನಿಯಮಿತ ಸಾಮರ್ಥ್ಯದ (ನಾಲ್ಕು ಪ್ರತಿಶತ ABV) ಬಿಯರ್‌ನ ಎರಡು ಪಿಂಟ್‌ಗಳಿಗಿಂತ ಕಡಿಮೆಯಿರುತ್ತದೆ ಎಂದು ಅಂದಾಜಿಸಲಾಗಿದೆ.

ಯಕೃತ್ತಿನ ಸಮಸ್ಯೆಯ ಲಕ್ಷಣ

ಯಕೃತ್ತಿನ ಸಮಸ್ಯೆಯ ಲಕ್ಷಣ

ಆಲ್ಕೋಹಾಲ್-ಸಂಬಂಧಿತ ಯಕೃತ್ತಿನ ಕಾಯಿಲೆಯ ಆರಂಭಿಕ ಹಂತಗಳು ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಈ ಕಾರಣದಿಂದಾಗಿ, ಆಲ್ಕೋಹಾಲ್ ಕಾರಣದಿಂದಾಗಿ ನೀವು ಯಕೃತ್ತಿನ ಹಾನಿಯನ್ನು ಅನುಭವಿಸಿದ್ದೀರಿ ಎಂದು ನಿಮಗೆ ತಿಳಿದಿರುವುದಿಲ್ಲ. ಹಾಗಾಗಿ ಮದ್ಯಪಾನ ಸೇವಿಸುವುದನ್ನು ನೀವು ನಿಲ್ಲಿಸುವುದಿಲ್ಲ. ಆದರೆ ಈ ರೀತಿಯ ರೋಗಲಕ್ಷಣಗಳು ಕಂಡುಬಂದರೆ ನಿಮಗೆ ಯಕೃತ್ತಿನ ಕಾಯಿಲೆ ಇದೆ ಎಂದು ಅರ್ಥ ಮಾಡಿಕೊಳ್ಳಬಹುದು.

ಯಕೃತ್ತಿನ ಸಮಸ್ಯೆ ಇದ್ದಲ್ಲಿ ನಿಮ್ಮ ಯಕೃತ್ತು ಊತವನ್ನು ಒಳಗೊಂಡಿರಬಹುದು, ಇದು ನಿಮ್ಮ ಹೊಟ್ಟೆಯ ಮೇಲಿನ ಬಲಭಾಗದಲ್ಲಿ ಅಸ್ವಸ್ಥತೆಗೆ ಕಾರಣವಾಗಬಹುದು. ARLD ರೋಗಲಕ್ಷಣಗಳಲ್ಲಿ ಆಯಾಸ, ವಿವರಿಸಲಾಗದ ತೂಕ ನಷ್ಟ, ಹಸಿವಿನ ನಷ್ಟ, ವಾಕರಿಕೆ ಮತ್ತು ವಾಂತಿ ಕೂಡ ಸೇರಿವೆ. ನೀವು ಕಣ್ಣುಗಳು ಮತ್ತು ಚರ್ಮ ಹಳದಿ ಬಣ್ಣ ಹೊಂದಿರುವುದನ್ನು ಗಮನಿಸಬಹುದು ಮತ್ತು ಮೊಣಕಾಲುಗಳಲ್ಲಿ ಊತ ಉಂಟಾಗಬಹುದು. ಯಕೃತ್ತಿಗೆ ಹಾನಿಯಾದಲ್ಲಿ ಗೊಂದಲ, ಅರೆನಿದ್ರಾವಸ್ಥೆಗೆ ಕಾರಣವಾಗಬಹುದು ಮತ್ತು ರಕ್ತವಾಂತಿಯಾಗಬಹುದು ಅಥವಾ ಮಲದಲ್ಲಿ ರಕ್ತವಿರಬಹುದು.

ಮದ್ಯಪಾನದಿಂದ ಯಕೃತ್ತಿಗೆ ಹೇಗೆ ಹಾನಿಯಾಗುತ್ತೆ..?

ಮದ್ಯಪಾನದಿಂದ ಯಕೃತ್ತಿಗೆ ಹೇಗೆ ಹಾನಿಯಾಗುತ್ತೆ..?

ಮೊದಲೇ ವಿವರಿಸಿದಂತೆ ಯಕೃತ್ತಿನ ಕೆಲಸವೆಂದರೆ ವಿಷಕಾರಿ ಅಂಶಗಳನ್ನು ನಿವಾರಿಸುವುದು. ಇದರಂತೆ ಮದ್ಯದಲ್ಲಿರುವಂತಹ ಸಂಭಾವ್ಯ ವಿಷಕಾರಿ ಪದಾರ್ಥಗಳನ್ನು ಯಕೃತ್ತು ಒಡೆಯುತ್ತದೆ. ನೀವು ಕುಡಿಯುವಾಗ, ನಿಮ್ಮ ಯಕೃತ್ತಿನ ವಿವಿಧ ಕಿಣ್ವಗಳು ಆಲ್ಕೋಹಾಲ್ ಅನ್ನು ಒಡೆಯಲು ಕೆಲಸ ಮಾಡುತ್ತವೆ. ಮದ್ಯದಲ್ಲಿರುವ ವಿಷಕಾರಿ ಅಂಶಗಳನ್ನು ನಿಮ್ಮ ಯಕೃತ್ತು ದೇಹದಿಂದ ಹೊರಹಾಕಬಹುದು ಆದರೆ, ಯಕೃತ್ತು ಪರಿಣಾಮಕಾರಿಯಾಗಿ ಪ್ರಕ್ರಿಯೆಗೊಳಿಸುವುದಕ್ಕಿಂತ ಹೆಚ್ಚಿನದನ್ನು ಕುಡಿಯುವುದು ನಿಮ್ಮ ಯಕೃತ್ತನ್ನು ಹಾನಿಗೊಳಿಸುತ್ತದೆ. ಇದು ಆರಂಭದಲ್ಲಿ ನಿಮ್ಮ ಯಕೃತ್ತಿನಲ್ಲಿ ಹೆಚ್ಚಿದ ಕೊಬ್ಬಿನ ರೂಪವನ್ನು ತೆಗೆದುಕೊಳ್ಳುತ್ತದೆ. ಹೆಚ್ಚುವರಿ ಕೊಬ್ಬು ಯಕೃತ್ತಿನ ಜೀವಕೋಶಗಳಲ್ಲಿ ಸಂಗ್ರಹವಾದಾಗ ಅದು ಕೊಬ್ಬಿದ ಯಕೃತ್ತಿಗೆ ಕಾರಣವಾಗುತ್ತದೆ. ಆದರೆ ಕಾಲಾನಂತರದಲ್ಲಿ ಇದು ಉರಿಯೂತ ಮತ್ತು ಗಾಯದ ಅಂಗಾಂಶದ ಶೇಖರಣೆ ಉಂಟಾಗುತ್ತದೆ.

ಯಕೃತ್ತು ಸ್ವತಃ ಪುನರುತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಆದರೆ ಪ್ರತಿ ಬಾರಿ ನಿಮ್ಮ ಯಕೃತ್ತು ಮದ್ಯವನ್ನು ಸಂಸ್ಕರಿಸಿದಾಗ ಮಾಡಿದಾಗ, ಕೆಲವು ಯಕೃತ್ತಿನ ಜೀವಕೋಶಗಳು ಸಾಯುತ್ತವೆ. ಯಕೃತ್ತು ಹೊಸ ಕೋಶಗಳನ್ನು ಅಭಿವೃದ್ಧಿಪಡಿಸಬಹುದು, ಆದರೆ ದೀರ್ಘಾವಧಿಯ ಮದ್ಯದ ಸೇವನೆಯು ಜೀವಕೋಶಗಳ ಪುನರುತ್ಪಾದನೆಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದು ನಿಮ್ಮ ಯಕೃತ್ತಿಗೆ ಗಂಭೀರ ಮತ್ತು ಶಾಶ್ವತ ಹಾನಿಯನ್ನು ಉಂಟುಮಾಡಬಹುದು. ನೀವು ಕುಡಿಯುವ ಪ್ರಮಾಣವನ್ನು ಕಡಿಮೆ ಮಾಡುವುದು, ಅಥವಾ ಮದ್ಯವನ್ನು ತ್ಯಜಿಸುವುದು ಯಕೃತ್ತಿನ ಚೇತರಿಕೆಗೆ ಸಹಕರಿಸಬಹುದು ಮತ್ತು ರೋಗದ ಪ್ರಗತಿಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಕೊಬ್ಬಿದ ಯಕೃತ್ತಿನ ಸಮಸ್ಯೆ ನಿವಾರಣೆ ಹೇಗೆ

ಕೊಬ್ಬಿದ ಯಕೃತ್ತಿನ ಸಮಸ್ಯೆ ನಿವಾರಣೆ ಹೇಗೆ

ಯಕೃತ್ತು ಆರೋಗ್ಯಕರವಾಗಿರಬೇಕೆಂದರೆ ಮದ್ಯಪಾನವನ್ನು ತ್ಯಜಿಸುವುದು. ನಿಮ್ಮಿಂದ ಮದ್ಯಪಾನ ಸೇವನೆಯನ್ನು ಬಿಡುವುದಾಗದು ಎಂದಾದರೆ ಸಾಧ್ಯವಾದಷ್ಟು ಮಿತಿಗೊಳಿಸಲು ಪ್ರಯತ್ನಿಸಿ. ಯಾಕೆಂದರೆ ಮದ್ಯಪಾನ ಇತರರ ಅಂಗಾಗಗಳಿಂತ ಹೆಚ್ಚು ಯಕೃತ್ತಿನ ಮೇಲೆ ಹಾನಿ ಮಾಡುತ್ತದೆ. ಮದ್ಯಪಾನ ಮಾಡುವುದಾದರೂ ಅದರೊಂದಿಗೆ ಆರೋಗ್ಯಕರ ಆಹಾರ ಸೇವನೆ ಮಾಡುವುದನ್ನು ಮರೆಯಬೇಡಿ. ಜೊತೆಗೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಅದಕ್ಕಿಂತ ಹೆಚ್ಚಿನದಾಗಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳಿ, ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ. ಮೇಲೆ ತಿಳಿಸಿದಂತಹ ರೋಗ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರನ್ನು ತಪ್ಪದೇ ಭೇಟಿಯಾಗಿ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆದುಕೊಳ್ಳಿ.

English summary

Fatty liver disease symptoms in Kannada: Signs of liver damage from excess alcohol intake

how intake of alchohol cuase fatty liver and know the symtomps of fatty liver. Read more.
Story first published: Friday, June 10, 2022, 15:00 [IST]
X
Desktop Bottom Promotion