Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಕಿವಿಯಲ್ಲಿ ಕೂದಲು ಬೆಳೆಯುವುದಕ್ಕೂ, ಆರೋಗ್ಯಕ್ಕೂ ಏನು ಸಂಬಂಧ? ಇದಕ್ಕೆ ಕಾರಣವೇನು?
ಪುರುಷರಿಗೆ ವಯಸ್ಸಾದಂತೆ, ಅವರ ಕಿವಿ ಮೇಲೆ ಕೂದಲು ಬೆಳೆಯೋದನ್ನ ಸಾಮಾನ್ಯವಾಗಿ ನೋಡಿರುತ್ತೇವೆ. ಕಿವಿ ಮೇಲೆ ಕೂದಲು ಕಂಡ್ರೆ ಸಾಕು, ಓಹ್ ಏನಪ್ಪ ಕಿವಿ ಮೇಲೆ ಕೂದಲು ಬಂದಿದೆ, ಭಾರೀ ದುಡ್ಡು ಬರೋ ಸೂಚನೆ ಅನ್ನೋದುಂಟು. ಜನರ ನಂಬಿಕೆ ಏನೇ ಇರಲಿ, ಅದರ ಬಗ್ಗೆ ನಾವೇನೂ ಹೇಳೋದಿಲ್ಲ, ಆದರೆ ಕಿವಿ ಮೇಲೆ ಕೂದಲು ಬೆಳೆಯವುದರ ಬಗ್ಗೆ ವಿಜ್ಞಾನ ಏನು ಹೇಳುತ್ತದೆ? ವೈಜ್ಞಾನಿಕವಾಗಿ ಕಿವಿಯಲ್ಲಿ ಕೂದಲು ಹುಟ್ಟೋದು ಯಾಕೆ? ಇದರಿಂದ ಆರೋಗ್ಯಕ್ಕೆ ಏನಾದರೂ ಸಮಸ್ಯೆ ಇದೆಯೇ? ಎಲ್ಲಾ ಪ್ರಶ್ನೆಗಳಿಗೆ ನಾವಿಂದು ಉತ್ತರ ನೀಡಲಿದ್ದೇವೆ.
ಕಿವಿಯ ಮೇಲೆ ಕೂದಲು ಏಕೆ ಹುಟ್ಟುತ್ತದೆ? ಅವುಗಳ ವಿಧ, ಪರಿಣಾಮಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಕಿವಿಯ ಮೇಲೆ ಕೂದಲು ಬೆಳೆಯೋದು ಯಾಕೆ?
ನಮ್ಮ ಅಂಗೈ, ಪಾದದಡಿ ಹಾಗೂ ತುಟಿ ಬಿಟ್ಟು ದೇಹದ ಎಲ್ಲಾ ಭಾಗಗಳಲ್ಲಿಯೂ ಕೂದಲುಗಳು ಬೆಳೆಯುತ್ತವೆ. ಈ ಕೂದಲುಗಳ ನಮ್ಮ ದೇಹವನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆ ನಿಡುವುದರ ಜೊತೆಗೆ ನಮ್ಮ ದೇಹವನ್ನು ಬೆಚ್ಚಗಿಡುವುದಕ್ಕೆ ಸಹಾಯ ಮಾಡುತ್ತವೆ. ಅದೇ ರೀತಿ ನಮ್ಮ ಕಿವಿಯಲ್ಲಿ ಬೆಳೆಯುವ ಕೂದಲುಗಳ ಸಹ. ಇದು ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ, ಅದೂ ವಯಸ್ಸಾಗುತ್ತಾ ಹೋದಂತೆ ಸಾಮಾನ್ಯವಾಗಿ ಬೆಳೆಯೋದು. ಇದಕ್ಕೆ ಕಾರಣ, ಪುರುಷರಲ್ಲಿ ಕಂಡುಬರುವ ಹೆಚ್ಚಿನ ಪ್ರಮಾಣದ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನ್.
ಪುರುಷ ಹಾರ್ಮೋನ್ ಎಂದೇ ಕರೆಯಲ್ಪಡುವ ಟೆಸ್ಟೋಸ್ಟೆರಾನ್ ಹಾರ್ಮೋನ್ ಮಹಿಳೆ ಹಾಗೂ ಪುರುಷರಿಬ್ಬರಲ್ಲೂ ಬಿಡುಗಡೆಯಾಗುತ್ತದೆ. ಆದರೆ ಮಹಿಳೆಯರಿಗಿಂತ ಪುರುಷರ ಆರೋಗ್ಯದ ಮೇಲೇಯೇ ಹೆಚ್ಚು ಪ್ರಭಾವ ಬೀರುವುದು. ಯಾಕಂದ್ರೆ ಇದು ಪುರುಷರಲ್ಲಿ ಸಂತಾನೋತ್ಪತ್ತಿಗೆ ಅಗತ್ಯವಾದ ಸ್ಪರ್ಮ್ ಉತ್ಪಾದನೆಯ ಜೊತೆಗೆ ಲೈಂಗಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಇದೇ ಹಾರ್ಮೋನ್ ಬದಲಾವಣೆಯಿಂದ ಪುರುಷರ ಕಿವಿ ಮೇಲೆ ಕಪ್ಪು ಮತ್ತು ಬಿಳಿ ಬಣ್ಣದ ಕೂದಲುಗಳು ಬೆಳವಣಿಗೆಯಾಗುತ್ತವೆ.

ಕಿವಿಯಲ್ಲಿ ಬೆಳೆಯುವ ಕೂದಲುಗಳ ವಿಧಗಳು:
ನಮ್ಮ ಕಿವಿಯಲ್ಲಿ ಬೆಳೆಯು ಕೂದಲಲ್ಲೂ ಎರಡು ವಿಧ ಇದೆ. ಒಂದು ವೆಲ್ಲಸ್, ಇನ್ನೊಂದು ಟ್ರಾಗಿ.
ವೆಲ್ಲಸ್ ಕೂದಲು:
ಇದು ಹುಟ್ಟಿದಾಗಿನಿಂದ ಕಿವಿ ಜೊತೆಗೆ ಮೂಗಿನ ಒಳಗೂ ಕಂಡುಬರುವ ರೋಮಗಳು. ದೇಹದಲ್ಲಿ ಇತರ ಭಾಗದಲ್ಲಿ ಬೆಳೆಯುವ ಕೂದಲಿಗಿಂತ ಇದು ತುಂಬಾ ತೆಳುವಾಗಿದ್ದು, ಬೇಬಿ ಹೇರ್ ಅಂತ ಕೂಡಾ ಇದನ್ನು ಕರೆಯುತ್ತಾರೆ. ಇದರ ಪ್ರಮುಖ ಕಾರ್ಯವೆಂದರೆ, ನಮ್ಮ ದೇಹವನ್ನು ಶೀತ ವಾತಾವರಣದಿಂದ ಕಾಪಾಡುವುದಾಗಿದೆ. ಇದು ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ.
ಟ್ರಾಗಿ ಕೂದಲು:
ಇದು ಕಿವಿಯ ಒಳಗೆ ಅಥವಾ ಕಿವಿಯ ಮೇಲೆ ದಪ್ಪನಾದ ಕಪ್ಪು-ಬಿಳಿ ಕೂದಲಾಗಿದೆ. ಕಿವಿಯೊಳಗೆ ಕಸ, ಬ್ಯಾಕ್ಟಿರಿಯಾ ಹೋಗದಂತೆ ತಡೆಗೋಡೆಯಾಗಿ ನಿಂತು, ಕಿವಿಯೊಳಗಿನ ಭಾಗಗಳಿಗೆ ಯಾವುದೇ ಹಾನಿಯಾಗದಂತೆ ರಕ್ಷಣೆ ಕೊಡುತ್ತದೆ.

ಕಿವಿಯಲ್ಲಿ ಕೂದಲು ಹುಟ್ಟುವುದರಿಂದ ಆಗುವ ಪರಿಣಾಮಗಳೇನು?:
ಕಿವಿಯಲ್ಲಿ ಈ ರೀತಿ ಕೂದಲು ಏನಾದರೂ ಸಮಸ್ಯೆ ಆಗುವುದೇ ಎಂಬ ಚಿಂತೆ ಬರುವುದು ಸಾಮಾನ್ಯ. ಆದರೆ ಹಾಗೇನು ಇಲ್ಲ, ಚಿಂತೆ ಮಾಡುವಂತಹ ಅಗತ್ಯವೇನು ಇಲ್ಲ. ಇದು ಮನುಷ್ಯನ ದೇಹದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ. ಇದರಿಂದ ಸಮಸ್ಯೆಗಳ ಬದಲಾಗಿ ಒಳ್ಳೆಯದೇ ಆಗುವುದು. ಏಕೆಂದರೆ ಕಿವಿಯೊಳಗೆ ಕೂದಲಿರುವುದರಿಂದ ಕಿವಿಗೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ.
ಆದರೆ, ಒಂದು ವೇಳೆ ಈ ಕೂದಲು ಜಾಸ್ತಿ ಇದ್ದರೆ ಮಾತ್ರ, ಸ್ನಾನ ಮಾಡುವಾಗ ಅಥವಾ ಇನ್ಯಾವುದೇ ಸಂದರ್ಭದಲ್ಲಿ ನೀರು ಕಿವಿಯೊಳಗೆ ಸೇರಿ, ಶೇಖರಣೆ ಆಗೋ ಸಂಭವವಿದೆ. ಅದು ಬಿಟ್ಟು ಬೇರೇನೂ ಸಮಸ್ಯೆ ಅಂತೂ ಆಗಲಾರದು.

ಈ ಕಿವಿಯಲ್ಲಿರುವ ಕೂದಲನ್ನು ತೆಗೆಯಬಹುದೇ?:
ಕಿವಿಗಳ ಮೇಲೆ ಕೂದಲು ಬರುವುದನ್ನ ಇಷ್ಟಪಡದವರು ಶೇವಿಂಗ್, ಪ್ಲಕಿಂಗ್, ವ್ಯಾಕ್ಸಿಂಗ್, ಹೇರ್ ರಿಮೂವರ್ ಕ್ರೀಮ್ ಅಥವಾ ಲೇಸರ್ ಟ್ರೀಟ್ಮೆಂಟ್ ಬಳಸಿ ಈ ಕೂದಲನ್ನು ತೆಗೆಯಬಹುದು. ಇದರಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ.
ನಿಮಗಿದು ತಿಳಿದಿರಲಿ:
ವಿಶ್ವದ ಅತಿ ಉದ್ದದ ಕಿವಿಯ ಕೂದಲನ್ನು ನಮ್ಮದೇ ದೇಶದ ವಿಕ್ಟರ್ ಆಂಥೋನಿ ಹೊಂದಿದ್ದು, ಗಿನ್ನೀಸ್ ವಲ್ಡ್ ರೆಕಾರ್ಡ್ ಗೆ ಸೇರಿಕೊಂಡಿದ್ದಾರೆ. ಇವರ ಕಿವಿಯ ಕೂದಲು ಬರೋಬ್ಬರಿ 7 ಇಂಚುಗಳಷ್ಟು ಉದ್ದವಿದೆ.



Click it and Unblock the Notifications