Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೋಡಾ ಸೇವನೆಯಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು
ಸೋಡಾ ಎಂದರೆ ಹೆಚ್ಚಿನವರಿಗೆ ಇಷ್ಟವಾಗುವುದು. ಅಜೀರ್ಣ, ಹೊಟ್ಟೆ ಉಬ್ಬರ ಇತ್ಯಾದಿಗಳಿಗೆ ಕೆಲವರು ಸೋಡಾ ಬಳಕೆ ಮಾಡುವರು. ಇನ್ನು ಕೆಲವರು ಇದನ್ನೇ ಕುಡಿಯುವ ಅಭ್ಯಾಸ ಮಾಡಿಕೊಂಡಿರುವರು. ನೀರಿಗಿಂತಲೂ ಹೆಚ್ಚಾಗಿ ಸೋಡಾ ಕುಡಿಯುವಂತಹ ಜನರು ನಮ್ಮಲ್ಲಿ ಇದ್ದಾರೆ.

ಕೇವಲ ಸೋಡಾ ಮಾತ್ರವಲ್ಲದೆ ಇತರ ಕೆಲವು ತಂಪು ಪಾನೀಯಗಳು ಕೂಡ ಕೆಲವರಿಗೆ ದೈನಂದಿನ ಜೀವನದ ಒಂದು ಪಾನೀಯವಾಗಿ ಹೋಗಿದೆ. ಇದನ್ನು ಅವರು ಯಥೇಚ್ಛವಾಗಿ ಬಳಕೆ ಮಾಡುವರು. ಆದರೆ ಈ ಪಾನೀಯವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಇದರ ಬಗ್ಗೆ ತಿಳಿಯಿರಿ.

ಸಕ್ಕರೆ
ಒಂದು ಸಣ್ಣ ಕ್ಯಾನ್ ತಂಪು ಪಾನೀಯದಲ್ಲಿ ಸುಮಾರು 10 ಚಮಚ ಸಕ್ಕರೆ ಇದೆ. ಇದು ದ್ರವ ರೂಪದಲ್ಲಿ ಇರುವ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದು ಆಕಾಶಕ್ಕೇರಿಸುವುದು ಮತ್ತು ದೇಹದಲ್ಲಿ ಇನ್ಸುಲಿನ್ ಪ್ರತಿಕ್ರಿಯೆ ಉಂಟು ಮಾಡುವುದು. ಇದರಿಂದಾಗಿ ಮಧುಮೇಹ ಅಥವಾ ಇನ್ಸುಲಿನ್ ಪ್ರತಿರೋಧಕ ಉಂಟಾಗಬಹುದು. ಅದೇ ರೀತಿಯಾಗಿ ತೂಕ ಹೆಚ್ಚಳ ಮತ್ತು ಇತರ ಕೆಲವು ಆರೋಗ್ಯ ಸಮಸ್ಯೆಗಳೂ ಬರುವುದು. ತಂಪು ಪಾನೀಯ ಕಂಪೆನಿಗಳು ಅತೀ ಹೆಚ್ಚು ಸಕ್ಕರೆ ಬಳಕೆ ಮಾಡುತ್ತವೆ ಎಂದು ಅಧ್ಯಯನಗಳು ಕೂಡ ಹೇಳಿವೆ.

ಫಾಸ್ಪರಸ್ ಆಮ್ಲ
ಸೋಡಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫಾಸ್ಪರಸ್ ಅಂಶವಿದ್ದು, ಇದು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳದಂತೆ ಮಾಡುವುದು. ಇದರಿಂದಾಗಿ ಅಸ್ಥಿರಂಧ್ರತೆ, ದಂತಕುಳಿ ಮತ್ತು ಮೂಳೆಗಳು ಮೆತ್ತಗಾಗಲು ಸಮಸ್ಯೆಗಳೂ ಬರಬಹುದು. ಫಾಸ್ಪರಸ್ ಆಮ್ಲವು ಹೊಟ್ಟೆಯ ಆಮ್ಲದ ಜತೆಗೆ ಬೆರೆತುಕೊಂಡು ಜೀರ್ಣಕ್ರಿಯೆ ನಿಧಾನಗೊಳಿಸುವುದು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುವುದು.

ಕೆಫಿನ್
ಹೆಚ್ಚಿನ ಸೋಡಾಗಳಲ್ಲಿ ಕೆಫಿನ್ ಅಂಶವಿದ್ದು, ಇದು ಕ್ಯಾನ್ಸರ್, ಸ್ತನದಲ್ಲಿನ ಗಡ್ಡೆ, ಅನಿಯಮಿತ ಹೃದಯ ಬಡಿತ, ಅಧಿಕ ರಕ್ತದೊತ್ತಡ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುವುದು.

ನೀರು
ಸೋಡಾದಲ್ಲಿ ಬಳಸುವಂತಹ ನೀರು ನಲ್ಲಿ ನೀರು ಆಗಿದೆ ಮತ್ತು ಇದರಲ್ಲಿ ಕ್ಲೋರಿನ್, ಫ್ಲೋರೈಡ್ ಮತ್ತು ಇತರ ಕೆಲವು ಲೋಹಗಳು ಸೇರಿಕೊಂಡಿರುವುದು.

ಪೋಷಕಾಂಶಗಳ ಕೊರತೆ
ಸೋಡಾದಲ್ಲಿ ಯಾವುದೇ ರೀತಿಯ ಪೋಷಕಾಂಶಗಳು ಇಲ್ಲ. ಸೋಡಾದಿಂದ ಹಾನಿಯಾಗುವುದೇ ಹೆಚ್ಚಲ್ಲದೆ, ಇದರಿಂದ ಆರೋಗ್ಯಕ್ಕೆ ಉಪಯೋಗವಾಗುವಂತಹ ಒಂದು ಅಂಶವು ಇಲ್ಲ. ಇದರಲ್ಲಿ ಇರುವಂತಹ ಅನೈಸರ್ಗಿಕ ಅಂಶಗಳು ದೇಹಕ್ಕೆ ಹಾನಿ ಉಂಟು ಮಾಡುವುದು.



Click it and Unblock the Notifications
