ಕಾಮಕಸ್ತೂರಿ ಬೀಜದಿಂದ ಆರೋಗ್ಯಕ್ಕೆ ಅಡ್ಡಪರಿಣಾಮಗಳೂ ಉಂಟು

ಕಾಮಕಸ್ತೂರಿ ಬೀಜವನ್ನು ಆರೋಗ್ಯಕ್ಕೆ ಉಪಯೋಗಕಾರಿ ಎಂದು ಹೇಳುತ್ತಾರೆ. ಆದರೆ ಅತಿಯಾದ್ರೆ ಅಮೃತವೂ ವಿಷ ಎಂಬಂತೆ ಇದರಿಂದಲೂ ಕೂಡ ಕೆಲವು ಸಮಸ್ಯೆಗಳಾಗುವ ಸಾಧ್ಯತೆ ಇರುತ್ತದೆ.

You Will Never Know How Chia Seed Effects Your Health

ಚಿಯಾ ಬೀಜಗಳು, ಕಾಮಕಸ್ತೂರಿ ಬೀಜಗಳಿಂದಾಗಿ ಅಜೀರ್ಣ, ಅಲರ್ಜಿ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುವ ಪರಿಣಾಮಗಳು ಉಂಟಾಗುತ್ತದೆ. ಸಾಮಾನ್ಯವಾಗಿ ಇದು ಸೌಮ್ಯ ಮತ್ತು ಅಪರೂಪದ ಲಕ್ಷಣಗಳಾಗಿರುತ್ತದೆ. ಆದರೆ ಸಂಭವನೀಯ ಅಪಾಯಗಳ ಬಗ್ಗೆ ನೀವು ತಿಳಿದಿರಲೇಬೇಕು.

ಇದರಲ್ಲಿ ಪೋಷಕಾಂಶಭರಿತ ಹಲವು ಲಾಭಗಳಿವೆ ಎಂಬುದೇನೋ ನಿಜವೇ. ಆದರೆ ನೀವು ಬೀಜವನ್ನು ಹೇಗೆ ಸೇವಿಸುತ್ತೀರಿ ಎಂಬುದರ ಆಧಾರದಲ್ಲಿ ಇದರಿಂದಾಗುವ ಅಡ್ಡಪರಿಣಾಮವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿದೆ. ಇತರೆ ಅಧಿಕ ಪೋಷಕಾಂಶಭರಿತ ಆಹಾರಗಳಂತೆ ಈ ಬೀಜಗಳನ್ನೂ ಕೂಡ ತಪ್ಪಾಗಿ ಸ್ವೀಕರಿಸುವುದರಿಂದಾಗಿ ಋಣಾತ್ಮಕ ಪ್ರತಿಕ್ರಿಯೆಗಳಾಗುವ ಸಾಧ್ಯತೆ ಇರುತ್ತದೆ.

ಆದರೆ ಸಾಮಾನ್ಯವಾಗಿ ಇದನ್ನು ಸುರಕ್ಷಿತ ಆಹಾರವೆಂದೇ ಪರಿಗಣಿಸಲಾಗುತ್ತದೆ. ಆದರೆ ಚಿಯಾ ಬೀಜಗಳಿಂದ ಅಥವಾ ಕಾಮಕಸ್ತೂರಿ ಬೀಜಗಳಿಂದಾಗುವ ಕೆಲವು ಅಡ್ಡಪರಿಣಾಗಳ ಕುರಿತು ಖಂಡಿತ ನೀವು ತಿಳಿದುಕೊಂಡಿರಬೇಕಾದ ಅಗತ್ಯತೆ ಇದೆ.

ಜಠರ ಮತ್ತು ಕರುಳಿನ ಸಮಸ್ಯೆಗಳು

ಜಠರ ಮತ್ತು ಕರುಳಿನ ಸಮಸ್ಯೆಗಳು

ಮಲಬದ್ಧತೆ, ವಾಯು, ಕಳುರಿನ ಮೇಲೆ ಇದು ಅಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ಸಮಸ್ಯೆಯನ್ನು ಕೂಡಲೇ ಗಮನಿಸಿದ್ದೇ ಆದಲ್ಲಿ ಇದು ಅಂತಹ ದೊಡ್ಡ ಭಯಪಡುವ ಪರಿಸ್ಥಿತಿಯನ್ನು ನಿರ್ಮಿಸುವುದಿಲ್ಲ.ಕೆಲವು ಕೇಸ್ ಗಳಲ್ಲಿ ಬೀಜಗಳನ್ನು ಸರಿಯಾಗಿ ಬೇಯಿಸುವ ಕ್ರಮದಿಂದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಹೆಚ್ಚು ಫೈಬರ್ ಇರುವ ಆಹಾರವನ್ನು ಸೇವಿಸಿದಾಗ ಉಂಟಾಗುವ ಸಾಮಾನ್ಯ ಸಮಸ್ಯೆ ಇದಾಗಿರುತ್ತದೆ ಎಂಬುದನ್ನು ನೀವು ಗಮನದಲ್ಲಿ ಇಟ್ಟುಕೊಳ್ಳಿ.

ಅಲರ್ಜಿ

ಅಲರ್ಜಿ

ಚಿಯಾ ಬೀಜಗಳಿಂದ ಅಲರ್ಜಿ ಆಗುವ ಸಾಧ್ಯತೆ ಬಹಳ ವಿರಳವಾಗಿದ್ದರೂ ಕೂಡ ಇದು ಸಾಧ್ಯವಿದೆ ಎಂಬುದರಲ್ಲಿ ಅನುಮಾನವಿಲ್ಲ. ಒಂದು ವೇಳೆ ನೀವು ಅಲರ್ಜಿ ಇರುವ ಗುಣಲಕ್ಷಣವನ್ನು ಹೊಂದಿರುವವರಾಗಿದ್ದಲ್ಲಿ ನಿಮ್ಮ ಆಹಾರದಲ್ಲಿ ಇದನ್ನು ಬಳಕೆ ಮಾಡುವ ಮುನ್ನ ಬಹಳ ಜಾಗೃತೆ ವಹಿಸಬೇಕಾಗುತ್ತದೆ. ಇತರೆ ಕೆಲವು ಆಹಾರ ಪದಾರ್ಥಗಳೊಂದಿಗೆ ಈ ಬೀಜಗಳು ಮಿಲನಗೊಂಡಾಗ ಅಡ್ಡಪರಿಣಾಮವಾಗಿರುವ ಕೆಲವು ನಿದರ್ಶನಗಳು ಈಗಾಗಲೇ ನಮೂದಿಸಲ್ಪಟ್ಟಿವೆ.ಕಿತ್ತಳೆ, ಸಾಸಿವೆ, ಮೆಂತ್ಯೆ ಮತ್ತು ಇತರೆ ಕೆಲವು ವಸ್ತುಗಳ ಜೊತೆಗೆ ಸೇರಿದಾಗ ಈ ರೀತಿಯ ಪರಿಣಾಮಗಳಾಗಿರುವುದನ್ನು ಈಗಾಗಲೇ ಪರೀಕ್ಷೆ ಮಾಡಲಾಗಿದೆ.

ರಕ್ತದೊತ್ತಡ ಕಡಿಮೆಗೊಳಿಸುತ್ತದೆ

ರಕ್ತದೊತ್ತಡ ಕಡಿಮೆಗೊಳಿಸುತ್ತದೆ

ಕೆಲವು ಚಿಯಾ ಬೀಜಗಳ ಅಡ್ಡಪರಿಣಾಮಗಳು ಕೆಲವು ಮಂದಿಗೆ ಲಾಭವಾಗುವ ಸಾಧ್ಯತೆ ಇದೆ. ಹೌದು, ಯಾರು ಹೈಪರ್ ಟೆನ್ಶನ್ ನಿಂದ ಬಳಲುತ್ತಿರುತ್ತಾರೋ ಅವರಿಗೆ ಇದು ಒಳಿತು ಮಾಡುತ್ತದೆ. ಆದರೆ ಇತರರು ಖಂಡಿತ ಇದರಿಂದ ಬಳಲಬೇಕಾಗುತ್ತದೆ. ಚಿಯಾ ಬೀಜಗಳು ರಕ್ತವನ್ನು ತೆಳುಗೊಳಿಸುತ್ತದೆ. ಹಾಗಾಗಿ ಇದು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಇದು ರಕ್ತಸ್ರಾವಕ್ಕೂ ಕಾರಣವಾಗುವ ಸಾಧ್ಯತೆ ಇರುತ್ತದೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಔಷಧೀಯ ಅತಿಯಾದ ಪ್ರಚೋದನೆ

ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಔಷಧೀಯ ಅತಿಯಾದ ಪ್ರಚೋದನೆ

ಕಾಮಕಸ್ತೂರಿ ಬೀಜಗಳು ಸಾಮಾನ್ಯ ರಕ್ತದ ಮಟ್ಟವನ್ನು ಕಾಪಾಡಿಕೊಳ್ಳುವುದಕ್ಕೆ ಸಹಕರಿಸುತ್ತದೆ. ಆದರೆ ರಕ್ತದೊತ್ತಡಕ್ಕೆ ಇದು ಸಮಸ್ಯೆ ಮಾಡುವ ಸಾಧ್ಯತೆ ಇದ್ದು ಇತರೆ ಔಷಧಿಯೊಂದಿಗೆ ಸೇರಿಸಿದಾಗ ಕಂಟ್ರೋಲ್ ಮಾಡುವುದು ಕಷ್ಟಕರ. ನೀವು ಮಧುಮೇಹ ಕಾಯಿಲೆ ಇರುವವರಾಗಿದ್ದು ಕಾಮಕಸ್ತೂರಿ ಬೀಜವನ್ನು ತಿನ್ನುವುದಕ್ಕೆ ಮುಂದಾಗುತ್ತೀರಾದರೆ ಮೊದಲು ವೈದ್ಯರನ್ನು ಸಂಪರ್ಕಿಸಿ ಅವರ ಬಳಿ ಸಲಹೆ ಪಡೆಯುವುದು ಬಹಳ ಒಳ್ಳೆಯದು.

English summary

Does Eating Too Many Chia Seeds Cause Side Effects

Here we are discussing about You Will Never Know How Chia Seed Effects Your Health. Chia seeds side effects include indigestion, allergies, and lowering of your blood pressure. In general, they are mild and rare. Read more.
X
Desktop Bottom Promotion