Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಈ ವ್ಯಾಯಾಮಗಳಿಂದ ನಿಮ್ಮ ಕ್ಯಾಲೋರಿಗಳನ್ನು ಸುಲಭವಾಗಿ ಬರ್ನ್ ಮಾಡಬಹುದು..
ಕ್ಯಾಲೋರಿಗಳನ್ನು ಬರ್ನ್ ಮಾಡುವುದು ಸಾಮಾನ್ಯವಾಗಿ ಎಲ್ಲರ ದೈನಂದಿನ ವ್ಯಾಯಾಮದ ಭಾಗವಾಗಿರುತ್ತದೆ. ಪ್ರತಿದಿನ 100 ಕ್ಯಾಲೊರಿಗಳನ್ನು ಸುಡುವುದು ಅಷ್ಟೇನು ಕಷ್ಟದ ಕೆಲಸವಲ್ಲ. ಆದರೆ ಕ್ಯಾಲೋರಿಗಳನ್ನು ಬರ್ನ್ ಮಾಡಲು ಮುಖ್ಯವಾಗಿ ನೀವು ಚಲನೆಯಲ್ಲಿರಬೇಕು. ನೀವು ಕ್ಯಾಲೋರಿಗಳನ್ನು ಸುಡಲು ಜಿಮ್‌ಗೆ ಹೋಗಬೇಕಾಗಿಲ್ಲ. ಸುಲಭವಾದ ವ್ಯಾಯಾಮಗಳಿಂದ ಹೆಚ್ಚಿನ ಕ್ಯಾಲೋರಿಗಳನ್ನು ಸುಡುವ ಮೂಲಕ ತೂಕವನ್ನು ಇಳಿಸಿಕೊಳ್ಳಬಹುದು.
ನೀವು ಮಾಡುವ ಚಟುವಟಿಕೆಯ ಅವಧಿ, ವ್ಯಾಯಾಮದ ವೇಗದ ತೀವ್ರತೆ ಮತ್ತು ಸ್ವರೂಪ ಎಲ್ಲವೂ ನಿಮ್ಮ ವ್ಯಾಯಾಮದ ಯಶಸ್ಸಿನ ಪ್ರಮಾಣವನ್ನು ನಿರ್ಧರಿಸುತ್ತದೆ. ನಿಮ್ಮ ತೂಕ ಮತ್ತು ಎತ್ತರವೂ ಸಹ ಪರಿಗಣಿಸಬೇಕಾದ ಪ್ರಮುಖ ಅಂಶಗಳಾಗಿವೆ. ವ್ಯಾಯಾಮದ ಸಮಯದಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ನಾಶಗೊಳಿಸುವುದು ನಿಮ್ಮ ಗುರಿಯಾಗಿದ್ದರೆ, ನಿಮಗಾಗಿ ಸಲಹೆಗಳು ಇಲ್ಲಿವೆ:
ವ್ಯಾಯಾಮದ ಸಮಯದಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ನಾಶಗೊಳಿಸುವುದು ನಿಮ್ಮ ಗುರಿಯಾಗಿದ್ದರೆ, ನಿಮಗಾಗಿ ಸಲಹೆಗಳು ಇಲ್ಲಿವೆ:

ಸವಾರಿಗೆ ಸೈಕಲ್ ಬಳಸಿ:
ನೀವು ಕೆಲಸದ ಸ್ಥಳದಿಂದ ಹೆಚ್ಚು ದೂರದಲ್ಲಿ ವಾಸಿಸುತ್ತಿದ್ದರೆ ಕಚೇರಿಗೆ ಹೋಗಲು ಸೈಕಲ್ ಬಳಸಿ. ಇತ್ತೀಚಿನ ಜನರಿಗೆ ಇದು ಇಷ್ಟವಾಗದಿರುವುದು. ನೀವು ತುಂಬಾ ದೂರದಲ್ಲಿ ವಾಸಿಸುತ್ತಿದ್ದರೆ ಮಾರ್ಗವನ್ನು ವಿಭಜಿಸಬಹುದು, ಸಾರ್ವಜನಿಕ ಸಾರಿಗೆಯನ್ನು ಕೆಲಸದ ಸ್ಥಳದ ಸಮೀಪದವರೆಗೂ ಬಳಸಿ, ತದನಂತರ ಉಳಿದ ಭಾಗಕ್ಕೆ ಸೈಕಲ್ ಬಳಸಿ. ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಗಂಟೆಗೆ 12-14 ಮೈಲುಗಳ ವೇಗದಲ್ಲಿ 30 ನಿಮಿಷಗಳ ಕಾಲ ಸೈಕ್ಲಿಂಗ್ ಮಾಡುವುದರಿಂದ ನೀವು 300 ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ನೀವು ಗಂಟೆಗೆ 16 ಮೈಲಿ ವೇಗದಲ್ಲಿ 30 ನಿಮಿಷಗಳ ಕಾಲ ಸೈಕಲ್ ಬಿಟ್ಟರೆ 372 ಕ್ಯಾಲೊರಿಗಳನ್ನು ಸುಡಬಹುದು.

ಮೆಟ್ಟಿಲುಗಳನ್ನು ಏರಿ:
ನಿಮ್ಮ ಅಪಾರ್ಟ್ಮೆಂಟ್, ಕಚೇರಿ, ಹೋಟೆಲ್ ಕೋಣೆ ಅಥವಾ ಮೆಟ್ಟಿಲುಗಳಿರುವ ಯಾವುದೇ ಸ್ಥಳದಲ್ಲಿ ಅವುಗಳನ್ನೇ ಬಳಸಿ. 10 ನಿಮಿಷ ಮೆಟ್ಟಿಲುಗಳ ಏರಿಕೆಯು 100 ಕ್ಯಾಲೊರಿಗಳನ್ನು ಸುಡುತ್ತದೆ. ಕ್ಲೈಂಬಿಂಗ್ ನಿಮ್ಮ ದೇಹದ ಕೆಳಭಾಗಗಿನ ಸ್ನಾಯುಗಳು ಮತ್ತು ಇತರ ಸ್ನಾಯುಗಳನ್ನು ಬಲಪಡಿಸುತ್ತದೆ.

ಓಡುವಾಗ ಮೊಣಕಾಲನ್ನು ಮೇಲಕ್ಕೆ ಹೋಗುವಂತೆ ಪ್ರಯತ್ನಿಸಿ:
ಇದು ಬಹಳ ಉತ್ತಮವಾದ ವ್ಯಾಯಾಮವಾಗಿದೆ. ಓಡುವಾಗ ನಿಮ್ಮ ಮೊಣಕಾಲನ್ನು ಸಾಧ್ಯವಾದಷ್ಟು ಮೇಲಕ್ಕೆ ಎತ್ತಲು ಪ್ರಯತ್ನಿಸಿ. ಈ ವ್ಯಾಯಾಮ ನಿಮ್ಮ ಕಾಲಿನ ಸ್ನಾಯುಗಳಿಗೆ ಸಹಾಯ ಮಾಡುವುದಲ್ಲದೇ, ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಕಡಿಮೆ ಸಮಯದಲ್ಲಿ ಅಧಿಕ ಕ್ಯಾಲೋರಿ ತೆಗೆದುಹಾಕಲು ಈ ವಿಧಾನ ಅತ್ಯಂತ ಪರಿಣಾಮಕಾರಿಯಾಗಿದೆ.

ಹಗ್ಗ-ಜಿಗಿತವನ್ನು ಪ್ರಯತ್ನಿಸಿ:
10 ನಿಮಿಷಗಳವರೆಗೆ ಹಗ್ಗ ಜಿಗಿತವನ್ನು ಮಾಡುವುದರಿಂದ ನೀವು 100-150 ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು. ಮನೆಯಲ್ಲಿ ಯಾರು ಬೇಕಾದರೂ ಮಾಡಬಹುದಾದ ಸರಳ ತೂಕ ನಷ್ಟ ಚಟುವಟಿಕೆ ಇದಾಗಿದೆ. ಹೆಚ್ಚುವರಿ ಕ್ಯಾಲೋರಿಗಳನ್ನು ತೊಡೆದುಹಾಕಲು ಹಾಗೂ ಕೈ- ಕಾಲುಗಳ ಸಮನ್ವಯವನ್ನು ಸುಧಾರಿಸುತ್ತದೆ ಜೊತೆಗೆ ಅದೇ ಸಮಯದಲ್ಲಿ ನಿಮ್ಮ ದೇಹದ ಕಡಿಮೆ ಸ್ನಾಯುಗಳನ್ನು ಬಲಪಡಿಸುತ್ತದೆ.

ಸಮಯ ಸಿಕ್ಕಾಗ ಈಜಿ:
ಈಜುವುದು ರಕ್ತದ ಹರಿವು, ಶ್ವಾಸಕೋಶ ಮತ್ತು ಹೃದಯದ ಸಾಮರ್ಥ್ಯವನ್ನು ಸಮರ್ಥವಾಗಿರಿಸಲು ಸಹಾಯ ಮಾಡುತ್ತದೆ ಮತ್ತು ದೇಹದ ಸ್ನಾಯುವಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಕ್ಯಾಲೊರಿಗಳನ್ನು ಸುಡುವ ಉತ್ತಮ ಮಾರ್ಗವಾಗಿದೆ. ದೀರ್ಘಕಾಲದ ಮೊಣಕಾಲು ನೋವು ಅಥವಾ ಸೀಮಿತ ಚಲನಶೀಲತೆಯಿಂದಾಗಿ ನೀವು ಈಜಲು ಸಾಧ್ಯವಾಗದಿದ್ದರೆ, ಈಜು ಲ್ಯಾಪ್ಸ್ ಅಥವಾ ವಾಟರ್ ಏರೋಬಿಕ್ಸ್ ಅನ್ನು ಪ್ರಯತ್ನಿಸಿ.

ಪಾದಯಾತ್ರೆ ಮಾಡಿ:
ಕಾಡಿಗೆ ಮಾಡುವ ಪಾದಯಾತ್ರೆಯು ಕೇವಲ 15 ನಿಮಿಷಗಳಲ್ಲಿ 100 ಕ್ಯಾಲೊರಿಗಳನ್ನು ನಾಶಮಾಡಬಹುದು. ಪಾದಯಾತ್ರೆ ಮುಖ್ಯವಾಗಿ ವಾಕಿಂಗ್ ನ ಹೆಚ್ಚು ತೀವ್ರವಾದ ರೂಪವಾಗಿದೆ, ಆದ್ದರಿಂದ ಇದು ಹೆಚ್ಚು ಕ್ಯಾಲೊರಿಗಳನ್ನು ಸುಡುತ್ತದೆ. ಇದು ನಿಮ್ಮ ಕಾಲು ಮತ್ತು ಸ್ನಾಯುಗಳನ್ನು ಸಹ ಆರೋಗ್ಯವಾಗಿರಿಸುತ್ತದೆ.



Click it and Unblock the Notifications