Latest Updates
-
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ!
ಮಲಗುವ ಮೊದಲು ಪುಸ್ತಕ ಓದಬೇಕು ಎನ್ನುವುದು ಇದೇ ಕಾರಣಕ್ಕೆ..!
ಒಂದು ಪುಸ್ತಕ ಒರ್ವ ವ್ಯಕ್ತಿಯನ್ನು ಸಧೃಢ ವ್ಯಕ್ತಿಯನ್ನಾಗಿಸಲು ಸಹಕರಿಸುತ್ತದೆ. ಆದ್ರೆ ಸ್ಮಾರ್ಟ್ ಫೋನ್ ಬಂದ್ಮೇಲೆ ಜನ ಪುಸ್ತಕ ಓದುವ ಹವ್ಯಾಸವನ್ನೇ ಮರೆತಾಗಿದೆ. ಈ ಗೆಜೆಟ್‌ಗಳು ನಮ್ಮ ಕಣ್ಣು ಮಾತ್ರವಲ್ಲ ನಮ್ಮ ಮೆದುಳಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ನಿಮಗೆಲ್ಲಾ ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ಎಲಾನ್ ಮಸ್ಕ್ ಬಗ್ಗೆ ಗೊತ್ತಿರಬಹದು. ಅವರು ಪುಸ್ತಕಗಳನ್ನು ಓದುತ್ತಲೇ ರಾಕೆಟ್ ತಯಾರು ಮಾಡೋ ವಿಚಾರದ ಬಗ್ಗೆ ತಿಳಿದುಕೊಂಡಿದ್ರಂತೆ. ಅಷ್ಟೇ ಯಾಕೆ ಅಮೆರಿಕಾದ ಶ್ರೀಮಂತ ಉದ್ಯಮಿ ವಾರೆನ್ ಬಫೆಟ್ ಪುಸ್ತಕ ಓದುವುದಕ್ಕಾಗಿಯೇ ತಮ್ಮ ದಿನದ ಐದರಿಂದ ಆರು ಗಂಟೆಗಳನ್ನು ಮೀಸಲಿಟ್ಟಿದ್ದರಂತೆ. ನಿಮಗೊತ್ತಾ ಸಿಇಒ ಗಳನ್ನು ಜಗತ್ತಿನ ಅತ್ಯಂತ ಬ್ಯೂಸಿ ವ್ಯಕ್ತಿಗಳನ್ನು ಅಂತ ಹೇಳಲಾಗುತ್ತದೆ. ಇಂತಹ ಸಿಇಒಗಳೇ ಪುಸ್ತಕ ಓದುವುದಕ್ಕೆ ಇಂತಿಷ್ಟು ಸಮಯ ಮೀಸಲಿಡುತ್ತಾರೆ ಅಂದ್ರೆ ನಮ್ಮಂತಹ ಸಾಮಾನ್ಯ ಜನರಿಂದ ಸಾಧ್ಯಇಲ್ವಾ?
ರಾತ್ರಿ ಮಲಗುವ ಮೊದಲು ಪುಸ್ತಕ ಓದುವ ಹವ್ಯಾಸ ತುಂಬಾನೇ ಒಳ್ಳೆಯದು. ಹಾಗಾದ್ರೆ ರಾತ್ರಿಯ ನಿದ್ದೆಗೂ ಮೊದಲು ಪುಸ್ತಕ ಓದುವುದರಿಂದ ಏನೆಲ್ಲಾ ಲಾಭ ಇದೆ ಅನ್ನೋದನ್ನ ತಿಳಿದುಕೊಳ್ಳೋಣ.
ಮಲಗುವ ಮೊದಲು ಪುಸ್ತಕ ಓದುವುದರಿಂದ ಆಗುವ ಲಾಭಗಳೇನು?
1. ಒತ್ತಡ ಕಡಿಮೆಯಾಗುತ್ತದೆ
ಇಡೀ ದಿನದ ಕೆಲಸ ರಾತ್ರಿಯಾಗುವ ವೇಳೆ ನಿಮ್ಮನ್ನು ಒತ್ತಡಕ್ಕೆ ತಳ್ಳಿಬಿಡಬಹುದು. ಮಾರನೇ ದಿನ ಕೆಲಸ ಮಾಡುವುದಕ್ಕೂ ಮನಸ್ಸು ಇರುವುದಿಲ್ಲ. ಇಂತಹ ವೇಳೆ ಮಲಗುವ ಮುನ್ನ ಒಂದೊಳ್ಳೆ ಪುಸ್ತಕ ತೆಗೆದುಕೊಳ್ಳಿ ಕೇವಲ ಆರು ನಿಮಿಷ ಪುಸ್ತಕ ಓದುವುದರಿಂದ ಶೇಕಡ 68 ರಷ್ಟು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳಿಂದ ಸಾಭೀತಾಗಿದೆ.
2. ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ
ನಾವು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿದಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದರಿಂದ ನಮ್ಮ ಜ್ಞಾನವು ಕೂಡ ಹೆಚ್ಚಾಗುತ್ತದೆ. ನಾವು ಬೇರೆ ಬೇರೆ ವಿಚಾರಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಷ್ಟು ನಮ್ಮ ಬುದ್ಧಿವಂತಿಕೆಯು ಹೆಚ್ಚಾಗುತ್ತದೆ. ಸಾಧ್ಯವಾದಷ್ಟು ಕಾಲ್ಪನಿಕವಲ್ಲದ ಕಥೆಗಳನ್ನೇ ಹೆಚ್ಚಾಗಿ ಓದಿ ಇದರಿಂದ ನೀವು ಮಾಹಿತಿಯನ್ನು ತಿಳಿದುಕೊಳ್ಳುತ್ತೀರಿ. ಕಾಲ್ಪನಿಕ ಹಾಗೂ ಫ್ಯಾಂಟಸಿ ಕಥೆಗಳು ನಿಮ್ಮ ಶಬ್ಧಕೋಶ ವಿಸ್ತರಿಸಲು ಸಹಾಯ ಮಾಡುತ್ತದೆ.
3. ವಿಶ್ರಾಂತಿ ಸಿಗುತ್ತದೆ
ನೀವು ದಿನದ ಕೆಲಸದಿಂದ ವಿಚಲಿತಗೊಂಡಿದ್ದರೆ ಮನೆಗೆ ಬಂದ ಮೇಲೆ ಸಾಧ್ಯವಾದಷ್ಟು ನಿಮ್ಮ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿ. ಪುಸ್ತಕ್ಕಿಂತ ಒಳ್ಳೆಯ ಸ್ನೇಹಿತ ಮತ್ತೊಂದಿಲ್ಲ. ಈ ವೇಳೆ ನೀವು ಒಂದು ಒಳ್ಳೆಯ ಪುಸ್ತಕ ಹಿಡಿದು ಕುಳಿತುಕೊಂಡರೆ ಸಾಕು ಅದು ನಿಮ್ಮನ್ನು ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ನಿಮಗೆ ಹಾಯಾದ ಅನುಭವ ಸಿಗುತ್ತದೆ. ನಿಮ್ಮ ಮೆದುಳು, ಮನಸ್ಸು ಹಾಗೂ ದೇಹಕ್ಕೂ ವಿಶ್ರಾಂತಿ ಸಿಗುತ್ತದೆ.
4. ಮನಸ್ಸಿಗೆ ಶಾಂತಿ ಸಿಗುತ್ತದೆ
ಈ ಬ್ಯೂಸಿ ಲೈಫ್‌ನ ಜಂಜಾಟದಿಂದ ಹೊರಬರಬೇಕು ಅನ್ನಿಸಿದರೆ ಪುಸ್ತಕ ಒಂದಿದ್ದರೆ ಸಾಕು. ನಿಮಗಿಷ್ಟ ಪುಸ್ತಕವನ್ನು ಹಿಡಿದುಕೊಂಡು ಕುಳಿತರೆ ಇಡೀ ಜಗತ್ತನ್ನೇ ಮರೆಯಬಹುದು. ಟಿವಿ, ಮೊಬೈಲ್‌ಗಳಲ್ಲಿ ಜೋರಾದ ಶಬ್ಧ, ಡ್ರಾಮ, ಹಿಂಸೆ ಎಲ್ಲವನ್ನೂ ಅನುಭವಿಸಬೇಕಾಗುತ್ತದೆ. ಅದೇ ಪುಸ್ತಕ ಹಾಗಲ್ಲ ಅದರಲ್ಲಿ ಬರುವ ಕಥೆಗಳಿಂದ ನಮ್ಮ ಮನಸ್ಸಿನಲ್ಲಿ ಒಂದು ಚಿತ್ರಣವನ್ನು ಸೃಷ್ಟಿಸುತ್ತೇವೆ. ಅಲ್ಲಿ ಒಂದು ಪ್ರಶಾಂತ ಭಾವ ಆವರಿಸಿರುತ್ತದೆ.
5. ಸಹಾನುಭೂತಿ
ಜಗತ್ತಿನಲ್ಲಿ ಪ್ರತಿಯೊಬ್ಬರು ಒಂದೊಂದು ಗುಣವನ್ನು ಹೊಂದಿರುತ್ತಾರೆ. ಕೆಲವರಂತೂ ಕಟು ಮನಸ್ಸಿನವರಾಗಿರುತ್ತಾರೆ. ಉದಾಹರಣೆ ನಾವು ಪುಸ್ತಕವನ್ನು ಓದುತ್ತಾ ಕೆಲವೊಂದು ಬಾರಿ ಆ ಕಥಾ ನಾಯಕನ ಒಳ್ಳೆಯ ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಳ್ಳುತ್ತೇವೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಅಂತ ಅನ್ನಿಸುತ್ತೆ ಹೀಗೆ ಕೆಲವೊಂದು ಒಳ್ಳೆಯ ಗುಣಗಳನ್ನು ನಮಗೆ ಗೊತ್ತಿಲ್ಲದ ಹಾಗೇ ಬೆಳೆಸಿಕೊಳ್ಳುತ್ತೇವೆ.
6. ಏಕಾಗ್ರತೆ ಹೆಚ್ಚಾಗುತ್ತದೆ
ಹೆಚ್ಚಿನ ಜನ ರಾತ್ರಿ ಮಗುವ ಮೊದಲು ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚಿನ ಕಾಲ ಕಳೆಯುತ್ತಾರೆ. ಒಂದು ಸಾರಿ ಫೇಸ್‌ಬುಕ್ ಆಮೇಲೆ ಇನ್‌ಸ್ಟಾಗ್ರಾಮ್, ವಾಟ್ಸ್‌ಅಪ್ ಹೀಗೆ ಒಂದರಿಂದ ಒಂದಕ್ಕೆ ಜಪ್ ಆಗುತ್ತಲೇ ಇರುತ್ತಾರೆ. ಆದರೆ ಪುಸ್ತಕ ಓದುವಾಗ ಹಾಗಲ್ಲ ಒಂದೇ ವಿಚಾರದ ಮೇಲೆ ನಮ್ಮ ಮನಸ್ಸು ಕೇಂದ್ರೀಕೃತವಾಗಿರುತ್ತದೆ. ಕೆಲವು ಗಂಟೆಗಳ ಕಾಲ ಒಂದೇ ವಿಚಾರದ ಬಗ್ಗೆ ನಮ್ಮ ಆಲೋಚನೆ ಇರುತ್ತದೆ. ಹೀಗಿರುವಾಗ ನಮ್ಮ ಏಕಾಗ್ರತಾ ಶಕ್ತಿ ಹೆಚ್ಚಾಗುತ್ತದೆ.
7. ಬೇಗನೆ ನಿದ್ರೆಗೆ ಜಾರಬಹುದು
ರಾತ್ರಿ ಮಲಗುವ ಮೊದಲು ಮೊಬೈಲ್ ಅಥವಾ ಟಿವಿ ನೋಡುವ ಅಭ್ಯಾಸವಿದ್ದರೆ ನಮಗೆ ಬೇಗನೆ ನಿದ್ರೆ ಬರುವುದಿಲ್ಲ. ಬದಲಾಗಿ ಮೊಬೈಲ್ ಅನ್ನು ಮತ್ತಷ್ಟು ಸ್ಕ್ರೋಲ್ ಮಾಡಬೇಕು ಅನ್ನಿಸುತ್ತೆ. ಆದ್ರೆ ನೀವೇನಾದರೂ ಪುಸ್ತಕ ಹಿಡಿದುಕೊಂಡು ಕೂತರೆ ಕ್ಷಣ ಮಾತ್ರದಲ್ಲಿ ನಿದ್ರೆಗೆ ಜಾರುತ್ತೀರಿ. ಅದರಲ್ಲೂ ಮುಖ್ಯವಾಗಿ ನಿಮಗಿಷ್ಟವಿಲ್ಲದ ಪುಸ್ತಕಗಳನ್ನು ಹಿಡಿದುಕೊಂಡರಂತೂ ಕೇಳೋದೇಬೇಡ ಪುಸ್ತಕ ಹಿಡದ ಐದು ನಿಮಿಷಕ್ಕೆ ತೂಕಡಿಸೋದಕ್ಕೆ ಶುರು ಮಾಡಿಬಿಡುತ್ತೀರಾ.
8. ಸೃಜನಶೀಲತೆ (Creativity) ಹೆಚ್ಚಾಗುತ್ತದೆ
ಪುಸ್ತಕ ನಿಮ್ಮನ್ನು ಸೃಜನಶೀಲ ವ್ಯಕ್ತಿಯನ್ನಾಗಿ ಮಾಡುತ್ತದೆ. ನಿಮ್ಮ ಆಲೋಚನಾ ಸಾಮರ್ಥ್ಯ ಹೆಚ್ಚಾಗುತ್ತದೆ. ವಿಚಾರಗಳ ಬಗ್ಗೆ ತಿಳಿದುಕೊಂಡಷ್ಟು ನಿಮ್ಮ ಜ್ಞಾನ ಹೆಚ್ಚಾಗುತ್ತದೆ. ಯಾವುದಾದರೂ ಒಂದು ವಿಚಾರದ ಬಗ್ಗೆ ನಿಮ್ಮ ತೀರ್ಮಾನ ಮೊದಲಿಗಿಂತ ಈಗ ಭಿನ್ನವಾಗಿರಬಹುದು. ಇದೆಲ್ಲಾ ಸಾಧ್ಯವಾಗೋದು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಾಗ ಮಾತ್ರ.
ನಮ್ಮಲ್ಲಿ ಮಹಾನ್ ಸಾಧನೆ ಮಾಡಿದ ವ್ಯಕ್ತಿಗಳ ಹಿಂದೆ ಅವರ ಯಶಸ್ಸಿಗೆ ಪುಸ್ತಕಗಳು ನೆರವಾಗಿದ್ದವು ಎಂಬ ಮಾತು ಸುಳ್ಳಲ್ಲ. ಇನ್ನಾದರೂ ಮೊಬೈಲ್, ಟಿವಿ, ಸೋಶಿಯಲ್ ಮಿಡಿಯಾದ ಹುಚ್ಚು ಗೀಳಿನಿಂದ ಹೊರಬಂದು ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


