Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಈ ಬೇಸಿಗೆಯಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ ಈ ಅಗ್ನಿ ಟೀ
ಬೇಸಿಗೆಯ ಕಾಲದಲ್ಲಿ ವಾತಾವರಣಕ್ಕೆ ಹೊಂದಿಕೊಳ್ಳುವುದು ತುಂಬಾ ಕಷ್ಟ. ತಾಪಮಾನವು ಹೆಚ್ಚಾಗುವುದರೊಂದಿಗೆ, ಬೇಸಿಗೆಯ ಶಾಖವನ್ನು ದೂರವಿರಿಸಲು ಆಹಾರ ಮತ್ತು ಫಿಟ್ನೆಸ್ ದಿನಚರಿಯಲ್ಲಿ ಕೆಲವು ಕಾಲೋಚಿತ ಬದಲಾವಣೆಗಳನ್ನು ಮಾಡುವುದು ಬಹಳ ಮುಖ್ಯವಾಗುತ್ತದೆ. ಹಾಗೆ ಮಾಡಲು ಹಲವು ಮಾರ್ಗಗಳಿವೆ, ನೀರಿನಾಂಶ ಇರುವ ಆಹಾರಗಳನ್ನು ಸೇವಿಸುವುದು, ಹಗುರವಾದ ಆಹಾರವನ್ನು ಸೇವಿಸಸುವುದು ಇತ್ಯಾದಿ.
ಇದರ ಜೊತೆಗೆ ನೀವು ಸೂಕ್ತವಾದ ಗಿಡಮೂಲಿಕೆ ಔಷಧಿಗಳನ್ನು ಸಹ ಆರಿಸಿಕೊಳ್ಳಬಹುದು. ಆಯುರ್ವೇದದ ಡಿಟಾಕ್ಸ್ ಪಾನೀಯಗಳನ್ನು ಸೇವಿಸುವ ಮೂಲಕ ಬೇಸಿಗೆಯ ದಿನಗಳನ್ನು ಕಳೆಯಬಹುದು. ಅಂತಹ ಒಂದು ಡಿಟಾಕ್ಸ್ ಪಾನೀಯವೇ ಆಯುರ್ವೇದಿಕ್ ಅಗ್ನಿ ಟೀ. ಇದನ್ನ ತಯಾರಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ಹೇಳಿದ್ದೇವೆ.

ಈ ಆಯುರ್ವೇದಿಕ್ ಅಗ್ನಿ ಟೀ ಯ ಪ್ರಯೋಜನಗಳೇನು ?:
* ನಿಮ್ಮ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.
* ದೇಹದಲ್ಲಿ ಅನಗತ್ಯ ಮತ್ತು ಸಂಗ್ರಹವಾದ ವಿಷತ್ವವನ್ನು ತೊಡೆದುಹಾಕಲು ಅವು ಸಹಾಯ ಮಾಡುತ್ತವೆ.
* ನಿಮ್ಮ ದೇಹವನ್ನು ಸಮತೋಲನ ರೀತಿಯಲ್ಲಿ ಇಡುತ್ತದೆ.
* ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಬೇಕಾಗುವ ಪದಾರ್ಥಗಳು:
1 ಎಳನೀರು,
ಕೆಂಪುಮೆಣಸು -½
1 ಇಂಚು ಶುಂಠಿ
1-2 ಚಮಚ - ಕಲ್ಲು ಉಪ್ಪು
2 ಚಮಚ - ಬೆಲ್ಲ

ತಯಾರಿಸುವ ವಿಧಾನ:
೧. ಮೇಲಿನ ಎಲ್ಲಾ ಪದಾರ್ಥಗಳನ್ನು 20 ನಿಮಿಷಗಳ ಕಾಲ ಕುದಿಸಿ.
೨. ಕೆಲವು ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ನಂತರ ಅದಕ್ಕೆ ನಿಂಬೆ ರಸವನ್ನು ಹಿಂಡಿ (ನಿಂಬೆ ರಸವನ್ನು ಕುದಿಸಬೇಡಿ).
೩. ಪಾನೀಯವನ್ನು ಥರ್ಮೋಸ್ನಲ್ಲಿ ಹಾಕಿಡಿ. ಇದರಿಂದ ಅದು ಬೆಚ್ಚಗಿರುತ್ತದೆ ಮತ್ತು ದಿನವಿಡೀ ಸಿಪ್ ಮಾಡಿ.



Click it and Unblock the Notifications
