Latest Updates
-
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ!
ಪುರುಷರು ಮುಚ್ಚುಮರೆಯಿಲ್ಲದೆ ವೈದ್ಯರಲ್ಲಿ ಹೇಳಲೇಬೇಕಾದ ವಿಷಯಗಳು!
ಆರೋಗ್ಯ ಸಮಸ್ಯೆ ಎನ್ನುವುದು ಪ್ರತಿಯೊಬ್ಬರಿಗೂ ಕಟ್ಟಿಟ್ಟ ಬುತ್ತಿ ಎನ್ನಬಹುದು. ಜೀವನದಲ್ಲಿ ಯಾವುದೇ ಅನಾರೋಗ್ಯ ಅನುಭವಿಸದೆ ಇರುವ ವ್ಯಕ್ತಿ ಇರಲು ಸಾಧ್ಯವಿಲ್ಲ. ಕೆಲವರಿಗೆ ಹೆಚ್ಚಿನ ಅನಾರೋಗ್ಯ ಸಮಸ್ಯೆ ಇರಬಹುದು. ಇನ್ನೂ ಕೆಲವರಿಗೆ ಕಡಿಮೆ ಅನಾರೋಗ್ಯ ಸಮಸ್ಯೆ ಇರಬಹುದು ಅಷ್ಟೆ. ಹಣವಿಲ್ಲದೆ ಇದ್ದರೂ ಮಾನಸಿಕವಾಗಿ ಅಷ್ಟೊಂದು ನೋವು ಉಂಟಾಗದೆ ಇರಬಹುದು. ಅದೇ ನಿರಂತರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅಥವಾ ಆಗಾಗ ಅನಾರೋಗ್ಯದ ಸಮಸ್ಯೆ ಕಾಡುತ್ತಲೇ ಇರುತ್ತದೆ. ಇದರಿಂದ ಮಾನಸಿಕವಾಗಿ ಸಾಕಷ್ಟು ನೋವುಂಟಾಗುವುದು. ಮನಸ್ಸಿಗೆ ಕಾಡುವ ಬೇಸರ ಮತ್ತು ಜಿಗುಪ್ಸೆಯ ಭಾವನೆಯು ಇನ್ನಷ್ಟು ಅನಾರೋಗ್ಯವನ್ನು ಹೆಚ್ಚಿಸುವುದು.
ಇದೆಲ್ಲವೂ ಅರಿತಿದ್ದರೂ ಸಹ ಬಹುತೇಕ ಮಂದಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ವೈದ್ಯರಲ್ಲಿ ತಪಾಸಣೆಗೆ ಒಳಗಾಗುವುದಿಲ್ಲ. ತಮಗೆ ಕಾಡುತ್ತಿದ್ದ ಸಮಸ್ಯೆಯು ಉಲ್ಭಣವಾಗುತ್ತಿದೆ ಎಂದು ಅರಿತಾಗ ಆಸ್ಪತ್ರೆಗೆ ದೌಡಾಯಿಸುತ್ತಾರೆ. ಆಗಲೂ ಸಹ ತಮ್ಮ ಆರೋಗ್ಯ ಸಮಸ್ಯೆ ಹೇಗೆ ಪ್ರಾರಂಭವಾಯಿತು? ಎಷ್ಟು ದಿನದಿಂದ ಕಾಡುತ್ತಿದೆ? ಯಾವೆಲ್ಲಾ ಲಕ್ಷಣಗಳು ಕಾಣಿಸಿಕೊಂಡಿದ್ದವು ಎನ್ನುವುದರ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡುವುದಿಲ್ಲ. ಬದಲಿಗೆ ಒಂದಿಷ್ಟು ವಿಷಯವನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ. ಈ ಕಾರಣಗಳಿಂದಲೂ ವೈದ್ಯರಿಗೆ ಸರಿಯಾದ ಔಷಧ ಅಥವಾ ಚಿಕಿತ್ಸೆ ನೀಡಲು ಕಷ್ಟವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ಅಷ್ಟಾಗಿ ವೈದ್ಯರಲ್ಲಿ ತಪಾಸಣೆ ಮಾಡಿಸಿ, ಔಷಧಿಯನ್ನು ಪ್ರಾರಂಭಿಸಿದರು ಎಂದಾದ ಮೇಲೂ, ಸ್ವಲ್ಪ ಚೇತರಿಕೆ ಕಂಡ ಬಳಿಕ ಔಷಧವನ್ನು ಸೇವಿಸುವ ಅವಧಿಯವರೆಗೂ ಮುಂದುವರಿಸುವುದಿಲ್ಲ. ಅರ್ಧದಲ್ಲಿಯೇ ಔಷಧ ಸೇವನೆಯನ್ನು ನಿಲ್ಲಿಸಿ ಬಿಡುತ್ತಾರೆ. ಜೊತೆಗೆ ತಾವೇ ವೈದ್ಯರಷ್ಟು ಜ್ಞಾನ ಇರುವವರಂತೆ ವರ್ತಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇಂತಹ ವಿಷಯದಲ್ಲಿ ಮಹಿಳೆಯರು ಹೆಚ್ಚಾಗಿ ಈ ರೀತಿಯಲ್ಲಿಯೇ ವರ್ತಿಸುತ್ತಾರೆ ಎನ್ನಲಾಗುವುದು. ಪುರುಷರು ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚು ರಹಸ್ಯ ಇರುವಂತೆ ನೋಡಿಕೊಳ್ಳುತ್ತಾರೆ. ಹೆಚ್ಚಿನ ಸಂಗತಿಗಳ ಬಗ್ಗೆ ಹೇಳಿಕೊಳ್ಳುವುದಿಲ್ಲ ಎಂದು ಹೇಳಲಾಗುವುದು.

ಅಧ್ಯಯನದ ಪ್ರಕಾರ
ಒಂದು ಅಧ್ಯಯನದ ಪ್ರಕಾರ ಪುರುಷರು ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಅವಿಶ್ವಾಸನೀಯವಾಗಿ ಇರುತ್ತಾರೆ. ತಮ್ಮ ಸಮಸ್ಯೆಯನ್ನು ವೈದ್ಯರಲ್ಲಿ ಹೇಳಿಕೊಳ್ಳಲು ಸಾಕಷ್ಟು ಕಷ್ಟಪಡುತ್ತಾರೆ. ಅಲ್ಲದೆ ಅವರ ಸಮಸ್ಯೆಯನ್ನು ಚರ್ಚಿಸುವಲ್ಲಿ ಸಾಕಷ್ಟು ಮುಜುಗರಕ್ಕೆ ಒಳಗಾಗುತ್ತಾರೆ. ರೋಗವನ್ನು ಪತ್ತೆ ಹಚ್ಚಲು ಹೇಳುವ ಕೆಲವು ಪ್ರಯೋಗಾಲಯ ಹಾಗೂ ತಪಾಸಣೆಗಳ ಬಗ್ಗೆ ಬೇಸರ ಪಡುವರು. ಅವುಗಳನ್ನು ಮಾಡಿಸಿಕೊಳ್ಳಲು ಸಾಕಷ್ಟು ಬೇಸರವನ್ನು ಅನುಭವಿಸುವರು. ಬಹುತೇಕ ಸಂದರ್ಭದಲ್ಲಿ ತಮ್ಮ ಆರೋಗ್ಯ ಸಮಸ್ಯೆಯನ್ನು ಮುಚ್ಚಿಡುವರು. ಅಲ್ಲದೆ ಹೆಚ್ಚಿನ ವಿಷಯಗಳನ್ನು ವೈದ್ಯರೊಂದಿಗೆ ಮುಚ್ಚಿಡುವರು ಎನ್ನಲಾಗುವುದು. ಹಾಗಾದರೆ ಅಂತಹ ವಿಚಾರಗಳು ಯಾವವು? ಅವರ ಆರೋಗ್ಯ ಸಮಸ್ಯೆ ಏನು? ಎನ್ನುವುದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮುಂದಿನ ವಿವರಣೆಯಲ್ಲಿ ವಿವರಿಸಲಾಗಿದೆ.

ಖಿನ್ನತೆಯ ಸಮಸ್ಯೆ
ಸದಾ ಮನೆಯಿಂದ ಹೊರಗೆ ಇದ್ದು ದುಡಿಯುವ ಪುರುಷರು ಸಾಕಷ್ಟು ನಿಂದನೆ, ಒತ್ತಡ ಹಾಗೂ ಸವಾಲುಗಳನ್ನು ಸ್ವೀಕರಿಸಬೇಕಾಗುವುದು. ಅಂತಹ ವಿಷಯಗಳನ್ನು ಎದುರಿಸುವಾಗ ಕೆಲವೊಮ್ಮೆ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಅಂತಹ ಸಮಸ್ಯೆ ಎದುರರಾದಾಗ ಅದನ್ನು ಬಹುತೇಕ ಪುರುಷರು ಯಾರಲ್ಲೂ ಹೇಳಿಕೊಳ್ಳುವುದಿಲ್ಲ. ಹಾಗಾಗಿ ಪುರುಷರು ವೈದ್ಯರಲ್ಲಿ ಖಿನ್ನತೆಯ ವಿಷಯವನ್ನು ಹಂಚಿಕೊಳ್ಳಬೇಕು. ಖಿನ್ನತೆ ಹೆಚ್ಚುತ್ತಾ ಹೋದಂತೆ ನಿದ್ರಾ ಹೀನತೆ ಕಾಡುವುದು. ನಿದ್ರಾ ಹೀನತೆಯಿಂದ ಆರೋಗ್ಯದಲ್ಲಿ ಅನೇಕ ಸಮಸ್ಯೆ ಉಂಟಾಗುವುದು. ಅವುಗಳನ್ನು ಅನಪೇಕ್ಷಿತವಾಗಿ ಎದುರಿಸಬೇಕಾಗುವ ಅನಿವಾರ್ಯತೆ ಉಂಟಾಗುವುದು. ಹಾಗಾಗಿ ಇಂತಹ ಸಮಸ್ಯೆ ಎದುರಾದಾಗ ತಪ್ಪದೇ ಪುರುಷರು ವೈದ್ಯರಲ್ಲಿ ಹೇಳಿಕೊಳ್ಳಬೇಕು.

ಹವ್ಯಾಸಗಳ ಬಗ್ಗೆ ಮರೆಮಾಚುವುದು
ಕೆಲವು ಪುರುಷರಿಗೆ ವಾರದ ಅಂತ್ಯದಲ್ಲಿ ಅಥವಾ ವೀಕೆಂಡ್ ಸ್ನೇಹಿತರೊಂದಿಗೆ ಸೇರುವ ಹವ್ಯಾಸ ಇರುತ್ತದೆ. ಅಂದರೆ ಶನಿವಾರದಂದು ಸಿಗುವ ಸ್ನೇಹಿತರೊಂದಿಗೆ ಸಾಮಾನ್ಯವಾಗಿ ಅಧಿಕವಾಗಿ ಕುಡಿಯುತ್ತಾರೆ. ಅತಿಯಾದ ಕುಡಿತವು ಸಾಮಾನ್ಯ ಹವ್ಯಾಸವಾಗಿ ಬಿಟ್ಟರೆ ಸಾಕಷ್ಟು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯ ಜೊತೆಗೆ ಗಂಭೀರ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುವುದು. ಎಂತಹದ್ದೇ ಆರೋಗ್ಯ ಸಮಸ್ಯೆ ಇದ್ದರೂ ಮೊದಲು ವೈದ್ಯರಲ್ಲಿ ನಿಮಗಿರುವ ಕುಡಿತದ ಹವ್ಯಾಸದ ಬಗ್ಗೆ ಹೇಳಿ. ಅನೇಕರು ತಮ್ಮ ಈ ಹವ್ಯಾಸವನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ.

ನಿದ್ರಾ ಹೀನತೆ
ನಿದ್ರಾ ಹೀನತೆಯು ವ್ಯಕ್ತಿಗೆ ಕಾಡುವ ಗಂಭೀರ ಸಮಸ್ಯೆಗಳಲ್ಲಿ ಒಂದು. ಮನುಷ್ಯನಿಗೆ ಸೂಕ್ತ ಅವಧಿಯಷ್ಟು ನಿದ್ರೆಯನ್ನು ಹೊಂದಬೇಕಾಗುವುದು. ಅದೇ ನಿದ್ರೆಯ ಅವಧಿಯು ಕಡಿಮೆಯಾಗಿದೆ ಅಥವಾ ಮಲಗಿದ್ದರೂ ನಿದ್ರೆ ಬರದು ಎಂದಾಗಿದ್ದರೆ ಅದೊಂದು ಆರೋಗ್ಯ ಸಮಸ್ಯೆ ಆಗಿರುತ್ತದೆ. ವ್ಯಕ್ತಿ ನಿತ್ಯವೂ ಆರು ಘಂಟೆಗಳಿಗಿಂತಲೂ ಕಡಿಮೆ ನಿದ್ರೆಯನ್ನು ಹೊಂದಿದ್ದಾರೆ ಎಂದಾದರೆ ಸಾಕಷ್ಟು ಹಿಂಸೆ ಹಾಗೂ ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಾನೆ. ಹಾಗಾಗಿ ಪುರುಷರು ತಮ್ಮ ನಿದ್ರಾ ಹೀನತೆಯ ಸಮಸ್ಯೆಯನ್ನು ವೈದ್ಯರಲ್ಲಿ ತಪ್ಪದೆ ಹೇಳಿಕೊಳ್ಳಬೇಕು. ಅದರಲ್ಲಿ ಮುಚ್ಚಿಡುವ ಪ್ರಯತ್ನಕ್ಕೆ ಹೋಗಬಾರದು.

ನೋವಿನ ಬಗ್ಗೆ ಚರ್ಚಿಸದೇ ಇರುವುದು
ದೇಹದಲ್ಲಿ ಕಾಣಿಸಿಕೊಳ್ಳುವ ನೋವುಗಳು ಸಾಕಷ್ಟು ಅಪಾಯಗಳನ್ನು ತಂದುಕೊಡುವುದು. ಅದರಲ್ಲೂ ಎದೆ ನೋವು, ಹೊಟ್ಟೆ ನೋವು, ಕರುಳಿನ ನೋವು ಉಂಟಾದಾಗ ಅದನ್ನು ವೈದ್ಯರಲ್ಲಿ ಮರೆ ಮಾಚಬಾರದು. ದೇಹದಲ್ಲಿ ಕಾಣಿಸಿಕೊಳ್ಳುವ ನೋವಿನ ಬಗ್ಗೆ ಪುರುಷರು ಹೆಚ್ಚಾಗಿ ಮರೆ ಮಾಚುತ್ತಾರೆ. ಕೆಲವೊಮ್ಮೆ ನಿರ್ಲಕ್ಷಿಸುವ ಸಾಧ್ಯತೆಗಳು ಇರುತ್ತವೆ. ಎದೆ ನೋವು, ಹೊಟ್ಟೆ ನೋವುಗಳು ಗಂಭೀರ ಆರೋಗ್ಯ ಸಮಸ್ಯೆಯನ್ನು ಉಂಟುಮಾಡುತ್ತವೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಇವುಗಳಿಂದ ಹೃದಯಘಾತ, ಒಳಾಂಗಗಳ ವೈಫಲ್ಯತೆ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಸಮಸ್ಯೆ ಎದುರಾದಾಗ ವೈದ್ಯರಲ್ಲಿ ತೋರಿಸಿಕೊಳ್ಳುವುದು ಸೂಕ್ತ.

ಉಸಿರಾಟದ ಕೊರತೆಯ ಸಮಸ್ಯೆ ಮರೆಮಾಚುವುದು
ಕೆಲಸದ ಒತ್ತಡ, ವಾತಾವರಣದ ವೈಪರೀತ್ಯ, ಮಾಲಿನ್ಯದ ಸಮಸ್ಯೆಗಳಿಂದ ಆರೋಗ್ಯದಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅದರಲ್ಲೂ ಹೆಚ್ಚಿನವರಿಗೆ ಉಸಿರಾಟದ ಸಮಸ್ಯೆ ಅಥವಾ ಉಸಿರಾಟದಲ್ಲಿ ವಿರಳತೆಯು ಉಂಟಾಗುತ್ತವೆ. ಅದು ಕೆಲವು ಸಮಯಗಳ ವರೆಗೆ ಮುಂದುವರಿದು, ನಂತರ ಸರಿಯಾಗಬಹುದು. ಇದನ್ನು ಪುರುಷರು ವೈದ್ಯರಲ್ಲಿ ಮರೆಮಾಚುವ ಸಾಧ್ಯತೆಗಳು ಹೆಚ್ಚು. ಇಂತಹ ಸಮಸ್ಯೆ ಇರುವಾಗ ಯಾವುದೇ ಮುಜುಗರಕ್ಕೆ ಒಳಗಾಗದೆ ಹೇಳಬೇಕು. ಈ ಸಮಸ್ಯೆಗಳಿಗೆ ವೈದ್ಯರು ಸೂಚಿಸುವ ಔಷಧ ಹಾಗೂ ಚಿಕಿತ್ಸೆಯನ್ನು ನಿಯಮಿತವಾಗಿ ಪಡೆಯಬೇಕು. ಇವುಗಳ ಬಗ್ಗೆ ನಿರ್ಲಕ್ಷ್ಯ ಅಥವಾ ಅಸಡ್ಡೆಯ ಭಾವನೆಯನ್ನು ತೋರಿಸದರೆ ಆರೋಗ್ಯ ಸಮಸ್ಯೆಯು ಹೆಚ್ಚುವುದು. ವೈದ್ಯರಲ್ಲಿ ತಪಾಸಣೆಗೆ ಒಳಗಾಗುವುದು ಮುಜುಗರದ ಸಂಗತಿಯಲ್ಲ. ಜೊತೆಗೆ ಆರೋಗ್ಯ ಸಮಸ್ಯೆಯನ್ನು ಮುಚ್ಚಿಡುವುದರಿಂದ ನಿಮ್ಮ ಆರೋಗ್ಯ ಸಮಸ್ಯೆಗಳು ಸಂಪೂರ್ಣವಾಗಿ ಗುಣಮುಖವಾಗದು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.



Click it and Unblock the Notifications