Latest Updates
-
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ? -
ಯುಗಾದಿ ಯಾವಾಗ ಆಚರಿಸುತ್ತಾರೆ? ಇಲ್ಲಿದೆ ದಿನಾಂಕ, ಶುಭ ಮುಹೂರ್ತ, ಸಮಯದ ಕುರಿತ ಸಂಪೂರ್ಣ ಮಾಹಿತಿ -
10 ರೂಪಾಯಿಯಲ್ಲಿ ಬಾಯಿ ಚಪ್ಪರಿಸಿ ಸವಿಯು ಚಟ್ನಿ ಮಾಡಿ! ಇಲ್ಲಿದೆ ಹೊಸ ಬಗೆಯ ರೆಸಿಪಿ! -
ಈ ರೀತಿ ಟೊಮೆಟೊ ಸೆಟ್ ದೋಸೆ! ಹಿಟ್ಟು ರುಬ್ಬುವ ಅವಶ್ಯಕತೆಯಿಲ್ಲ.. ಬ್ಯಾಚುಲರ್ಗಳಿಗೆ ಬೆಸ್ಟ್, ತೂಕ ಇಳಿಕೆಗೆ ಸೂಪರ್!
ಪುರುಷನ ಲೈಂಗಿಕ ಆರೋಗ್ಯವನ್ನೇ ಕದಡುವ ಅನಾರೋಗ್ಯ ಸಮಸ್ಯೆಗಳು
ನಿಮ್ಮ ದೇಹದ ಅತ್ಯಂತ ದೊಡ್ಡ ಲೈಂಗಿಕ ಅಂಗ ಯಾವುದು? ಬಹುತೇಕ ಪುರುಷರು ಜನನಾಂಗ ಎಂದೇ ಹೇಳಬಹುದು. ವಾಸ್ತವವಾಗಿ ಈ ಶ್ರೇಯ ಸಲ್ಲುವುದು ನಮ್ಮ ಮೆದುಳಿಗೆ! ಏಕೆಂದರೆ ಲೈಂಗಿಕ ಆರೋಗ್ಯ ಮೆದುಳಿನ ಭಾವನೆಗಳ ಮೇಲೆ ಬಹುವಾಗಿ ಅವಲಂಬಿತವಾಗಿದೆ. ನಿಮಿರುತನ ದೌರ್ಬಲ್ಯವಿರುವ ಸಂದರ್ಭಗಳಲ್ಲಿ ಸುಮಾರು ಹತ್ತರಿಂದ ಇಪ್ಪತ್ತು ಶೇಖಡಾ ಪ್ರಸಂಗಗಳು ಭಾವನಾತ್ಮಕ ಕಾರಣಗಳನ್ನು ಹೊಂದಿವೆ. ಇವುಗಳಲ್ಲಿ ಖಿನ್ನತೆಯಿಂದ ಹಿಡಿದು ಲೈಂಗಿಕ ಕ್ರಿಯೆಯ ಬಗ್ಗೆ ಇರುವ ಉದ್ವೇಗಗಳನ್ನು ಈ ತೊಂದರೆಗೆ ಧಾರಾಳವಾಗಿ ಕಾರಣವಾಗಿಸಬಹುದು.

ಹಾಗಾದರೆ ಉಳಿದ ಎಂಭತ್ತರಿಂದ ತೊಂಭತ್ತು ಶೇಖಡಾ ವ್ಯಕ್ತಿಗಳ ಪಾಡೇನು? ನಿಮಿರುದೌರ್ಬಲ್ಯಕ್ಕೆ ಬೇರೆ ಕಾರಣಗಳಿವೆ. "ಲೈಂಗಿಕ ಕ್ರಿಯೆಗೆ ಅಗತ್ಯವಿರುವ ಪೆಡಸುತನವನ್ನು ಪುರುಷ ಜನನಾಂಗ ಪಡೆಯದಿರುವುದನ್ನು ನಿಮಿರು ದೌರ್ಬಲ್ಯ ಎನ್ನುತ್ತಾರೆ" ಎಂದು ಕ್ಲೀವ್ಲಾಂಡ್ ಕ್ಲಿನಿಕ್ ನಲ್ಲಿ ಮೂತ್ರಶಾಸ್ತ್ರಜ್ಞರಾಗಿರುವ ಡಾ. ರಯಾನ್ ಬರ್ಗ್ಲುಂಡ್, ಎಂ.ಡಿ. ಯವರು ತಿಳಿಸುತ್ತಾರೆ. ನಿಮಿರುತನಕ್ಕೆ ಶಿಶ್ನಕ್ಕೆ ಅವಶ್ಯಪ್ರಮಾಣದ ರಕ್ತ ಪರಿಚಲನೆ ಅಗತ್ಯವಿದ್ದು ಈ ರಕ್ತಪರಿಚಲನೆಯ ಕೊರತೆ ಎದುರಾದರೆ ನಿಮಿರುತನ ಸಾಧ್ಯವಾಗದೇ ಹೋಗುತ್ತದೆ. ರಕ್ತಪರಿಚಲನೆಯ ಕೊರತೆಯುಂಟಾಗಲು ಪುರುಷರಲ್ಲಿರುವ ಕೆಲವು ಅನಾರೋಗ್ಯಗಳು ನೇರವಾಗಿ ಕಾರಣವಾಗಿವೆ. ಇವುಗಳು ಯಾವುದು? ನೋಡೋಣ...

ಹೃದಯ ಸಂಬಂಧಿ ಕಾಯಿಲೆಗಳು
ಲೈಂಗಿಕ ಆರೋಗ್ಯಕ್ಕೆ ಹೃದಯದ ಆರೋಗ್ಯ ನಿಕಟ ಸಂಬಂಧ ಹೊಂದಿದೆ. ಒಂದು ವೇಳೆ ನರಗಳ ಒಳಭಾಗ ಸಂಕುಚಿತಗೊಂಡಾಗಲೂ ರಕ್ತಪರಿಚಲನೆಯೂ ಕುಂಠಿತಗೊಂಡು ನಿಮಿರುದೌರ್ಬಲ್ಯ ಎದುರಾಗುತ್ತದೆ. "ಹೃದಯದ ಕಾಯಿಲೆಗಳು, ಧೂಮಪಾನ ಹಾಗೂ ಅಧಿಕ ರಕ್ತದೊತ್ತಡ ಈ ಮೂರೂ ಅಂಶಗಳು ನಿಮಿರುದೌರ್ಬಲ್ಯಕ್ಕೆ ನೇರವಾಗಿ ಕಾರಣವಾಗಿವೆ, ಎಂದು ತಜ್ಞರು ತಿಳಿಸುತ್ತಾರೆ. ಆ ಪ್ರಕಾರ, ನಿಮಿರುದೌರ್ಬಲ್ಯ ಇರುವ ವ್ಯಕ್ತಿಗಳಿಗೆ ಈ ತೊಂದರೆಗಳೂ ಇದ್ದರೆ ಮೊದಲು ಈ ತೊಂದರೆಗಳನ್ನು ಸರಿಪಡಿಸಿದರೆ (ವಿಶೇಷವಾಗಿ ಧೂಮಪಾನ ತ್ಯಜಿಸುವಿಕೆ) ನಿಮಿರು ದೌರ್ಬಲ್ಯ ಬಹಳಷ್ಟು ಮಟ್ಟಿಗೆ ಇಲ್ಲವಾಗುತ್ತದೆ.

ಮಧುಮೇಹ
ನಿಮಿರುದೌರ್ಬಲ್ಯಕ್ಕೆ ಮಧುಮೇಹ ಇನ್ನೊಂದು ಕಾರಣವೇ? "ನಿಮಿರುತನಕ್ಕೆ ರಕ್ತಪರಿಚಲನೆ ಅಗತ್ಯವಾಗಿದೆ. ಮಧುಮೇಹಿಗಳ ರಕ್ತನಾಳಗಳು ಸುಗಮ ರಕ್ತಪರಿಚಲನೆಗೆ ಅಡ್ಡಿಯಾಗುವಂತೆ ಇರುತ್ತದೆ ಹಾಗೂ ಇದು ನಿಮಿರುತನ ಸಾಧ್ಯವಾದರೂ ಉಳಿಸಿಕೊಳ್ಳಲು ಸಾಧ್ಯವಾಗದೇ ಹೋಗುವುದಕ್ಕೆ ಪ್ರಮುಖ ಕಾರಣವಾಗಿದೆ" ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ. ಕೆಲವು ಸಂಶೋಧನೆಗಳ ಮೂಲಕ ಮಧುಮೇಹ ಇರುವ ಪುರುಷರಲ್ಲಿ ಈ ತೊಂದರೆ ಇತರರಿಗಿಂತಲೂ ಸುಮಾರು ಹದಿನೈದು ವರ್ಷ ಮೊದಲೇ ಪ್ರಾರಂಭವಾಗುತ್ತದೆ. ಮಧುಮೇಹ ನಿಯಂತ್ರಣದಲ್ಲಿ ಜೀವನಕ್ರಮದಲ್ಲಿ ಬದಲಾವಣೆ ಹಾಗೂ ಕೆಲವು ಔಷಧಿಗಳ ಸೇವನೆಯ ಆಯ್ಕೆಯನ್ನು ನೀಡಲಾಗುತ್ತದೆ. ಇವುಗಳಿಂದ ಮಧುಮೇಹ ನಿಯಂತ್ರಣಕ್ಕೆ ಬರುವ ಜೊತೆಗೇ ನಿಮಿರು ದೌರ್ಬಲ್ಯವೂ ನಿಯಂತ್ರಣಕ್ಕೆ ಬರುತ್ತದೆ.

ಸ್ಥೂಲಕಾಯ
ತೂಕ ಹೆಚ್ಚಿದೆಯೇ? ಹೌದು, ಈ ಸ್ಥಿತಿಯೂ ನಿಮಿರುದೌರ್ಬಲ್ಯಕ್ಕೆ ಕೆಲವಾರು ವಿಧಗಳಿಂದ ಕಾರಣವಾಗಬಹುದು. ಸ್ಥೂಲದೇಹ ವ್ಯಕ್ತಿಯ ಆತ್ಮವಿಶ್ವಾಸವನ್ನೂ ಅಲ್ಲಾಡುವುದೇ ಇದಕ್ಕೆ ಪ್ರಮುಖ ಕಾರಣ. ದೈಹಿಕವಾಗಿ ಸ್ಥೂಲದೇಹಿಗಳಿಗೆ ಹೃದಯ ಸಂಬಂಧಿ ರೋಗಗಳು, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಆವರಿಸುವ ಸಾಧ್ಯತೆ ಇತರರಿಗಿಂತ ಹೆಚ್ಚೇ ಇರುತ್ತದೆ. ಈ ಎಲ್ಲಾ ಸಾಧ್ಯತೆಗಳು ನಿಮಿರು ದೌರ್ಬಲ್ಯಕ್ಕೆ ಮೂಲವಾಗಿವೆ. "ಸ್ಥೂಲದೇಹ ಪುರುಷರ ದೇಹದಲ್ಲಿರುವ ಟೆಸ್ಟಾಸ್ಟೆರೋನ್ ಎಂಬ ರಸದೂತದ ಪ್ರಮಾಣವನ್ನೂ ತಗ್ಗಿಸಲು ಕಾರಣವಾಗುತ್ತದೆ ಹಾಗೂ ಇದು ನಿಮಿರು ದೌರ್ಬಲ್ಯಕ್ಕೆ ಇನ್ನೊಂದು ಕಾರಣ" ಎಂದು ತಜ್ಞರು ತಿಳಿಸುತ್ತಾರೆ. ಹಾಗಾಗಿ ನಿಮಿರು ದೌರ್ಬಲ್ಯವಿರುವ ಸ್ಥೂಲದೇಹಿಗಳು ತೂಕವನ್ನು ಕಳೆದುಕೊಳ್ಳುವುದು ಎಷ್ಟು ಅಗತ್ಯ ಎಂದು ಈಗ ಮನಗಂಡಿರಬಹುದು.

ಉರಿಯೂತ
ಒಂದು ವೇಳೆ ನಿಮಗೆ ಸಂಧಿವಾತದ ತೊಂದರೆ ಇದ್ದರೆ ಇದು ಸಹಾ ನಿಮಿರು ದೌರ್ಬಲ್ಯಕ್ಕೆ ಕಾರಣವಾಗಬಹುದು "ಸಂಧಿವಾತದ ಮೂಲಕ ಎದುರಾಗುವ ಉರಿಯೂತಕ್ಕೂ ನಿಮಿರು ದೌರ್ಬಲ್ಯಕ್ಕೂ ನಿಕಟ ಸಂಬಂಧವಿದೆ, ಈ ಸ್ಥಿತಿ ಇರುವ ವ್ಯಕ್ತಿಗಳ ಸೂಕ್ಷ್ಮ್ರನರಗಳು ಇನ್ನಷ್ಟು ಕಿರಿದಾಗಿ ಶಿಶ್ನಕ್ಕೆ ಅಗತ್ಯ ಪ್ರಮಾಣದ ರಕ್ತವನ್ನು ಒದಗಿಸಲು ಸಾಧ್ಯವಾಗದೇ ಈ ತೊಂದರೆ ಎದುರಾಗಬಹುದು. ಉರಿಯೂತ ನಿವಾರಕ ಚಿಕಿತ್ಸೆ ಹಾಗೂ ಪ್ರಬಲ ಉರಿಯೂತಕ್ಕೆ ಕಾರಣವಾದ ಇತರ ತೊಂದರೆಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಿದರೆ ಉರಿಯೂತದ ಜೊತೆಗೇ ನಿಮಿರು ದೌರ್ಬಲ್ಯವೂ ಇಲ್ಲವಾಗುತ್ತದೆ" ಎಂದು ತಜ್ಞರು ತಿಳಿಸುತ್ತಾರೆ.

ಖಿನ್ನತೆ
ಖಿನ್ನತೆಗೆ ಒಳಗಾಗಿರುವ ಬಹುತೇಕ ವ್ಯಕ್ತಿಗಳಲ್ಲಿಯೂ ನಿಮಿರು ದೌರ್ಬಲ್ಯ ಎದುರಾಗುತ್ತದೆ, ಆದರೆ ಇದರಿಂದ ಆ ತೊಂದರೆ ಬಂತೋ ಅಥವಾ ಅದರಿಂದ ಈ ತೊಂದರೆ ಎದುರಾಯಿತೋ ಎಂದು ಕಂಡುಹಿಡಿಯುವುದು ಕಷ್ಟ. ಖಿನ್ನತೆಯಿಂದ ಹೇಗೆ ನಿಮಿರು ದೌರ್ಬಲ್ಯ ಎದುರಾಗುತ್ತದೆ ಎಂದರೆ ಈ ವ್ಯಕ್ತಿಗಳಿಗೆ ಲೈಂಗಿಕ ಕ್ರಿಯೆಗೆ ಆಸಕ್ತಿಯಾಗಲೀ ಶಕ್ತಿಯಾಗಲೀ ಇರುವುದಿಲ್ಲ. ಈ ತೊಂದರೆ ಇರುವ ವ್ಯಕ್ತಿಗಳಿಗೆ ಜೀವನದಲ್ಲಿ ಉತ್ಸಾಹವನ್ನು ಪಡೆಯಲು ಕ್ರಮಗಳನ್ನು ಕೈಗೊಂಡರೆ ಈ ತೊಂದರೆ ಸುಲಭವಾಗಿ ಇಲ್ಲವಾಗುತ್ತದೆ. ಆದರೆ ಇದಕ್ಕಾಗಿ ನೀಡಲಾಗುವ ಕೆಲವು ಖಿನ್ನತಾನಿವಾರಕ ಔಷಧಿಗಳು, ಉದಾಹರಣೆಗೆ Paxil,ಇದು ನಿಮಿರು ದೌರ್ಬಲ್ಯವನ್ನು ಇನ್ನಷ್ಟು ಉಲ್ಬಣಿಸಬಹುದು. ಹಾಗಾಗಿ ಖಿನ್ನತೆ ಇರುವ ವ್ಯಕ್ತಿಗಳು ಯಾವುದೇ ಔಷಧಿಯನ್ನು ಸೇವಿಸುವ ಮುನ್ನ ತಮ್ಮ ವೈದ್ಯರ ಅನುಮತಿ ಪಡೆಯುವುದು ಅಗತ್ಯವಾಗಿದೆ.

ಒಸಡುಗಳ ಕಾಯಿಲೆ
ನಿಮಿರು ದೌರ್ಬಲ್ಯಕ್ಕೂ ಒಸಡಿನಲ್ಲಿ ರಕ್ತ ಬರುವುದಕ್ಕೂ ಏನು ಸಂಬಂಧ? "ಕೆಲವು ಸಂಶೋಧನೆಗಳಲ್ಲಿ ಈ ಎರಡೂ ಸ್ಥಿತಿಗಳಿಗೆ ನಿಕಟ ಸಂಬಂಧವಿದೆ. ತಮ್ಮ ಬಾಯಿಯ ಸ್ವಚ್ಛತೆಗೆ ಆದ್ಯತೆ ನೀಡದೇ ಇರುವ ವ್ಯಕ್ತಿಗಳ ಬಾಯಿಯಲ್ಲಿ ಒಸಡುಗಳಲ್ಲಿ ರಕ್ತ ಜಿನುಗಬಹುದು. ಆದರೆ ಇದು ನಿಮಿರು ದೌರ್ಬಲ್ಯಕ್ಕೆ ಕಾರಣವಲ್ಲ! ನಿಮಿರು ದೌರ್ಬಲ್ಯವಿರುವ ವ್ಯಕ್ತಿಗಳ ಒಸಡುಗಳಲ್ಲಿ ರಕ್ತ ಒಸರುವುದು ಸಹಜ. ಒಂದು ಸಮೀಕ್ಷೆಯಲ್ಲಿ ಈ ತೊಂದರೆ ಇರುವ ವ್ಯಕ್ತಿಗಳಲ್ಲಿ ಸುಮಾರು ಎಂಭತ್ತು ಶೇಖಡಾ ವ್ಯಕ್ತಿಗಳ ಒಸಡುಗಳಲ್ಲಿ ರಕ್ತ ಜಿನುಗುತ್ತದೆ ಎಂದು ಕಂಡುಕೊಳ್ಳಲಾಗಿದೆ. ಆದರೆ ಈ ಸಂಬಂಧಕ್ಕೆ ಖಚಿತ ಮಾಹಿತಿ ನೀಡಲು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ" ಎಂದು ವೈದ್ಯರು ತಿಳಿಸುತ್ತಾರೆ. ಯಾವುದಕ್ಕೂ ಈ ತೊಂದರೆ ಇರಲೀ ಇಲ್ಲದೇ ಇರಲಿ, ಬಾಯಿಯ ಸ್ವಚ್ಛತೆಗೆ ಆದ್ಯತೆ ನೀಡುವುದು ಪ್ರತಿಯೊಬ್ಬರಿಗೆ ಅನಿವಾರ್ಯವಾಗಿದೆ.



Click it and Unblock the Notifications











