Latest Updates
-
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್
ಬರೀ ಹತ್ತೇ ದಿನಗಳಲ್ಲಿ ದೇಹದ ತೂಕ ಇಳಿಸಿಕೊಳ್ಳಲು ಇಲ್ಲಿದೆ ಸರಳ ಟಿಪ್ಸ್
ದೇಹದ ತೂಕ ಇಳಿಸಿಕೊಂಡು ಫಿಟ್ ಆಗಿರುವುದು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಕನಸಾಗಿರುವುದು ಮತ್ತು ದೇಹದ ಹೆಚ್ಚುವರಿ ತೂಕ ಇಳಿಸಲು ಪ್ರತಿಯೊಬ್ಬರು ತಮ್ಮದೇ ಆಗಿರುವಂತಹ ವಿಧಾನ ಬಳಸುವರು. ಅದಾಗ್ಯೂ, ತೂಕ ಇಳಿಸಲು ಹಿಂದೆ ಕೆಲವೊಂದು ಸಮಯ ನಿಗದಿ ಮಾಡಲಾಗುತ್ತಿತ್ತು. ಇದರಿಂದಾಗಿ ತೂಕ ಇಳಿಸಲು ಕೆಲವೊಂದು ಸಲಹೆಗಳನ್ನು ಪಾಲಿಸಿಕೊಂಡು ಹೋಗಬೇಕಾಗುತ್ತಿತ್ತು. ನಿಮ್ಮಲ್ಲಿ ತುಂಬಾ ಕಡಿಮೆ ಸಮಯವಿದ್ದರೆ ಆಗ ನೀವು ಕೆಲವೊಂದು ಆಹಾರ ಕ್ರಮವನ್ನು ತುಂಬಾ ಕ್ರಮಬದ್ಧವಾಗಿ ಪಾಲಿಸಿಕೊಂಡು ಹೋಗಿ ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಬಹುದು.
ಮೊದಲಾಗಿ, ಯಾವ ವಿಧದ ಆಹಾರಗಳು ಮತ್ತು ಆಹಾರದ ಗುಂಪು ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿ ಆಗಲಿದೆ ಎಂದು ನೀವು ತಿಳಿಯಬೇಕು. ಕೆಲವರು ದ್ರವಾಹಾರದ ಆಹಾರ ಕ್ರಮವನ್ನು ಬಳಸಿಕೊಂಡು ತೂಕ ಕಳೆದುಕೊಳ್ಳುವರು. ನೀವು ಹತ್ತು ದಿನಗಳಲ್ಲಿ ತೂಕ ಕಳೆದುಕೊಳ್ಳುವ ವಿಧಾನವನ್ನು ಹೇಳಲಿದ್ದೇವೆ. ವಿವರವಾಗಿ ತಿಳಿದರೆ ಅದನ್ನು ಸಾಧಿಸಲು ನಿಮಗೆ ನೆರವಾಗಲಿದೆ. ನೀವು ತೂಕ ಕಳೆದುಕೊಳ್ಳಲು ವ್ಯಯಿಸುವಂತಹ ದೀರ್ಘ ಸಮಯವನ್ನು ಉಳಿಸಬಹುದು. ಹತ್ತು ದಿನಗಳಲ್ಲಿ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ.

ತೂಕ ಕಳೆದುಕೊಳ್ಳಲು ಬಯಸಿದ್ದರೆ ನೀವು ಈಗಲೇ ಇದಕ್ಕೆ ತಯಾರಾಗಬೇಕು. ಯಾಕೆಂದರೆ ಹತ್ತು ದಿನಗಳಲ್ಲಿ ತೂಕ ಇಳಿಸುವುದನ್ನು ನೀವು ಇಲ್ಲಿ ತಿಳಿಯಬಹುದು. ಪ್ರಮುಖವಾಗಿ ನೀವು ಒಮ್ಮೆ ತೂಕ ಕಳೆದುಕೊಂಡ ಬಳಿಕ ಅದನ್ನು ಕಾಪಾಡಿಕೊಂಡು ಹೋಗಬೇಕು. ಹೆಚ್ಚಿನವರು ತೂಕ ಇಳಿಸಿದ ಬಳಿಕ ಮತ್ತೆ ಅದೇ ರೀತಿಯಾಗಿ ತಿನ್ನಲು ಆರಂಭಿಸುವರು. ಇದು ದೊಡ್ಡ ತಪ್ಪು. ನೀವು ಈ ನಿಯಮಗಳನ್ನು ಪಾಲಿಸಿಕೊಂಡು ಹೋದರೆ ಆಗ ಹತ್ತು ದಿನಗಳಲ್ಲಿ ತೂಕ ಇಳಿಸುವುದು ತುಂಬಾ ಸುಲಭವಾಗಲಿದೆ. ಹತ್ತು ದಿನಗಳಲ್ಲಿ ತೂಕ ಇಳಿಸುವ ಬಗ್ಗೆ ನಾವು ನಿಮಗೆ ದಿನವೂ ಯಾವ ರೀತಿಯ ಆಹಾರ ಕ್ರಮ ಪಾಲಿಸಿಕೊಂಡು ಹೋಗಬೇಕು ಎಂದು ಇಲ್ಲಿ ವಿವರವಾಗಿ ನೀಡಲಾಗಿದೆ.
ಮೊದಲ ದಿನ
ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್ ಗಳು ಇರುವಂತಹ ಹಣ್ಣುಗಳಾಗಿರುವಂತಹ ಲಿಂಬೆ, ಕಿತ್ತಳೆ ಇತ್ಯಾದಿಗಳನ್ನು ಮಾತ್ರ ಸೇವಿಸಿ. ನಿಮ್ಮ ಊಟ ಮತ್ತು ತಿಂಡಿ ಎರಡರಲ್ಲೂ ಈ ಹಣ್ಣನ್ನು ಸೇವಿಸಬೇಕು. ಈ ಹಣ್ಣುಗಳಲ್ಲಿ ಹೆಚ್ಚಿನ ನೀರನಾಂಶ, ಪ್ರಮುಖ ಪೋಷಕಾಂಶಗಳು ಮತ್ತು ಕಡಿಮೆ ಕೊಬ್ಬು ಇರಬೇಕು. ಹಣ್ಣುಗಳಿಂದಲೇ ಕಡಿಮೆ ಕ್ಯಾಲರಿ ಇರುವಂತಹ ತಿಂಡಿ ತಯಾರಿಸಿಕೊಳ್ಳಿ. ಕಡಿಮೆ ಕೊಬ್ಬು ಇರುವಂತಹ ಮೊಸರು ಮತ್ತು ತಾಜಾ ಹಣ್ಣುಗಳನ್ನು ಬಳಸಿಕೊಂಡು ಸ್ಮೂಥಿ ತಯಾರಿಸಬಹುದು. ಒಂದು ಲೋಟ ಬಾಳೆಹಣ್ಣು ಅಥವಾ ಸೇಬಿನ ಸ್ಮೂಥಿ ಕುಡಿದರೆ ಆಗ ದೀರ್ಘಕಾಲ ಹೊಟ್ಟೆ ಹಸಿವಾಗದೆ ಇರುತ್ತದೆ. ಇದು ಹತ್ತು ದಿನಗಳಲ್ಲಿ ತೂಕ ಇಳಿಸಲು ಸರಿಯಾಗಿ ಆರಂಭವಾಗಿದೆ.
ಎರಡು ಮತ್ತು ಮೂರನೇ ದಿನ
ತರಕಾರಿ ತಿನ್ನಿ. 2 ಮತ್ತು 3ನೇ ದಿನದಲ್ಲಿ ನೀವು ಕೇವಲ ತರಕಾರಿ ಮಾತ್ರ ಸೇವಿಸಬೇಕು. ಹತ್ತು ದಿನಗಳಲ್ಲಿ ತೂಕ ಇಳಿಸಿಕೊಳ್ಳಲು ನಿಮಗೆ ನೆರವಾಗುವಂತಹ ಕೆಲವೊಂದು ಆರೋಗ್ಯಕಾರಿ ತರಕಾರಿಗಳೆಂದರೆ ಬ್ರಾಕೋಲಿ, ಬಸಳೆ, ಬದನೆ ಇತ್ಯಾದಿ. ಒಂದು ಕಪ್ ತುಂಡು ಮಾಡಿಕೊಂಡಿರುವಂತಹ ಟೊಮೆಟೊ, ಸೌತೆಕಾಯಿ, ಹಸಿರೆಲೆಗಳು ಮತ್ತು ದೊಣ್ಣೆ ಮೆಣಸವನ್ನು ನೋವು ಕೊಬ್ಬಿರುವಂತಹ ತಿಂಡಿಗಳಿಗೆ ಬದಲಿಯಾಗಿ ಸೇವಿಸಬಹುದು ಮತ್ತು ಇದು ತೂಕ ಕಳೆದುಕೊಳ್ಳಲು ಸಹಕಾರಿ ಆಗಲಿದೆ.
ನಾಲ್ಕು ಮತ್ತು ಐದನೇ ದಿನ
ಈ ದಿನಗಳಂದು ನೀವು ತುಂಬಾ ಮಿಶ್ರ ಮತ್ತು ಹೊಂದುವ ಆಹಾರ ಕ್ರಮ ಪಾಲಿಸಿ. ಎರಡು ಲೋಟ ಹಾಲು(ಒಂದು ಬೆಳಗ್ಗೆ ಮತ್ತು ಒಂದು ಸಂಜೆ ವೇಳೆ) ಸೇವಿಸಿ. ಅದೇ ರೀತಿಯಾಗಿ ತರಕಾರಿ ಕೂಡ ಸೇವಿಸಿ. ತಿಂಡಿ ಸಮಯದಲ್ಲಿ ನೀವು ಓಟ್ಸ್, ಬಾರ್ಲಿ, ಕಂದು ಅನ್ನ, ಇಡೀ ಧಾನ್ಯದ ಬ್ರೆಡ್ ಇತ್ಯಾದಿ ಸೇವಿಸಬಹುದು.
ಆರು ಮತ್ತು ಏಳನೇ ದಿನ
ಹತ್ತು ದಿನಗಳ ಕಾಲ ಮಾಡುವಂತಹ ತೂಕ ಇಳಿಸುವ ಕ್ರಮದಲ್ಲಿ ಆರೋಗ್ಯಕಾರಿ ಆಹಾರವು ತುಂಬಾ ಪ್ರಮುಖ ಪಾತ್ರ ವಹಿಸುವುದು. ತರಕಾರಿಗಳೊಂದಿಗೆ ನೀವು, ಕಡಿಮೆ ಕೊಬ್ಬು ಇರುವ ಮೊಸರು, ಮೊಟ್ಟೆ, ಬೀನ್ಸ್ ಮತ್ತು ಎರಡು ಪ್ಲೇಟ್ ಪಾಸ್ತಾವನ್ನು ಟೊಮೆಟೊ ಸಾಸ್ ಮತ್ತು ಹಣ್ಣಿನ ಜ್ಯೂಸ್ ನ ಜತೆ ಸೇವಿಸಿ. ನಾರಿನಾಂಶವು ಅಧಿಕವಾಗಿರುವಂತಹ ಆಹಾರಗಳಾಗಿರುವ ಬಾರ್ಲಿ, ರಸ್ಬೆರಿ, ಪಿಯರ್ಸ್ ಮತ್ತು ಇಡೀ ಗೋಧಿಯ ಪಾಸ್ತಾವು ನಿಮ್ಮ ಹಸಿವನ್ನು ಕಡಿಮೆ ಮಾಡುವುದು. ನಾರಿನಾಂಶವು ಬೇಗನೆ ಹೊಟ್ಟೆ ತುಂಬುವಂತೆ ಮಾಡುತ್ತದೆ. ಇದರಿಂದ ವೇಗವಾಗಿ ತೂಕ ಕಳೆದುಕೊಳ್ಳಲು ಸಹಕಾರಿ.
ಎಂಟು ಮತ್ತು 9ನೇ ದಿನ
ಈ ದಿನ ನೀವು ಹಗುರವಾಗಿ ಇರುವುದನ್ನು ಸೇವಿಸಿ. ನೀವು ತರಕಾರಿ ಸೂಪನ ಜೊತೆಗೆ ಎರಡು ತುಂಡು ಮೀನು, ಕಡಿಮೆ ಕೊಬ್ಬು ಇರುವಂತಹದ್ದನ್ನು ಬಳಸಿಕೊಳ್ಳಿ. ಹೊರಗಡೆ ಸೂಪ್ ಕುಡಿಯುತ್ತಲಿದ್ದರೆ ಆಗ ಅದಕ್ಕೆ ಯಾವುದೇ ರೀತಿಯ ಸಂಸ್ಕರಿತ ವಸ್ತುಗಳ ಸೇರಿಸದೆ ಇರುವುದನ್ನು ದೃಢಪಡಿಸಿಕೊಳ್ಳಿ. ಯಾಕೆಂದರೆ ಇದರಲ್ಲಿ ಕ್ಯಾಲರಿ ಅಧಿಕವಾಗಿ ಇರುತ್ತದೆ.
10ನೇ ದಿನ
ನೀವು ಇದನ್ನು ಸರಿಯಾಗಿ ಪಾಲಿಸಿಕೊಂಡು ಹೋಗುವಿರಾ ಮತ್ತು ಪಾಲಿಸಿಕೊಂಡಿದ್ದೀರಾ ಎಂದು ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ. ಮೇಲೆ ಹೇಳಿರುವ ಎಲ್ಲಾ ಕ್ರಮಗಳನ್ನು ನೀವು ಪಾಲಿಸಿಕೊಂಡು ಹೋಗಿದ್ದೀರಿ ಮತ್ತು ಹೀಗೆ ಮಾಡದೆ ಇದ್ದರೆ ಇದನ್ನು ಪಾಲಿಸಲು ತಯಾರಾಗಿ.
ಎಷ್ಟು ತೂಕ ಇಳಿಸಿಕೊಳ್ಳಬೇಕು ಎಂದು ನಿಮಗೆ ತಿಳಿದಿರಬೇಕು. ನೀವು ಈ ತೂಕವನ್ನು ಇಳಿಸಲು ಏನು ಮಾಡಬೇಕು ಮತ್ತು ಅದನ್ನು ಎಷ್ಟು ಸಹಿಸಬೇಕು. ಸರಿಯಾದ ಗುರಿ ಇರಿಸಿಕೊಂಡರೆ ಮಾತ್ರ ಆಗ ತೂಕ ಇಳಿಸಿಕೊಳ್ಳಲು ತುಂಬಾ ನೆರವು ಆಗುವುದು. ಗುರಿಯು ಸ್ಪಷ್ಟವಾಗಿದ್ದಷ್ಟು ಅದು ನಿಮ್ಮ ತೂಕ ಇಳಿಸುವ ಪರಿಶ್ರಮಕ್ಕೆ ನೆರವಾಗುವುದು. ನೀವು ಹತ್ತು ದಿನಗಳಲ್ಲಿ ನಿಮಗೆ ಅಗತ್ಯವಿರುವಷ್ಟು ತೂಕ ಇಳಿಸಿಕೊಳ್ಳಲಿದ್ದೀರಿ ಎಂದು ನಾವು ಭಾವಿಸಿದ್ದೇವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


