Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮುಟ್ಟಿನ ದಿನಗಳಲ್ಲಿ ವಿಶಿಷ್ಟ ತಿಂಡಿ-ತಿನಿಸುಗಳನ್ನು ತಿನ್ನಬೇಕೆನಿಸುತ್ತದೆಯಂತೆ! ಯಾಕೆ ಗೊತ್ತೇ
ಮಾಸಿಕ ದಿನಗಳ ಸಮಯದಲ್ಲಿ ಕೆಲವು ಮಹಿಳೆಯರಿಗೆ ಚಾಕಲೇಟು ಅಥವಾ ಬೇರಾವುದೋ ಪದಾರ್ಥವನ್ನು ತಿನ್ನುವ ಬಯಕೆ ಭುಗಿಲೇಳುತ್ತದೆ. ಈ ಸಮಯದಲ್ಲಿ ಇವರ ಮನದಲ್ಲಿ ಸದಾ ಚಾಕಲೇಟು, ಹಿತವಾದ ಅಪ್ಪುಗೆ ಮತ್ತು ಕೂದಲನ್ನು ಸ್ವಚ್ಛಗೊಳಿಸುವ ಚಿಂತೆಯೇ ಇರುತ್ತದೆ.

ಮನಸ್ಸು ತಡೆಯಲಾರದೇ ಕೊಂಚ ಪ್ರಮಾಣದ ಚಾಕಲೇಟನ್ನು ತಿನ್ನುವ ಮೂಲಕ ಮನಸ್ಸು ನಿರಾಳವಾಗುತ್ತದೆ ಹಾಗೂ ಮಾಸಿಕ ದಿನಗಳ ನೋವು ಸಹಿಸಲು ಸಾಧ್ಯವಾಗುತ್ತದೆ. ಆದರೆ ತಮಗೆ ಚಾಕಲೇಟು ತಿನ್ನುವ ಅದಮ್ಯ ಬಯಕೆ ಕೇವಲ ಮಾಸಿಕ ದಿನಗಳಲ್ಲಿ ಮಾತ್ರವೇ ಎದುರಾಗುವುದು ಹೆಚ್ಚಿನ ಮಹಿಳೆಯರಿಗೆ ತಿಳಿದಿಲ್ಲ.

ಇದಕ್ಕೆ ಪ್ರಮುಖ ಕಾರಣ
ದ ಇಂಡಿಪೆಂಡೆಂಟ್ ಎಂಬ ಮಾಧ್ಯಮದ ಪ್ರಕಾರ, ಮಾಸಿಕ ದಿನಗಳಲ್ಲಿ ಎದುರಾಗುವ ಹಲವಾರು ಏರುಪೇರುಗಳಿಗೆ ರಸದೂತಗಳ ಏರುಪೇರೇ ಕಾರಣ ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಮಾಸಿಕ ದಿನಗಳ ಪ್ರಾರಂಭದಲ್ಲಿ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೋಜೆನ್ ಉತ್ಪಾದನೆ ಗರಿಷ್ಟವಾಗಿರುವುದರಿಂದ ಹಸಿವು ಸಹಾ ಹೆಚ್ಚೇ ಇರುತ್ತದೆ.

ಹಸಿವಿಗೆ ಕಾರಣ
ಮಾಸಿಕ ದಿನಗಳ ಸಮಯದಲ್ಲಿ ದೇಹದಲ್ಲಿ ಒತ್ತಡಕ್ಕೆ ಕಾರಣವಾದ ಕಾರ್ಟಿಸೋಲ್ ಎಂಬ ರಸದೂತದ ಮಟ್ಟವೂ ಏರುತ್ತದೆ ಹಾಗೂ ಸತತವಾಗಿ ಹೆಚ್ಚುತ್ತಲೇ ಹೋಗುತ್ತದೆ. ಆದರೆ ಜೊತೆಜೊತೆಗೇ ಮನಸ್ಸಿಗೆ ಮುದನೀಡುವ ಸೆರೋಟೋನಿನ್ ಎಂಬ ರಸದೂತದ ಮಟ್ಟ ಇಳಿಯುತ್ತಾ ಹೋಗುತ್ತದೆ. ಈ ಅಸಮತೋಲನವೇ ಮಹಿಳೆಯರು ಮಾಸಿಕ ದಿನಗಳಲ್ಲಿ ಸಿಡಿಮಿಡಿಗೊಳ್ಳಲು ಪ್ರಮುಖ ಕಾರಣವಾಗಿದೆ ಹಾಗೂ ಸಿಹಿ ಪದಾರ್ಥಗಳನ್ನು ತಿನ್ನಲು ಪ್ರಚೋದಿಸುತ್ತದೆ. ಸಿಹಿಪದಾರ್ಥಗಳ ಸೇವನೆಯಿಂದ ಮತ್ತೆ ಮನಸ್ಸಿಗೆ ಮುದನೀಡುವ ರಸದೂತ ಬಿಡುಗಡೆಯಾಗುತ್ತದೆ ಹಾಗೂ ಈ ಮೂಲಕ ಮನಸ್ಸು ನಿರಾಳತೆ ಪಡೆಯುತ್ತದೆ. ಆದರೆ ಕೆಲವು ಮಹಿಳೆಯರು ಸಿಹಿ ತಿಂದರೂ ಸಿಡಿಮಿಡಿಯೇನೂ ಕಡಿಮೆಯಾಗಿಲ್ಲ ಎಂದು ದೂರುತ್ತಾರೆ. ಆದರೆ ಮಾಸಿಕ ದಿನಗಳಲ್ಲಿ ಸಿಹಿತಿನ್ನುವ ಬಯಕೆ ಎದುರಾಗಲು ರಸದೂತಗಳ ಅಸಮತೋಲನ ಹಲವಾರು ಕಾರಣಗಳಲ್ಲಿ ಒಂದು ಕಾರಣವಾಗಿರಬಹುದೇ ವಿನಃ ಇದೇ ಏಕಮಾತ್ರ ಕಾರಣ ಎಂದು ಖಚಿತವಾಗಿ ಹೇಳಲಾಗದು.

ಈ ಸಮಯದ ಮನೋಭಾವ
ಸಂಶೋಧಕರ ಪ್ರಕಾರ ಮಾಸಿಕ ದಿನಗಳಲ್ಲಿ ಸಿಹಿ ಅಥವಾ ನೆಚ್ಚಿನ ಆಹಾರವನ್ನು ತಿನ್ನಲೇಬೇಕೆಂಬ ಕಟ್ಟುಪಾಡನ್ನು ತಮಗೆ ತಾವೇ ವಿಧಿಸಿಕೊಂಡಿರುವುದೂ ಈ ಬಯಕೆಗೆ ಒಂದು ಕಾರಣವಾಗಿದೆ. ಏಕೆಂದರೆ ಈ ಸಮಯದಲ್ಲಿ ನೋವನ್ನು ಮರೆಸಲು ಚಾಕಲೇಟು ಅಥವಾ ಬೇರಾವುದೋ ಆಹಾರಗಳನ್ನು ಚಿಕ್ಕಂದಿನಿಂದಲೇ ಇವರ ಹಿರಿಯರು ತಿನ್ನಿಸಿ ಮನಸ್ಸು ಈ ವ್ಯವಸ್ಥೆಗೆ ಒಗ್ಗಿಕೊಂಡಿರುತ್ತದೆ. ಹಾಗಾಗಿ ಪ್ರತಿಬಾರಿ ಮಾಸಿಕ ದಿನಗಳು ಎದುರಾದರೆ ದೇಹದ ಯಾವುದೇ ಪ್ರಚೋದನೆಯಿಲ್ಲದೇ ಕೇವಲ ಮಾನಸಿಕವಾದ ಕಾರಣಗಳಿಂದ ಈ ಆಹಾರವನ್ನು ಸೇವಿಸುವ ಮನಸ್ಸಾಗುತ್ತದೆ.

ಆದರೆ ಹೀಗೇಕೆ?
ಮಾಸಿಕ ದಿನಗಳಲ್ಲಿ ದೇಹ ರಕ್ತವನ್ನು ಕಳೆದುಕೊಳ್ಳುವ ಜೊತೆಗೇ ರಸದೂತಳ ಏರುಪೇರು ದೈಹಿಕವಾಗಿ ಮತ್ತು ಮಾನಸಿಕವಾಗಿ ಮಹಿಳೆಯನ್ನು ಒತ್ತಡಕ್ಕೆ ಒಳಗಾಗುವಂತೆ ಮತ್ತು ಆಯಾಸವಾಗುವಂತೆ ಮಾಡುತ್ತವೆ. ಈ ಆಯಾಸ ಮತ್ತು ಮನಸ್ಸಿನ ಒತ್ತಡವನ್ನು ನಿವಾರಿಸಲೇ ಈ ಮಹಿಳೆಯರು ಆಹಾರಸೇವನೆಯ ಮೊರೆ ಹೋಗುತ್ತಾರೆ. ಸಾಮಾನ್ಯವಾಗಿ ಮಹಿಳೆಯರಿಗೆ ಈ ಸಮಯದಲ್ಲಿ ಹೆಚ್ಚಿನ ಕೊಬ್ಬು ಇರುವ ಅಥವಾ ಸಿಹಿಯಾದ ಪದಾರ್ಥಗಳೇ ಹೆಚ್ಚು ಇಷ್ಟವಾಗುತ್ತವೆ.

ಬ್ರೆಡ್
ಒಂದು ವೇಳೆ ಈ ಸಮಯದಲ್ಲಿ ನಿಮಗೆ ಪಿಜ್ಜಾ, ಬರ್ಗರ್, ಪಾಸ್ತಾ ಅಥವಾ ಸ್ಯಾಂಡ್ವಿಚ್ ಮೊದಲಾದ ಸಿದ್ಧ ಆಹಾರಗಳೇ ಹೆಚ್ಚು ಇಷ್ಟವಾಗುತ್ತಿದ್ದರೆ ನಿಮ್ಮ ದೇಹ ಈ ಸಮಯದಲ್ಲಿ ನೈಟ್ರೋಜೆನ್ ಅಥವಾ ಟ್ರಿಪ್ಟೋಫ್ಯಾನ್ ಎಂಬ ಅಮೈನೋ ಆಮ್ಲವನ್ನು ಅರಸುತ್ತಿದ್ದಿರಬಹುದು. ಈ ಆಹಾರಗಳು ಅನಾರೋಗ್ಯಕರ ಹೌದು. ಆದರೆ ಇವುಗಳ ಸೇವನೆಯಿಂದ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಮಟ್ಟ ಏರುತ್ತದೆ ಹಾಗೂ ಮಾಸಿಕ ದಿನಗಳ ಸಮಯದಲ್ಲಿ ಆಯಾಸದಲ್ಲಿರುವ ಮಹಿಳೆಯರಿಗೆ ಇದೇ ಒಂದು ಬಗೆಯ ಶಕ್ತಿ ನೀಡುತ್ತದೆ.

ಚೀಸ್
ಈ ಕೊಬ್ಬುಯುಕ್ತ ಆಹಾರಗಳನ್ನು ಸೇವಿಸುವ ಮೂಲಕ ಈ ಸಮಯದಲ್ಲಿ ಮಹಿಳೆಯರ ದೇಹಕ್ಕೆ ಅತಿ ಹೆಚ್ಚು ಅಗತ್ಯವಿರುವ ಕ್ಯಾಲ್ಸಿಯಂ ಅನ್ನು ಪೂರೈಸಬಹುದು.

ಆಮ್ಲೀಯ ತಿನಿಸುಗಳು
ಲಿಂಬೆ, ಹುಣಸೆ ಮೊದಲಾದ ಆಮ್ಲೀಯ ವಸ್ತುಗಳನ್ನು ಬೆರೆಸಿ ತಯಾರಿಸಿದ ಆಹಾರಗಳು, ಲಿಂಬೆಜಾತಿಯ ಹಣ್ಣುಗಳು, ಕಾಫಿ ಅಥವಾ ಹುಳಿಯಾದ ರುಚಿ ಇರುವ ಸಿಹಿವಸ್ತುಗಳನ್ನು ತಿನ್ನಲು ಬಯಕೆಯಾದರೆ ನಿಮ್ಮ ದೇಹ ಮೆಗ್ನೀಶಿಯಂ ಕೊರತೆಯಿಂದ ಬಳಲುತ್ತಿದೆ ಎಂದು ತಿಳಿದುಕೊಳ್ಳಬಹುದು.

ಉಪ್ಪುಭರಿತ ಆಹಾರಗಳು
ಒಂದು ವೇಳೆ ಚಿಪ್ಸ್ ಅಥವಾ ಪಾಪ್ ಕಾರ್ನ್ ನಂತಹ ಉಪ್ಪಿರುವ ಆಹಾರಗಳತ್ತ ನಿಮ್ಮ ಒಲವು ಇದ್ದರೆ ನಿಮ್ಮ ದೇಹದಲ್ಲಿ ಸೋಡಿಯಂ ಕ್ಲೋರೈಡ್ ಅಂಶದ ಕೊರತೆಯಾಗಿದೆ ಎಂದು ತಿಳಿದುಕೊಳ್ಳಬಹುದು.



Click it and Unblock the Notifications