Latest Updates
-
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಾತ್ರಿ ಊಟಕ್ಕೆ ಮೊದಲು ಅಥವಾ ನಂತರ, ಈ ಎಲ್ಲಾ ಸಂಗತಿಗಳು ನೆನಪಿರಲಿ
ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ನಾವು ತಿನ್ನುವಂತಹ ಆಹಾರವು ಪ್ರಮುಖ ಪಾತ್ರ ವಹಿಸುವುದು. ಇದರಲ್ಲಿ ನಾವು ಬೆಳಗ್ಗೆ ಉಪಾಹಾರವನ್ನು ಹೇಗೆ ಸೇವಿಸುತ್ತೇವೆಯೋ ಅದೇ ರೀತಿಯಲ್ಲಿ ನಾವು ಮಲಗುವ ಮೊದಲು ಸೇವಿಸುವಂತಹ ಊಟ ಕೂಡ ಪ್ರಾಮುಖ್ಯತೆ ಪಡೆದಿರುವುದು. ರಾತ್ರಿಯ ಊಟವು ನೀವು ಮಲಗಿರುವಂತಹ ಸಮಯದಲ್ಲಿ ದೇಹಕ್ಕೆ ಬೇಕಾಗಿರುವಂತಹ ಪೋಷಕಾಂಶಗಳನ್ನು ನೀಡುವುದು. ಆರೋಗ್ಯಕಾರಿ, ಲಘುವಾಗಿರುವಂತಹ ರಾತ್ರಿಯ ಊಟವು ಸುಖ ಹಾಗೂ ಸಂಪೂರ್ಣನಿದ್ರೆ ನೀಡುವುದು.

ರಾತ್ರಿ ಊಟದ ವೇಳೆಯಲ್ಲಿ ಕುಟುಂಬದವರೊಂದಿಗೆ ಕುಳಿತುಕೊಂಡು ನೀವು ಮಾತನಾಡಬಹುದು. ಇದು ತುಂಬಾ ಮುಖ್ಯ. ಹೆಚ್ಚಾಗಿ ಜನರು ರಾತ್ರಿ ವೇಳೆ ಊಟವನ್ನು ತ್ಯಜಿಸುವರು. ಇದಲ್ಲದೆ ಇದ್ದರೆ ಕೆಲವರು ರಾತ್ರಿ ವೇಳೆ ಕೆಟ್ಟದಾಗಿರುವಂತಹ ಆಹಾರ ಸೇವನೆ ಮಾಡುವರು. ರಾತ್ರಿ ಊಟಕ್ಕೆ ಸಲಾಡ್, ಸೂಪ್ ಮತ್ತು ಸರಳ ಊಟವಿರಬೇಕು. ವೈದ್ಯಕೀಯ ತಜ್ಞರ ಪ್ರಕಾರ ನೀವು ಮಲಗುವ ಎರಡು ಗಂಟೆಗಳ ಮೊದಲು ಊಟ ಮಾಡಬೇಕು. ಮಿತವಾಗಿ ಆಹಾರ ಸೇವಿಸಿ, ರಾತ್ರಿ ಊಟದ ವೇಳೆ ಕೆಫಿನ್ ಇರುವಂತಹ ಪಾನೀಯ ಮತ್ತು ಆಲ್ಕೋಹಾಲ್ ಸೇವಿಸಬೇಡಿ. ಆದರೆ ಆರೋಗ್ಯಕಾರಿ ರಾತ್ರಿ ಊಟದ ಮೊದಲು ನೀವು ಕೆಲವೊಂದು ಪ್ರಮುಖ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದು ಯಾವುದು ಎಂದು ನೀವು ಲೇಖನ ಓದುತ್ತಾ ತಿಳಿಯಿರಿ.

ಬಿಸಿ ನೀರು ಕುಡಿಯಿರಿ
ಜೀರ್ಣಕ್ರಿಯೆ ಸರಿಯಾಗಿ ಆಗಲು ನೀವು ರಾತ್ರಿ ಊಟಕ್ಕೆ ಸುಮಾರು 30 ನಿಮಿಷ ಮೊದಲು ಒಂದು ಲೋಟ ಬಿಸಿ ನೀರು ಕುಡಿಯಿರಿ. ಬಿಸಿ ನೀರು ನಿಮ್ಮ ಹೊಟ್ಟೆ ತುಂಬಿದಂತೆ ಮಾಡಿ, ಅತಿಯಾಗಿ ತಿನ್ನದಂತೆ ತಡೆಯುವುದು. ಊಟದ ವೇಳೆ ಸ್ವಲ್ಪ ನೀರು ಕುಡಿದರೆ ಆಗ ಆಹಾರ ನುಂಗಲು ಹೆಚ್ಚು ನೆರವಾಗುವುದು. ಅತಿಯಾಗಿ ನೀರು ಸೇವನೆ ಮಾಡಬೇಡಿ. ಇದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಉಂಟಾಗಬಹುದು. ರಾತ್ರಿ ಊಟ ಮಾಡಿದ ಬಳಿಕ ಒಂದುವರೆ ಗಂಟೆ ಕಾದ ಬಳಿಕ ಮತ್ತೆ ಒಂದು ಲೋಟ ಬಿಸಿ ನೀರು ಕುಡಿಯಿರಿ. ಬಿಸಿ ನೀರು ಹೊಟ್ಟೆಯಲ್ಲಿ ಆಹಾರವನ್ನು ವಿಘಟಿಸಲು ನೆರವಾಗುವುದು ಮತ್ತು ಜೀರ್ಣಕ್ರಿಯೆಗೆ ಸಹಕರಿಸುವುದು. ಇದರಿಂದ ದೇಹವು ಪೋಷಕಾಂಶಗಳನ್ನು ಬೇಗನೆ ಹೀರಿಕೊಳ್ಳುವುದು.

ಊಟವಾದ ತಕ್ಷಣ ಮಲಗಬೇಡಿ
ಹೆಚ್ಚಿನ ಜನರು ಬಿಸಿಬಿಸಿಯಾಗಿರುವ ರಾತ್ರಿಯ ಊಟ ಮಾಡಿದ ಬಳಿಕ ಬೇಗನೆ ಮಲಗುವರು. ಆದರೆ ಇದರಿಂದ ಬೇರೆ ಪರಿಣಾಮವಾಗುವುದು. ನೀವು ಊಟವಾದ ತಕ್ಷಣ ಮಲಗುವುದರಿಂದ ಜೀರ್ಣ ಕ್ರಿಯೆ ನಿಧಾನವಾಗುವುದು. ಇದು ಹೊಟ್ಟೆ ಉಬ್ಬರ ಉಂಟು ಮಾಡಿ, ಎದೆಯುರಿಗೆ ಕಾರಣವಾಗಬಹುದು. ಊಟವಾದ ಬಳಿಕ ಮಲಗಲು ಕನಿಷ್ಠ ಎರಡು ಗಂಟೆ ಕಾಯಬೇಕು. ಈ ವೇಳೆ ನೀವು ಸ್ವಲ್ಪ ನಡಿಗೆ, ಪಾತ್ರೆಗಳನ್ನು ತೊಳೆಯುವುದು, ಮರುದಿನಕ್ಕೆ ತಯಾರಿ ಅಥವಾ ಮಕ್ಕಳೊಂದಿಗೆ ಸಮಯ ಕಳೆಯಬಹುದು. ಊಟವಾದ ತಕ್ಷಣ ಮಲಗುವ ಬದಲು ನೀವು ಬೇರೇನಾದರೂ ಮಾಡಬಹುದು.

ಸಣ್ಣ ನಡಿಗೆ ಒಳ್ಳೆಯದು
ಊಟವಾದ ಬಳಿಕ ಮಲಗುವ ಮೊದಲು ನೀವು ಸಲ್ಪ ನಡೆದಾಡಿದರೆ ಒಲ್ಳೆಯದು. ನೀವು ಗಂಟೆಗಟ್ಟಲೆ ನಡೆಯಬೇಕೆಂದಿಲ್ಲ. ನಿಮ್ಮ ಮನೆಯ ಸುತ್ತ 15, 20 ನಿಮಿಷ ನಡೆಯಬಹುದು. ಇದು ಒಳ್ಳೆಯದು. ಇದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಮತ್ತು ಹೊಟ್ಟೆ ಉಬ್ಬರ ತಡೆಯುವುದು. ನಿಮಗೆ ನಡೆದಾಡಲು ಇಷ್ಟವಿಲ್ಲದೆ ಇದ್ದರೆ ಆಗ ನಾಯಿಯನ್ನು ಸಾಕಿ, ಅದನ್ನು ತಿರುಗಾಡಿಸಲು ಕರೆದುಕೊಂಡು ಹೋಗಿ.

ಅತಿಯಾದ ವ್ಯಾಯಾಮ ಮಾಡಬೇಡಿ
ರಾತ್ರಿ ಊಟದ ಬಳಿಕ ನಡೆಯುವುದು ಒಳ್ಳೆಯ ವ್ಯಾಯಾಮ. ಅದಾಗ್ಯೂ, ಊಟದ ಬಳಿಕ ನೀವು ಅತಿಯಾದ ವ್ಯಾಯಾಮ ಮಾಡುವುದು ಸರಿಯಲ್ಲ. ನೀವು ಅತಿಯಾಗಿ ವ್ಯಾಯಾಮ ಮಾಡಿದರೆ ಆಗ ದೇಹದ ಉಷ್ಣತೆಯು ಹೆಚ್ಚಾಗುವುದು. ಇದರಿಂದ ನಿದ್ರೆ ಹಾಗೂ ಏಳುವ ಆವರ್ತನಕ್ಕೆ ಕಾರಣವಾಗಿರುವಂತಹ ಮೆಲಟೊನಿನ್ ಎನ್ನುವ ಹಾರ್ಮೋನು ಬಿಡುಗಡೆಯನ್ನು ಇದು ತಡೆಯುವುದು. ರಾತ್ರಿ ವೇಳೆ ಅತಿಯಾಗಿ ವ್ಯಾಯಾಮ ಮಾಡಿದರೆ ಅದರಿಂದ ನಿದ್ರೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗಬಹುದು.
Most Read: ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿದರೆ- ದೇಹದ ತೂಕ ಇಳಿಸಬಹುದು!

ಹಲ್ಲುಗಳನ್ನು ತೊಳೆಯಿರಿ
ಮಲಗುವ ಮೊದಲು ನಿಮ್ಮ ಹಲ್ಲುಗಳನ್ನು ಸರಿಯಾಗಿ ತೊಳೆಯುವುದು ಅತಿ ಅಗತ್ಯವಾಗಿರುವುದು. ಇದರಿಂದ ಪದರವು ತೊಡೆದುಹೋಗುವುದು ಮತ್ತು ಬಾಯಿಯ ಪಿಎಚ್ ಮಟ್ಟವನ್ನು ಕಾಪಾಡಬಹುದು. ಇದರಿಂದ ಹಲ್ಲುಗಳು ಆರೋಗ್ಯ ಹಾಗೂ ಸ್ವಚ್ಛತೆಯಿಂದ ಇರುವುದು.
ನೀವು ಎರಡು ನಿಮಿಷ ಕಾಲ ಬ್ರಷ್ ಮಾಡಿ. ಪ್ರತೀ ಹಲ್ಲಿನ ಸಾಲಿಗೆ 30 ಸೆಕೆಂಡುಗಳನ್ನು ಮೀಸಲಿಡಿ. ನೀವು ಒಳ್ಳೆಯ ಗುಣಮಟ್ಟದ ಹಲ್ಲಿನ ಬ್ರಷ್ ಬಳಸಿ.

ಧೂಮಪಾನ ಮಾಡಬೇಡಿ
ಧೂಮಪಾನಿಗಳಿಗೆ ರಾತ್ರಿ ಊಟದ ಬಳಿಕ ಸಿಗರೇಟ್ ಸೇದಬೇಕು. ಆದರೆ ಈ ಬಯಕೆಯನ್ನು ನೀವು ತಡೆಯಬೇಕು. ಧೂಮಪಾನವೆನ್ನುವುದು ಯಾವಾಗಲೂ ಹಾನಿಕಾರಕ. ಅದೇ ರೀತಿ ರಾತ್ರಿ ಊಟದ ಬಳಿಕ ನೀವು ಧೂಮಪಾನ ಮಾಡಿದರೆ ಅದರಿಂದ ಎದೆಯುರಿ ಉಂಟಾಗುವುದು. ಧೂಮಪಾನ ಮಾಡುವುದರಿಂದ ಐಬಿಡಿ ಮತ್ತು ಅಲ್ಸರೇಟಿನ್ ಕೊಲೈಟಿಸ್ ನಂತಹ ಸಮಸ್ಯೆಯು ಕಂಡುಬರಬಹುದು. ಧೂಮಪಾನವು ಕರುಳಿನ ಸ್ನಾಯುಗಳಿಗೆ ತುಂಬಾ ಕೆಟ್ಟದು. ಇದರಿಂದ ಕ್ಯಾನ್ಸರ್ ಬರುವಂತಹ ಸಾಧ್ಯತೆಯು ಹೆಚ್ಚು. ನಿಕೋಟಿನ್ ಎನ್ನುವುದು ಚಟವಾಗಿ ಹೋಗುವುದು ಮತ್ತು ಇದರಿಂದ ನಿದ್ರೆಯ ಮೇಲೆ ಪರಿಣಾಮವಾಗುವುದು.

ಸ್ನಾನ ಮಾಡಬೇಡಿ
ರಾತ್ರಿ ಊಟದ ಬಳಿಕ ನೀವು ಸ್ನಾನ ಮಾಡುವುದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ಜೀರ್ಣಕ್ರಿಯೆಗೆ ಹೆಚ್ಚಿನ ಶಕ್ತಿ ಬೇಕಾಗಿರುವುದು ಮತ್ತು ಹೊಟ್ಟೆಗೆ ಸರಿಯಾದ ರಕ್ತ ಸಂಚಾರ ಕೂಡ. ರಾತ್ರಿ ಊಟವಾದ ತಕ್ಷಣ ನೀವು ಸ್ನಾನ ಮಾಡಿದರೆ ಆಗ ನಿಮ್ಮ ದೇಹದ ಉಷ್ಣತೆಯು ಕಡಿಮೆಯಾಗುವುದು. ಇದರಿಂದ ಊಟವಾದ ಬಳಿಕ ನೀವು ಕನಿಷ್ಠ 30-45 ನಿಮಿಷ ಕಾಲ ಕಾದು ಬಳಿಕ ಸ್ನಾನ ಮಾಡಿ. ಸಾಧ್ಯವಾದರೆ ನೀವು ರಾತ್ರಿ ಊಟಕ್ಕೆ ಮೊದಲು ಸ್ನಾನ ಮಾಡಿ.

ಬಿಗಿಯಾದ ಬಟ್ಟೆ ಧರಿಸಬೇಡಿ
ನೀವು ಮನೆಯಲ್ಲೇ ಊಟ ಮಾಡುತ್ತಲಿದ್ದರೆ ಆಗ ನೀವು ತುಂಬಾ ಸಡಿಲವಾಗಿರುವ, ಆರಾಮದಾಯಕ ಬಟ್ಟೆಗಳನ್ನು ಧರಿಸಿ. ಬಿಗಿಯಾದ ಬಟ್ಟೆಗಳನ್ನು ಧರಿಸಿದರೆ ಅದು ಹೊಟ್ಟೆಯ ಮೇಲೆ ಒತ್ತಡ ಹಾಕುವುದು ಮತ್ತು ಇದರಿಂದ ಎದೆಯುರಿ ಉಂಟಾಗಬಹುದು. ಹೊರಗಡೆ ಊಟ ಮಾಡಲು ಹೋಗುತ್ತಲಿದ್ದರೆ ಆಗ ನೀವು ಆರಾಮದಾಯಕ ಬಟ್ಟೆ ಧರಿಸಿ. ಸಡಿಲ ಬಟ್ಟೆಯಿಂದಾಗಿ ನಿಮಗೆ ಸರಿಯಾದ ನಿದ್ರೆ ಬರುವುದು. ಬಿಗಿಯಾದ ಬಟ್ಟೆ ಧರಿಸಿದರೆ ಆಗ ದೇಹದ ಉಷ್ಣತೆಯು ಹೆಚ್ಚಾಗುವುದು ಮತ್ತು ನಿದ್ರೆಗೆ ಹಾನಿಯಾಗುವುದು.

ಬೆಲ್ಟ್ ನ್ನು ಸಡಿಲಗೊಳಿಸಬೇಡಿ
ನೀವು ರಾತ್ರಿ ಊಟದ ವೇಳೆ ಅಥವಾ ಅದರ ಬಳಿಕ ಬೆಲ್ಟ್ ಸಡಿಲಿಸುತ್ತಿದ್ದರೆ ಆಗ ನೀವು ಅತಿಯಾಗಿ ತಿನ್ನಿದ್ದೀರಿ ಎಂದು ಅರ್ಥ ಮಾಡಿಕೊಳ್ಳಬೇಕು. ನೀವು ಅತಿಯಾಗಿ ತಿಂದ ಬಳಿಕ ಬೆಲ್ಟ್ ನ್ನು ಸಡಿಲಗೊಳಿಸಿದರೆ ಆಗ ಹೊಟ್ಟೆಯ ಸ್ನಾಯುಗಳು ಕೂಡ ಸಡಿಲವಾಗುವುದು. ಇದರಿಂದ ನೀವು ಬೆಲ್ಟ್ ನ್ನು ಊಟದ ವೇಳೆ ಅಥವಾ ಬಳಿಕ ಸಡಿಲಗೊಳಿಸಲು ಹೋಗಬೇಡಿ. ರಾತ್ರಿ ಊಟವು ಅತಿಯಾಗಿರಬಾರದು. ಇದರಿಂದ ಜೀರ್ಣಕ್ರಿಯೆಗೆ ಸಮಸ್ಯೆಯಾಗುವುದು.

ಹಣ್ಣುಗಳನ್ನು ತಿನ್ನಬೇಡಿ
ಹಣ್ಣುಗಳನ್ನು ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ತಿಳಿದಿದೆ. ಆದರೆ ರಾತ್ರಿ ಊಟವಾದ ತಕ್ಷಣ ನೀವು ಹಣ್ಣುಗಳನ್ನು ಸೇವಿಸಬಾರದು. ರಾತ್ರಿ ಊಟವಾದ ತಕ್ಷಣ ನೀವು ಹಣ್ಣುಗಳನ್ನು ತಿಂದರೆ ಅದರಿಂದ ಹಣ್ಣುಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುವುದು. ಇದರಲ್ಲಿ ಇರುವಂತಹ ಸಕ್ಕರೆ ಅಂಶವು ಎಚ್ಚರವಾಗಿದ್ದುಕೊಂಡು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ಊಟಕ್ಕೆ ಅರ್ಧ ಗಂಟೆ ಮೊದಲು ನೀವು ಹಣ್ಣುಗಳನ್ನು ಸೇವಿಸಿ. ಮಧುಮೇಹಿಗಳು ಹಣ್ಣುಗಳನ್ನು ತಿನ್ನುವ ವೇಳೆ ತುಂಬಾ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಇದರಲ್ಲಿರುವಂತಹ ಸಕ್ಕರೆ ಅಂಶವು ನಿಮ್ಮ ಮೇಲೆ ಪರಿಣಾಮ ಬೀರಬಹುದು.



Click it and Unblock the Notifications