ದಾಸವಾಳ ಹೂವು ಪೂಜೆಗೆ ಮಾತ್ರವಲ್ಲ ಆರೋಗ್ಯಕ್ಕೂ ಬಹಳ ಉಪಕಾರಿ!

"ಹೂವು ಚೆಲುವೆಲ್ಲಾ ತನದೆಂದಿತು, ಹೆಣ್ಣು ಹೂವು ಮುಡಿದು ಚೆಲುವೆ ತಾನೆಂದಿತು" ಎಂಬ ಗೀತೆಯನ್ನು ನೀವು ಕೇಳಿರಬಹುದು. ಹೂವು ಎಂದರೆ ಸೌಂದರ್ಯ, ಹೂವು ಎಂದರೆ ಮಧುರ ಭಾವನೆ, ಇತ್ಯಾದಿ ವಿಚಾರಗಳು ಮನಸ್ಸಿನಲ್ಲಿ ಹಾದು ಹೋಗುತ್ತವೆ. ಕೆಲವೊಂದು ಹೂವುಗಳನ್ನು ನಾವು ಆಹಾರವಾಗಿ ಸಹ ಸೇವಿಸುತ್ತೇವೆ! ಕೆಲವೊಂದು ಹೂವುಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಹೂವುಗಳು ಎಂದರೆ ಸೌಂದರ್ಯ, ಮಧುರ ಸುವಾಸನೆ, ಆಹಾರ ಪದಾರ್ಥ ಇತ್ಯಾದಿಗಳ ಜೊತೆಗೆ ಆರೋಗ್ಯ ಮತ್ತು ಸೌಂದರ್ಯವನ್ನು ಸಹ ನಾವು ನೆನಪಿಸಿಕೊಳ್ಳಬೇಕಾಗುತ್ತದೆ.

ಬರೀ ಬಾಯಿ ಮಾತಿನಲ್ಲಿ ಮಾತ್ರ ನೀವು ಸೌಂದರ್ಯಕ್ಕೆ ಹೂವುಗಳು ಒಳ್ಳೆಯದು ಎಂದು ಹೇಳುತ್ತಿದ್ದೀರಿ ಎಂದು ಭಾವಿಸಬೇಡಿ. ದಾಸವಾಳ ಹೂವು ನಿಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ತನ್ನ ಪಾಲಿನ ಸಹಾಯ ಮಾಡುತ್ತದೆ. ಹೌದು, ದಾಸವಾಳ, ಹೈಬಿಸ್ಕಸ್, ಶೂಫ್ಲವರ್ ಎಂದು ಕರೆಯಲ್ಪಡುವ ಈ ಹೂವು ನಿಮ್ಮ ಕೂದಲಿಗೆ ರಕ್ಷಣೆಯನ್ನು ನೀಡುವುದರ ಜೊತೆಗೆ ಹಲವಾರು ಕಾಯಿಲೆಗಳನ್ನು ನಿವಾರಿಸುತ್ತದೆ. ಬನ್ನಿ, ಈ ಹೂವಿನಿಂದ ಏನೆಲ್ಲಾ ಪ್ರಯೋಜನಗಳು ದೊರೆಯುತ್ತವೆ ಎಂಬುದನ್ನು ತಿಳಿದುಕೊಂಡು ಬರೋಣ....

ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ

ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ

ಸ್ಥೂಲಕಾಯವನ್ನು ಕರಗಿಸಲು ಈ ಹೂವಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ನೆರವಾಗುತ್ತವೆ. ದಾಸವಾಳ ಹೂವಿನ ಒಣಗಿದ ಪಕಳೆಗಳ ಪುಡಿಯನ್ನು ನಿತ್ಯವೂ ಒಂದು ಚಮಚದಷ್ಟು ಸೇವಿಸುವ ಮೂಲಕ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಗಣನೀಯವಗಿ ಕಡಿಮೆಯಾಗುತ್ತದೆ. ಇದರಿಂದ ಎದುರಾಗಬಹುದಾಗಿದ್ದ ತೊಂದರೆಗಳನ್ನು ಮತ್ತು ಹೃದಯ ಸ್ತಂಭನದ ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ. ಯಾವುದೇ ಕಾರಣಕ್ಕೆ ಶರೀರದ ತಾಪಮಾನ ವಿಪರೀತವಾಗಿ ಏರಿದ್ದರೆ ಇದನ್ನು ಇಳಿಸಲು ದಾಸವಾಳದ ಹೂವಿನ ನೀರು ಅತ್ಯುತ್ತಮವಾಗಿದೆ. ಜ್ವರ ವಿಪರೀತವಾಗಿದ್ದಾಗ ಈ ಹೂವಿನ ತಾಜಾ ಪಕಳೆಗಳನ್ನು ಕುದಿಸಿ ತಣಿಸಿ ಸೋಸಿದ ನೀರನ್ನು ಹಣ್ಣಿನ ರಸದ ಬದಲಿಗೆ ಕುಡಿಸಿದರೆ ಜ್ವರ ತಕ್ಷಣ ಕಡಿಮೆಯಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಜ್ವರದ ಸಮಸ್ಯೆಗೆ....

ಜ್ವರದ ಸಮಸ್ಯೆಗೆ....

ಫ್ಲೂ ಅಥವಾ ಜ್ವರದಿಂದ ಬಳಲ್ಲುತ್ತಿದ್ದೀರಾ? ಚಿಂತೆ ಮಾಡದೆ ಒಣ ದಾಸವಾಳದ ಎಲೆಗಳನ್ನು ಬಿಸಿ ನೀರಿನಲ್ಲಿ ಹಾಕಿಕೊಂಡು ಟೀಯನ್ನು ತಯಾರಿಸಿಕೊಳ್ಳಿ. ಇವು ಜ್ವರದ ಸಮಯದಲ್ಲಿ ನಿಮಗೆ ಉಪಶಮನವನ್ನು ನೀಡುತ್ತದೆ ಎಂದು ಇಂಟರ್‌ನ್ಯಾಶನಲ್ ಜರ್ನಲ್ ರಿಸರ್ಚ್ ಇನ್ ಫಾರ್ಮಾಸೆಟಿಕಲ್ ಅಂಡ್ ಬಯೋಮೆಡಿಕಲ್ ಸೈನ್ಸಸ್ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ. ಇದರಲ್ಲಿರುವ ಡೆಮುಲ್ಸೆಂಟ್ ಮತ್ತು ಉರಿಬಾವು ನಿರೋಧಕ ಗುಣಗಳು ಉರಿಬಾವನ್ನು ಕಡಿಮೆ ಮಾಡುತ್ತವೆ ಮತ್ತು ಸಿಂಬಳವನ್ನು ಕಡಿಮೆ ಮಾಡಿ ನಿಮಗೆ ಆರಾಮವನ್ನು ನೀಡುತ್ತದೆ.

ಮಧುಮೇಹ ಮತ್ತು ಕಿಡ್ನಿ ತೊಂದರೆಗೆ ರಾಮಬಾಣ

ಮಧುಮೇಹ ಮತ್ತು ಕಿಡ್ನಿ ತೊಂದರೆಗೆ ರಾಮಬಾಣ

ದಾಸವಾಳ ಒಂದು ಉತ್ತಮ ಮೂತ್ರವರ್ಧಕವಾಗಿದೆ. ಇದೇ ಕಾರಣಕ್ಕೆ ಮಧುಮೇಹ ಮತ್ತು ಮೂತ್ರಪಿಂಡಗಳ ತೊಂದರೆಯಿಂದ ಬಳಲುತ್ತಿರುವವರು ದಾಸವಾಳ ಹೂವಿನ ಪಕಳೆಗಳನ್ನು ಅರೆದು ತಯಾರಿಸಿದ ಜ್ಯೂಸ್ ಅನ್ನು ಕುಡಿಯಲು ಆಯುರ್ವೇದದಲ್ಲಿ ಶಿಫಾರಸ್ಸು ಮಾಡಲಾಗಿದೆ.

ರಕ್ತಹೀನತೆಯಿಂದ ಬಳಲುತ್ತಿರುವವರಿಗೆ

ರಕ್ತಹೀನತೆಯಿಂದ ಬಳಲುತ್ತಿರುವವರಿಗೆ

ಕೆಂಪು ದಾಸವಾಳ ಹೂವಿನ ದಳಗಳನ್ನು ಒಳಗಿಸಿ ಚೂರ್ಣದ ರೂಪದಲ್ಲಿ ಸೇವಿಸುತ್ತಾ ಬರುವ ಮೂಲಕ ರಕ್ತ ಶುದ್ಧಿಯಾಗುತ್ತದೆ ಹಾಗೂ ರಕ್ತದಲ್ಲಿ ಕಬ್ಬಿಣದ ಅಂಶ ಹೆಚ್ಚುತ್ತದೆ. ಇದೇ ಕಾರಣಕ್ಕೆ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಈ ಹೂವು ಉತ್ತಮವಾಗಿದೆ. ಪೂರ್ವ ದೇಶಗಳಲ್ಲಿ ಸಿಹಿತಿಂಡಿಗಳ ಮೇಲೆ ದಾಸವಾಳ ಹೂವಿನ ದಳಗಳನ್ನು ಕಲಾತ್ಮಕವಾಗಿ ಅಲಂಕರಿಸಿ ಸಿಹಿಯ ಜೊತೆಯಲ್ಲಿಯೇ ಸೇವಿಸುವ ಸಂಪ್ರದಾಯವಿದೆ.

ಕೂದಲಿನ ಸಮಸ್ಯೆಗೆ...

ಕೂದಲಿನ ಸಮಸ್ಯೆಗೆ...

ಈ ಹೂವಿನ ದಳಗಳನ್ನು ಅರೆದು ಸಂಗ್ರಹಿಸಲಾದ ಲೋಳೆ ಕೂದಲ ಪೋಷಣೆಗೆ ಅತ್ಯುತ್ತಮವಾಗಿದ್ದು ಹಲವು ನೈಸರ್ಗಿಕ ಕೂದಲ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಅಲ್ಲದೇ ಇದರ ಗಿಡದ ಚೆಕ್ಕೆಯ ಪುಡಿಯನ್ನು ಶಾಂಪೂ ಮೂಲಕ ಬಳಸುವುದರಿಂದ ತಲೆಯ ಚರ್ಮ ಒಣಗುವುದು ಮತ್ತು ತಲೆಹೊಟ್ಟಾಗುವುದರಿಂದ ರಕ್ಷಿಸುತ್ತದೆ.

ಬಿಳಿ ಕೂದಲಿನ ಸಮಸ್ಯೆಗೆ

ಬಿಳಿ ಕೂದಲಿನ ಸಮಸ್ಯೆಗೆ

ದಾಸವಾಳ ಹೂವಿನ ದಳಗಳನ್ನು ಬಿಸಿ ನೀರಿನಲ್ಲಿ ಹಾಕಿ 20 ನಿಮಿಷ ಕಾಯಿಸಿ. ಆನಂತರ ಅದನ್ನು ತಣ್ಣಗೆ ಮಾಡಿ, ಪೇಸ್ಟ್ ರೀತಿ ಮಾಡಿಕೊಳ್ಳಿ.ಇನ್ನು ಈ ಪೇಸ್ಟ್ ಅನ್ನು ನಿಮ್ಮ ಕೂದಲು ಮತ್ತು ಕೂದಲಿನ ಬುಡಕ್ಕೆ ಲೇಪಿಸಿ. 20 ನಿಮಿಷ ಬಿಟ್ಟು ನಂತರ ಇದನ್ನು ತೊಳೆಯಿರಿ. ಇದನ್ನು ಪ್ರತಿದಿನ ಮಾಡಿ, ಅದರ ನಂತರ ದಾಸವಾಳ ನೆನೆಸಿದ ಎಣ್ಣೆಯನ್ನು ಹಚ್ಚಿ

ಮಧುಮೇಹವನ್ನು ನಿಯಂತ್ರಿಸಲು

ಮಧುಮೇಹವನ್ನು ನಿಯಂತ್ರಿಸಲು

ಬಯೋಕೆಮಿಕಲ್ ಅಂಡ್ ಬಯೋಫಿಸಿಕಲ್ ರಿಸರ್ಚ್ ಕಮ್ಯೂನಿಕೇಶನ್‌ರವರ ಅಧ್ಯಯನದಲ್ಲಿ ತಿಳಿದುಬಂದಿರುವಂತೆ, ದಾಸವಾಳದಿಂದ ತಯಾರಿಸಲಾಗುವ ಒಂದು ಔಷಧಿಯು ನಿಮ್ಮ ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ದಾಸವಾಳದಲ್ಲಿ ಫೆರುಲಿಕ್ ಆಮ್ಲದಂತಹ ಪಾಲಿಫೆನಾಲ್‌ಗಳು ಲಭ್ಯವಿರುತ್ತವೆ. ಇದು ಮಧುಮೇಹವನ್ನು ನಿವಾರಿಸುವ ಅಂಶವಾಗಿ ಕಾರ್ಯ ನಿರ್ವಹಿಸುತ್ತದೆ.

ಮೂತ್ರನಾಳದ ಇನ್‌ಫೆಕ್ಷನ್ ಅನ್ನು ನಿವಾರಿಸುತ್ತದೆ

ಮೂತ್ರನಾಳದ ಇನ್‌ಫೆಕ್ಷನ್ ಅನ್ನು ನಿವಾರಿಸುತ್ತದೆ

ಏಶಿಯನ್ ಪೆಸಿಫಿಕ್ ಜರ್ನಲ್ ಆಫ್ ಟ್ರಾಪಿಕಲ್ ಬಯೋಮೆಡಿಸಿನ್‌ರವರ ಅಧ್ಯಯನದ ಪ್ರಕಾರ ದಾಸವಾಳದಲ್ಲಿರುವ ಶಿಲೀಂಧ್ರ ನಿರೋಧಕ ಮತ್ತು ಸೂಕ್ಷ್ಮಾಣು ಜೀವಿನಾಶಕ ಗುಣಗಳು ಮೂತ್ರನಾಳದ ಇನ್‌ಫೆಕ್ಷನ್‌ಗೆ ಕಾರಣವಾದ ಕ್ಯಾಂಡಿಡ ಆಲ್‌ಬಿಕಾನ್‌ಗಳ ವಿರುದ್ಧ ಹೋರಾಡುತ್ತವೆ. ದಾಸವಾಳದಲ್ಲಿರುವ ಪೋಷಕಾಂಶಗಳು ಮೂತ್ರನಾಳದ ಇನ್‌ಫೆಕ್ಷನ್‌ಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ ಮತ್ತು ಈ ಇನ್‌ಫೆಕ್ಷನ್‌ನಿಂದ ನಿಮಗೆ ಮುಕ್ತಿಯನ್ನುಂಟು ಮಾಡುತ್ತದೆ. ದಾಸವಾಳದಲ್ಲಿರುವ ಫ್ಲಾವೊನಾಯ್ಡ್‌ಗಳನ್ನು ದಾಸವಾಳ ಟೀ ಮಾಡಿಕೊಂಡು ಸೇವಿಸುವುದರಿಂದ ನಾವು ಸೇವಿಸಬಹುದು.

ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು

ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು

ದಾಸವಾಳ ಹೂವಿನಿಂದ ಪ್ರತ್ಯೇಕಿಸಲ್ಪಟ್ಟ ದ್ರವದಿಂದ ಹೃದಯಕ್ಕೆ ಸಂಬಂಧಪಟ್ಟ ಹಲವು ಕಾಯಿಲೆಗಳಿಗೆ ಔಷಧವನ್ನು ತಯಾರಿಸಲಾಗುತ್ತದೆ.

ಉಷ್ಣತೆಗೆ ಬಳಸಿ

ಉಷ್ಣತೆಗೆ ಬಳಸಿ

ದಾಸವಾಳದ ರಸ ದೇಹದ ಉಷ್ಣತೆಯನ್ನು ಕಡಿಮೆಮಾಡುತ್ತದೆ, ಈ ಮೂಲಕ ಉಷ್ಣ ಸಂಬಂಧಿ ಸಮಸ್ಯೆಗಳು ತಲೆದೋರುವುದನ್ನು ತಡೆಯುತ್ತದೆ. ಅದರಲ್ಲೂ ಬಿಳಿ ಬಣ್ಣದ ದಾಸವಾಳದಲ್ಲಿ ತಂಪು ನೀಡುವ ಅಂಶ ಹೆಚ್ಚಿರುವುದರಿಂದ, ಅದು ಕಣ್ಣುಗಳನ್ನು ಆಯಾಸದಿಂದ ಮುಕ್ತವಾಗಿರಿಸಿ, ತಂಪನ್ನು ನೀಡುತ್ತದೆ.

ರಕ್ತ ಹೀನತೆ

ರಕ್ತ ಹೀನತೆ

ಕೆಂಪು ದಾಸವಾಳದ ಹೂವು ನೈಸರ್ಗಿಕವಾಗಿ ರಕ್ತದ ಬಣ್ಣವನ್ನು ಹೆಚ್ಚಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿದ್ದವರಿಗೆ ಇದು ಪರಿಣಾಮಕಾರಿ ಔಷಧಿ.

ಕೂದಲು ಉದುರುವಿಕೆ

ಕೂದಲು ಉದುರುವಿಕೆ

ದಾಸವಾಳದ ದಳಗಳು ನಿಮ್ಮ ಕೂದಲು ಉದುರುವಿಕೆಗೆ ಹೇಳಿ ಮಾಡಿಸಿದ ಔಷಧಿಯಾಗಿರುತ್ತವೆ. ಇದನ್ನು ಎಣ್ಣೆಯಲ್ಲಿ ನೆನೆಸಿ ಲೇಪಿಸುವುದರಿಂದ ನಿಮ್ಮ ಕೂದಲಿನ ಬುಡಗಳು ಗಟ್ಟಿಗೊಳ್ಳುತ್ತವೆ. ಏಕೆಂದರೆ ಇದರಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ ಇರುತ್ತವೆ. ಈ ದಾಸವಾಳದ ಎಣ್ಣೆಯನ್ನು ಮಸಾಜ್ ಮಾಡುವುದರಿಂದಾಗಿ, ರಕ್ತ ಸಂಚಾರ ಹೆಚ್ಚಾಗುತ್ತದೆ ಮತ್ತು ಇದರಲ್ಲಿರುವ ಪೋಷಕಾಂಶಗಳನ್ನು ಕೂದಲಿನ ಬೇರು ಹೀರಿಕೊಂಡು, ಚೆನ್ನಾಗಿ ಬೆಳೆಯುತ್ತದೆ.

ಯಕೃತ್ ಅನ್ನು ರಕ್ಷಿಸುತ್ತದೆ

ಯಕೃತ್ ಅನ್ನು ರಕ್ಷಿಸುತ್ತದೆ

ಯಕೃತ್‌ನ (lಲಿವರ್) ತೊಂದರೆಗಳಿಗೆ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಉತ್ತಮ ಸಹಕಾರ ನೀಡುತ್ತವೆ ಎಂದು ಸಂಶೋಧನೆಗಳು ದೃಢಗೊಳಿಸಿವೆ.ಇವು ರಕ್ತದಲ್ಲಿನ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿಷ್ಕ್ರಿಯಗೊಳಿಸಿ ಯಕೃತ್ ಸಹಿತ ದೇಹದ ಇತರ ಅಂಗಗಳನ್ನು ಹಾನಿಯಿಂದ ರಕ್ಷಿಸುತ್ತದೆ ಹಾಗೂ ಕ್ಷಮತೆಯನ್ನು ಹೆಚ್ಚಿಸುತ್ತದೆ.

ದಾಸವಾಳದ ಚಹಾದಿಂದ ಕ್ಯಾನ್ಸರ್ ರೋಗವನ್ನು ನಿಯಂತ್ರಿಸಬಹುದು

ದಾಸವಾಳದ ಚಹಾದಿಂದ ಕ್ಯಾನ್ಸರ್ ರೋಗವನ್ನು ನಿಯಂತ್ರಿಸಬಹುದು

ಇನ್ನೊಂದು ಸಂಶೋಧನೆಯ ಪ್ರಕಾರ ನಿಯಮಿತವಾಗಿ ದಾಸವಾಳದ ಚಹಾ ಸೇವಿಸುವುದರಿಂದ ಕ್ಯಾನ್ಸರ್ ಪೀಡಿತ ಜೀವಕೋಶಗಳ ಬೆಳವಣಿಗೆ ತಗ್ಗುತ್ತದೆ ಹಾಗೂ ಒಂದು ವೇಳೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದರೆ ಪೂರ್ಣವಾಗಿ ನಿವಾರಿಸಲು ನೆರವಾಗುತ್ತದೆ. ಅಷ್ಟೇ ಅಲ್ಲದೆ ಇದರಲಿರುವ ಉರಿಯೂತ ನಿವಾರಕ ಗುಣ ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ದಾಸವಾಳದ ಹೂವಿನ ಚಹಾ ಒಂದು ವರದಾನವಾಗಿದೆ.

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಬೇಕಾಗುವ ಸಾಮಾಗ್ರಿಗಳು

*ಚೆನ್ನಾಗಿ ಒಣಗಿಸಿದ ದಾಸವಾಳ ಹೂವಿನ ದಳಗಳು

*ಎರಡು ಚಮಚ ಸಕ್ಕರೆ

*ನೀರು - 1 ಕಪ್

*ಲಿಂಬೆಹಣ್ಣಿನ ರಸ - 2 ಟೀ.ಚಮಚ

*ಶುಂಠಿ - ಸಣ್ಣಕ್ಕೆ ಹೆಚ್ಚಿರುವುದು

ಮಾಡುವ ವಿಧಾನ

ಮಾಡುವ ವಿಧಾನ

1. ತಳ ಆಳವಿರುವ ಪಾತ್ರೆಯಲ್ಲಿ ನೀರು ಬಿಸಿಗಿಟ್ಟು ಶುಂಠಿಯ ತುಂಡು ಮತ್ತು ದಾಸವಾಳ ದಳಗಳನ್ನು ಸೇರಿಸಿ 10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ. (ದಾಸವಾಳ

ದಳಗಳು ಚೆನ್ನಾಗಿ ಕುದಿದಾಗ ಕೆಂಬಣ್ಣಕ್ಕೆ ತಿರುಗುತ್ತದೆ)

2. ಇದು ಚೆನ್ನಾಗಿ ಕುದಿದ ನಂತರ ಸೋಸಿಕೊಂಡು ಇದಕ್ಕೆ 2 ಚಮಚದಷ್ಟು ಸಕ್ಕರೆ ಮತ್ತು ಎರಡು ಟೀ ಚಮಚದಷ್ಟು ಲಿಂಬೆಯ ರಸವನ್ನು ಸೇರಿಸಿ

3. ಅರೋಗ್ಯಕರವಾದ ದಾಸವಾಳ ದಳಗಳ ಚಹಾವನ್ನು ಸವಿಯಿರಿ.

ಆರೋಗ್ಯದ ಸಂಜೀವಿನಿ-ಮನೆಯಂಗಳದ 'ದಾಸವಾಳ'

1. ದಾಸವಾಳದ ಎಲೆಗಳ ಪೌಷ್ಠಿಕಾಂಶದ ಲಾಭಗಳಲ್ಲಿ ಒಂದೆಂದರೆ ಅದರ ಟೀ ನಮ್ಮ ಆಹಾರ ಕ್ರಮಕ್ಕೆ ತುಂಬಾ ಆರೋಗ್ಯಕಾರಿ. ಆದರೆ ಟೀ ಕುಡಿಯುವ ಮೊದಲು ಎಚ್ಚರಿಕೆ ವಹಿಸಿ, ಇದು ಸಾವಯವವೇ, ಯಾವುದೇ ಸಂರಕ್ಷಗಳನ್ನು ಬೆರೆಸಿಲ್ಲವೇ ಮತ್ತು ಉನ್ನತ ಗುಣಮಟ್ಟದಲ್ಲಿ ಸಂಸ್ಕರಿಸಲಾಗಿದೆಯಾ ಎಂದು ತಿಳಿಯಿರಿ. ಕಿಡ್ನಿಯ ತೊಂದರೆ, ಜೀರ್ಣಾಂಗ ಸಮಸ್ಯೆ, ಮೂತ್ರಕೋಶದ ಸೋಂಕು ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಇತ್ಯಾದಿಗಳಿಗೆ ದಾಸವಾಳದ ಎಲೆಯ ಚಹಾ ನೆರವಾಗುತ್ತದೆ.

2. ದಾಸವಾಳದ ಎಲೆಗಳ ಮತ್ತೊಂದು ಪೌಷ್ಠಿಕಾಂಶದ ಲಾಭವೆಂದರೆ ನಾವು ಕೆಲವು ದಾಸವಾಳದ ಎಲೆಗಳನ್ನು ಜಗಿದರೆ ಅದರಲ್ಲೂ ಮಹಿಳೆಯರು ಮುಟ್ಟಿನ ವೇಳೆ ಜಗಿದರೆ ಆ ಸಮಯದಲ್ಲಿ ಆಗುವ ಸ್ನಾಯು ಸೆಳೆತ ಕಡಿಮೆ ಮಾಡುತ್ತದೆ. ಇದು ಜೀರ್ಣಕ್ರಿಯೆ ಮತ್ತು ತೂಕ ಇಳಿಸಲು ಸಹಕಾರಿ.

3. ಇದರ ಅತ್ಯಂತ ಲಾಭಕಾರಿ ಪೌಷ್ಠಿಕಾಂಶ ಗುಣಗಳೆಂದರೆ ಇದನ್ನು ಆಹಾರ ಉತ್ಪನ್ನಗಳ ಬಣ್ಣ ಮತ್ತು ಬೇಕಿಂಗ್ ಗೆ ಬಳಸಲಾಗುತ್ತದೆ.

4. ದಾಸವಾಳದ ಎಲೆಗಳ ಪೌಷ್ಠಿಕಾಂಶ ಗುಣಗಳೆಂದರೆ ಬೆಳಗ್ಗೆ ಕೆಲವು ದಾಸವಾಳದ ಎಲೆಗಳನ್ನು ಜಗಿಯಿರಿ, ಇದು ನಿಮ್ಮನ್ನು ಎಲ್ಲಾ ರೋಗಗಳಿಂದ ದೂರವಿಡುತ್ತದೆ.

English summary

Scientifically Proven Health Benefits Of Hibiscus Flower

Just looking at beautiful fresh flowers can elevate your mood and make you feel happy. You can also eat some flowers for their health benefits! Certain flowers are edible and possess health benefits too. One such type is the hibiscus, or shoeflower. This flower is an amazing remedy for ailments and hair care. Here are some benefits of this flower.
X
Desktop Bottom Promotion