Latest Updates
-
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ -
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ
ಕೆಲವು ಮಹಿಳೆಯರಲ್ಲಿ ಸ್ತನಗಳು ಬೆಳವಣಿಗೆಯಾಗದಿರಲು ಕಾರಣವೇನು?
ಪ್ರೌಢವಸ್ಥೆ ತಲುಪಿದ ಬಳಿಕ ಹುಡುಗಿಯರ ದೇಹದಲ್ಲಿ ಕೆಲವೊಂದು ಬದಲಾವಣಿಗೆಳು ಆಗುವುದು ಪ್ರಕೃತಿ ಸಹಜ. ಇದರಲ್ಲಿ ಒಂದು ಸ್ತನಗಳ ಬೆಳವಣಿಗೆ. ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆಯ ಸ್ತನಗಳು ಸಾಮಾನ್ಯಕ್ಕಿಂತ ದೊಡ್ಡ ಗಾತ್ರದ ತನಕ ಬೆಳೆದಿರುವುದು. ಕೆಲವು ಮಹಿಳೆಯರಲ್ಲಿ ಸಣ್ಣ ಗಾತ್ರದ ಸ್ತನಗಳಿದ್ದರೆ, ಇನ್ನು ಕೆಲವು ಮಹಿಳೆಯರ ಸ್ತನಗಳು ವಿಪರೀತವಾಗಿ ದೊಡ್ಡದಾಗಿರುವುದು. ಇದಕ್ಕೆ ಕಾರಣಗಳು ಹಲವು ಇರಬಹುದು. ಆದರೆ ಸ್ತನಗಳು ಮಹಿಳೆಯಿಂದ ಮಹಿಳೆಗೆ ಗಾತ್ರದಲ್ಲಿ ಭಿನ್ನವಾಗಿರುವುದು ಸ್ವಾಭಾವಿಕ ಎನ್ನಬಹುದು. ಆದರೆ ಕೆಲವು ಮಹಿಳೆಯರು ಸ್ತನವು ಬೆಳೆದಿಲ್ಲವೇನೋ ಎನ್ನುವಂತೆ ಇರುವುದು. ಎದೆಯು ಸಂಪೂರ್ಣವಾಗಿ ಚಪ್ಪಟೆಯಾಗಿರುವುದು.
ಸ್ತನಗಳು ತುಂಬಾ ಸಣ್ಣದಾಗಿರುವುದು. ಇದು ಅನುವಂಶೀಯವಾಗಿ ಬಂದಿರುವುದು ಎಂದು ತಜ್ಞರು ನಂಬಿದ್ದರು. ಅದಾಗ್ಯೂ, ಕೆಲವೊಂದು ವೈದ್ಯಕೀಯ ಅಧ್ಯಯನಗಳ ಪ್ರಕಾರ ಮಹಿಳೆಯಲ್ಲಿ ಸ್ತನ ಬೆಳೆಯದೆ ಇರಲು ಕೆಲವೊಂದು ಕಾರಣಗಳನ್ನು ಹುಡುಕಿದ್ದಾರೆ. ಅನುವಂಶೀಯತೆಯು ಇದರಲ್ಲಿ ಒಂದು ಕಾರಣವಾಗಿದೆ. ಈ ಲೇಖನದಲ್ಲಿ ಸ್ತನಗಳು ಬೆಳೆಯದೆ ಇರಲು ಕೆಲವೊಂದು ಕಾರಣಗಳನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ಈ ಬಗ್ಗೆ ನೀವು ಮುಂದಕ್ಕೆ ಓದುತ್ತಾ ಸಾಗಿ...

ಅನುವಂಶೀಯತೆ
ಮಹಿಳೆಯಲ್ಲಿ ಸ್ತನಗಳು ತುಂಬಾ ಸಣ್ಣದಾಗಿ ಇರುವುದು ಬ್ರೆಸ್ಟ್ ಹೈಪೊಪ್ಲಾಸಿಯಾದಿಂದಾಗಿದೆ. ಇದು ಅನುವಂಶೀಯತೆ ಅಥವಾ ಕುಟುಂಬದಿಂದ ಇದು ಸಹಜವಾಗಿ ಬಂದಿರುವುದು. ಇದಕ್ಕೆ ಯಾವುದೇ ರೀತಿಯ ವೈದ್ಯಕೀಯ ಸಂಬಂಧವಿಲ್ಲ. ದೇಹದಲ್ಲಿ ಕೊಬ್ಬು ವಿಸ್ತರಣೆಯಾಗುವುದು ಕುಟುಂಬದಲ್ಲೇ ಇರುವಂತಹ ಸಮಸ್ಯೆಯಾಗಿರಬಹುದು. ಈ ಅನುವಂಶೀಯ ಸಮಸ್ಯೆಯು ಮಹಿಳೆಯಲ್ಲಿ ಸ್ತನಗಳು ಬೆಳೆಯದೆ ಇರಲು ಕಾರಣವಾಗಿದೆ. ಅಂಡಾಶಯದ ಅನೆನಿಸಿಸ್ ಅಥವಾ ಟರ್ನರ್ ಸಿಂಡ್ರೋಮ್ ಎನ್ನುವ ಅನುವಂಶೀಯ ಕಾಯಿಲೆಯು 2500ರಲ್ಲಿ ಒಬ್ಬಳು ಹುಡುಗಿಯಲ್ಲಿ ಕಂಡುಬರುವುದು. ಟರ್ನರ್ ಸಿಂಡ್ರೋಮ್ ನಿಂದ ಬಳಲುತ್ತಿರುವಂತಹ ಮಹಿಳೆಯರಲ್ಲಿ ಸಾಮಾನ್ಯ ಗಾತ್ರದ ಎಕ್ಸ್ ವರ್ಣತಂತುಗಳು ಇರುವುದಿಲ್ಲ. ಇದರಿಂದಾಗಿ ಇಂತಹ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಇದರಲ್ಲಿ ಒಂದು ಬೆಳೆಯದೆ ಇರುವಂತಹ ಸ್ತನಗಳು.
Most Read: ಸ್ತನಗಳು ಜೋತು ಬೀಳದಂತೆ ತಡೆಯಲು ಕೆಲವು ನೈಸರ್ಗಿಕ ಮನೆಮದ್ದುಗಳು

ವಿಟಮಿನ್ ಕೊರತೆ
ವಿಟಮಿನ್ ಅಥವಾ ಖನಿಜಾಂಶಗಳ ಕೊರತೆಯಿಂದಾಗಿ ಮಹಿಳೆಯರಲ್ಲಿ ಸ್ತನಗಳ ಬೆಳೆವಣಿಗೆಯು ಆಗದಿರಬಹುದು. ಇದಕ್ಕೆ ಮಹಿಳೆಯರ ಕಳಪೆ ಆಹಾರ ಕ್ರಮವು ಪ್ರಮುಖ ಕಾರಣವಾಗಿದೆ. ಹದಿಹರೆಯದಲ್ಲಿ ಮುಟ್ಟಿನ ವೇಳೆ ಅತಿಯಾದ ರಕ್ತಸ್ರಾವ, ದಿಢೀರ್ ಬೆಳವಣಿಗೆ ಮತ್ತು ಅತಿಯಾಗಿ ಫಾಸ್ಟ್ ಫುಡ್ ಸೇವನೆಯು ಕೆಲವು ಪ್ರಮುಖ ಕಾರಣಗಳಾಗಿವೆ.ಇಂತಹ ಸಂದರ್ಭದಲ್ಲಿ ಮಹಿಳೆಯ ದೇಹವು ಸ್ತನಗಳ ಕಡೆ ಗಮನಹರಿಸುವ ಬದಲು ಪೋಷಕಾಂಶಗಳನ್ನು ಗಂಭೀರ ಸಮಸ್ಯೆಗಳಿರುವ ಭಾಗಗಳಿಗೆ ವಿಸ್ತರಣೆ ಮಾಡುವುದು. ಈ ಕಾರಣದಿಂದಾಗಿ ಸ್ತನಗಳು ಬೆಳೆಯದೆ ಹಾಗೆ ಉಳಿಯುವುದು.

ಹಾರ್ಮೋನು ವೈಪರಿತ್ಯ
ಸ್ತನಗಳ ಬೆಳವಣಿಗೆ ನಿಲ್ಲಲು ಹಾರ್ಮೋನು ಅಸಮತೋಲನವು ಕಾರಣವಾದರೆ, ಇದಕ್ಕೆ ಹಿರ್ಸುಟಿಸಮ್(ಮಹಿಳೆಯ ದೇಹ ಮತ್ತು ಮುಖದಲ್ಲಿ ಅತಿಯಾಗಿ ಕೂದಲು ಬೆಳವಣಿಗೆ)ನಂತಹ ಕೆಲವೊಂದು ಸಮಸ್ಯೆಗಳು ಕಾರಣವಾಗಿರಬಹುದು. ಹಾರ್ಮೋನು ಅಸಮತೋಲನದಿಂದಾಗಿ ಮಹಿಳೆಯಲ್ಲಿ ಸ್ತನಗಳು ಬೆಳೆಯದೆ ಇದ್ದರೆ ಆಗ ಮಹಿಳೆಯಲ್ಲಿ ಸ್ತನಗಳ ಬೆಳವಣಿಗೆಗೆ ಹಾರ್ಮೋನುಗಳು ಬಿಡುಗಡೆಯಾಗದೆ ಇರಬಹುದು ಅಥವಾ ಅತಿಯಾದ ಹಾರ್ಮೋನುಗಳು ಸ್ತನಗಳ ಬೆಳವಣಿಗೆ ತಡೆದಿರಬಹುದು. ಎರಡು ಸಮಸ್ಯೆಗಳು ಒಂದೇ ಸಲ ಕಾಡಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವುದು. ತುಂಬಾ ವಿಳಂಬವಾಗಿ ಪ್ರೌಢವಸ್ಥೆಗೆ ಬರುವಂತಹ ಹೆಣ್ಣು ಮಕ್ಕಳ ಸ್ತನಗಳು ಸಣ್ಣದಾಗಿರುವುದು. ವೈದ್ಯಕೀಯವಾಗಿ ಇದನ್ನು ವಿಳಂಬಗೊಂಡ ಮೆನಾರ್ಚೆ ಎಂದು ಕರೆಯಲಾಗುತ್ತದೆ.

ಋತುಚಕ್ರದ ವೇಳೆ ಅತಿಯಾಗಿ ರಕ್ತಸ್ರಾವ
ಋತುಚಕ್ರದ ವೇಳೆ ಅತಿಯಾಗಿ ರಕ್ತಸ್ರಾವವಾಗುವ ಅಥವಾ ಅನಿಯಮಿತ ಮುಟ್ಟಾಗುವ ಮಹಿಳೆಯರಲ್ಲಿ ಸ್ತನಗಳ ಬೆಳವಣಿಗೆಯು ಕುಂದಿರುವುದು. ಋತುಬಂಧದ ಬಳಿಕ ಮಹಿಳೆಯರ ಸ್ತನಗಳು ಸಣ್ಣದಾಗುವುದು. ಈಸ್ಟ್ರೋಜನ್ ಮಟ್ಟದಲ್ಲಿ ಕುಸಿತವಾಗಿರುವುದೇ ಇದಕ್ಕೆ ಕಾರಣವಾಗಿದೆ. ಈಸ್ಟ್ರೋಜನ್ ಕುಸಿತದಿಂದಾಗಿ ಸ್ತನಗಳ ಅಂಗಾಂಶಗಳು ಕುಗ್ಗುವುದು.

ಭಾವನಾತ್ಮಕ ಸಮಸ್ಯೆ
ಸ್ತನಗಳು ಬೆಳವಣಿಗೆಯಾಗದೆ ಇರಲು ಕೇವಲ ಒಂದು ರೀತಿಯ ಭಾವನಾತ್ಮಕ ಕಾರಣವನ್ನು ಹುಡುಕಿ ಹೇಳುವುದು ತುಂಬಾ ಕಷ್ಟ. ಯುವ ಮಹಿಳೆಯರಲ್ಲಿ ತೀವ್ರತರಹದ ಖಿನ್ನತೆ ಅಥವಾ ಹದಿಹರೆಯದಲ್ಲಿ ಕಂಡುಬರುವಂತಹ ಕೆಲವೊಂದು ರೀತಿಯ ಭೀತಿಯು ಸ್ತನಗಳು ಸರಿಯಾಗಿ ಬೆಳವಣಿಗೆಯಾಗದಂತೆ ತಡೆಯಬಹುದು.

ಶಕ್ತಿಯ ತಡೆ
ಶಕ್ತಿಯ ತಡೆಯಿಂದಾಗಿಯೂ ಸ್ತನಗಳು ಬೆಳವಣಿಗೆಯಾಗದೆ ಇರಬಹುದು. ಚೀನಾದ ವೈದ್ಯಕೀಯ ಶಾಸ್ತ್ರವು ಐದು ರೀತಿಯ ಚಲನೆಗಳನ್ನು ಸೂಚಿಸುವುದು. ಪ್ರತಿಯೊಂದು ಚಲನೆಯು ಒಂದಕ್ಕೊಂದು ಪೂರಕವಾಗಿದೆ. ಈ ಚಲನೆಗಳ ಸೌಹಾರ್ದವನ್ನು ಕಾಪಾಡಿಕೊಳ್ಳದೆ ಹೋದರೆ ಆಗ ಮನುಷ್ಯನಲ್ಲಿ ವಿಭಿನ್ನ ರೀತಿಯ ದೈಹಿಕ ಹಾಗೂ ಮಾನಸಿಕ ಸಮಸ್ಯೆಯು ಕಾಡುವುದು. ಮಹಿಳೆಯರಲ್ಲಿ ಶಕ್ತಿಯ ಕೊರತೆಯು ಕಡಿಮೆ ಇದ್ದಾಗ ಸ್ತನಗಳು ತುಂಬಾ ಸಣ್ಣದಾಗಿರುವುದು.

ಇತರ ಕಾರಣಗಳು
ತಿನ್ನುವ ಕಾಯಿಲೆಗಳಾಗಿರುವ ಬುಲಿಮಿಯಾ ಅಥವಾ ಅನೊರೆಕ್ಸಿಯಾ ಇದ್ದರೆ ಆಗ ಇಂತಹ ಮಹಿಳೆಯರ ಸ್ತನಗಳು ಬೆಳವಣಿಗೆಯಾಗದೆ ಇರುವುದು. ಅತಿಯಾಗಿ ತೂಕ ಕಳೆದುಕೊಳ್ಳುವುದು. ಇದು ಉದ್ದೇಶಪೂರ್ವಕವಾಗಿಯೋ ಅಥವಾ ಅಲ್ಲವೋ ಎನ್ನುವುದು ಬೇರೆ ವಿಚಾರ. ಆದರೆ ಇದರಿಂದ ಮಹಿಳೆಯ ಸ್ತನಗಳು ಕುಗ್ಗುವುದು.

ಮೊಟ್ಟೆ, ತರಕಾರಿ ಎಣ್ಣೆ, ಕೋಳಿ ಮಾಂಸ, ಆಹಾರಕ್ರಮದಲ್ಲಿ ಸೇರಿಸಿಕೊಳ್ಳಿ
ಕೆಲವೊಂದು ಆಹಾರ ಕ್ರಮಗಳು ಹಾಗೂ ವ್ಯಾಯಾಮಗಳನ್ನು ಪಾಲಿಸಿಕೊಂಡು ಹೋದರೆ ಆಗ ಈ ಸಮಸ್ಯೆ ನಿವಾರಣೆ ಮಾಡಬಹುದು. ಸಣ್ಣ ಸ್ತನಗಳು ಇರುವಂತಹ ಮಹಿಳೆಯರು ತಮ್ಮ ಆಹಾರ ಕ್ರಮದಲ್ಲಿ ಮೊಟ್ಟೆ, ತರಕಾರಿ ಎಣ್ಣೆ, ಕೋಳಿ ಮಾಂಸ ಮತ್ತು ಮೀನನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಸರಿಯಾಗಿ ನಿದ್ರೆ ಮಾಡಬೇಕು ಮತ್ತು ಹೆಚ್ಚಿಗೆ ನೀರು ಸೇವಿಸಬೇಕು. ನಿಯಮಿತವಾಗಿ ವ್ಯಾಯಾಮ ಮಾಡುವುದು ಕೂಡ ಅತೀ ಅಗತ್ಯವಾಗಿರುವುದು. ಆದರೆ ಅತಿಯಾಗಿ ವ್ಯಾಯಾಮ ಮಾಡಬಾರದು.ಇದರೊಂದಿಗೆ ಕೆಲವೊಂದು ಸಪ್ಲಿಮೆಂಟ್ ಗಳು ಮತ್ತು ಮಸಾಜ್ ಕ್ರೀಮ್/ ತೈಲಗಳು ಇವೆ. ಇದನ್ನು ಸರಿಯಾಗಿ ಬಳಸಿಕೊಂಡರೆ ಮಹಿಳೆಯರ ಸ್ತನಗಳ ಗಾತ್ರ ಹಿಗ್ಗಿಸಬಹುದು.



Click it and Unblock the Notifications











