Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಸತತವಾಗಿ ಕಾಡುವ ವಾಂತಿ ಸಮಸ್ಯೆ-ಯಾಕೆ ಹೀಗೆ? ಇದಕ್ಕೆ ಪರಿಹಾರವೇನು
CVS ಅಥವಾ Cyclic vomiting syndrome ಎಂದ ತೊಂದರೆ ಒಂದು ಸತತವಾಗಿ ವಾಂತಿಯಾಗುವ ಒಂದು ಕಾಯಿಲೆಯಾಗಿದ್ದು ಇದಕ್ಕೆ ಖಚಿತವಾದ ಚಿಕಿತ್ಸೆ ಇನ್ನೂ ಲಭ್ಯವಿಲ್ಲ. ಆದರೆ ಈ ತೊಂದರೆಯನ್ನು ಸಾಕಷ್ಟು ಕಡಿಮೆಯಾಗಿಸುವ ಕೆಲವು ನೈಸರ್ಗಿಕ ಪರಿಹಾರಗಳಿವೆ ಹಾಗೂ ಈ ತೊಂದರೆ ಇರುವ ವ್ಯಕ್ತಿಗಳಿಗೆ ಸಾಕಷ್ಟು ಉಪಶಮನವನ್ನು ನೀಡಬಹುದು.
ಈ ತೊಂದರೆ ಇರುವ ವ್ಯಕ್ತಿಗಳಿಗೆ ನಿತ್ಯದ ಕಾರ್ಯಗಳನ್ನು ಸೂಕ್ತವಾಗಿ ಪೂರೈಸಲೂ ಸಾಧ್ಯವಾಗದಂತೆ ಈ ರೋಗ ಕಾಡುತ್ತದೆ. ವಿದ್ಯಾರ್ಥಿಗಳು, ಉದ್ಯೊಗಸ್ಥರಿಗೆ ಹಾಗೂ ದಿನದ ಹೆಚ್ಚು ಹೊತ್ತು ಹೊರಗೇ ಇರಬೇಕಾದ ವ್ಯಕ್ತಿಗಳಿಗೆ ಈ ತೊಂದರೆಯಿಂದ ಬಹಳಷ್ಟು ಅನಾನುಕೂಲವಾಗುತ್ತದೆ. ಈ ತೊಂದರೆ ಇರುವವರಿಗೆ ಒಂದು ವೇಳಪಟ್ಟಿಯ ಪ್ರಕಾರವೂ ವಾಂತಿಯಾಗುತ್ತಿರಬಹುದು ಅಥವಾ ತಡೆತಡೆದು ಅನಿಯಮಿತವಾಗಿಯೂ ವಾಂತಿಯಾಗಬಹುದು.
ಜೊತೆಗೇ ವಾಕರಿಕೆ ಹಾಗೂ ಸುಸ್ತು, ಯಾವುದೇ ಕೆಲಸ ಮಾಡಲು ಅಸಾಧ್ಯವಾದ ಜಿಡ್ಡುತನ ಆವರಿಸುತ್ತದೆ. ಹೊಟ್ಟೆಯಲ್ಲಿ ಎದುರಾಗುವ ಅಪಾರವಾದ ನೋವಿನ ಮೈಗ್ರೇನ್ (abdominal migraine)ನ ಇನ್ನೊಂದು ರೂಪವೆಂದು ಇದನ್ನು ಇದುವರೆಗೆ ಪರಿಗಣಿಸಲಾಗಿತ್ತು. ಏಕೆಂದರೆ ಈ ತೊಂದರೆ ಇರುವವರಿಗೂ ಹೆಚ್ಚೂ ಕಡಿಮೆ ಇದೇ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದವು. ಸತತ ವಾಂತಿ, ಅತೀವ ತಲೆನೋವು ಹಾಗೂ ಶಬ್ದ ಮತ್ತು ಬೆಳಕಿಗೆ ಅತೀವವಾದ ಸಂವೇದನೆ ಈ ತೊಂದರೆಯ ಲಕ್ಷಣಗಳಾಗಿವೆ.

ಮಕ್ಕಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ
CVS ಸಾಮಾನ್ಯವಾಗಿ ಮಕ್ಕಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಮೂರರಿಂದ ಏಳು ವರ್ಷ ವಯಸ್ಸಿನ ಮಕ್ಕಳಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಇದು ಯಾವುದೇ ವಯಸ್ಸಿನವರಲ್ಲಿ ಕಾಣಿಸಿಕೊಳ್ಳಬಹುದು. ಇಂದಿನ ದಿನಗಳಲ್ಲಿ ಈ ತೊಂದರೆ ಇರುವ ವಯಸ್ಕರ ಸಂಖ್ಯೆಯಲ್ಲಿಯೂ ವೃದ್ದಿಯಾಗುತ್ತಿದ್ದರೂ ಅತಿ ಹೆಚ್ಚು ಪ್ರಮಾಣದಲ್ಲಿ ಮಕ್ಕಳನ್ನೇ ಈ ತೊಂದರೆ ಕಾಡುತ್ತದೆ.

CVS ರೋಗದ ಲಕ್ಷಣಗಳೇನು?
ಹೆಸರೇ ತಿಳಿಸುವಂತೆ ಸತತ ವಾಂತಿಯಾಗುವುದು ಈ ರೋಗದ ಮೊದಲ ಲಕ್ಷಣವಾಗಿದ್ದು ಇದರೊಂದಿಗೆ ವಾಕರಿಕೆ ಮತ್ತು ಜಡತನ ಎದುರಾಗುತ್ತದೆ. ಸತತ ವಾಂತಿಯಿಂದ ದೇಹದಲ್ಲಿರುವ ನೀರು ಅತಿ ಹೆಚ್ಚು ನಷ್ಟವಾಗಿ ದೇಹದ ಹೊಟ್ಟೆಯ ಭಾಗದಲ್ಲಿ ಅತೀವ ನೋವು, ನಿರ್ಜಲೀಕರಣ ಹಾಗೂ ವಿವರ್ಣತೆ ಎದುರಾಗುತ್ತದೆ. ಈ ಲಕ್ಷಣಗಳು ಸುಮಾರು ಒಂದು ಘಂಟೆಯಿಂದ ತೊಡಗಿ ಹತ್ತು ದಿನಗಳವರೆಗೂ ಉಳಿದುಕೊಳ್ಳಬಹುದು. ಇತರ ಲಕ್ಷಣಗಳೆಂದರೆ ತಲೆ ಎತ್ತಲೂ ಆಗದಷ್ಟು ವಾಕರಿಕೆ, ಜ್ವರ, ತಲೆನೋವು, ಅತೀವವಾಗಿ ಬೆವರುವುದು, ಅತಿಸಾರ ಮೊದಲದವು ಕಾಣಿಸಿಕೊಳ್ಳುತ್ತದೆ.

CVS ರೋಗವನ್ನು ಪತ್ತೆ ಹಚ್ಚುವುದು ಹೇಗೆ?
ರೋಗಿ ವಿವರಿಸುವ ಲಕ್ಷಣಗಳು ಸುಲಭವಾಗಿ ಇತರ ರೋಗಗಳ ಲಕ್ಷಣಕ್ಕೆ ಹೋಲುವ ಕಾರಣ ವೈದ್ಯರಿಗೆ ಈ ಲಕ್ಷಣಗಳು ಮಾತ್ರದಿಂದಲೇ ರೋಗದ ಖಚಿತ ಮೂಲ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ರೋಗವನ್ನು ಖಚಿತಪಡಿಸಲು ಯಾವುದೇ ನಿರ್ದಿಷ್ಟ ಪರೀಕ್ಷೆಯೂ ಲಭ್ಯವಿಲ್ಲ. ಹಾಗಾಗಿ, ದೇಹಪರೀಕ್ಷೆಯನ್ನು ನಡೆಸುವ ಮುನ್ನ ವೈದ್ಯರು ರೋಗಿಯ ಬಗ್ಗೆ ಕೆಲವು ಖಾಸಗಿ ವಿವರಗಳನ್ನು ಪಡೆದುಕೊಳ್ಳಬಹುದು. ಜೀರ್ಣಾಂಗಗಳೆಲ್ಲಾದರೂ ತಿರುಚಿಕೊಂಡಿವೆಯೇ ಅಥಾವ ಬೇರಾವುದಾದರೂ ತೊಂದರೆ ಇದೆಯೇ ಎಂಬ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಕೆಲವು ಪರೀಕ್ಷೆಗಳನ್ನು ನಡೆಸಬಹುದು. ಇದಕ್ಕಾಗಿ ಎಂಡೋಸ್ಕೋಪಿ ಅಥವಾ ಸಿಟಿ.ಸ್ಕ್ಯಾನ್ ಉಪಕರಣವನ್ನೂ ಬಳಸಬೇಕಾಗಿ ಬರಬಹುದು.

CVS ರೋಗಕ್ಕೆ ಯಾವ ಚಿಕಿತ್ಸೆ ಲಭ್ಯವಿದೆ?
ಈ ರೋಗಕ್ಕೆ ಖಚಿತ ಚಿಕಿತ್ಸೆ ಇಲ್ಲದೇ ಇರುವ ಕಾರಣದಿಂದಾಗಿ ವೈದ್ಯರು ಈ ರೋಗವನ್ನು ಪೂರ್ಣವಾಗಿ ವಾಸಿ ಮಾಡುವುದಕ್ಕೆ ಬದಲಾಗಿ ಇದನ್ನು ನಿಯಂತ್ರಿಸುವ ಮತ್ತು ಉಲ್ಬಣಗೊಳ್ಳದೇ ಇರುವಂತೆ ಕೈಗೊಳ್ಳುವ ಕ್ರಮಗಳ ಬಗ್ಗೆ ಯೋಚಿಸುತ್ತಾರೆ. ಈ ಕ್ರಮಗಳಲ್ಲಿ ನಿದ್ರಾಜನಕ ಔಷಧಿಗಳ ಸೇವನೆ, ಖಿನ್ನತಾನಿವಾರಕ ಔಷಧಿಗಳು, ವಾಂತಿಯನ್ನು ನಿಲ್ಲಿಸುವ ಔಷಧಿಗಳು ಹಾಗೂ ಮೈಗ್ರೇನ್ ನೋವಿಗೆ ನಿಡಬಹುದಾದ ಔಷಧಿಗಳನ್ನು ನೀಡಲು ಪರಿಗಣಿಸುತ್ತಾರೆ.

ಈ ರೋಗಕ್ಕೆ ಲಭ್ಯವಿರುವ ಕೆಲವು ನೈಸರ್ಗಿಕ ಪರಿಹಾರಗಳು
ಜೀವನಕ್ರಮದಲ್ಲಿ ಬದಲಾವಣೆ
ಈ ತೊಂದರೆ ಇರುವ ವ್ಯಕ್ತಿಗಳಿಗೆ ತಮ್ಮ ಜೀವನಕ್ರಮದಲ್ಲಿ ಅಗತ್ಯ ಮತ್ತು ಸೂಕ್ತ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ ವಾಗುತ್ತದೆ. ಇವರಿಗೆ ಸಾಕಷ್ಟು ನಿದ್ರೆಯ ಅವಶ್ಯಕತೆ ಇದೆ. ವಾಂತಿ ಹೆಚ್ಚು ಇರುವ ಸಮಯದಲ್ಲಿ ಇವರು ದಿನದ ಹೆಚ್ಚಿನ ಹೊತ್ತನ್ನು ಪ್ರತ್ಯೇಕ ಕೋಣೆಯನ್ನು ಸಾಕಷ್ಟು ಕತ್ತಲಾಗಿಸಿ ಶಬ್ದರಹಿತವಾಗಿಸಿ ಆದಷ್ಟೂ ಹೆಚ್ಚಿನ ವಿಶ್ರಾಂತಿ ಪಡೆಯಬೇಕು.

ಸಾಕಷ್ಟು ದ್ರವಾಹಾರ ಸೇವಿಸಿ
ವಾಂತಿಯ ಮೂಲಕ ದೇಹ ಕಳೆದುಕೊಂಡ ಎಲೆಕ್ಟ್ರೋಲೈಟು ಗಳನ್ನು ಮರುದುಂಬಿಸಲು ಈ ವ್ಯಕ್ತಿಗಳು ವಾಂತಿ ನಿಂತ ಬಳಿಕ ಸಾಕಷ್ಟು ದ್ರವಾಹಾರ ಸೇವಿಸಬೇಕಾಗುತ್ತದೆ. ವಾಂತಿಯಾಗುವ ಆವರ್ತನ ನಿಂತ ಬಳಿಕ ದ್ರವಾಹಾರದ ಸರಳ ಊಟವನ್ನು ಪ್ರಾರಂಭಿಸಬೇಕು. ಕೆಲವರಿಗೆ ಈ ದ್ರವಾಹಾರ ಹೆಚ್ಚು ಚೈತನ್ಯ ನೀಡುತ್ತದೆ ಹಾಗೂ ಚೇತರಿಕೆಯುಂಟಾಗುತ್ತದೆ. ಈ ಹಂತದಲ್ಲಿ ಇವರು ತಮ್ಮ ನಿತ್ಯದ ಆಹಾರಗಳನ್ನು ಸೇವಿಸಬಹುದು.

ಮಾನಸಿಕ ಒತ್ತಡಕ್ಕೆ ಒಳಗಾಗಬಾರದು
ವಾಂತಿಗೆ ಪ್ರಚೋದನೆ ನೀಡುವ ಯಾವುದೇ ಕ್ರಿಯೆಯಿಂದ ದೂರವಿರುವುದು ಈ ರೋಗದ ಮುನ್ನೆಚ್ಚರಿಕಾ ಕ್ರಮವಾಗಿದೆ. ಉದಾಹರಣೆಗೆ ಮಾನಸಿಕ ಒತ್ತಡ ವಾಂತಿಯ ಪ್ರಾರಂಭಕ್ಕೆ ಕಾರಣವಾಗುತ್ತದೆ. ಹಾಗಾಗಿ ವಾಂತಿಯಾಗದಂತೆ ನೋಡಿಕೊಳ್ಳಲು ಮಾನಸಿಕ ಒತ್ತಡಕ್ಕೊಳಗಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಸೂಕ್ತ ವ್ಯಾಯಾಮ, ಯೋಗಾಸನ, ಪ್ರಾಣಾಯಾಮ ಮೊದಲಾದವುಗಳನ್ನೂ ಅನುಸರಿಸಬಹುದು.

ಸೂಕ್ತ ಆಹಾರಕ್ರಮ
ಈ ತೊಂದರೆ ಇರುವ ವ್ಯಕ್ತಿಗಳು ತಮ್ಮ ಆಹಾರದಲ್ಲಿ ಡೈರಿ ಉತ್ಪನ್ನಗಳನ್ನು ಸೇವಿಸಬಾರದು. ಉದಾಹರಣೆಗೆ ಹಾಲು, ಮೊಸರು, ಚಾಕಲೇಟುಗಳು, ಚೀಸ್ ಹಾಗೂ ಸಾಗರ ಉತ್ಪನ್ನಗಳಾದ ಸಿಂಪ ಹಾಗೂ ಯಾವುದೇ ಕೆಂಪು ಮಾಂಸಗಳನ್ನು ಸೇವಿಸಬಾರದು. ಅಲ್ಲದೇ ಧೂಮಪಾನ ಮತ್ತು ಮದ್ಯಪಾನ ಇವರಿಗೆ ಕಡ್ಡಾಯವಾಗಿ ನಿಷೇಧವಾಗುತ್ತದೆ. ಅಲ್ಲದೇ ಖಾರ ಮತ್ತು ಮಸಾಲೆಯುಕ್ತ ಆಹಾರಗಳೂ ಬೇಡ. ಊಟದಲ್ಲಿ ಗಂಜಿ ಹಾಗೂ ಎಳನೀರು ಸಾಕಷ್ಟಿರುವಂತೆ ನೋಡಿಕೊಳ್ಳಬೇಕು.



Click it and Unblock the Notifications