Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತುಟಿಗಳ ಕ್ಯಾನ್ಸರ್ ವಿರುದ್ಧ ಹೋರಾಡುವ ನೈಸರ್ಗಿಕ ಆಹಾರಗಳು
ನೀವು ಸ್ವತಃ ತುಟಿಯ ಕ್ಯಾನ್ಸರ್ ನಿಂದ ಬಳಲುತ್ತಿದ್ದೇರೇ ಅಥವಾ ನಿಮ್ಮ ಪರಿಚಯದವರು ಯಾರಾದರೂ ಈ ಕಾಯಿಲೆಗೆ ತುತ್ತಾಗಿದ್ದಾರೆಯೇ? ಈ ಕಾಯಿಲೆಗೆ ಯಾವುದಾದರೂ ಮನೆಮದ್ದು ಇದೆಯೇ ಎಂಬುದು ನಿಮ್ಮ ಚಿಂತನೆಯಾಗಿದ್ದರೆ ಈ ಲೇಖನ ನಿಮಗೆ ಹಲವಾರು ಅಮೂಲ್ಯ ಮಾಹಿತಿಗಳನ್ನು ಒದಗಿಸಲಿದೆ. ತುಟಿಯ ಕ್ಯಾನ್ಸರ್ ಬಾಯಿಗೆ ಎದುರಾಗುವ ಕ್ಯಾನ್ಸರ್ ನ ಒಂದು ವಿಧವಾಗಿದೆ.

ತಲೆ ಮತ್ತು ಕುತ್ತಿಗೆಗೆ ಎದುರಾಗುವ ಕ್ಯಾನ್ಸರ್ ಗಳ ವಿಧದಲ್ಲಿ ತುಟಿಯ ಕ್ಯಾನ್ಸರ್ ಸಹಾ ಒಳಗೊಂಡಿದೆ. ಸಾಮಾನ್ಯವಾಗಿ ಇದು ಕೆಳತುಟಿ ಅಥವಾ ಕೆಳತುಟಿಯ ಕೆಳ ಅಂಚಿನಿಂದ ಪ್ರಾರಂಭವಾಗಿ ನಿಧಾನವಾಗಿ ಮೇಲ್ತುಟಿಯತ್ತ ಹರಡುತ್ತಾ ಹೋಗುತ್ತದೆ. ಈ ಸ್ಥಿತಿಯಲ್ಲಿಯೂ ಇದಕ್ಕೆ ಶೀಘ್ರ ಚಿಕಿತ್ಸೆ ಒದಗಿಸಿ ಹರಡುವುದನ್ನು ನಿಲ್ಲಿಸದೇ ಇದ್ದರೆ ಈ ಹರಡುವಿಕೆ ಇನ್ನಷ್ಟು ವಿಸ್ತಾರಗೊಂಡು ಕುತ್ತಿಗೆ ಮತ್ತು ಇನ್ನೂ ವಿಶಾಲವಾಗಿ ಹರಡಬಹುದು.

ಕೆಳತುಟಿ ಕ್ಯಾನ್ಸರ್
ಹೆಚ್ಚಿನ ಸಂದರ್ಭಗಳಲ್ಲಿ ಕೆಳತುಟಿ ಕ್ಯಾನ್ಸರ್ ಗೆ ತುತ್ತಾಗುವುದು ಮೊದಲಾಗಿದ್ದರೆ ಅಪರೂಪದ ಸಂದರ್ಭದಲ್ಲಿ ಇದು ಮೇಲ್ತುಟಿಯಿಂದಲೂ ಮೊದಲುಗೊಳ್ಳಬಹುದು. ಸಾಮಾನ್ಯವಾಗಿ ತುಟಿಯ ಕೀವುಗುಳ್ಳೆ ಅಥವಾ ವ್ರಣದಂತೆ ಪ್ರಾರಂಭವಾಗುತ್ತದೆ ಹಾಗೂ ಸಾಮಾನ್ಯವಾಗಿ ನಿರ್ಲಕ್ಷಿಸುವ ಮೂಲಕ ಶೀಘ್ರವೇ ಉಲ್ಬಣಗೊಳ್ಳುತ್ತದೆ ಹಾಗೂ ಸುಲಭವಾಗಿ ಗುಣವಾಗುವುದೇ ಇಲ್ಲ. ಒಂದು ವೇಳೆ ಗುಣವಾದರೂ ಮತ್ತೆ ಮತ್ತೆ ಬರುತ್ತಲೇ ಇರುತ್ತದೆ ಹಾಗೂ ಒಮ್ಮೆ ಎದುರಾದಲ್ಲೇ ಮತ್ತೆ ಮತ್ತೆ ಮೂಡುವುದು ಸಿಟ್ಟು ಬರಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಈ ಹುಣ್ಣು ಮಾಗಿದ ಬಳಿಕ ಕಲೆ ಗಾಢರೂಪದಲ್ಲಿ ಉಳಿಯುತ್ತದೆ. ಇದು ಸಾಮಾನ್ಯ ಹುಣ್ಣಾಗಿದ್ದರೆ ಮತ್ತೆ ಮತ್ತೆ ಮರುಕಳಿಸುವುದಿಲ್ಲ. ಹಾಗಾಗದೇ ಮತ್ತೆ ಮತ್ತೆ ಮರುಕಳಿಸುತ್ತಾ ಕೆಲವು ಸಮಯದಲ್ಲಿ ರಕ್ತವೂ ಒಸರತೊಡಗಿದರೆ ಇದು ಕ್ಯಾನ್ಸರ್ ಎದುರಾಗಿರುವ ಸ್ಪಷ್ಟ ಸೂಚನೆಯಾಗಿದೆ. ಈ ಕಾಯಿಲೆಗೆ ಚಿಕಿತ್ಸೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಎಷ್ಟು ಬೇಗನೇ ಚಿಕಿತ್ಸೆ ಪ್ರಾರಂಭವಾಗುತ್ತದೆಯೋ ಅಷ್ಟೂ ಶೀಘ್ರವಾಗಿ ಈ ಕ್ಯಾನ್ಸರ್ ಅನ್ನು ಗುಣಪಡಿಸುವ ಸಾಧ್ಯತೆಯೂ ಹೆಚ್ಚುತ್ತದೆ.

ತುಟಿಯ ಕ್ಯಾನ್ಸರ್ ನ ಚಿಕಿತ್ಸೆಗೆ ಯಾವುದಾದರೂ ಮನೆಮದ್ದು ಇದೆಯೇ?
ಯಾವುದೇ ಬಗೆಯ ಕ್ಯಾನ್ಸರ್ ಎಂದಾಕ್ಷಣ ಇದಕ್ಕೆ ಜನಸಾಮಾನ್ಯರ ಜೊತೆಗೇ ವೈದ್ಯರೂ ಕೊಂಚ ಗಾಬರಿ ಬೀಳುತ್ತಾರೆ. ಏಕೆಂದರೆ ಇದಕ್ಕೆ ಚಿಕಿತ್ಸೆಯಾಗಿ ವೈದ್ಯರು ಮೂರು ಬಗೆಯಲ್ಲಿ ಒಂದು ಅಥವಾ ಇದಕ್ಕೂ ಹೆಚ್ಚಿನ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಇವೆಂದರೆ ಶಸ್ತ್ರಚಿಕಿತ್ಸೆ (ಕ್ಯಾನ್ಸರ್ ಗೆ ತುತ್ತಾದ ಭಾಗವನ್ನು ನಿವಾರಿಸುವುದು), ರೇಡಿಯೋಥೆರಪಿ ಹಾಗೂ ಖೀಮೋಥೆರಪಿ. ಆದರೆ ಈ ಚಿಕಿತ್ಸೆಗಳು ನಿಜಕ್ಕೂ ನಮಗೆ ಲಭಿಸುತ್ತವೆಯೇ ಎಂಬುದು ಮೊದಲ ಪ್ರಶ್ನೆ. ಕ್ಯಾನ್ಸರ್ ಎಂದಾಕ್ಷಣ ಈ ಹಂತದ ಚಿಕಿತ್ಸೆಗಳು ವೈದ್ಯವಿಜ್ಞಾನ ಅನುಸರಿಸುವ ನಿಯಮವಾಗಿದೆ ಹಾಗೂ ಸಾಕಷ್ಟು ಸಂದರ್ಭಗಳಲ್ಲಿ ಇದು ಫಲಕಾರಿಯಾಗಿದೆ ಸಹಾ. ಆದರೆ ಕ್ಯಾನ್ಸರ್ ನ ಚಿಕಿತ್ಸೆಗೆ ಇನ್ನೂ ಕೆಲವು ಪರ್ಯಾಯ ಮಾರ್ಗಗಳಿವೆ ಹಾಗೂ ಇವುಗಳನ್ನು ಪ್ರಯತ್ನಿಸುವುದರಲ್ಲೇನೂ ತಪ್ಪಿಲ್ಲ.

ಹಸಿ ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ
ತುಟಿಯ ಕ್ಯಾನ್ಸರ್ ಗೆ ಒಳಗಾದ ವ್ಯಕ್ತಿಗಳು ತಪ್ಪದೇ ತಮ್ಮ ಆಹಾರದಲ್ಲಿ ಸಾಕಷ್ಟು ಹಸಿ ತರಕಾರಿ ಮತ್ತು ಹಣ್ಣುಗಳನ್ನು ಒಳಗೊಳ್ಳುವಂತೆ ನೋಡಿಕೊಳ್ಳುವುದು ಪ್ರಥಮ ಆದ್ಯತೆಯಾಗಿದೆ. ವಿಶೇಷವಾಗಿ ಕೋಸಿನ ಜಾತಿಗೆ ಸೇರಿದ ಎಲೆಕೋಸು, ಹೂಕೋಸು, ಬ್ರೋಕೋಲಿ, ಲೆಟ್ಯೂಸ್ ಮೊದಲಾದವುಗಳನ್ನು ಸೇವಿಸಬೇಕು. ಇವುಗಳಲ್ಲಿ ಕ್ಯಾನ್ಸರ್ ಗೆ ವಿರುದ್ದವಾಗಿ ಹೋರಾಡುವ ಗುಣಗಳಿವೆ. ಈ ವ್ಯಕ್ತಿಗಳು ಪ್ರತಿದಿನವೂ ಕನಿಷ್ಟ ಒಂದು ಹೊತ್ತಾದರೂ ಸರಿ, ಒಂದು ಪ್ರಮಾಣವನ್ನಾದರೂ ಸೇವಿಸಲೇ ಬೇಕು.

ಅರಿಶಿನ
ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಇರುವ ಇನ್ನೊಂದು ಆಹಾರವೆಂದರೆ ಅರಿಶಿನ. ತುಟಿಯ ಕ್ಯಾನ್ಸರ್ ಗೆ ಇದೊಂದು ಅದ್ಭುತವಾದ ಮನೆಮದ್ದಾಗಿದೆ. ಕ್ಯಾನ್ಸರ್ ಗುಣಪಡಿಸುವ ಹಲವು ತಜ್ಞರು ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶವಿರುವ ಮಾತ್ರೆಗಳನ್ನು ತಮ್ಮಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸೇವಿಸಲು ಹೆಚ್ಚುವರಿ ಔಷಧಿಯ ರೂಪದಲ್ಲಿ ನೀಡುತ್ತಾರೆ. ಅರಿಶಿನ ಪುಡಿಗಿಂತಲೂ ಹಸಿ ಅರಿಶಿನದ ಕೊಂಬನ್ನು ನುಣ್ಣಗೆ ಅರೆದು ಇದಕ್ಕೆ ಕೊಂಚವೇ ಬೆಲ್ಲ ಸೇರಿಸಿ ಪ್ರತಿದಿನ ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ಸೇವಿಸುವುದೂ ಇನ್ನೊಂದು ಉತ್ತಮ ವಿಧಾನವಾಗಿದೆ.

ಪುದಿನಾ ಎಲೆ
ಪುದಿನಾ ಎಲೆಗಳಲ್ಲಿಯೂ ಕ್ಯಾನ್ಸರ್ ನಿರೋಧಕ ಗುಣವಿದೆ. ಕ್ಯಾನ್ಸರ್ ಗೆ ತುತ್ತಾದ ಭಾಗದಲ್ಲಿ ರಕ್ತಪರಿಚಲನೆಯನ್ನು ನಿಲ್ಲಿಸುವ ಮೂಲಕ ಕ್ಯಾನ್ಸರ್ ಪೀಡಿತ ಜೀವಕೋಶಗಳನ್ನು ಕೊಲ್ಲುವುದು ಇದರ ಗುಣಪಡಿಸುವ ವಿಧಾನವಾಗಿದೆ. ಇದಕ್ಕಾಗಿ ಕೊಂಚ ನೀರಿನಲ್ಲಿ ಒಂದು ಹಿಡಿಯಷ್ಟು ಪುದಿನಾ ಎಲೆಗಳನ್ನು ಚೆನ್ನಾಗಿ ಕುದಿಸಿ ತಣಿಸಿ ಸೋಸಿದ ನೀರನ್ನು ದಿನಕ್ಕೆರಡು ಬಾರಿ ಕುಡಿಯಬೇಕು.

ಗ್ರೀನ್ ಟೀ
ಆಂಟಿ ಆಕ್ಸಿಡೆಂಟುಗಳಿಂದ ಸಮೃದ್ಧವಾಗಿದ್ದು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುವ ಕ್ಷಮತೆ ಇರುವ ಇನ್ನೊಂದು ಆಹಾರವೆಂದರೆ ಹಸಿರು ಟೀ. ದಿನದಲ್ಲಿ ಎರಡು ಅಥವಾ ಮೂರು ಕಪ್ ಹಸಿರು ಟೀ ಕುಡಿಯುವುದರಿಂದಲೂ ಕ್ಯಾನ್ಸರ್ ವಿರುದ್ಧ ಹೋರಾಡಲು ಹೆಚ್ಚಿನ ಶಕ್ತಿ ದೊರಕುತ್ತದೆ.

ಹಸಿ ತುಳಸಿ ಎಲೆಗಳನ್ನು ಜಗಿದು ತಿನ್ನಿ
ದಿನವೊಂದಲ್ಲಿ ಮೂರರಿಂದ ನಾಲ್ಕು ಹಸಿ ತುಳಸಿ ಎಲೆಗಳನ್ನು ಜಗಿದು ನೀರಾಗಿಸಿ ನುಂಗುವ ಮೂಲಕವೂ ಬಾಯಿಯ ಕ್ಯಾನ್ಸರ್ ಹಾಗೂ ಇದರಿಂದ ಎದುರಾಗಿದ್ದ ನೋವಿನಿಂದ ಶಮನ ದೊರಕುತ್ತದೆ.
ನುಗ್ಗೇ ಕಾಯಿಯಲ್ಲಿಯೂ ಕ್ಯಾನ್ಸರ್ ನಿವಾರಕ ಗುಣಗಳಿವೆ. ಹಾಗಾಗಿ, ನಮ್ಮ ಅಹಾರದಲ್ಲಿ ಇವೆಲ್ಲವೂ ಇರುವಂತೆ ನೋಡಿಕೊಂಡು ಗರಿಷ್ಟ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಮತ್ತು ಫೈಟೋನ್ಯೂಟ್ರಿಯೆಂಟ್ (ಹೋರಾಟದ ಗುಣವಿರುವ ಪೋಷಕಾಂಶಗಳು) ಇರುವಂತೆ ನೋಡಿಕೊಳ್ಳುವ ಮೂಲಕ ಕ್ಯಾನ್ಸರ್ ಗುಣಪಡಿಸುವ ವೇಗವನ್ನು ಹೆಚ್ಚಿಸಬಹುದು.

ಆಯುರ್ವೇದ ಚಿಕಿತ್ಸೆ
ಭಾರತದ ಅತ್ಯಂತ ಪುರಾತನ ವೈದ್ಯ ವಿಜ್ಞಾನವಾದ ಆಯುರ್ವೇದದಲ್ಲಿಯೂ ಕ್ಯಾನ್ಸರ್ ನ ಚಿಕಿತ್ಸೆಗೆ ಹಲವಾರು ವಿಧಾನಗಳಿವೆ. ಇವುಗಳಲ್ಲಿ ಪ್ರಮುಖವಾದ ಔಷಧಿಗಳು ಎಂದರೆ ಮಂಜಿಷ್ಠ, ಕಂಚನಾರು, ಆಮಲಕ, ದಾರುಹರಿದ್ರ, ಹರಿತಾಕಿ, ಬಹೀದಾ, ಹರಿದ್ರ ಇತ್ಯಾದಿ. ಇವೆಲ್ಲವೂ ಕ್ಯಾನ್ಸರ್ ಗುಣಪಡಿಸಲು ಅತ್ಯುತ್ತಮವಾದ ಔಷಧಿಗಳಾಗಿದ್ದು ಇವುಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಔಷಧಿಗಳ ಮಿಶ್ರಣವನ್ನು ಸೇವಿಸುವ ಮೂಲಕ ಗರಿಷ್ಟ ಪ್ರಯೋಜನ ಪಡೆಯಬಹುದು. ಕೆಲವು ಔಷಧಿಗಳನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಬಾಯಿಯನ್ನು ಮುಕ್ಕಳಿಸುವ ಮೂಲಕವೂ ಬಾಯಿಯ ಕ್ಯಾನ್ಸರ್ ನಿಂದ ಎದುರಾದ ನೋವನ್ನು ನಿವಾರಿಸಬಹುದು.

ಆಯುರ್ವೇದ ಚಿಕಿತ್ಸೆ
ಕ್ಯಾನ್ಸರ್ ನ ಚಿಕಿತ್ಸೆಗೆ ಕೆಲವು ಖನಿಜ ಮತ್ತು ಲೋಹಗಳ ಸಂಯುಕ್ತಗಳನ್ನೂ ಬಳಸಲಾಗುತ್ತದೆ. ಆದರೆ, ಬಾಯಿಯ ಕ್ಯಾನ್ಸರ್ ಗೆ ಆಯುರ್ವೇದ ತಜ್ಞರು ಸೂಚಿನುವ ಚಿಕಿತ್ಸೆಯೇ ಅತ್ಯುತ್ತಮವಾಗಿದ್ದು ಇವರಿಂದ ಅಗತ್ಯ ಮಾಹಿತಿ ದೊರಕುತ್ತದೆ. ತುಟಿಗಳ ಕ್ಯಾನ್ಸರ್ ಅನ್ನು ಎಷ್ಟು ಬೇಗನೇ ಗುರುತಿಸಿ ಚಿಕಿತ್ಸೆ ಪ್ರಾರಂಭಿಸುತ್ತೀರೋ ಅಷ್ಟೂ ಬೇಗನೇ ಗುಣವಾಗುವ ಸಾಧ್ಯತೆಯೂ ಹೆಚ್ಚು. ಈ ಮನೆಮದ್ದುಗಳಲ್ಲಿ ಯಾವುದೇ ಅಡ್ಡಪರಿಣಾಮವಿಲ್ಲದ ಕಾರಣ ಕ್ಯಾನ್ಸರ್ ಚಿಕಿತ್ಸೆಗೆ ಪೂರಕ ಔಷಧಿಗಳಾಗಲು ಯೋಗ್ಯವಾಗಿವೆ ಹಾಗೂ ಶೀಘ್ರವಾಗಿ ಗುಣವಾಗುವ ಸಾಧ್ಯತೆಯೂ ಹೆಚ್ಚುತ್ತದೆ



Click it and Unblock the Notifications