Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ಸೇವಿಸಿ- ಆರೋಗ್ಯಕ್ಕೆ ಬಹಳ ಒಳ್ಳೆಯದು
ಒಣಹಣ್ಣುಗಳಲ್ಲಿ ಪ್ರಮುಖವಾಗಿ ಬಾದಾಮಿ, ಗೋಡಂಬಿ, ಪಿಸ್ತಾ ಇತ್ಯಾದಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಒಣದ್ರಾಕ್ಷಿಯನ್ನು ಇಲ್ಲಿ ಹೆಚ್ಚಿನವರು ಮರೆತು ಬಿಡುತ್ತಾರೆ. ಒಣದ್ರಾಕ್ಷಿಯು ಅಷ್ಟು ಜನಪ್ರಿಯವಾಗಿಯೂ ಇಲ್ಲ. ಆದರೆ ಇದರಲ್ಲಿ ಇರುವಂತಹ ಲಾಭಗಳನ್ನು ನೀವು ಪರಿಗಣಿಸಿದರೆ ಆಗ ಖಂಡಿತವಾಗಿಯೂ ಒಣದ್ರಾಕ್ಷಿಯನ್ನು ನಿಮ್ಮ ದೈನಂದಿನ ಆಹಾರದಲ್ಲಿ ಬಳಸಿಕೊಳ್ಳುವಿರಿ. ಬೋಲ್ಡ್ ಸ್ಕೈ ಇಂದು ನಿಮಗೆ ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿಯಿಂದ ಸಿಗುವಂತಹ ಆರೋಗ್ಯ ಲಾಭಗಳ ಬಗ್ಗೆ ತಿಳಿಸಿಕೊಡಲಿದೆ.

ಒಣದ್ರಾಕ್ಷಿಯಲ್ಲಿರುವ ಹೆಚ್ಚಿನ ಮಟ್ಟದ ಪೋಷಕಾಂಶಗಳು ದೇಹಕ್ಕೆ ಸಿಗಬೇಕೆಂದರೆ, ಅದನ್ನು ನೀರಿನಲ್ಲಿ ರಾತ್ರಿ ನೆನಸಿಡಿ ಮತ್ತು ಬೆಳಗ್ಗೆ ಸೇವಿಸಿ. ಕೇವಲ 4-5 ಒಣದ್ರಾಕ್ಷಿಯನ್ನು ನೆನೆಸಿದರೂ ಸಾಕು. ಒಣದ್ರಾಕ್ಷಿಯಲ್ಲಿ ಕಬ್ಬಿನಾಂಶ, ಪೊಟಾಶಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಂ ಮತ್ತು ನಾರಿನಾಂಶವಿದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದರಲ್ಲಿ ನೈಸರ್ಗಿಕದತ್ತವಾಗಿರುವ ಸಕ್ಕರೆ ಕೂಡ ಇದೆ. ಒಣದ್ರಾಕ್ಷಿಯು ಬಂಗಾರ, ಹಸಿರು ಮತ್ತು ಕಪ್ಪು ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದನ್ನು ಡೆಸರ್ಟ್ ಮತ್ತು ಸಿಹಿ ತಿಂಡಿಗಳನ್ನು ಅಲಂಕರಿಸಲು ಬಳಸಲಾಗುತ್ತದೆ. ಒಣದ್ರಾಕ್ಷಿಯಲ್ಲಿ ಹೆಚ್ಚಿನ ಮಟ್ಟದ ಕ್ಯಾಲರಿ ಇರುವ ಕಾರಣದಿಂದಾಗಿ ಇದನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಒಳ್ಳೆಯದು. ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಸೇವಿಸಿದರೆ ಸಿಗುವ ಲಾಭಗಳ ಬಗ್ಗೆ ಈ ಲೇಖನದಲ್ಲಿ ಓದಿಕೊಳ್ಳಿ.
ನೆನೆಸಿದ ಒಣದ್ರಾಕ್ಷಿ ತಿಂದರೆ ಸಿಗುವ ಆರೋಗ್ಯ ಲಾಭಗಳು

ರಕ್ತದೊತ್ತಡ ನಿಯಂತ್ರಿಸುವುದು
ಅತಿಯಾಗಿ ಉಪ್ಪನ್ನು ಸೇವನೆ ಮಾಡಿದರೆ ಅದರಿಂದ ರಕ್ತದೊತ್ತಡವು ಅಧಿಕವಾಗುವುದು. ಅದಾಗ್ಯೂ, ಇದರಲ್ಲಿ ಇರುವಂತಹ ಪೊಟಾಶಿಯಂ ದೇಹದಲ್ಲಿ ಉಪ್ಪಿನ ಪ್ರಮಾಣವನ್ನು ಸಮತೋಲದಲ್ಲಿಡಲು ನೆರವಾಗುವುದು ಮತ್ತು ರಕ್ತದೊತ್ತಡ ನಿಯಂತ್ರಿಸುವುದು.

ಜೀರ್ಣಕ್ರಿಯೆಗೆ ಸಹಕಾರಿ
ಒಣದ್ರಾಕ್ಷಿಯಲ್ಲಿ ನಾರಿನಾಂಶವು ಅಧಿಕವಾಗಿದೆ ಮತ್ತು ಇದನ್ನು ನೀರಿನಲ್ಲಿ ನೆನೆಸಿದಾಗ ನೈಸರ್ಗಿಕ ವಿರೇಚಕವು ಲಭ್ಯವಾಗುವುದು. ಇದರಿಂದ ನೆನೆಸಿಟ್ಟ ಒಣದ್ರಾಕ್ಷಿ ಸೇವಿಸಿದರೆ ಅದರಿಂದ ಮಲಬದ್ಧತೆ ತಡೆಯಬಹುದು ಮತ್ತು ಜೀರ್ಣಕ್ರಿಯೆಗೆ ನೆರವಾಗುವುದು.

ತೂಕ ಇಳಿಸಲು
ಒಣದ್ರಾಕ್ಷಿಯಲ್ಲಿ ನೈಸರ್ಗಿಕವಾಗಿರುವಂತಹ ಸಕ್ಕರೆಯಿದೆ ಮತ್ತು ಇದನ್ನು ತಿನ್ನುವುದರಿಂದ ಹೆಚ್ಚು ಸಿಹಿ ತಿನ್ನುವ ಬಯಕೆ ಕಡಿಮೆ ಮಾಡಬಹುದು. ಇದನ್ನು ಮಿತವಾಗಿ ಸೇವನೆ ಮಾಡಿ. ಅತಿಯಾಗುವುದು ಒಳ್ಳೆಯದಲ್ಲ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸುವುದು ಮತ್ತು ತಿನ್ನುವ ಬಯಕೆ ಕಡಿಮೆ ಮಾಡುವುದು. ಇದು ತೂಕ ಇಳಿಸಿಕೊಳ್ಳಲು ಸಹಕಾರಿ.

ಪ್ರತಿರೋಧಕ ಶಕ್ತಿ ವೃದ್ಧಿಸುವುದು
ವಿಟಮಿನ್ ಬಿ ಹಾಗೂ ಸಿ ಯಿಂದ ಸಮೃದ್ಧವಾಗಿರುವಂತಹ ಒಣದ್ರಾಕ್ಷಿಯು ಪ್ರತಿರೋಧಕ ಶಕ್ತಿ ವೃದ್ಧಿಸುವುದು ಮತ್ತು ಇದರಿಂದ ಸೋಂಕು ದೇಹವನ್ನು ಬಾಧಿಸುವುದು ಕಡಿಮೆಯಾಗುವುದು.

ಮೂಳೆಯ ಶಕ್ತಿ ಹೆಚ್ಚಿಸುವುದು
ಮೂಳೆಗಳ ಬೆಳವಣಿಗೆಗೆ ಬೇಕಾಗಿರುವಂತಹ ಬೊರೊನ್ ಎನ್ನುವ ಅಂಶವು ಒಣದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಒಣದ್ರಾಕ್ಷಿಯಲ್ಲಿ ಇರುವಂತಹ ಕ್ಯಾಲ್ಸಿಯಂ ಮೂಳೆಗಳನ್ನು ಬಲಗೊಳಿಸುವುದು. ನೆನೆಸಿರುವ ಒಣದ್ರಾಕ್ಷಿ ಸೇವನೆ ಮಾಡಿದರೆ ಅದರಿಂದ ಈ ಪೋಷಕಾಂಶಗಳು ಬೇಗನೆ ಹೀರಿಕೊಳ್ಳುವುದು ಮತ್ತು ಅಸ್ಥಿರಂಧ್ರತೆ ತಡೆಯುವುದು.

ಕೆಟ್ಟ ಉಸಿರು ತಡೆಯುವುದು
ಒಣದ್ರಾಕ್ಷಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿಯ ಸ್ವಚ್ಛತೆ ಕಾಪಾಡಿಕೊಂಡು ದುರ್ವಾಸನೆ ನಿವಾರಿಸುವುದು.

ರಕ್ತಹೀನತೆ ತಡೆಯುವುದು
ದೇಹದಲ್ಲಿ ಕೆಂಪುರಕ್ತದ ಕಣಗಳು ಉತ್ಪತ್ತಿಯಾಗಲು ಮುಖ್ಯವಾಗಿ ಕಬ್ಬಿನಾಂಶವು ಬೇಕು. ಒಣದ್ರಾಕ್ಷಿಯಲ್ಲಿ ಕಬ್ಬಿನಾಂಶವು ಅಧಿಕವಾಗಿದೆ ಮತ್ತು ಇದು ದೇಹದಲ್ಲಿ ರಕ್ತಸಂಚಾರವನ್ನು ಉತ್ತಮಪಡಿಸುವುದು ಮತ್ತು ರಕ್ತಹೀನತೆ ನಿವಾರಿಸುವುದು. ಒಣದ್ರಾಕ್ಷಿಯಲ್ಲಿರುವ ಆರೋಗ್ಯ ಲಾಭಗಳೊಂದಿಗೆ ಇದು ಉಪಾಹಾರ, ಒಣಹಣ್ಣುಗಳ ಮಿಶ್ರಣಕ್ಕೆ ಬಳಸಬಹುದು. ಆರೋಗ್ಯಕರವಾಗಿ ಇರಲು ದಿನಕ್ಕೆ 30 ಗ್ರಾಂನಷ್ಟು ಒಣಹಣ್ಣುಗಳನ್ನು ಸೇವನೆ ಮಾಡಬೇಕು ಎಂದು ಡಾ. ಸೂಡ್ ಅವರು ಹೇಳುವರು.

ಹೃದಯದ ಕಾಯಿಲೆ ತಡೆಯುವುದು
ನಾರಿನಾಂಶ ಮತ್ತು ಇತರ ಕೆಲವೊಂದು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಒಣದ್ರಾಕ್ಷಿಯು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ನೆರವಾಗುವುದು ಮತ್ತು ಹೃದಯದ ಕಾಯಿಲೆಗಳನ್ನು ತಡೆಯುವುದು.

ದೇಹದ ಲಿವರ್‌ನ ಆರೋಗ್ಯಕ್ಕೆ ಒಹಳ ಒಳ್ಳೆಯದು....
ಯಕೃತ್‌ನ (ಲಿವರ್) ಆರೋಗ್ಯಕ್ಕೆ ನೆನೆಸಿಟ್ಟ ಒಣದ್ರಾಕ್ಷಿ ಹಾಗೂ ಇದರ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಉತ್ತಮಗೊಳ್ಳುತ್ತದೆ. ಇದೇ ಕಾರಣಕ್ಕೆ ಈ ನೀರನ್ನು ಕೆಲವಾರು ಟಾನಿಕ್ ಮತ್ತು ಔಷಧಿಗಳಲ್ಲಿ ಬಳಸಲಾಗುತ್ತಿದೆ.

ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುತ್ತದೆ
ಮೂತ್ರಪಿಂಡಗಳಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ನಿವಾರಿಸಲು ಒಣದ್ರಾಕ್ಷಿ ನೆನೆಸಿದ ನೀರು ಉತ್ತಮವಾಗಿದ್ದು ಇದರಿಂದ ಮೂತ್ರಪಿಂಡಗಳ ಒಳಗೆ ಕಲ್ಲು ಉಂಟಾಗುವುದು,ಸೋಂಕು ಉಂಟಾಗುವುದು ಮೊದಲಾದ ತೊಂದರೆಗಳಿಂದ ರಕ್ಷಣೆ ಪಡೆಯಬಹುದು.
ಸೂಚನೆ:
*ಯಾವುದಕ್ಕೂ ಈ ಮನೆಮದ್ದನ್ನು ಪ್ರಯತ್ನಿಸುವ ಮೊದಲು ನಿಮ್ಮ ಫ್ಯಾಮಿಲಿ ವೈದ್ಯರ ಸಲಹೆ ಪಡೆದುಕೊಳ್ಳಿ *ಸಾಧ್ಯವಾದಷ್ಟು ನೈಸರ್ಗಿಕ ವಿಧಾನದಲ್ಲಿ ಬೆಳೆದ, ರಾಸಾಯನಿಕಗಳು ಇಲ್ಲದ ದ್ರಾಕ್ಷಿಯನ್ನೇ ಕೊಳ್ಳಿ. ಒಂದು ವೇಳೆ ಸಾವಯವ ವಿಧಾನದಲ್ಲಿ ಬೆಳೆದಿದ್ದರೆ ಇನ್ನೂ ಉತ್ತಮ.



Click it and Unblock the Notifications











