Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತೂಕ ಇಳಿಸಿಕೊಳ್ಳಬೇಕೇ? ಹಾಗಾದರೆ ಈ ಹಣ್ಣುಗಳನ್ನು ತಿನ್ನಿ
ಹಣ್ಣುಗಳು ನಿಜವಾಗಿಯೂ ಪ್ರತಿಯೊಬ್ಬರ ಆರೋಗ್ಯ ಕಾಪಾಡುವುದು. ಇದರಲ್ಲಿ ಎರಡು ಮಾತಿಲ್ಲ. ಹಣ್ಣುಗಳಲ್ಲಿ ಇರುವಂತಹ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಆದರೆ ದೇಹದಲ್ಲಿರುವ ಅತಿಯಾದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವ ಜನರು ಕೆಲವು ಹಣ್ಣುಗಳ ಸೇವನೆ ಕಡೆಗಣಿಸಬೇಕು. ಯಾಕೆಂದರೆ ಕೆಲವೊಂದು ಹಣ್ಣುಗಳಲ್ಲಿ ಅಧಿಕ ಮಟ್ಟದ ಸಕ್ಕರೆಯಂಶವಿದ್ದು, ನೀವು ಸೇವಿಸುವಂತಹ ಕ್ಯಾಲರಿ ಪ್ರಮಾಣವನ್ನು ಇದು ಹೆಚ್ಚಿಸುವುದು. ತೂಕ ಕಳೆದುಕೊಳ್ಳಲು ನೀವು ಪ್ರಯತ್ನಿಸುತ್ತಿದ್ದರೆ ಆಗ ಕಡಿಮೆ ಕಾರ್ಬ್ ಹೊಂದಿರುವ ಕೆಲವೊಂದು ಹಣ್ಣುಗಳನ್ನು ನೀವು ಪ್ರಯತ್ನಿಸಲೇಬೇಕು.

ಹಣ್ಣುಗಳಲ್ಲಿ ನೈಸರ್ಗಿಕ ಸಕ್ಕರೆಯಂಶವಿದೆ
ಫ್ರುಕ್ಟೋಸ್ ಇರುವ ಕಾರಣದಿಂದಾಗಿ ಹಣ್ಣುಗಳಲ್ಲಿ ಅಧಿಕ ಮಟ್ಟದ ಕಾರ್ಬ್ರೋಹೈಡ್ರೇಟ್ಸ್ ಇದೆ. ಕಾರ್ಬ್ರೋಹೈಡ್ರೇಟ್ಸ್ ಮತ್ತು ಕ್ಯಾಲರಿ ಸೇವನೆ ಕಡೆ ನೀವು ಗಮನಿಸುತ್ತಿರುವಿರಾದರೆ, ಆಗ ನೀವು ನೀರಿನಾಂಶ ಹೆಚ್ಚಿರುವಂತಹ ಹಣ್ಣುಗಳ ಸೇವನೆ ಮಾಡಿ ಮತ್ತು ಇದರಿಂದ ಕಡಿಮೆ ಕಾರ್ಬ್ರೋಹೈಡ್ರೇಟ್ಸ್ ಸೇವನೆಯಾಗಿ, ತೂಕ ಕಳೆದುಕೊಳ್ಳಲು ಇದು ಪರಿಣಾಮಕಾರಿಯಾಗುವುದು. ತೂಕ ಕಳೆದುಕೊಳ್ಳಲು ನೆರವಾಗುವಂತಹ ಕಡಿಮೆ ಕಾರ್ಬ್ಸ್ ಇರುವ ಕೆಲವು ಹಣ್ಣುಗಳು.

1. ಕಲ್ಲಂಗಡಿ
ತೂಕ ಇಳಿಸಲು ಬಯಸುವಂತಹ ವ್ಯಕ್ತಿಗಳಿಗೆ ಕಲ್ಲಂಗಡಿಯು ತುಂಬಾ ಪರಿಣಾಮಕಾರಿ ಹಣ್ಣು. ಇದರಲ್ಲಿ 30 ಕ್ಯಾಲರಿ ಮಾತ್ರ ಇದೆ ಮತ್ತು ತುಂಬಾ ಕಡಿಮೆ ಕಾರ್ಬ್ರೋಹೈಡ್ರೇಟ್ಸ್ ಇದೆ. ಯುಎಸ್ ಡಿಎ ಅಂಕಿಅಂಶದ ಪ್ರಕಾರ 100 ಗ್ರಾಂ ಕಲ್ಲಂಗಡಿಯಲ್ಲಿ 8 ಗ್ರಾಂ ಕಾರ್ಬ್ರೋಹೈಡ್ರೇಟ್ಸ್ ಇದೆ. ಕಲ್ಲಂಗಡಿ ಹಣ್ಣಿನಲ್ಲಿ ಶೇ. 92ಕ್ಕೂ ಹೆಚ್ಚು ನೀರಿನಾಂಶವಿದೆ. ಇದು ಹೊಟ್ಟೆ ತುಂಬಿದಂತೆ ಮಾಡಿ, ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುವುದು. ಕಲ್ಲಂಗಡಿ ಹಣ್ಣಿನಿಂದ ತೂಕ ಇಳಿಸುವಾಗ ನಿಗದಿತ ಪ್ರಮಾಣದಲ್ಲಿ ಹಣ್ಣನ್ನು ಸೇವಿಸುವುದನ್ನು ಮರೆಯಬಾರದು. ಒಂದು ಪ್ರಮಾಣದ ಪ್ರಕಾರ ಹೇಳುವುದಾದರೆ 1:10 ಅನುಪಾತ ಎನ್ನಬಹುದು. ಅಂದರೆ 60 ಕೆ.ಜಿ ತೂಕ ಇರುವವರು 6 ಕೆ.ಜಿ ಕಲ್ಲಂಗಡಿ ಹಣ್ಣನ್ನು ಸೇವಿಸಬಹುದು. ಒಂದು ಪ್ರಮಾಣದಲ್ಲಿ ಅಂದರೆ 150 ಕ್ಯಾಲೋರಿ ಇರುವಷ್ಟು ಕಲ್ಲಂಗಡಿ ಹಣ್ಣನ್ನು ದಿನದಲ್ಲಿ 8 ಬಾರಿ ಸೇವಿಸಬೇಕು. ಈ ಹಣ್ಣುಗಳು ಶೇ.97ರಷ್ಟು ನೀರಿನಂಶದಿಂದ ಕೂಡಿರುತ್ತದೆ. ಇದನ್ನು ಸೇವಿಸಿದಾಗ ಹೆಚ್ಚು ನೀರನ್ನು ಕುಡಿಯುವ ಅವಶ್ಯಕತೆ ಇರುವುದಿಲ್ಲ.

2. ಸ್ಟ್ರಾಬೆರಿ
ಸ್ಟ್ರಾಬೆರಿಯು ಕಡಿಮೆ ಕಾರ್ಬ್ರೋಹೈಡ್ರೇಟ್ಸ್ ಹೊಂದಿದೆ ಮತ್ತು ಇದನ್ನು ನೀವು ತೂಕ ಇಳಿಸುವ ಆಹಾರಕ್ರಮಕ್ಕೆ ಸೇರಿಸಬಹುದು. ಯುಎಸ್ ಡಿಎ ಅಂಕಿಅಂಶದ ಪ್ರಕಾರ 100 ಗ್ರಾಂ ಸ್ಟ್ರಾಬೆರಿಯಲ್ಲಿ 8 ಗ್ರಾಂ ಕಾರ್ಬ್ರೋಹೈಡ್ರೇಟ್ಸ್ ಇದೆ.
ಇದು ಚಯಾಪಚಯವನ್ನು ಉತ್ತೇಜಿಸುವುದು ಮತ್ತು ಪೆಕ್ಟಿನ್ ಎನ್ನುವ ಹೀರಿಕೊಳ್ಳಬಹುದಾದ ನಾರಿನಾಂಶವು ಹಸಿವನ್ನು ಕಡಿಮೆ ಮಾಡುವುದು. 100 ಗ್ರಾಂ ಸ್ಟ್ರಾಬೆರಿಯಲ್ಲಿ 33 ಕ್ಯಾಲರಿ ಇದೆ ಮತ್ತು ನೀವು ಸುಲಭವಾಗಿ ತೂಕ ಇಳಿಸಬಹುದು.

3. ಅವಕಾಡೊ
ಅವಕಾಡೊವನ್ನು ಬೆಣ್ಣೆ ಹಣ್ಣು ಎಂದು ಕರೆಯಲಾಗುತ್ತದೆ. ಈ ಹಣ್ಣಿನಲ್ಲಿ ತುಂಬಾ ಕಡಿಮೆ ಕಾರ್ಬ್ರೋಹೈಡ್ರೇಟ್ಸ್ ಇದೆ. 100 ಗ್ರಾಂ ಅವಕಾಡೊದಲ್ಲಿ 160 ಕ್ಯಾಲರಿ ಮತ್ತು 9 ಗ್ರಾಂ ಕಾರ್ಬ್ರೋಹೈಡ್ರೇಟ್ಸ್ ಇದೆ. ಅವಕಾಡೊ ತೂಕ ಇಳಿಸಿಕೊಳ್ಳಲು ತುಂಬಾ ಸಹಕಾರಿ. ಯಾಕೆಂದರೆ ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುವುದು.

4. ನೇರಳೆ
ತೂಕ ಇಳಿಸಿಕೊಳ್ಳಲು ಬಯಸುತ್ತಿರುವವರು ನೇರಳೆಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಲೇಬೇಕು. ಇದರಲ್ಲಿ ಪೆಕ್ಟಿನ್ ಎನ್ನುವ ಹೀರಿಕೊಳ್ಳಬಹುದಾದ ನಾರಿನಾಂಶವಿದ್ದು, ಇದು ಹೊಟ್ಟೆ ತುಂಬಿದಂತೆ ಮಾಡುವುದು ಮತ್ತು ತೂಕ ಕಳೆದುಕೊಳ್ಳಲು ನೆರವಾಗುವುದು. ಯುಎಸ್ ಡಿಎ ಅಂಕಿಅಂಶದ ಪ್ರಕಾರ 100 ಗ್ರಾಂ ನೇರಳೆಯಲ್ಲಿ 10 ಗ್ರಾಂ ಕಾರ್ಬ್ರೋಹೈಡ್ರೇಟ್ಸ್ ಮತ್ತು 43 ಗ್ರಾಂ ಕ್ಯಾಲರಿ ಇದೆ.

5. ಪೀಚ್
ತೂಕ ಕಳೆದುಕೊಳ್ಳಲು ಬಯಸಿರುವ ಜನರು ತಿನ್ನಬಹುದಾದ ಮತ್ತೊಂದು ಹಣ್ಣೆಂದರೆ ಅದು ಪೀಚ್. ಇದರಲ್ಲಿ ಕ್ಯಾಟಿಚಿನ್ಸ್ ಎನ್ನುವ ಫ್ಲಾವನಾಯ್ಡ್ ಗಳಿದ್ದು, ಚಯಾಪಚಯ ಕ್ರಿಯೆ ವೃದ್ಧಿಸುವುದು. ಇದರಿಂದ ಕ್ಯಾಲರಿಯನ್ನು ವೇಗವಾಗಿ ದಹಿಸಿ, ತೂಕ ಇಳಿಸಲು ನೆರವಾಗುವುದು.
ಯುಎಸ್ ಡಿಎ ಅಂಕಿಅಂಶದ ಪ್ರಕಾರ 100 ಗ್ರಾಂ ಪೀಚ್ ನಲ್ಲಿ 10 ಗ್ರಾಂ ಕಾರ್ಬ್ರೋಹೈಡ್ರೇಟ್ಸ್ ಮತ್ತು 30 ಕ್ಯಾಲರಿ ಇದೆ.

6. ಹನಿಡ್ಯೂಸ್(ಸಿಹಿ ಸೌತೆ)
ಹನಿಡ್ಯೂಸ್ ನಲ್ಲಿ ಹೆಚ್ಚಿನ ಪ್ರಮಾಣದ ನೀರಿನಾಂಶವಿರುವ ಕಾರಣದಿಂದ ದೀರ್ಘಕಾಲ ಹೊಟ್ಟೆ ತುಂಬಿದಂತೆ ಇರುವುದು. ಇದರಿಂದ ಸೇವಿಸುವ ಆಹಾರ ಮತ್ತು ಕ್ಯಾಲರಿ ಕಡಿಮೆಯಾಗುವುದು. ಇದು ತೂಕ ಇಳಿಸಲು ನೆರವಾಗುವುದು. 100 ಗ್ರಾಂ ಹನಿ ಡ್ಯೂಸ್ ನಲ್ಲಿ 9 ಗ್ರಾಂ ಕಾರ್ಬ್ರೋಹೈಡ್ರೇಟ್ಸ್ ಇದೆ.

7. ಮಸ್ಕ್ ಮೆಲನ್
ಹೊರಗಿನಿಂದ ಬೂದು-ಹಸಿರುಮಿಶ್ರಿತ ಸಿಪ್ಪೆ ಹೊಂದಿದ್ದರೂ ಒಳಗಣ ತಿರುಳು ಕೇಸರಿ ಅಥವಾ ಕಿತ್ತಳೆ ಬಣ್ಣ ಹೊಂದಿರುವ ಕೇಸರಿ ಕರಬೂಜ (Muskmelon) ಬೇಸಿಗೆಯ ಫಲವಾಗಿದ್ದು ಇತರ ಕರಬೂಜ ಹಣ್ಣುಗಳಂತೆಯೇ ಸಿಹಿಯಾದ ಮತ್ತು ಹೆಚ್ಚು ನೀರಿನಂಶವನ್ನು ಹೊಂದಿರುವ ಹಣ್ಣಾಗಿದೆ. ಕಲ್ಲಂಗಡಿಯಂತೆಯೇ ಈ ಹಣ್ಣಿನ ಸೇವನೆಯಿಂದ ವಿಶೇಷವಾಗಿ ಬೇಸಿಗೆಯಲ್ಲಿ ಎದುರಾಗುವ ನಿರ್ಜಲೀಕರಣದಿಂದ ಪಾರಾಗಬಹುದು. ಅಷ್ಟೇ ಅಲ್ಲ, ಎಲ್ಲರಿಗೂ ಇಷ್ಟವಾಗುವ ಈ ಹಣ್ಣು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರಿಗೂ ಉತ್ತಮ ಆಯ್ಕೆಯಾಗಿದೆ. ನೀರಿನಂಶ ಮತ್ತು ವಿವಿಧ ಪೋಷಕಾಂಶಗಳು ಹೆಚ್ಚಿದ್ದರೂ ಕ್ಯಾಲೋರಿಗಳು ಕಡಿಮೆ ಇರುವ ಕಾರಣ ಕೊಬ್ಬು ಹೆಚ್ಚಿಸದೇ ದೇಹಕ್ಕೆ ಶಕ್ತಿ ಒದಗಿಸುವ ಮೂಲಕ ಆರೋಗ್ಯಕರ ಹಣ್ಣುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತದೆ. ಇನ್ನು ಮಸ್ಕ್ ಮೆಲನ್ ನಲ್ಲಿ ಕೂಡ ತುಂಬಾ ಕಡಿಮೆ ಕಾರ್ಬ್ಸ್ ಇದೆ. ಇದು ತೂಕ ಕಳೆದುಕೊಳ್ಳಲು ಬಯಸುವಂತಹ ಜನರಿಗೆ ತುಂಬಾ ಪರಿಣಾಮಕಾರಿ. ಇದರಲ್ಲಿ 34 ಕ್ಯಾಲರಿ ಮತ್ತು 100 ಗ್ರಾಂ ಮಸ್ಕ್ ಮೆಲನ್ ನಲ್ಲಿ 8 ಗ್ರಾಂ ಕಾರ್ಬ್ರೋಹೈಡ್ರೇಟ್ಸ್ ಇದೆ. ಇದರಲ್ಲಿ ನಾರಿನಾಂಶವಿದೆ. ಇದರ ಬೀಜಗಳು ಹೊಟ್ಟೆ ತುಂಬಿದಂತೆ ಮಾಡಿ, ಆಹಾರ ಸೇವಿಸುವುದನ್ನು ಕಡಿಮೆ ಮಾಡುವುದು.

8. ಲಿಂಬೆ
ಲಿಂಬೆಯು ಕೊಬ್ಬನ್ನು ವೇಗವಾಗಿ ಕರಗಿಸುವುದು ಮತ್ತು ಚಯಾಪಚಯದ ವೇಗ ಹೆಚ್ಚಿಸಿ, ತೂಕ ಕಳೆದುಕೊಳ್ಳಲು ನೆರವಾಗುವುದು. ಹೊಟ್ಟೆ ತುಂಬಿದಂತೆ ಮಾಡುವುದು ಮತ್ತು ದೇಹಕ್ಕೆ ನೀರಿನಾಂಶ ಒದಗಿಸಿ, ಆರೋಗ್ಯ ಸುಧಾರಿಸುವುದು. ಲಿಂಬೆಯಲ್ಲಿ 29 ಕ್ಯಾಲರಿ ಮತ್ತು ನೂರು ಗ್ರಾಂ ಲಿಂಬೆಯಲ್ಲಿ 9 ಗ್ರಾಂ ಕಾರ್ಬ್ರೋಹೈಡ್ರೇಟ್ಸ್ ಇದೆ.

9. ಪೇರಳೆ(ಸೀಬೆಕಾಯಿ)
ಸೀಬೆಕಾಯಿ ಪೋಷಕಾಂಶಗಳ ಆಗರವಿದೆ. ಇದರಲ್ಲಿ ಆಹಾರದ ನಾರಿನಾಂಶ, ಪೊಟಾಶಿಯಂ, ವಿಟಮಿನ್ ಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಇದೆ. ಹೊಟ್ಟೆಯ ಬೊಜ್ಜನ್ನು ನಿಯಂತ್ರಿಸಲು ಇದು ನೆರವಾಗುವುದು. ಚಯಾಪಚಯ ಕ್ರಿಯೆ ಹೆಚ್ಚಿಸುವ ಮೂಲಕ ತೂಕ ಕಳೆದುಕೊಳ್ಳಲು ಸಹಕಾರಿಯಾಗುವುದು. 100 ಗ್ರಾಂ ಪೇರಳೆಯಲ್ಲಿ 14 ಗ್ರಾಂ ಕಾರ್ಬ್ರೋಹೈಡ್ರೇಟ್ಸ್ ಇದೆ ಮತ್ತು 68 ಕ್ಯಾಲರಿ ಇದೆ. ಕ್ಯಾಲರಿ ಕಡಿಮೆ ಇರುವಂತಹ ಹಣ್ಣುಗಳ ಸೇವನೆಯಿಂದ ಕ್ಯಾಲರಿ ಸೇವನೆ ಪ್ರಮಾಣ ಕಡಿಮೆ ಮಾಡಬಹುದು. ತೂಕ ಕಳೆದುಕೊಳ್ಳಲು ಕ್ಯಾಲರಿ ಸೇವನೆ ತಗ್ಗಿಸುವುದು ಅತೀ ಅಗತ್ಯ. ಆದರೆ ನಿಮ್ಮ ಇಷ್ಟದ ಹಣ್ಣನ್ನು ತೂಕ ಇಳಿಸಿಕೊಳ್ಳುವ ಸಲುವಾಗಿ ಬಿಟ್ಟುಬಿಡಬೇಕೆಂದು ಹೇಳುತ್ತಿಲ್ಲ. ಇದನ್ನು ಕೂಡ ನೀವು ಹಿತಮಿತವಾಗಿ ಸೇವಿಸುತ್ತಲೇ ಇರಬಹುದು.



Click it and Unblock the Notifications