For Quick Alerts
ALLOW NOTIFICATIONS  
For Daily Alerts

ರಾತ್ರಿ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪ ಸೇವಿಸಿ! ಯಾಕೆ ಗೊತ್ತೇ?

By Hemanth
|

ಜೇನುತುಪ್ಪದಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ನೈಸರ್ಗಿಕದತ್ತವಾಗಿ ಸಿಗುವಂತಹ ಜೇನುತುಪ್ಪ ಬಳಕೆ ಮಾಡುವುದರಿಂದ ಹಲವಾರು ರೀತಿಯ ಅನಾರೋಗ್ಯಗಳು ಬರದಂತೆ ತಡೆಯಬಹುದು. ಹಿಂದಿನಿಂದಲೂ ಭಾರತೀಯರು ಜೇನುತುಪ್ಪವನ್ನು ಎಲ್ಲಾ ರೀತಿಯಿಂದಲೂ ಬಳಕೆ ಮಾಡಿಕೊಂಡು ಅದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಜೇನುತುಪ್ಪವನ್ನು ರಾತ್ರಿ ಮಲಗುವ ಮೊದಲು ಸೇವಿಸಿದರೆ ಅದರಿಂದ ಅದ್ಭುತವಾಗಿರುವ ಆರೋಗ್ಯ ಲಾಭಗಳು ದೇಹಕ್ಕೆ ಸಿಗಲಿದೆ.

ಜೇನಿನಲ್ಲಿ ನೆನೆಸಿಟ್ಟ ನೆಲ್ಲಿಕಾಯಿ ತಿನ್ನೋದರಿಂದ ಬರೋಬ್ಬರಿ ಎಂಟು ಲಾಭಗಳಿವೆ!

benefits of having honey before bed in kannada

ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು, ಗಾಯ ಶಮನಗೊಳಿಸುವ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಜೇನುತುಪ್ಪವು ಸೋಂಕಿನ ವಿರುದ್ಧ ಹೋರಾಡುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮಧುಮೇಹ ವಿರೋಧಿ ಗುಣ ಹೊಂದಿರುವಂತಹ ಜೇನುತುಪ್ಪವು ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕುಗ್ಗಿಸುವುದು. ಸಾಮಾನ್ಯ ಶೀತ ಮತ್ತು ಕೆಮ್ಮಿಗೆ ಇದು ತುಂಬಾ ಪರಿಣಾಮಕಾರಿ. ಶ್ವಾಸಕೋಶದ ಮೇಲ್ಭಾಗದಲ್ಲಿ ಉಂಟಾಗುವ ಸೋಂಕನ್ನು ಇದು ನಿವಾರಣೆ ಮಾಡುವುದು. ಇನ್ನು ರಾತ್ರಿ ಮಲಗುವ ಮೊದಲು ಜೇನುತುಪ್ಪ ಸೇವಿಸಿದರೆ ಆರೋಗ್ಯ ಲಾಭಗಳು ಏನು ಎನ್ನುವ ಬಗ್ಗೆ ಈ ಲೇಖನ. ಮುಂದೆ ಓದುತ್ತಾ ತಿಳಿಯಿರಿ.

ಒಳ್ಳೆಯ ನಿದ್ರೆ

ಒಳ್ಳೆಯ ನಿದ್ರೆ

ರಾತ್ರಿ ಮಲಗುವ ಮೊದಲು ಜೇನುತುಪ್ಪ ಸೇವಿಸುವುದು ತುಂಬಾ ಒಳ್ಳೆಯದು. ಇದು ನಿದ್ರೆ ಬರುವ ಹಾರ್ಮೋನು ಬಿಡುಗಡೆ ಮಾಡುವುದು. ಯಾಕೆಂದರೆ ಇದು ಇನ್ಸುಲಿನ್ ಮಟ್ಟ ಸ್ವಲ್ಪ ಹೆಚ್ಚಿಸುವುದು. ಇನ್ಸುಲಿನ್ ಮೆದುಳಿನಲ್ಲಿ ಟ್ರೈಪ್ಟೊಫಾನ್ ಬಿಡುಗಡೆಗೆ ಉತ್ತೇಜಿಸುವುದು. ಟ್ರೈಪ್ಟೊಫಾನ್ ಸರೊಟೊನಿನ್ ಆಗಿ ಪರಿವರ್ತನೆಗೊಂಡು ಆರಾಮ ಮತ್ತು ಒಳ್ಳೆಯ ಮನಸ್ಥಿತಿ ನೀಡುವುದು. ಇದರಿಂದ ನಿದ್ರೆ ಚೆನ್ನಾಗಿ ಆಗುವುದು.

ಯಕೃತ್ ತುಂಬಿರುವಂತೆ ಮಾಡುವುದು

ಯಕೃತ್ ತುಂಬಿರುವಂತೆ ಮಾಡುವುದು

ರಾತ್ರಿ ವೇಳೆ ಯಕೃತ್ ಗೆ ಇಂಧನ ಬೇಕಾಗಿರುವುದು. ಇದಕ್ಕೆ ಜೇನುತುಪ್ಪವು ಸರಿಯಾದ ಆಯ್ಕೆ. ಜೇನುತುಪ್ಪವು ತನ್ನಲ್ಲಿರುವ ಗುಣಗಳಿಂದ ಯಕೃತ್ ಗ್ಲೂಕೋಸ್ ಉತ್ಪತ್ತಿಸುವಂತೆ ಮಾಡುವುದು. ಇದರಿಂದ ಕೊಬ್ಬು ದಹಿಸುವ ಹಲವಾರು ಹಾರ್ಮೋನುಗಳು ಬಿಡುಗಡೆಯಾಗುವುದು. ಜೇನುತುಪ್ಪದಲ್ಲಿ ಫ್ರಾಕ್ಟೊಸ್ ಮತ್ತು ಗ್ಲೂಕೋಸ್ ಇದೆ. ಇದು ರಾತ್ರಿ ವೇಳೆ ಯಕೃತ್ ನ ಕಾರ್ಯನಿರ್ವಹಣೆಗೆ ನೆರವಾಗುವುದು,.

ತೂಕ ಕಳೆದುಕೊಳ್ಳಲು

ತೂಕ ಕಳೆದುಕೊಳ್ಳಲು

ಜೇನುತುಪ್ಪವು ಯಕೃತ್ ಗೆ ಇಂಧನ ನೀಡುವುದು ಮತ್ತು ಇದರಿಂದ ಯಕೃತ್ ಗ್ಲೂಕೋಸ್ ಬಿಡುಗಡೆ ಮಾಡುವುದು. ರಾತ್ರಿ ಮಲಗುವ ಮೊದಲು ಜೇನುತುಪ್ಪ ಸೇವಿಸಿದರೆ ದೇಹವು ಹೆಚ್ಚಿನ ಕೊಬ್ಬನ್ನು ದಹಿಸುತ್ತದೆ. ಒಂದು ಕಪ್ ಕಚ್ಚಾ ಜೇನುತುಪ್ಪದಲ್ಲಿ ಕೇವಲ 64 ಕ್ಯಾಲರಿ ಮಾತ್ರ ಇದೆ. ಇದರಿಂದ ರಾತ್ರಿಯಿಡಿ ಹೊಟ್ಟೆ ತುಂಬಿದ ಅನುಭವವಾಗುವುದು.

ಕೆಮ್ಮಿಗೆ ಒಳ್ಳೆಯ ಮದ್ದು

ಕೆಮ್ಮಿಗೆ ಒಳ್ಳೆಯ ಮದ್ದು

ಸಾಮಾನ್ಯ ಶೀತ ಮತ್ತು ಕೆಮ್ಮು ನಿವಾರಣೆ ಮಾಡಲು ಜೇನುತುಪ್ಪವು ಒಳ್ಳೆಯ ಮನೆಮದ್ದು. ಮಕ್ಕಳಲ್ಲಿ ರಾತ್ರಿ ವೇಳೆ ಬರುವಂತಹ ಕೆಮ್ಮು ನಿವಾರಣೆ ಮಾಡಲು ಮಕ್ಕಳಿಗೆ ಜೇನುತುಪ್ಪ ನೀಡಿ. ಮಲಗುವ ಅರ್ಧಗಂಟೆಗೆ ಮೊದಲು ಜೇನುತುಪ್ಪ ಸೇವಿಸಿದರೆ ಕೆಮ್ಮು ನಿವಾರಣೆಯಾಗುವುದು.

ಜೀರ್ಣಕ್ರಿಯೆಗೆ ಜೇನುತುಪ್ಪ

ಜೀರ್ಣಕ್ರಿಯೆಗೆ ಜೇನುತುಪ್ಪ

ದೇಹದ ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಜಮೆಯಾಗಿರುವಂತಹ ವಿಷಕಾರಿ ಅಂಶಗಳನ್ನು ಹೊರತೆಗೆಯಲು ರಾತ್ರಿ ಮಲಗುವ ಮೊದಲು ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯಿರಿ. ಕಚ್ಚಾ ಜೇನುತುಪ್ಪದಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹೊಟ್ಟೆಯಲ್ಲಿರುವ ಹಾನಿಕಾರಕ ರೋಗಕಾರಕಗಳನ್ನು ಕೊಂದುಹಾಕುವುದು.

ಮಧ್ಯರಾತ್ರಿ ಆಗುವ ಹಸಿವಿಗೆ

ಮಧ್ಯರಾತ್ರಿ ಆಗುವ ಹಸಿವಿಗೆ

ರಾತ್ರಿ ಊಟ ಮಾಡಿ ಮಲಗಿದರೂ ಸಹಿತ ಮಧ್ಯರಾತ್ರಿ ವೇಳೆ ಕೆಲವೊಮ್ಮೆ ಹಸಿವು ಆಗುತ್ತದೆ. ಇದಕ್ಕೆ ಏನು ಮಾಡುವುದು. ಕೆಲವರು ನಿದ್ರೆಯಿಂದ ಎದ್ದು ಚಿಪ್ಸ್ ಅಥವಾ ಚಾಕಲೇಟ್ ತಿನ್ನುವರು. ಆದರೆ ರಾತ್ರಿ ವೇಳೆ ಆಗುವ ಹಸಿವು ತಪ್ಪಿಸಲು ನೀವು ಮಲಗುವ ಮೊದಲು ಜೇನುತುಪ್ಪ ಸೇವಿಸಿ. ಜೇನುತುಪ್ಪದಲ್ಲಿ ಇರುವಂತಹ ನೈಸರ್ಗಿಕ ಸಕ್ಕರೆಯು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸುವುದು.

ಬೊಜ್ಜು ಕರಗಿಸಲು

ಬೊಜ್ಜು ಕರಗಿಸಲು

ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಾ ಇರುವ ಜನರು ರಾತ್ರಿ ವೇಳೆ ಜೇನುತುಪ್ಪ ಸೇವನೆ ಮಾಡಬಹುದು. ಯಾಕೆಂದರೆ ಜೇನುತುಪ್ಪದಲ್ಲಿ ಕೊಬ್ಬು ಇರುವುದಿಲ್ಲ ಮತ್ತು ಇದು ದೇಹವು ಹೀರಿಕೊಳ್ಳುವ ಕೊಬ್ಬು ತಗ್ಗಿಸಲಿದೆ. ಬಿಸಿ ನೀರಿಗೆ ಲಿಂಬೆರಸ ಹಾಕಿಕೊಂಡು ಅದಕ್ಕೆ ಜೇನುತುಪ್ಪ ಹಾಕಿ ಕುಡಿದರೆ ಬೊಜ್ಜು ಹೊಟ್ಟೆ ಕರಗುವುದು.

ಆರೋಗ್ಯಕರ ಚರ್ಮಕ್ಕೆ ಜೇನುತುಪ್ಪ

ಆರೋಗ್ಯಕರ ಚರ್ಮಕ್ಕೆ ಜೇನುತುಪ್ಪ

ಆ್ಯಂಟಿಆಕ್ಸಿಡೆಂಟ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿರುವಂತಹ ಜೇನುತುಪ್ಪವು ಆರೋಗ್ಯಕರ ಚರ್ಮಕ್ಕೆ ಅದ್ಭುತ ಔಷಧಿ. ರಾತ್ರಿ ಮಲಗುವ ಮೊದಲು ಇದರ ಸೇವನೆ ಮಾಡಿದರೆ ಕಾಂತಿ ಹಾಗೂ ನಯವಾದ ಚರ್ಮ ನಿಮ್ಮದಾಗುವುದು.

ಮಧುಮೇಹದ ಅಪಾಯ ಕಡಿಮೆ

ಮಧುಮೇಹದ ಅಪಾಯ ಕಡಿಮೆ

ರಾತ್ರಿ ಮಲಗುವ ಮೊದಲು ಒಂದು ಚಮಚ ಜೇನುತುಪ್ಪ ಸೇವಿಸಿದರೆ ಅದರಿಂದ ಮಧುಮೇಹ ಬರುವ ಅಪಾಯ ಕಡಿಮೆ ಮಾಡಬಹುದು. ಮಧುಮೇಹ ಇರುವವರು ರಾತ್ರಿ ವೇಳೆ ಜೇನುತುಪ್ಪ ಸೇವನೆ ಮಾಡಿದರೆ ಮಧುಮೇಹ ನಿವಾರಣೆ ಮಾಡಬಹುದು. ಯಾಕೆಂದರೆ ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟ ತಗ್ಗಿಸಲು ನೆರವಾಗುವುದು.

ಪ್ರತಿರೋಧಕ ಶಕ್ತಿ ಹೆಚ್ಚಳ

ಪ್ರತಿರೋಧಕ ಶಕ್ತಿ ಹೆಚ್ಚಳ

ಕಚ್ಚಾ ಜೇನುತುಪ್ಪದಲ್ಲಿ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದ್ದು, ಇದು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಇದರಿಂದ ಪ್ರತಿರೋಧಕ ಶಕ್ತಿ ಮೇಲೆ ದಾಳಿ ಮಾಡುವ ಹಲವಾರು ಕಾಯಿಲೆಗಳನ್ನು ಇದು ತಡೆಯುವುದು. ಜೇನುತುಪ್ಪದಲ್ಲಿ ಇರುವಂತಹ ಫಾಲಿಫಿನಾಲ್ಸ್ ಎನ್ನುವ ಆ್ಯಂಟಿಆಕ್ಸಿಡೆಂಟ್ ಹೃದಯ ಸಂಬಂಧಿ ಕಾಯಿಲೆ ಮತ್ತು ಕ್ಯಾನ್ಸರ್ ಅನ್ನು ತಡೆಯುವುದು. ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ಅದನ್ನು ನಿಮ್ಮ ಸ್ನೇಹಿತರು ಹಾಗೂ ಪ್ರೀತಿ ಪಾತ್ರರೊಂದಿಗೆ ಶೇರ್ ಮಾಡಿಕೊಳ್ಳಿ.

English summary

10 Health Benefits Of Having Honey Before Bed

Honey has been used as a natural medicine since ages. It contains natural anti-bacterial agents and it has wound-healing and anti-inflammatory properties. The health benefits of having honey before bed are it induces sleep hormones, helps in weight loss, aids in proper functioning of the liver, good for midnight hunger pangs, etc.
X
Desktop Bottom Promotion