ನಾಲಗೆಯಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ವೈದ್ಯರಿಗೆ ತೋರಿಸಿ

By: manu
Subscribe to Boldsky

ಆಚರವಿಲ್ಲದ ನಾಲಗೆ ಎನ್ನುವ ದಾಸರ ಪದವನ್ನು ನಾವು ಕೇಳಿದ್ದೇವೆ. ಇದು ನಿಜವೆನ್ನಬಹುದು. ಬಾಯಿಯೊಳಗೆ ಏನೇ ಬಂದರೂ ಅದರ ರುಚಿ ನೋಡುವುದು, ಮನಸ್ಸಿನಲ್ಲಿ ಏನೇ ಇದ್ದರೂ ಅದನ್ನು ಶಬ್ಧಗಳ ಮೂಲಕ ಹೊರಗೆ ಹಾಕುವುದು ನಾಲಗೆ. ಇದರಿಂದ ನಾಲಗೆಗೆ ಯಾವುದೇ ಆಚರವಿಲ್ಲವೆನ್ನಬಹುದು!  ಬಿಸಿ ಆಹಾರ ಸೇವಿಸಿ ನಾಲಗೆ ಸುಟ್ಟುಕೊಂಡ್ರಾ..? ಇಲ್ಲಿದೆ ಪರಿಹಾರ

ನಾಲಗೆಯನ್ನು ನಾವು ಮಾತನಾಡಲು, ರುಚಿನೋಡಲು ಬಳಸುತ್ತೇವೆ. ಆದರೆ ವೈದ್ಯರಲ್ಲಿಗೆ ಹುಷಾರಿಲ್ಲವೆಂದು ಹೋದಾಗ ನಾಲಗೆ ಹೊರಹಾಕಲು ಹೇಳಿ ನಿಮ್ಮ ಆರೋಗ್ಯವನ್ನು ನಾಲಗೆಯ ಮೂಲಕ ಪರೀಕ್ಷಿಸಲಾಗುತ್ತದೆ. ಹೌದು, ನಾಲಗೆಯಿಂದ ನಮ್ಮ ದೇಹದ ಸಂಪೂರ್ಣ ಆರೋಗ್ಯವನ್ನು ತಿಳಿದುಕೊಳ್ಳಬಹುದು. ಈ ಲೇಖನದಲ್ಲಿ ನಾಲಗೆ ಯಾವ ರೀತಿಯಲ್ಲಿದ್ದರೆ ಅದು ಯಾವ ಕಾಯಿಲೆ ಲಕ್ಷಣ ಎನ್ನುವುದನ್ನು ತಿಳಿಯಬಹುದು. ಅದು ಹೇಗೆಂದು ಮುಂದಕ್ಕೆ ಓದುತ್ತಾ ತಿಳಿಯಿರಿ....   

ಹೈಪೋಥೈರಾಯ್ಡಿಸಮ್

ಹೈಪೋಥೈರಾಯ್ಡಿಸಮ್

ಮಾತು ಕಟ್ಟುವುದು ಹೈಪೋಥೈರಾಯ್ಡಿಸಮ್‌ನ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ. ನಾಲಗೆಗೆ ಬೇಕಾದಷ್ಟು ಥೈರಾಯ್ಡ್ ಹಾರ್ಮೋನುಗಳು ಸಿಗದೆ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ನಾಲಗೆ ಅಂಚಿನಲ್ಲಿ ಆಗುವಂತಹ ಊತ ಹಲ್ಲುಗಳ ಮಧ್ಯೆಗೆ ನಾಲಗೆಯನ್ನು ಸಿಲುಕಿಸಬಹುದು.

ಟೆಂಪೊರೊಮ್ಯಾಂಡಿಬ್ಯುಲರ್ ಜಾಯಿಂಟ್ ಸಿಂಡ್ರೋಮ್

ಟೆಂಪೊರೊಮ್ಯಾಂಡಿಬ್ಯುಲರ್ ಜಾಯಿಂಟ್ ಸಿಂಡ್ರೋಮ್

ದವಡೆಗಳ ಸ್ನಾಯುಗಳು ಮತ್ತು ಗಂಟುಗಳ ಮಧ್ಯೆ ಕಂಡುಬರುವಂತಹ ಯಾವುದೇ ರೀತಿಯ ಸಮಸ್ಯೆಗೆ ವಿಸ್ತಾರವಾಗಿರುವ ನಾಲಗೆ ಕಾರಣವಾಗಿದೆ. ಈ ಪರಿಸ್ಥಿತಿಯು ದವಡೆಯಲ್ಲಿ ನೋವನ್ನು ಉಂಟು ಮಾಡಬಹುದು.

ಗುಲ್ಮ ಕೊರತೆ

ಗುಲ್ಮ ಕೊರತೆ

ವಿಸ್ತರಾವಾಗಿರುವ ನಾಲಗೆಯ ಸಮಸ್ಯೆಯು ಗುಲ್ಮ ಕೊರತೆಯಿಂದಾಗಿ ಆಗಬಹುದು. ಸೋಂಕು ಅಥವಾ ಗಾಯದ ಸಮಸ್ಯೆಯಿಂದ ಹೀಗೆ ಆಗಬಹುದು. ಇದು ನಿಮ್ಮ ಆರೋಗ್ಯವನ್ನು ತೋರಿಸುತ್ತದೆ.

ನಿದ್ರಾಹೀನತೆ

ನಿದ್ರಾಹೀನತೆ

ವಿಸ್ತಾರಗೊಂಡಿರುವ ನಾಲಗೆಯು ನಿದ್ರಾಹೀನತೆಯನ್ನು ತೊರಿಸಬಹುದು. ವಿಸ್ತಾರಗೊಂಡಿರುವ ನಾಲಗೆಯು ಸರಿಯಾಗಿ ನಿದ್ರೆ ಮಾಡದೆ ಇರುವ ಸಮಸ್ಯೆಯನ್ನು ತೋರಿಸುತ್ತದೆ.

ಖನಿಜಾಂಶ ಅಥವಾ ವಿಟಮಿನ್ ಕೊರತೆ

ಖನಿಜಾಂಶ ಅಥವಾ ವಿಟಮಿನ್ ಕೊರತೆ

ನಾಲಗೆ ಊದಿಕೊಳ್ಳುವುದು ವಿಟಮಿನ್ ಬಿ12 ಕೊರತೆಯಿಂದ ಆಗಬಹುದು. ಇದರಿಂದಾಗಿ ನಾಲಗೆ ಊದಿಕೊಳ್ಳಬಹುದು. ವಿಟಮಿನ್ ಕೊರತೆಯಿಂದ ನಾಲಗೆ ಕೆಂಪಾಗಬಹುದು.

ಆತಂಕ

ಆತಂಕ

ಕೆಲವೊಂದು ಸಲ ಆತಂಕದಿಂದ ನಾಲಗೆ ವಿಸ್ತರಣೆಯಾಗಬಹುದು ಮತ್ತು ಎರಡು ಬದಿಗಳಲ್ಲಿ ಸಣ್ಣ ಕಲೆಗಳು ಕಾಣಿಸಿಕೊಳ್ಳಬಹುದು.ಒತ್ತಡ ಮತ್ತು ಆತಂಕವು ನಿಮ್ಮ ದೇಹದ ಮೇಲೆ ಪರಿಣಾಮ ಬೀರಿದಾಗ ನಾಲಗೆಯು ವಿಸ್ತಾರವಾಗುವುದು.

ಅಲರ್ಜಿ

ಅಲರ್ಜಿ

ಅಲರ್ಜಿಯಿಂದ ನಾಲಗೆಯು ಊದಿಕೊಳ್ಳಬಹುದು ಅಥವಾ ದೊಡ್ಡದಾಗಬಹುದು. ಆಹಾರ, ಔಷಧಿ ಅಥವಾ ಕೀಟಗಳು ಕಡಿದಾಗ ಹೀಗೆ ಆಗಬಹುದು.

ಔಷಧಿ

ಔಷಧಿ

ಕೆಲವೊಂದು ಔಷಧಿಗಳು ಅಡ್ಡಪರಿಣಾಮ ಬೀರಬಹುದು. ಇದರಿಂದ ನಾಲಗೆಯು ಊದಿಕೊಂಡು ಎರಡೂ ಬದಿಗಳಲ್ಲಿ ಕಪ್ಪು ಕಲೆಗಳನ್ನು ಉಂಟು ಮಾಡಹುದು.

ಅನುವಂಶೀಯ ಮೈಕ್ರೋಗ್ಲೋಸಿಯಾ

ಅನುವಂಶೀಯ ಮೈಕ್ರೋಗ್ಲೋಸಿಯಾ

ಇದರಿಂದಾಗಿ ನಾಲಗೆಯು ದೊಡ್ಡದಾಗಬಹುದು. ಇತರ ಹಲವಾರು ಲಕ್ಷಣಗಳು ಕೂಡ ಕಾಣಿಸಿಕೊಳ್ಳಬಹುದು.

 

English summary

Your Tongue Can Tell A Lot About Your Health Condition!

This rippled effect along the edge of the tongue getting formed happens due to the swollen tongue getting pressed against your teeth. This condition is known as wavy tongue, crenated tongue, pie crusttongue or crenulated tongue. If the tongue becomes enlarged, it will push against the surrounding teeth, thus creating a scalloping effect. Depending on its severity, you may have pronounced scalloping.
Please Wait while comments are loading...
Subscribe Newsletter