ಬಿಸಿ ಆಹಾರ ಸೇವಿಸಿ ನಾಲಗೆ ಸುಟ್ಟುಕೊಂಡ್ರಾ..? ಇಲ್ಲಿದೆ ಪರಿಹಾರ

By: Su.Ra
Subscribe to Boldsky

ಬಿಸಿಬಿಸಿಯಾದ ಅಡುಗೆ ಯಾವಾಗ್ಲೂ ಟೇಸ್ಟಿ.. ಆದ್ರೆ ಬಿಸಿಬಿಸಿಯಾದ ಅಡುಗೆ ಊಟ ಮಾಡುವಾಗ ಒಮ್ಮೆಯಾದ್ರೂ ಬಾಯಿ ಸುಟ್ಟುಕೊಂಡ ಅನುಭವ ಆಗೇ ಆಗುತ್ತೆ. ಬಾಯಿ ಸುಟ್ಕೊಂಡು ಆಹ್..ಊಹ್‌ ಅಂತ ನಾಲಗೆ ಊದಿಕೊಂಡಿದ್ದು, ಮತ್ತೆ ಊಟ ತಿನ್ನಬೇಕು ಅಂದ್ರೆ ಪರದಾಡೋದು ಮನುಷ್ಯನಾಗಿ ಹುಟ್ಟಿದ ಮೇಲೆ ಒಮ್ಮೆಯಾದ್ರೂ ಆಗುವ ಅನುಭವ.. ಬಟ್ ಹೀಗೆ ಬಾಯಿ ಸುಟ್ಕೊಂಡಾಗ ಏನು ಮಾಡ್ಬೇಕು ಗೊತ್ತಾ?

ನೀವು ಅಂದುಕೊಂಡಿರಬಹುದು ಈ ರೀತಿ ನಾಲಗೆ ಸುಟ್ಟುಕೊಳ್ಳೋದು ಸಾಮಾನ್ಯ ಸಮಸ್ಯೆ ಇದಕ್ಕೆಲ್ಲ ಡಾಕ್ಟರ್ ಬೇಡ ಅಂತ. ಆದ್ರೆ ಕೆಲವರಿಗೆ ಹೀಗೆ ಬಾಯಿ ಸುಟ್ಟುಕೊಂಡ ತಿಂಗಳುಗಳ ನಂತ್ರವೂ ಕೂಡ ಸಫರ್‌ ಮಾಡಿರೋರಿದ್ದಾರೆ. ಬಾಯಿ ಒಣಗೋದು,ಏನೇ ತಿಂದ್ರೂ ಹುಳಿಹುಳಿ ಅನ್ನಿಸೋದು, ತಾಮ್ರ ತಿಂದಂತ ಅನುಭವವಾಗೋದು,ಕೆಲವೊಮ್ಮೆ ಏನೂ ಟೇಸ್ಟ್‌ ಇಲ್ಲ ಅಂತ ಅನ್ನಿಸುವ ಅನುಭವ ಕೂಡ ಆಗ್ಬಹುದು. ಅಷ್ಟೇ ಅಲ್ಲ ಕೆಲವರಿಗೆ ಅತಿಯಾಗಿ ಬಾಯಾರಿಕೆ ಆಗುವುದೂ ಕೂಡ ಉಂಟು. ಬಟ್ ಇದೆಲ್ಲದಕ್ಕೂ ನೀವು ಹಿಂದೊಮ್ಮೆ ಬಿಸಿಯಾದ ಆಹಾರ ಸೇವಿಸೋಕೆ ಹೋಗಿ ಮಾಡಿಕೊಂಡ ಯಡವಟ್ಟೇ ಕಾರಣ ಅನ್ನೋದು ನಿಮ್ಗೆ ಗೊತ್ತಿರೋದೆ ಇಲ್ಲ...

ಐಸ್ ತುಂಡುಗಳನ್ನು ಬಳಸಿ

ಐಸ್ ತುಂಡುಗಳನ್ನು ಬಳಸಿ

ಸಣ್ಣದೊಂದು ಐಸ್‌ ತುಂಡನ್ನು ನಿಮ್ಮ ಫ್ರಿಡ್ಜ್‌ನಿಂದ ತೆಗೆದು, ಬಾಯಿಯಲ್ಲಿ ಇಟ್ಕೊಂಡು ಆ ಐಸ್‌ನ್ನು ಚೀಪಿ.. ಇದ್ರಿಂದ ಸುಟ್ಟುಕೊಂಡಿರುವ ನಿಮ್ಮ ನಾಲಗೆಗೆ ರಿಲ್ಯಾಕ್ಸ್ ಫೀಲ್ ಆಗುತ್ತೆ. ಅನೇಕರಿಗೆ ಈ ಐಸ್‌ ತುಂಡುಗಳನ್ನು ಬಾಯಲ್ಲಿ ಇಟ್ಕೊಳ್ಳುವ ವಿಧಾನ ಹೆಲ್ಪ್ ಮಾಡಿದೆ.

ಸಕ್ಕರೆ ತಿನ್ನಿ

ಸಕ್ಕರೆ ತಿನ್ನಿ

ಯಾವಾಗ ನಿಮ್ಗೆ ನಾಲಗೆ ಸುಟ್ಟಂತೆ ಅನ್ನಿಸ್ತೋ ಕೂಡಲೇ ಸ್ವಲ್ಪ ಸಕ್ಕರೆ ತಿನ್ನಿ. ಸಕ್ಕರೆಯೂ ಕೂಡ ಐಸ್‌ನಂತೆಯೇ ಕೂಡಲೆ ನಾಲಗೆ ಉರಿಯನ್ನು ಕಡಿಮೆ ಮಾಡಿ, ಸುಟ್ಟ ನಾಲಗೆಗೆ ರಿಲ್ಯಾಕ್ಸ್ ಫೀಲ್ ನೀಡುತ್ತೆ. ಬೇಕಿದ್ರೆ ಕಲ್ಲುಸಕ್ಕರೆಯನ್ನೂ ಕೂಡ ಬಾಯಲ್ಲಿ ಇಟ್ಕೊಂಡು ರಸ ನುಂಗಬಹುದು.

ಜೇನುತುಪ್ಪ ಸೇವಿಸಿ

ಜೇನುತುಪ್ಪ ಸೇವಿಸಿ

ನೈಸರ್ಗಿಕವಾಗಿ ದೊರಕುವ ಜೇನುತುಪ್ಪ ನೀವು ಬಾಯಿ ಸುಟ್ಟಾಗ ಸೇವಿಸ್ಬಹುದಾದ ಒಂದು ಬೆಸ್ಟ್ ರೆಮಿಡಿ. ಬಾಯಿ ಸುಟ್ಟಾಗ ಆಗುವ ಇನ್ಫೆಕ್ಷನ್ ತಡೆದು , ನಾಲಗೆಯ ಮೇಲ್ಪದರವನ್ನು ನಾರ್ಮಲ್‌ ಸ್ಥಿತಿಗೆ ತಲುಪುವಂತೆ ಮಾಡಲು ಜೇನುತುಪ್ಪ ಸಹಕಾರಿಯಾಗಿದೆ.

ಚ್ಯೂಯಿಂಗ್‌ ಗಮ್

ಚ್ಯೂಯಿಂಗ್‌ ಗಮ್

ಬಾಯಿ ಸುಟ್ಟಾಗ ಚ್ಯೂಯಿಂಗ್‌ ಗಮ್ ಜಗಿಯೋದ್ರಿಂದ ಬಾಯಲ್ಲಿ ಲಾಲಾರಸ ಅಧಿಕವಾಗುತ್ತೆ. ಬಾಯಿಯ ಡ್ರೈನೆಸ್‌ ಕಡಿಮೆಯಾಗಿ ಬಾಯಿ ಪುನಃ ರುಚಿಯ ಗ್ರಂಥಿಗಳನ್ನು ಪುನರ್‌ ಉತ್ಪಾದಿಸಿ ನಾರ್ಮಲ್‌ ಸ್ಥಿತಿಗೆ ಬರಲು ನೆರವಾಗುತ್ತೆ. ನೋವು, ಬರ್ನಿಂಗ್ ಸೆನ್ಸೇಷನ್‌ ನಿವಾರಿಸಲು ಕೂಡ ಚ್ಯೂಯಿಂಗ್‌ ಗಮ್‌ ನೆರವಾಗಲಿದೆ.

ಬೇಕಿಂಗ್ ಸೋಡಾ ನೀರಿನಿಂದ ಬಾಯಿ ಮುಕ್ಕಳಿಸಿ

ಬೇಕಿಂಗ್ ಸೋಡಾ ನೀರಿನಿಂದ ಬಾಯಿ ಮುಕ್ಕಳಿಸಿ

ಅಷ್ಟು ಸುಲಭವಲ್ಲ. ಹೇಗಪ್ಪಾ ಇದನ್ನು ಮಾಡೋದು ಅಂತ ಅನ್ನಿಸ್ಬಹುದು. ಒಂದು ಸ್ಪೂನ್‌ ಬೇಕಿಂಗ್‌ ಸೋಡಾವನ್ನು ಡಿಸ್ಟಿಲ್‌ ವಾಟರ್‌ ಜೊತೆ ಮಿಕ್ಸ್ ಮಾಡಿ ಬಾಯಿ ಮುಕ್ಕಳಿಸಿ. ಈ ಅಲ್ಕಲಿನ್‌ ಸೆಲ್ಯೂಷನ್ ನಿಮ್ಮ ಬಾಯಿಯ ಆಸಿಡಿಕ್‌ ವಾತಾವರಣವನ್ನು ನಿವಾರಿಸುತ್ತೆ. ಇದೊಂದು ಅತ್ಯಂತ ಸುಲಭ ವಿಧಾನಗಳಲ್ಲಿ ಒಂದೆನಿಸಿದೆ.

ಎಣ್ಣೆಯಿಂದಲೂ ಉರಿ ಮಾಯ

ಎಣ್ಣೆಯಿಂದಲೂ ಉರಿ ಮಾಯ

ಲ್ಯಾವೆಂಡರ್‌ ಎಣ್ಣೆಯ ಎರಡು ಹನಿಯನ್ನು ಸುಟ್ಟ ನಾಲಗೆಯ ಮೇಲ್ಬಾಗಕ್ಕೆ ಸವರಿಕೊಳ್ಳಿ,. ಇದು ನೋವು ಮತ್ತು ನಾಲಗೆಯ ಉರಿಯನ್ನು ನಿವಾರಿಸುತ್ತೆ,.

ಖಾರದ ಆಹಾರವನ್ನು ಸೇವಿಸ್ಬೇಡಿ

ಖಾರದ ಆಹಾರವನ್ನು ಸೇವಿಸ್ಬೇಡಿ

ಖಾರದ ಆಹಾರಗಳು ನಿಮ್ಮ ಉರಿಯುವ ನಾಲಗೆಯನ್ನು ಮತ್ತಷ್ಟು ಉರಿಯುವಂತೆ ಮಾಡುತ್ತೆ. ಈಗಾಗಲೇ ಸುಟ್ಟು ಉರಿಯುವ ನಾಲಗೆಗೆ ಸ್ಪೈಸಿ ಫುಡ್ ಇನ್ನಷ್ಟು ಸಮಸ್ಯೆಯನ್ನು ನೀಡುತ್ತೆ. ಬರ್ನಿಂಗ್‌ ಸೆನ್ಸೆಷನ್‌ ನಿವಾರಣೆಯಾಗುವವರೆಗೆ ಸ್ಪೈಸಿ ಫುಡ್‌ಗೆ ಗುಡ್‌ಬೈ ಹೇಳಿ.

ಹಿತವಾದ, ತಣ್ಣನೆಯ ಜ್ಯೂಸ್‌ ಕುಡಿಯಿರಿ

ಹಿತವಾದ, ತಣ್ಣನೆಯ ಜ್ಯೂಸ್‌ ಕುಡಿಯಿರಿ

ನಾಲಗೆ ಸುಟ್ಟ ಕೂಡಲೇ ಯಾವುದಾದ್ರೂ ಹಣ್ಣಿನ ರಸವನ್ನು ಸೇವಿಸೋದು ಒಳಿತು. ಕೂಲ್‌ ಆಗಿರುವ ಹಣ್ಣಿನ ರಸ ನಾಲಗೆಯ ಉರಿಯನ್ನು ಕಡಿಮೆ ಮಾಡಿ, ಕೇವಲ ನಾಲಗೆಗೆ ಮಾತ್ರವಲ್ಲ ಹೊಟ್ಟೆಗೂ ಹಿತವಾದ ಅನುಭವ ನೀಡುತ್ತೆ. ಆದ್ರೆ ಕಿತ್ತಳೆ ಮತ್ತು ನಿಂಬೆಯ ಜ್ಯೂಸ್‌ ಕುಡಿಯದೇ ಇರೋದು ಒಳಿತು..

ಗ್ಲಿಸರಿನ್ ಅಪ್ಲೈ ಮಾಡಿ

ಗ್ಲಿಸರಿನ್ ಅಪ್ಲೈ ಮಾಡಿ

ಕಹಿ ಆಹಾರ ಪದಾರ್ಥಗಳನ್ನು ಬಾಯಿ ಸುಟ್ಟಾಗ ಸೇವಿಸಲೇಬೇಡಿ.. ನಾಲಗೆ ನಾರ್ಮಲ್ ಆಗಿದ್ದಾಗಲೇ ಕಹಿಯನ್ನು ಸೇವಿಸಲು ಸಾಧ್ಯವಿಲ್ಲ. ಇನ್ನು ಸುಟ್ಟಾಗ ಕಹಿ ಆಹಾರ ಪದಾರ್ಥಗಳು ಮತ್ತಷ್ಟು ಇರಿಟೇಷನ್‌ ಉಂಟು ಮಾಡುತ್ತೆ. ಬದಲಾಗಿ ನಾಲಗೆ ಸುಟ್ಟ ಭಾಗಕ್ಕೆ ಗ್ಲಿಸರಿನ್ ಅಪ್ಲೈ ಮಾಡಿ. ಬಟ್ ಯಾವ ಗ್ಲಿಸರಿನ್ ಅನ್ನೋದ್ರ ಬಗ್ಗೆ ನಿಮ್ಗೆ ಮಾಹಿತಿ ಸರಿಯಾಗಿರಬೇಕು. ಎಲ್ಲಾ ಗ್ಲಿಸರಿನ್‌ಗಳು ನಾಲಗೆಗೆ ಸವರಿಕೊಳ್ಳಲು ಸೂಕ್ತವಲ್ಲ. ಈ ಬಗ್ಗೆ ವೈದ್ಯರ ಬಳಿ ಮಾಹಿತ ಕೇಳಿ ಪಡೆದುಕೊಳ್ಳಿ.

 
English summary

How To Cure Your Burnt Tongue In Natural Way

It is quite common to get a burnt tongue accidentally in the excitement of tasting your favorite delicacy. You, too, might have had a burnt tongue with a gulp of hot coffee. If you had searching remedies on how to heal a burnt tongue, here we give you six super effective home-made tips from grandma’s kitchen that may cure a burnt tongue.
Please Wait while comments are loading...
Subscribe Newsletter