For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಮೊಸರು ಸೇವನೆ ಆರೋಗ್ಯಕ್ಕೆ ಒಳ್ಳೆಯದು....

ಮೊಸರನ್ನು ಚಳಿಗಾಲದಲ್ಲಿ ಸೇವಿಸಬಾರದು ಎಂದು ಹೆಚ್ಚಿನವರು ಹೇಳುತ್ತಾರೆ. ಯಾಕೆಂದರೆ ಇದು ದೇಹಕ್ಕೆ ತಂಪನ್ನು ನೀಡುತ್ತದೆ ಎನ್ನುವ ಕಾರಣಕ್ಕಾಗಿ. ಆದರೆ ಹಿತಮಿತವಾಗಿ ಮೊಸರನ್ನು ಚಳಿಗಾಲದಲ್ಲಿ ಸೇವಿಸಿದರೆ ಯಾವುದೇ ಅಡ್ಡಪರಿಣಾಮಗಳು ಇಲ್ಲ.

By Deepu
|

ದೇಹದ ಆರೋಗ್ಯಕ್ಕೆ ಒಳ್ಳೆದೆನಿಸುವ ಯಾವುದೇ ವಸ್ತುವಾಗಲಿ ಅದರ ಬಗ್ಗೆ ಎರಡು ಅಭಿಪ್ರಾಯಗಳು ಇದ್ದೇ ಇರುತ್ತದೆ. ತರಕಾರಿಗಳು, ಹಣ್ಣುಗಳು ಹೀಗೆ ಏನೇ ಸೇವಿಸಲು ಮುಂದಾದರೂ ಅದರ ಬಗ್ಗೆ ಎರಡು ಅಭಿಪ್ರಾಯಗಳಿರುತ್ತದೆ. ಒಂದು ಪರ ಹಾಗೂ ಇನ್ನೊಂದು ವಿರೋಧ. ಒಂದು ಗುಂಪಿನವರು ಇದು ದೇಹಕ್ಕೆ ಒಳ್ಳೆಯದು ಎಂದು ಹೇಳಿದರೆ ಮತ್ತೆ ಕೆಲವರು ಇದನ್ನು ಬೆಳಿಗ್ಗೆ ಮಾತ್ರ ಸೇವಿಸಬೇಕು ಎನ್ನುತ್ತಾರೆ. ಅದೇ ರೀತಿ ಮೊಸರು ಕೂಡ... ಮೊಸರಿನ ಡಯಟ್ ನಿಂದ ಸ್ಲಿಮ್ ಆಗೋದು ಸುಲಭ

ಮೊಸರನ್ನು ಚಳಿಗಾಲದಲ್ಲಿ ಸೇವಿಸಬಾರದು ಎಂದು ಹೆಚ್ಚಿನವರು ಹೇಳುತ್ತಾರೆ. ಯಾಕೆಂದರೆ ಇದು ದೇಹಕ್ಕೆ ತಂಪನ್ನು ನೀಡುತ್ತದೆ ಎನ್ನುವ ಕಾರಣಕ್ಕಾಗಿ. ಆದರೆ ಮೊಸರನ್ನು ಚಳಿಗಾಲದಲ್ಲಿ ಸೇವಿಸಿದರೆ ಯಾವುದೇ ಅಡ್ಡಪರಿಣಾಮಗಳು ಇಲ್ಲ. ಪ್ರತೀ ದಿನ ಒಂದು ಸಣ್ಣ ಪಿಂಗಾಣಿ (ಬೌಲ್) ಮೊಸರನ್ನು ಸೇವಿಸಬಹುದು, ಆದರೆ ನೆನಪಿರಲಿ, ತುಂಬಾ ಚಳಿವಿದ್ದಾಗಿ ಅತಿಯಾದ ಮೊಸರು ಸೇವಿಸಬೇಡಿ.... ಮನೆಯಲ್ಲೇ ಸಿದ್ಧಪಡಿಸಿದ ಮೊಸರಿನ 12 ಅದ್ಭುತ ಕಮಾಲುಗಳು

ಮೊಸರಲ್ಲಿ ಹಲವಾರು ರೀತಿಯ ವಿಟಮಿನ್, ಖನಿಜಾಂಶಗಳು ಮತ್ತು ಒಳ್ಳೆಯ ಬ್ಯಾಕ್ಟೀರಿಯಾ ಇದೆ. ಇದು ಹೊಟ್ಟೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಪ್ರತೀ ಊಟದೊಂದಿಗೆ ಮೊಸರನ್ನು ಯಾಕೆ ತಿನ್ನಬೇಕು. ಅದರಲ್ಲೂ ಚಳಿಗಾಲದಲ್ಲಿ ಇದನ್ನು ಯಾಕೆ ತಿನ್ನಬೇಕು. ಅದರ ಲಾಭಗಳು ಏನು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ... ಮುಂದೆ ಓದಿ...


ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ.....

ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ.....

ಮೊಸರಿನಲ್ಲಿ ದೇಹಕ್ಕೆ ಮಾರಕವಾದ ಯಾವುದೇ ಅಂಶವಿಲ್ಲ. ಇದರಲ್ಲಿರುವ ಸಕಲ ಅಂಶಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿವೆ. ವಿಶೇಷವಾಗಿ ರಕ್ತದಲ್ಲಿರುವ ಬಿಳಿರಕ್ತಕಣಗಳನ್ನು ಹೆಚ್ಚಿಸಲು ಮತ್ತು ಪ್ರತಿಕಣದ ಸಾಮರ್ಥ್ಯ ಹೆಚ್ಚಿಸಲು ಮೊಸರು ನೆರವಾಗುತ್ತದೆ. ಈ ಕಣಗಳು ರೋಗಕಾರಕ ಕಣಗಳನ್ನು ಸದೆಬಡಿದು ದೇಹದ ಆರೋಗ್ಯವನ್ನು ಕಾಪಾಡುತ್ತದೆ.

ಹೃದಯಕ್ಕೆ ಸಂಬಂಧಿಸಿದ ಆಹಾರ....

ಹೃದಯಕ್ಕೆ ಸಂಬಂಧಿಸಿದ ಆಹಾರ....

ಮೊಸರು ಹೃದಯಕ್ಕೆ ಸಂಬಂಧಿಸಿದ ಆಹಾರವಾಗಿರುತ್ತದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ನಮ್ಮ ದೇಹದ ಅಂಗಾಂಗಗಳ ಮೇಲೆ ಒಳ್ಳೆಯ ಪ್ರಯೋಜನವುಂಟಾಗುತ್ತದೆ. ಮೊಸರು ಅಧಿಕ ರಕ್ತದೊತ್ತಡವನ್ನು ತಡೆಯುತ್ತದೆ ಮತ್ತು ಕ್ಯಾರೊಟಿಡ್ ರಕ್ತನಾಳಗಳನ್ನು ಗಟ್ಟಿಗೊಳಿಸುವ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

ಒಳ್ಳೆಯ ಜೀರ್ಣಕ್ರಿಯೆಗೆ

ಒಳ್ಳೆಯ ಜೀರ್ಣಕ್ರಿಯೆಗೆ

ಮೊಸರು ದೇಹದಲ್ಲಿ ಪಿಎಚ್ ಸಮತೋಲನವನ್ನು ಕಾಪಾಡಿ ಅಸಿಡಿಟಿಯನ್ನು ತಡೆಯುತ್ತದೆ. ಇದರಿಂದ ಜೀರ್ಣಕ್ರಿಯೆಯು ಸರಾಗವಾಗುವುದು.

ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಹೇರಳವಾಗಿದೆ....

ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಹೇರಳವಾಗಿದೆ....

ಮೊಸರಿನಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಹೇರಳವಾಗಿರುತ್ತದೆ. ಇವು ನಿಮ್ಮ ಮೂಳೆಗಳನ್ನು ದೃಢಗೊಳಿಸಲು ನೆರವಾಗುತ್ತವೆ. ಒಂದು ವೇಳೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿದ್ದರೆ ಮೊಸರಿನಿಂದ ಈ ಕೊರತೆ ನೀಗುತ್ತದೆ. ಇನ್ನು ಮೊಸರನ್ನು ಹಾಗೆ ತಿನ್ನಲು ಇಷ್ಟಪಡದವರು ಇದನ್ನು ಬೇರೆ ವಿಧಾನದಿಂದ ತಿನ್ನಬಹುದಾಗಿದೆ. ಅದು ಯಾವುದೆಂದು ತಿಳಿಯಿರಿ.

ಮೊಸರನ್ನ

ಮೊಸರನ್ನ

ಬೇಯಿಸಿದ ಅನ್ನವನ್ನು ತೆಗೆದುಕೊಂಡು ಅದಕ್ಕೆ ಮೊಸರನ್ನು ಹಾಕಿ. ಸ್ವಲ್ಪ ಉಪ್ಪು ಮತ್ತು ಕರಿಮೆಣಸಿನ ಹುಡಿ ಹಾಕಿದರೆ ರುಚಿ ಹೆಚ್ಚುವುದು. ಇದಕ್ಕೆ ದಾಳಿಂಬೆ ಹಾಕಿಕೊಂಡು ತಿನ್ನಬಹುದು. ಹಸಿ ಕ್ಯಾರೆಟ್ ಅನ್ನು ತುರಿದು ಇದಕ್ಕೆ ಸೇರಿಸಿಕೊಳ್ಳಬಹುದು. ಜೋಳ ದಾಳಿಂಬೆ ಮೊಸರನ್ನ

ಮೊಸರು ಮತ್ತು ಸಕ್ಕರೆ

ಮೊಸರು ಮತ್ತು ಸಕ್ಕರೆ

ಮೊಸರಿಗೆ ಒಂದು ಚಮಚ ಸಕ್ಕರೆ ಹಾಕಿಕೊಂಡು ಅದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಬಳಿಕ ಸೇವಿಸಿ. ಸಿಹಿ ಇಷ್ಟಪಡುವವರಿಗೆ ಇದು ತುಂಬಾ ಒಳ್ಳೆಯದು.

ಹಣ್ಣುಗಳನ್ನು ಹಾಕಿ

ಹಣ್ಣುಗಳನ್ನು ಹಾಕಿ

ಹಲವಾರು ಬಗೆಯ ಹಣ್ಣುಗಳನ್ನು ಕತ್ತರಿಸಿಕೊಂಡು ಅದಕ್ಕೆ ಮೊಸರು ಹಾಕಿ ತಿಂದರೆ ಎಲ್ಲಾ ಪೋಷಕಾಂಶಗಳು ನಿಮಗೆ ಲಭ್ಯವಾಗುವುದು. ಟೊಮೆಟೋ, ಈರುಳ್ಳಿ, ಸೌತೆಕಾಯಿ, ಹಸಿಮೆಣಸು ಹಾಕಿಕೊಂಡು ಅದಕ್ಕೆ ಸ್ವಲ್ಪ ಉಪ್ಪುಹಾಕಿ ಮೊಸರಿನೊಂದಿಗೆ ಬೆರೆಸಿ ತಿನ್ನಬಹುದು.

English summary

Yogurt (Curd) - A Must-Have During Winters; Here Is Why

Yogurt is a must-have item during the winter season. It is loaded with a lot of health benefits. Yogurt is a storehouse of vitamins, potassium, magnesium and protein. Also the best ingredient in yogurt is lactobacillus, a probiotic and a source of good bacteria that helps in warding off the harmful bacteria and infections that harm the body.
X
Desktop Bottom Promotion