ಅಡುಗೆಮನೆಯ ರಾಣಿ 'ಅರಿಶಿನ' ಆರೋಗ್ಯದ ಸಂಜೀವಿನಿ

By: manu
Subscribe to Boldsky

ಅರಿಶಿನ ಕೇವಲ ಅಡುಗೆಗೆ ರುಚಿ ಮತ್ತು ಬಣ್ಣ ನೀಡುವ ಸಾಂಬಾರ ವಸ್ತುವಲ್ಲ, ಇದೊಂದು ಅದ್ಭುತವಾದ ಔಷಧೀಯ ಮತ್ತು ಸೌಂದರ್ಯವರ್ಧಕ ಗುಣಗಳಿರುವ ಮೂಲಿಕೆ. ವಿಶೇಷವಾಗಿ ಹೃದಯ ಸಂಬಂಧಿ ತೊಂದರೆಗಳಿಗೆ ಅರಿಶಿನ ನೀಡುವ ನೆರವು ಹೃದಯದ ತೊಂದರೆಗಳಿಗಾಗಿ ವೈದ್ಯರು ಸೂಚಿಸುವ ವ್ಯಾಯಾಮಗಳ ಮೂಲಕ ಪಡೆಯಬಹುದಾದ ಪ್ರಯೋಜನಕ್ಕೆ ಸರಿಸಮನಾಗಿದೆ. ಸರ್ವಗುಣ ಸಂಪನ್ನ ಅರಿಶಿನ ಎಂಬ ಸಂಜೀವಿನಿ

ಅರಿಶಿನದ ಸೇವನೆಯಿಂದ ಹೃದಯ ಸ್ತಂಭನವಾಗುವ ಸಾಧ್ಯತೆಯನ್ನು 41%ರಷ್ಟು ಕಡಿಮೆಗೊಳಿಸಬಹುದು ಎಂದು ಒಂದು ವೈದ್ಯಕೀಯ ಸಮೀಕ್ಷೆ ತಿಳಿಸುತ್ತದೆ. ಇದರಲ್ಲಿರುವ ಕುರ್ಕುಮಾ (curcuma) ಎಂಬ ಪೋಷಕಾಂಶವೇ ಹೃದಯದ ಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ.   ಚಿನ್ನದ ದೇವತೆ 'ಅರಿಶಿನ'ದ ಚಿನ್ನದಂತಹ ಗುಣಗಳು...

ಈ ಪೋಷಕಾಂಶವನ್ನು ಪಡೆಯಲು ಹೆಚ್ಚು ಪ್ರಮಾಣವೇನೂ ಬೇಕಾಗಿಲ್ಲ, ನಮ್ಮ ಅಡುಗೆಗಳಲ್ಲಿ ಚಿಟಿಕೆಯಷ್ಟೇ ಅರಿಶಿನದ ಪುಡಿ ಹಾಕಿದರೂ ಸಾಕು, ಆರೋಗ್ಯದಲ್ಲಿ ಹಲವಾರು ಬದಲಾವಣೆಗಳನ್ನು ಕಾಣಬಹುದು. ವಿಶೇಷವಾಗಿ ಹೃದಯಕ್ಕೆ ವ್ಯಾಯಾಮದಷ್ಟೇ ಪ್ರಯೋಜನವನ್ನು ಅರಿಶಿನದ ಸೇವನೆಯಿಂದ ಹೇಗೆ ಪಡೆಯಬಹುದು ಎಂಬುದನ್ನು ನೋಡೋಣ....

ವಾಸ್ತವಾಂಶ #1

ವಾಸ್ತವಾಂಶ #1

ವಿವಿಧ ವಯೋಮಾನಕ್ಕೆ ಸೇರಿದ ಸುಮಾರು ನೂರು ಮಹಿಳೆಯರ ಆರೋಗ್ಯದ ಅಂಕಿ ಅಂಶಗಳನ್ನು ಒಂದು ಸಮೀಕ್ಷೆಯಲ್ಲಿ ಪರಿಗಣಿಸಲಾಗಿತ್ತು. ಇವರನ್ನು ಮೂರು ಗುಂಪುಗಳಲ್ಲಿ ವಿಂಗಡಿಸಲಾಗಿತ್ತು. ಮೊದಲ ಗುಂಪಿನವರಿಗೆ ನಿತ್ಯವೂ ತಮ್ಮ ಆಹಾರದಲ್ಲಿ ಅರಿಶಿನವನ್ನು ಉಪಯೋಗಿಸುತ್ತಾ ಬರುವಂತೆ ಸೂಚಿಸಲಾಯಿತು. ಎರಡನೆಯ ಗುಂಪಿನವರಿಗೆ ಅರಿಶಿನದ ಸೇವನೆ ಇಲ್ಲದೇ ಕೇವಲ ವ್ಯಾಯಾಮಗಳನ್ನು ಮಾಡುವಂತೆ ಸೂಚಿಸಲಾಯಿತು. ಮೂರನೆಯ ಗುಂಪಿನವರು ಅರಿಶಿನವನ್ನೂ ಸೇವಿಸದೇ, ವ್ಯಾಯಾಮವನ್ನೂ ಮಾಡದೇ ಇರುವಂತೆ ಸೂಚಿಸಲಾಯಿತು.

ವಾಸ್ತವಾಂಶ #2

ವಾಸ್ತವಾಂಶ #2

ಸುಮಾರು ಎರಡು ತಿಂಗಳ ಬಳಿಕ ಮೊದಲ ಎರಡು ಗುಂಪಿನ ಮಹಿಳೆಯರ ಹೃದಯದ ಕ್ಷಮತೆ ಮತ್ತು ಕವಾಟಗಳ ಕಾರ್ಯಕ್ಷಮತೆಯನ್ನು ಅಳೆಯಲಾಯಿತು. ಮೊದಲ ಎರಡು ಗುಂಪಿಗೆ ಸೇರಿದ ಮಹಿಳೆಯರ ಆರೋಗ್ಯದಲ್ಲಿ ಉತ್ತಮವಾದ ಬದಲಾವಣೆ ಕಂಡುಬಂದಿತ್ತು. ಆದರೆ ಮೂರನೆಯ ಗುಂಪಿನ ಮಹಿಳೆಯರ ಆರೋಗ್ಯದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿರಲಿಲ್ಲ.

ವಾಸ್ತವಾಂಶ #3

ವಾಸ್ತವಾಂಶ #3

ಮುಂದಿನ ತಿಂಗಳಿನಿಂದ ಎರಡನೆಯ ಗುಂಪಿನವರಿಗೆ ವ್ಯಾಯಾಮವನ್ನು ಕೊಂಚವೇ ಹೆಚ್ಚಿಸಲಾಯಿತು. ಇದರಲ್ಲಿ ಏರೋಬಿಕ್ ಮತ್ತು ಸೈಕ್ಲಿಂಗ್ ಹಾಗೂ ನಡಿಗೆಯನ್ನು ಹೆಚ್ಚುವರಿಯಾಗಿ ಮಾಡಬೇಕೆಂದು ಸೂಚಿಸಲಾಯ್ತು.

ವಾಸ್ತವಾಂಶ #4

ವಾಸ್ತವಾಂಶ #4

ಮೊದಲ ಗುಂಪಿನ ಮಹಿಳೆಯರಿಗೆ ತಮ್ಮ ಆಹಾರದಲ್ಲಿ ಕಡ್ಡಾಯವಾಗಿ ದಿನಕ್ಕೆ 150mg ಅರಿಶಿನವನ್ನು ಸೇವಿಸಲೇಬೇಕೆಂದು ಸೂಚಿಸಲಾಯಿತು.

ವಾಸ್ತವಾಂಶ #5

ವಾಸ್ತವಾಂಶ #5

ಅರವತ್ತು ದಿನಗಳ ಬಳಿಕ ಮತ್ತೊಮ್ಮೆ ಈ ಮಹಿಳೆಯರ ಆರೋಗ್ಯವನ್ನು ಪರಿಶೀಲಿಸಲಾಯ್ತು. ಇದರಲ್ಲಿ ಹೃದಯದ ಒಟ್ಟಾರೆ ಆರೋಗ್ಯ ಹಾಗೂ ರಕ್ತನಾಳಗಳ ಕಾರ್ಯಕ್ಷಮತೆಯನ್ನು ಪ್ರಮುಖವಾಗಿ ಪರಿಗಣಿಸಿ ಸೂಕ್ಷ್ಮವಾಗಿ ವಿಶ್ಲೇಷಿಸಲಾಯಿತು. ಫಲಿತಾಂಶದಲ್ಲಿ ಮೊದಲ ಮತ್ತು ಎರಡನೆಯ ಗುಂಪಿನವರು ಅತ್ಯುತ್ತಮ ಆರೋಗ್ಯವನ್ನು ಹೊಂದಿರುವುದು ಕಂಡುಬಂದಿತ್ತು. ಅದರೆ ಮೂರನೆಯ ಗುಂಪಿನವರ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿರಲಿಲ್ಲ. ಇದರಿಂದ ಏನು ಗೊತ್ತಾಗುತ್ತದೆ ಎಂದರೆ ಉತ್ತಮ ಆರೋಗ್ಯಕ್ಕೆ ಅರಿಶಿನದ ಸೇವನೆ ಹಾಗೂ ನಿತ್ಯದ ವ್ಯಾಯಾಮ ಅಗತ್ಯ.

 
English summary

Why Turmeric Is As Good As Exercise

Turmeric seems to offer the benefits that cardio exercises offer. That is why some health experts say that eating turmeric is as good as working out. Turmeric is said to reduce the risk of suffering heart attack by 41%. It contains a compound known as curcuma which is said to improve the function of your heart.
Story first published: Thursday, March 9, 2017, 7:04 [IST]
Please Wait while comments are loading...
Subscribe Newsletter