ಅಕಸ್ಮಾತ್ ಗಾಯವಾದರೆ ನೋವು ಕಡಿಮೆಯಾಗಲು ಐಸ್ ಇರಿಸಬೇಡಿ!

Posted By: Arshad
Subscribe to Boldsky

ಗಾಯವಾದರೆ, ಪೆಟ್ಟಾದರೆ, ಜಜ್ಜಿದರೆ ಆ ಭಾಗದ ಮೇಲೆ ತಕ್ಷಣವೇ ಐಸ್ ತುಂಡುಗಳನ್ನಿರಿಸಿ ನೋವನ್ನು ಕಡಿಮೆ ಮಾಡುವುದು ಇದುವರೆಗೆ ಪ್ರಥಮ ಚಿಕಿತ್ಸೆಯಲ್ಲಿ ಹೇಳಿ ಕೊಡುತ್ತಿದ್ದ ಪಾಠವೇ ಆಗಿತ್ತು. ಆದರೆ ಇತ್ತೀಚಿನ ಸಂಶೋಧನೆಯಲ್ಲಿ ಕಂಡುಕೊಂಡಂತೆ ಈ ವಿಧಾನ ತಪ್ಪು ಎಂದು ತಿಳಿಸಲಾಗಿದೆ.

ಐಸ್ ತುಂಡು ಶರೀರದ ಆ ಭಾಗದಲ್ಲಿ ನರಗಳನ್ನು ಮರಗಟ್ಟಿಸಿ ಮೆದುಳಿಗೆ ಹೋಗುವ ಸಂಕೇತಗಳನ್ನು ಹೋಗದಂತೆ ಮಾಡುವುದೇ ನೋವು ಅರಿವಾಗದಿರುವ ಗುಟ್ಟು. ಆದರೆ ಮರಗಟ್ಟಿರುವ ನರಗಳಿಂದ ಗಾಯವನ್ನು ಗುಣಪಡಿಸಲೂ ಸಾಧ್ಯವಾಗದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಗಾಯ ಬೇಗನೆ ಗುಣವಾಗಲು ಈ ಆಹಾರ ಸೇವಿಸಿ

ತಾತ್ಕಾಲಿಕವಾಗಿ ಮರಗಟ್ಟಿರುವ ನರಗಳಿಂದ ಉರಿಯೂತ ಮತ್ತು ಬಾವು ಕಡಿಮೆಯಾಗುತ್ತದೆ ಹಾಗೂ ಮಂಜಿನ ಪ್ರಭಾವ ಇರುವವರೆಗೂ ಇಲ್ಲಿ ರಕ್ತಪ್ರವಾಹವಾಗದ ಕಾರಣ ನೋವಿನ ಅನುಭವವೂ ಆಗುವುದಿಲ್ಲ. ಪ್ರಥಮ ಚಿಕಿತ್ಸೆಯ ಪಾಠದಲ್ಲಿ ಹೇಳಿಕೊಡುವ ಪಾಠದ ಪ್ರಕಾರ ಗಾಯಾಳುವಿಗೆ ವೈದ್ಯಕೀಯ ನೆರವು ಬರುವವರೆಗೂ ಗಾಯಗಳಿಂದ ಇನ್ನಷ್ಟು ರಕ್ತ ಹರಿದು ಪರಿಸ್ಥಿತಿ ಗಂಭೀರ ರೂಪ ತಾಳಲು ತಡೆಯಲು ಗಾಯದ ಮೇಲೆ ಐಸ್ ತುಂಡನ್ನಿರಿಸಬೇಕು. 

ಗಾಯ ಮಾಸಿದರೂ ಕಾಡುವ ಹಳೆ ಕಲೆಗಳು! ಇಲ್ಲಿದೆ ಮನೆಮದ್ದು

ಈ ವಿಧಾನದಿಂದ ರಕ್ತಸ್ರಾವ ನಿಲ್ಲಿಸಬಹುದು ಹಾಗೂ ನೋವು ಕಡಿಮೆ ಮಾಡಬಹುದಾದರೂ ಇದರಲ್ಲಿ ಕೆಲವು ತೊಡಕುಗಳಿವೆ. ತಜ್ಞರು ಈ ವಿಧಾನ ಗಾಯವನ್ನು ಗುಣಪಡಿಸಲು ಅತ್ಯುತ್ತಮವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಏಕೆ ಹೀಗೆ ಹೇಳುತ್ತಿದ್ದಾರೆ? ನೋಡೋಣ....

ಗಾಯ ಗುಣಪಡಿಸುವ ಕ್ರಿಯೆಗೆ ಮಂಜು ಅಡ್ಡಗಾಲು ಹಾಕುತ್ತದೆ

ಗಾಯ ಗುಣಪಡಿಸುವ ಕ್ರಿಯೆಗೆ ಮಂಜು ಅಡ್ಡಗಾಲು ಹಾಕುತ್ತದೆ

ನಮ್ಮ ದೇಹದ ಒಂದು ಅದ್ಭುತ ಶಕ್ತಿ ಎಂದರೆ ಗಾಯಗಳನ್ನು ರಿಪೇರಿ ಮಾಡಿಕೊಳ್ಳುವ ಶಕ್ತಿ. ಇದಕ್ಕೆ ರಕ್ತಸಂಚಾರ ಅಗತ್ಯ. ಐಸ್ ಇರಿಸುವ ಮೂಲಕ ನೋವು ಕಡಿಮೆಯಾದಂತೆ ಅನ್ನಿಸಿದರೂ ದೇಹದ ರಿಪೇರಿ ಮಾಡಿಕೊಳ್ಳುವ ಶಕ್ತಿಗೆ ಅವಕಾಶವನ್ನೇ ನೀಡದೇ ನರಗಳನ್ನು ಮರಗಟ್ಟಿಸಿಬಿಡುತ್ತದೆ. ಅಲ್ಲದೇ ನೋವನ್ನು ಕೊಂಚ ಕಾಲ ಮಾತ್ರವೇ ಕಡಿಮೆ ಮಾಡುತ್ತದೆ.

ಉರಿಯೂತ ಎಷ್ಟು ಕೆಟ್ಟದ್ದು?

ಉರಿಯೂತ ಎಷ್ಟು ಕೆಟ್ಟದ್ದು?

ನಾವೆಲ್ಲರೂ ಉರಿಯೂತವನ್ನು ಋಣಾತ್ಮಕವಾಗಿಯೇ ಕಾಣುತ್ತೇವೆ. ವಾಸ್ತವವಾಗಿ ಉರಿಯೂತ ನಾವು ಅಂದುಕೊಂಡಷ್ಟು ಕೆಟ್ಟದ್ದಲ್ಲ. ಬದಲಿಗೆ ಉರಿಯೂತ ದೇಹದ ರಿಪೇರಿ ಮಾಡಿಕೊಳ್ಳುವ ಶಕ್ತಿಯ ಮೊದಲ ಕ್ರಿಯೆಯಾಗಿದೆ. ಅಂದರೆ ರಿಪೇರಿ ಮಾಡಬೇಕಾದರೆ ಮೊದಲು ಉರಿಯೂತ ಬರಲೇಬೇಕು. ಆದರೆ ಐಸ್ ತುಂಡನ್ನಿರಿಸುವ ಮೂಲಕ ಉರಿಯೂತ ಸಾಧ್ಯವಾಗದೇ ರಿಪೇರಿ ಕೆಲಸವೂ ಮುಂದೂಡಲ್ಪಡುತ್ತದೆ.

ಹಾಗಾದರೆ ದುಗ್ಧರಸಗಳ ಕೆಲಸವೇನು?

ಹಾಗಾದರೆ ದುಗ್ಧರಸಗಳ ಕೆಲಸವೇನು?

ಗಾಯಗಳನ್ನು ರಿಪೇರಿ ಮಾಡುವಲ್ಲಿ ದುಗ್ಧರಸ ( lymphatic fluid) ಸಹಾ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಐಸ್ ಈ ರಸವನ್ನೂ ಮರಗಟ್ಟಿಸುವ ಮೂಲಕ ರಿಪೇರಿ ಕೆಲಸ ಇನ್ನಷ್ಟು ಕಷ್ಟಕರವಾಗುತ್ತದೆ.

ಐಸ್ ನಿಂದ ಇನ್ನಾವ ತೊಂದರೆ ಇದೆ?

ಐಸ್ ನಿಂದ ಇನ್ನಾವ ತೊಂದರೆ ಇದೆ?

ಗಾಯಗೊಂಡ ಭಾಗ ರಿಪೇರಿಗೊಳ್ಳಬೇಕಾದರೆ ಹಲವು ಅಂಗಗಳ ಸಹಕಾರ ಅಗತ್ಯ. ವಿವಿಧ ಅಂಗಾಂಶಗಳು ನಷ್ಟಗೊಂಡ ಜೀವಕೋಶಗಳನ್ನು ಹೊಸದಾಗಿ ಹುಟ್ಟಿಸಲು ನೆರವಾಗಬೇಕು. ಆದರೆ ಮಂಜುಗಡ್ಡೆ ಈ ಸಹಕಾರವನ್ನೂ ಮರಗಟ್ಟಿಸಿ ಸ್ನಾಯುಗಳ ಚಲನೆಯನ್ನೇ ಸ್ಥಗಿತಗೊಳಿಸುತ್ತದೆ.

ಜೀವಕೋಶಗಳ ಬೆಳವಣಿಗೆಗೆ ಅಡ್ಡಗಾಲು

ಜೀವಕೋಶಗಳ ಬೆಳವಣಿಗೆಗೆ ಅಡ್ಡಗಾಲು

ಘಾಸಿಗೊಂಡ ಭಾಗ ಮತ್ತೆ ಸರಿಯಾಗಬೇಕಾದರೆ ಈ ಭಾಗದ ಜೀವಕೋಶಗಳು ಮತ್ತೊಮ್ಮೆ ಹುಟ್ಟಬೇಕು. ಆದರೆ ಮಂಜುಗಟ್ಟಿರುವ ಭಾಗದಿಂದ ಇದು ಸಾಧ್ಯವಾಗದು. ಹಾಗಾಗಿ ರಿಪೇರಿ ಕೆಲಸ ತುಂಬಾ ನಿಧಾನವಾಗುತ್ತದೆ.

ರಕ್ತ ಸಂಚಾರವೇಕೆ ಅಗತ್ಯ?

ರಕ್ತ ಸಂಚಾರವೇಕೆ ಅಗತ್ಯ?

ಯಾವಾಗ ಗಾಯವಾಯಿತೋ ಆಗ ದೇಹ ಆ ಭಾಗದ ನರಗಳನ್ನು ಸಡಿಲಗೊಳಿಸಿ ವಿಸ್ತರಿಸಲು ಅವಕಾಶ ಮಾಡಿಕೊಡುತ್ತದೆ. ತನ್ಮೂಲಕ ಹೆಚ್ಚಿನ ರಕ್ತಸಂಚಾರ ಈ ಭಾಗಕ್ಕೆ ತಲುಪಲು ಸಾಧ್ಯವಾಗುತ್ತದೆ. ರಕ್ತದ ಮೂಲಕ ಪ್ರೋಟೀನುಗಳು ಮತ್ತು ಇತರ ಅಗತ್ಯ ಪೋಷಕಾಂಶಗಳು ರಿಪೇರಿ ಕೆಲಸಕ್ಕೆ ಆಗಮಿಸುತ್ತವೆ. ಆದರೆ ಐಸ್ ಈ ಕೆಲಸವನ್ನು ಮಾಡಲು ಕೊಡದೇ ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ.

ಉರಿಯೂತ ಹೇಗೆ ನೆರವಾಗುತ್ತದೆ?

ಉರಿಯೂತ ಹೇಗೆ ನೆರವಾಗುತ್ತದೆ?

ಯಾವಾಗ ದೇಹದ ಯಾವುದೇ ಭಾಗದಲ್ಲಿ ಗಾಯ ಅಥವಾ ಆಘಾತವುಂಟಾಯಿತೋ ಆಗ ಅಲ್ಲಿ ಅಸಾಧ್ಯ ನೋವಾಗುತ್ತದೆ. ಇದು ವಾಸ್ತವವಾಗಿ ಆಘಾತದ ಬಗ್ಗೆ ಮೆದುಳಿಗೆ ನೀಡುವ ಪ್ರಥಮ ಸೂಚನೆಯಾಗಿದೆ. ತಕ್ಷಣವೇ ಆಘಾತಗೊಂಡ ಜೀವಕೋಶಗಳ ಪಕ್ಕದ ಜೀವಕೋಶಗಳು ತಕ್ಷಣವೇ ಕಾರ್ಯತತ್ಪರರಾಗಿ ರಿಪೇರಿ ಕೆಲಸವನ್ನು ಪ್ರಾರಂಭಿಸಿಬಿಡುತ್ತವೆ. ಪ್ರಮುಖವಾಗಿ ರಕ್ತದಲ್ಲಿರುವ ಪ್ಲೇಟ್ ಲೆಟ್ ಗಳು ಒಂದಕ್ಕೊಂದು ತಗುಲಿ ಇನ್ನಷ್ಟು ರಕ್ತಸ್ರಾವವಾಗದಂತೆ ಗೋಡೆಕಟ್ಟಿಬಿಡುತ್ತವೆ.

ಉರಿಯೂತ ಹೇಗೆ ನೆರವಾಗುತ್ತದೆ?

ಉರಿಯೂತ ಹೇಗೆ ನೆರವಾಗುತ್ತದೆ?

ಬಳಿಕ ಒಳಗಿನಿಂದ ನಿಧಾನವಾಗಿ ಘಾಸಿಗೊಂಡ ಜೀವಕೋಶಗಳನ್ನು ರಕ್ತದ ಮೂಲಕ ವಿಸರ್ಜಿಸಿ ಹೊಸ ಜೀವಕೋಶಗಳು ಬೆಳೆಯಲು ಪ್ರಾರಂಭಿಸುತ್ತವೆ. ಈ ಸಮಯದಲ್ಲಿ ಐಸ್ ಇರಿಸಿದರೆ ಈ ನೈಸರ್ಗಿಕ ಕಾರ್ಯಕ್ಕೆ ಅಡ್ಡಿಯಾಗುತ್ತದೆ. ತುರ್ತು ಪರಿಸ್ಥಿತಿಯಲ್ಲದೇ ಇಲ್ಲದ ಪರಿಸ್ಥಿತಿಯಲ್ಲಿ ಮಾತ್ರವೇ ಐಸ್ ಉಪಯೋಗಿಸಿ ರಕ್ತಸ್ರಾವ ನಿಲ್ಲಿಸಲು ಯತ್ನಿಸಬೇಕೇ ಹೊರತು ಇತರ ಸಂದರ್ಭಗಳಲ್ಲಿ ರಕ್ತವನ್ನು ನಿಲ್ಲಿಸಿ ತಕ್ಷಣ ವೈದ್ಯಕೀಯ ನೆರವನ್ನು ಯಾಚಿಸುವುದು ಅತ್ಯುತ್ತಮವಾದ ವಿಧಾನವಾಗಿದೆ.

For Quick Alerts
ALLOW NOTIFICATIONS
For Daily Alerts

    English summary

    Why Ice Is Bad Advice: Stop Icing Your Injuries

    How does ice actually work? Well, it restricts the circulation of blood to the affected area. This may reduce the inflammation and swelling. It also numbs the pain for some time. Though ice can be a remedy when there isn't any medical help around, it isn't the wisest thing to do. Why? What does ice do to an injury? Read on to know why ice isn't the best way to treat injuries.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more