For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಜೋಳ, ತಿಂದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು...

By Hemanth
|

ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಜೋಳದ ರೊಟ್ಟಿ ಪ್ರಮುಖ ಆಹಾರ. ಇಂದಿನ ದಿನಗಳಲ್ಲಿ ತುಂಬಾ ಜನಪ್ರಿಯವಾಗಿರುವ ಜೋಳದಿಂದ ವಿವಿಧ ರೀತಿಯ ಖಾದ್ಯ ತಯಾರಿಸಲಾಗುತ್ತದೆ ಮತ್ತು ಜೋಳವನ್ನು ಸುಟ್ಟು ಅದರಿಂದ ಪಾಪ್ ಕಾರ್ನ್ ಮಾಡಲಾಗುತ್ತದೆ.

ಅದೇ ರೀತಿ ಹಸಿ ಜೋಳದ ದಿಂಡನ್ನು ಕೆಂಡದಲ್ಲಿ ಸುಟ್ಟು ಅದಕ್ಕೆ ಹುಳಿ ಲಿಂಬೆ ಹಾಗೂ ಖಾರ ಸವರಿ ತಿಂದರೆ ಅದರ ರುಚಿಯೇ ಬೇರೆ. ಮಳೆಗಾಲದಲ್ಲಿ ಹೆಚ್ಚಾಗಿ ಜನರು ಇದನ್ನು ಇಷ್ಟಪಡುತ್ತಾರೆ. ಜೋಳ ಹೆಚ್ಚಿನವರಿಗೆ ಇಷ್ಟವಾಗುತ್ತದೆ. ಜೋಳ ಕೂಡ ಒಂದು ಧಾನ್ಯವಾಗಿರುವುದರಿಂದ ಇದನ್ನು ಹುಡಿಯ ರೂಪದಲ್ಲೂ ಬಳಸಿಕೊಳ್ಳುವರು. ಹೆಚ್ಚಿನ ರುಚಿ ಹೊಂದಿರುವ ಜೋಳದಲ್ಲಿ ವಿಟಮಿನ್, ಖನಿಜಾಂಶ, ನಾರಿನಾಂಶ ಮತ್ತು ಆರೋಗ್ಯಕ್ಕೆ ಲಾಭ ನೀಡುವಂತಹ ಇತರ ಹಲವಾರು ಅಂಶಗಳಿವೆ.

ಘಂ ಎನ್ನುವ ಮಸಾಲಾ ಕಾರ್ನ್ ಮನೇಲೆ ಮಾಡಿ

ಸಾವಯವ ಹಾಗೂ ಸಂಸ್ಕರಿಸದೆ ಇರುವಂತಹ ಜೋಳವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ, ಮೆಗ್ನಿಶಿಯಂ, ಪೊಟಾಶಿಯಂ ಮತ್ತು ವಿಟಮಿನ್ ಬಿ ಸಮೃದ್ಧವಾಗಿದೆ. ಜೋಳದಲ್ಲಿ ಕಣ್ಣು ಹಾಗೂ ತ್ವಚೆಯ ಆರೋಗ್ಯಕ್ಕೆ ಬೇಕಾಗುವಂತಹ ಝೀಕ್ಸಾಂಥಿನ್ ಮತ್ತು ಲುಟೀನ್ ಎನ್ನುವ ಎರಡು ರೀತಿಯ ಆ್ಯಂಟಿಆಕ್ಸಿಡೆಂಟ್ ಗಳು ಇವೆ.


ಎರಡು ಬಗೆಯ ಜೋಳದ ಸೂಪ್ ರೆಸಿಪಿ

ಒಳ್ಳೆಯ ನಾರಿನಾಂಶ ಹೊಂದಿರುವ ಜೋಳದಲ್ಲಿ ಸಂಕೀರ್ಣ ಕಾರ್ಬೋಹೈಡ್ರೇಟ್ಸ್ ಗಳಿವೆ. ಇದು ಶಕ್ತಿಯ ಮೂಲ. ಜೋಳವನ್ನು ಇತರ ಕೆಲವೊಂದು ಧಾನ್ಯಗಳೊಂದಿಗೆ ಆಹಾರವಾಗಿ ಬಳಸಿಕೊಳ್ಳಲಾಗುತ್ತದೆ ಮತ್ತು ಗ್ಲುಟೇನ್‌ ಹೊಂದಿರದಂತಹ ಧಾನ್ಯ. ಜೋಳದಲ್ಲಿ ಇರುವಂತಹ ಕೆಲವೊಂದು ಆರೋಗ್ಯ ಲಾಭಗಳನ್ನು ತಿಳಿದುಕೊಂಡು ಮಳೆಗಾಲದಲ್ಲಿ ಜೋಳ ಸವಿಯಿರಿ....

ಜೀರ್ಣಕ್ರಿಯೆಗೆ ಒಳ್ಳೆಯದು

ಜೀರ್ಣಕ್ರಿಯೆಗೆ ಒಳ್ಳೆಯದು

ಜೋಳದಲ್ಲಿ ಕರಗಬಲ್ಲ ಮತ್ತು ಕರಗಲಾರದ ಆಹಾರದ ನಾರಿನಾಂಶಗಳು ಸಮೃದ್ಧವಾಗಿದೆ. ಕರಲಾರದ ನಾರಿನಾಂಶವು ಇದರಲ್ಲಿ ಅಧಿಕವಾಗಿರುವ ಕಾರಣದಿಂದ ಮಲಬದ್ಧತೆ ನಿವಾರಣೆ ಮಾಡಿ ಕರುಳಿನಲ್ಲಿ ಮಲವು ಮೃದು ಹಾಗೂ ದೊಡ್ಡ ಪ್ರಮಾಣದಲ್ಲಿ ಅದು ಹೊರಹೋಗುವಂತೆ ಮಾಡುವುದು. ಕರುಳಿನಲ್ಲಿನ ಕಿರಿಕಿರಿ ಮತ್ತು ಭೇದಿಯನ್ನು ಇದು ನಿವಾರಿಸುವುದು. ಮಲವು ಸರಿಯಾಗಿ ಹೊರಬರುವ ಕಾರಣದಿಂದ ಜೀರ್ಣಕ್ರಿಯೆ ಕೆಲವು ಸಮಸ್ಯೆಗಳಾದ ಮಲಬದ್ಧತೆ, ಹೆಮೊರೊಯಿಡ್ಸ್ ಮತ್ತು ಕರುಳಿನ ಕ್ಯಾನ್ಸರ್ ನಂತಹ ಸಮಸ್ಯೆಯನ್ನು ನಿವಾರಿಸುವುದು. ಜೋಳದಲ್ಲಿ ಇರುವಂತಹ ಕರಗಬಲ್ಲ ನಾರಿನಾಂಶವು ಕೊಲೆಸ್ಟ್ರಾಲ್ ಹೀರಿಕೊಳ್ಳುವುದನ್ನು ತಡೆದು ಲೋಳೆಯಂತಹ ಸ್ಥಿರತೆ ಉಂಟು ಮಾಡುವುದು.

ರಕ್ತಹೀನತೆ ತಡೆಯುವುದು

ರಕ್ತಹೀನತೆ ತಡೆಯುವುದು

ಫಾಲಿಕ್ ಆಮ್ಲ ಮತ್ತು ವಿಟಮಿನ್ ಬಿ 12ರ ಕೊರತೆ, ಕಬ್ಬಿನಾಂಶದ ಕೊರತೆಯಿಂದಲೂ ರಕ್ತಹೀನತೆ ಉಂಟಾಗುವುದು. ಜೋಳದಲ್ಲಿ ಅತ್ಯಧಿಕ ಮಟ್ಟದ ಕಬ್ಬಿನಾಂಶವಿರುವ ಕಾರಣದಿಂದ ಇದು ಹೊಸ ಕೆಂಪು ರಕ್ತದ ಕಣಗಳನ್ನು ನಿರ್ಮಿಸುವುದು.

ಹೃದಯಕ್ಕೆ ಒಳ್ಳೆಯದು

ಹೃದಯಕ್ಕೆ ಒಳ್ಳೆಯದು

ಜೋಳದ ಎಣ್ಣೆಯಲ್ಲಿ ಕೆಲವೊಂದು ಪ್ರಮುಖ ಕೊಬ್ಬಿನಾಮ್ಲಗಳ ಸಂಯೋಜನೆಯಿದೆ. ಒಮೆಗಾ-3 ಕೊಬ್ಬಿನಾಮ್ಲವು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಿ ಒಳ್ಳೆಯ ಕೊಲೆಸ್ಟ್ರಾಲ್ ನಿರ್ಮಿಸುವುದು. ಹೃದಯದಲ್ಲಿ ನಾಳಗಳು ಮುಚ್ಚಿಹೋಗದಂತೆ ನೋಡಿಕೊಳ್ಳುತ್ತದೆ. ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿದ್ದು ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಸಮಸ್ಯೆ ನಿವಾರಣೆಯಾಗುವುದು.

ಶಕ್ತಿ ಹೆಚ್ಚುವುದು

ಶಕ್ತಿ ಹೆಚ್ಚುವುದು

ಜೋಳವು ಪಿಷ್ಠ ಹೊಂದಿರುವ ಧಾನ್ಯ. ಇದರಲ್ಲಿ ಇರುವ ಉನ್ನತ ಮಟ್ಟ ಕಾರ್ಬೋಹೈಡ್ರೇಟ್ಸ್ ದೇಹಕ್ಕೆ ಹೆಚ್ಚಿನ ಶಕ್ತಿ ನೀಡುವುದು. ಮೆದುಳು ಹಾಗೂ ನರ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಇದು ನೆರವಾಗುವುದು.

ಕೊಲೆಸ್ಟ್ರಾಲ್ ತಗ್ಗಿಸುವುದು

ಕೊಲೆಸ್ಟ್ರಾಲ್ ತಗ್ಗಿಸುವುದು

ಜೋಳವು ವಿಟಮಿನ್ ಸಿ, ಕ್ಯಾರೊಟಿನಾಯ್ಡ್ಗಳು ಮತ್ತು ಜೈವಿಕ ಫ್ಲೇವೊನೈಡ್ಸ್ ಗಳಿಂದ ಸಮೃದ್ಧವಾಗಿದೆ. ಇದರಿಂದ ಕೊಲೆಸ್ಟ್ರಾಲ್ ನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ರಕ್ತದ ಸರಬರಾಜು ಹೆಚ್ಚು ಮಾಡಿ ಹೃದಯದ ಆರೋಗ್ಯ ಕಾಪಾಡುವುದು. ಜೋಳದ ಎಣ್ಣೆಯು ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುವುದು.

ಜೀರ್ಣಕ್ರಿಯೆ ಹೆಚ್ಚು ಮಾಡುತ್ತದೆ

ಜೀರ್ಣಕ್ರಿಯೆ ಹೆಚ್ಚು ಮಾಡುತ್ತದೆ

ಜೋಳದಲ್ಲಿ ಅಧಿಕ ನಾರಿನಂಶವಿರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅಲ್ಲದೆ ಜೋಳ ದೇಹಕ್ಕೆ ಸೇರಿದಾಗ ಅದು ಕರುಳಿನ ಕ್ಯಾನ್ಸರ್ ಕಾಯಿಲೆ ತಡೆಕಟ್ಟುವ ಸಾಮರ್ಥ್ಯ ಹೊಂದಿದೆ.

ರಕ್ತಹೀನತೆಯನ್ನು ತಡೆಗಟ್ಟುತ್ತದೆ

ರಕ್ತಹೀನತೆಯನ್ನು ತಡೆಗಟ್ಟುತ್ತದೆ

ಜೋಳದಲ್ಲಿ ವಿಟಮಿನ್ ಬಿ ಮತ್ತು ಫಾಲಿಕ್ ಆಸಿಡ್ ಅಂಶವಿರುವುದರಿಂದ ದೇಹದಲ್ಲಿ ರಕ್ತ ಹೆಚ್ಚಾಗಲು ಸಹಕಾರಿಯಾಗಿದೆ. ಇದರಿಂದ ರಕ್ತ ಹೀನತೆ ಸಮಸ್ಯೆ ಉಂಟಾಗುವುದಿಲ್ಲ.

ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ

ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ

ಕೊಲೆಸ್ಟ್ರಾಲ್‌ನಲ್ಲಿ 2 ವಿಧ. ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್. ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾದರೆ ದೇಹದ ತೂಕ ಹೆಚ್ಚಾಗುವುದು, ಒಬೆಸಿಟಿ ಸಮಸ್ಯೆ ಪ್ರಾರಂಭವಾಗುತ್ತದೆ. ಆದರೆ ಜೋಳದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇದ್ದು ದೇಹದ ಆರೋಗ್ಯವನ್ನು ಹೆಚ್ಚು ಮಾಡುತ್ತದೆ. ಸ್ವೀಟ್ ಕಾರ್ನ್ ನಲ್ಲಿ ವಿಟಮಿನ್ ಸಿ, carotenoids ಮತ್ತು bioflavinoids ಅಂಶವಿರುವುದರಿಂದ ಹೃದ್ರೋಗ ಸಮಸ್ಯೆ ಇರುವವರಿಗೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.

ಗರ್ಭಿಣಿಯರ ಆರೋಗ್ಯಕ್ಕೆ

ಗರ್ಭಿಣಿಯರ ಆರೋಗ್ಯಕ್ಕೆ

ಗರ್ಭಿಣಿಯರ ಆರೋಗ್ಯಕ್ಕೆ ಜೋಳ ತುಂಬಾ ಒಳ್ಳೆಯದು. ಇದನ್ನು ಸೇವಿಸುವುದರಿಂದ ಫಾಲಿಕ್ ಆಸಿಡ್ ಕೊರತೆಯನ್ನು ನೀಗಿಸಬಹುದು. ಫಾಲಿಕ್ ಆಸಿಡ್ ಕೊರತೆ ಉಂಟಾದರೆ ಗರ್ಭಿಣಿಯರಲ್ಲಿ ಕೈ ಕಾಲುಗಳಲ್ಲಿ ಊತ, ಅಧಿಕ ರಕ್ತದೊತ್ತಡ ಕಂಡು ಬರುತ್ತದೆ. ಕಡಿಮೆ ಫಾಲಿಕ್ ಆಸಿಡ್ ಇದ್ದರೆ ಕಡಿಮೆ ತೂಕದ ಮಗು ಹುಟ್ಟುತ್ತದೆ. ಆದ್ದರಿಂದ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಜೋಳ ತಿನ್ನುವುದು ಒಳ್ಳೆಯದು.

ಸಲಹೆ

ಸಲಹೆ

ಪಾಪ್ ಕಾರ್ನ್ ನಲ್ಲಿ ಹೆಚ್ಚು ಉಪ್ಪು ಹಾಕಿರುವುದರಿಂದ ಅದನ್ನು ತುಂಬಾ ತಿಂದರೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಆದ್ದರಿಂದ ಬೇಯಿಸಿದ ಜೋಳ ಅಥವಾ ಇತರ ಜೋಳದ ಖಾದ್ಯಗಳನ್ನು ತಿನ್ನುವುದು ಒಳ್ಳೆಯದು.

ಮಿತಿಮೀರಿ ಪಾಪ್ ಕಾರ್ನ್ ಗಳನ್ನು ತಿನ್ನುವುದರಿಂದ ದಪ್ಪಗಾಗುವುದು. ಅದರ ಬದಲು ಜೋಳದ ರೊಟ್ಟಿ ಅಥವಾ ಉಪ್ಪಿಟ್ಟು ತಿಂದರೆ ಶರೀರದ ತೂಕವನ್ನು ಸಮತೋಲನದಲ್ಲಿಡಬಹುದು.

English summary

Why Eating Corn Is Good During Monsoon

We all have heard of corn and most of us love to eat it as well. Corn, also called maize, though viewed as a vegetable, is actually a food grain. Corn, apart from being delicious, is highly rich in vitamins, minerals and fibre and offers several health benefits. Organic or unprocessed corn is rich in vitamin C. It is also rich in magnesium, potassium and vitamin B. It contains a good dose of two antioxidants, linked to eye and skin health called zeaxanthin and lutein.
X
Desktop Bottom Promotion